ಪ್ರಜಾನಿಷ್ಠೆ- 9ನೇ ತರಗತಿ ಕನ್ನಡ ನೋಟ್ಸ್ ( 9 th stanadard Prajanishte kannada notes )
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
1 , ಚೋಳರು ಮತ್ತು ಹೊಯ್ಸಳರ ನಡುವೆ ಎಲ್ಲಿ ಯುದ್ಧ ನಡೆಯಿತು ?
ಚೋಳರು ಮತ್ತು ಹೊಯ್ಸಳರ ನಡುವೆ ಮಳವಳ್ಳಿ , ಮುಡುಕುತೊರೆಗಳ ಬಳಿಯಲ್ಲಿ ಘನಘೋರ ಯುದ್ಧ ನಡೆಯಿತು
2. ಸಾಮ್ರಾಟನು ರಾಜಧಾನಿಯಲ್ಲಿ ಇಲ್ಲದಿದ್ದಾಗ ರಾಜ್ಯದ ಸಂರಕ್ಷಕರಾಗಿ ನಿಂತಿದ್ದವರು ಯಾರು ?
ಸಾಮ್ರಾಟನು ರಾಜಧಾನಿಯಲ್ಲಿ ಇಲ್ಲದಿದ್ದಾಗ ರಾಜ್ಯದ ಸಂರಕ್ಷಕರಾಗಿ ನಿಂತಿದ್ದವರು ರಾಣಿ ಶಾಂತಲಾದೇವಿ ,
3 , ಬನದಮ್ಮನ ಹಳ್ಳಿಯ ಜನರು ಎಲ್ಲಿ ಪಂಚಾಯಿತಿ ಸೇರಿದ್ದರು ?
ಬನದಮ್ಮನ ಹಳ್ಳಿಯ ಜನರು ಬನಶಂಕರಿಯ ದೇವಾಲಯದ ಮುಂಭಾಗದ ಕಟ್ಟೆಯ ಮೇಲೆ ಪಂಚಾಯಿತಿ ಸೇರಿದ್ದರು
4. ಬನದಮ್ಮನಹಳ್ಳಿಯ ಪಂಚಾಯಿತಿಯಲ್ಲಿ ಯಾವ್ಯಾರ ನಡುವಿನ ನ್ಯಾಯ ತೀರ್ಮಾನವಾಗುತ್ತಿತ್ತು ?
ಬನದಮ್ಮನಹಳ್ಳಿಯ ಪಂಚಾಯಿತಿಯಲ್ಲಿ ಈರಣ್ಣ ಮತ್ತು ಬೀರಣ್ಣನ ನಡುವೆ – ನ್ಯಾಯತೀರ್ಮಾನವಾಗುತ್ತಿತ್ತು
.
ಅ ) ಕೊಟ್ಟಿರುವ ಪ್ರಶ್ನೆಗಳಿಗೆ 3-4 ವಾಕ್ಯದಲ್ಲಿ ಉತ್ತರಿಸಿ .
1, ಹಲವರು ತಲಕಾಡನ್ನು ಲೂಟಿ ಮಾಡಬೇಕೆಂದು ಹೇಳಿದಾಗ ದೊರೆ ವಿಷ್ಣುವರ್ಧನನು ಏನೆಂದು ಹೇಳಿದನು ?
ಹಲವರು ತಲಕಾಡನ್ನು ಲೂಟಿ ಮಾಡಬೇಕೆಂದು ಹೇಳಿದಾಗ ದೊರೆ ವಿಷ್ಣುವರ್ಧನನು ಸೆರೆ ಸಿಕ್ಕ ಸೈನಿಕರ ಮೇಲೆ ದೌರ್ಜನ್ಯ ನಡೆಸುವುದು ಯೋಧ ಧರ್ಮ ಅಲ್ಲ ; ಸೋತ ಸಾಮ್ರಾಜ್ಯವನ್ನು ಲೂಟಿ ಮಾಡುವುದು ಯುದ್ಧ ಧರ್ಮವಲ್ಲ . ಆ ಕಾರಣ ನೀವೆಲ್ಲರೂ ತಲಕಾಡಿನವರನ್ನು ತಮ್ಮವರೆಂದೇ * ಮನೋಭೀತಿಯನ್ನು ದೂರ ಮಾಡಿ ಶಾಂತಿ ಸ್ಥಾಪನೆ ಮಾಡಿ , ನಾಲ್ಕು ದಿನಗಳಾದ ಮೇಲೆ ರಾಜಧಾನಿಗೆ ಹಿಂದಿರುಗೋಣ , ” ಎಂದು ಹೇಳಿದರು .
2. ತಲಕಾಡಿನ ಊಟಿಯ ವಿಚಾರದಲ್ಲಿ ವಿಷ್ಣುವರ್ಧನನ ನಿಲುವೇನು ?
ಚೋಳರು ಮತ್ತು ಹೊಯ್ಸಳರ ನಡುವೆ ಮಳವಳ್ಳಿ , ಮುಡುಕುತೊರೆಗಳ ಬಳಿಯಲ್ಲಿ ಘನಘೋರ ಯುದ್ಧ ನಡೆಯಿತು . ಈ ಈ ಯುದ್ಧದಲ್ಲಿ ಆದಿಯಮನು ಮಡಿದು , ತಲಕಾಡು ವಿಷ್ಣುವರ್ಧನನ ಕೈ ವಶವಾಯಿತು . ಅನೇಕರು ತಲಕಾಡನ್ನು ಲೂಟಿ ಮಾಡಬೇಕೆಂದು ಹೇಳಿದಾಗ ವಿಷ್ಣುವರ್ಧನನು ಅದಕ್ಕೆ ಅವಕಾಶ ಕೊಡಲಿಲ್ಲ . “ ಸೆರೆ ಸಿಕ್ಕ ಸೈನಿಕರ ಮೇಲೆ ದೌರ್ಜನ್ಯ ನಡೆಸುವುದು ಯೋಧ ಧರ್ಮವಲ್ಲ . ಸೋತ ಸಾಮ್ರಾಜ್ಯವನ್ನು ಲೂಟಿ ಮಾಡುವುದು . ಯದ್ಧ ಧರ್ಮವಲ್ಲ . ಆದ್ದರಿಂದ ತಲಕಾಡಿನ ಜನ ತಮ್ಮವರೆಂದೇ ತಿಳಿದು ನಡೆದುಕೊಳ್ಳಿ , ಅವರ ಮನೋಭೀತಿಯನ್ನು ದೂರ ಮಾಡಿ ಶಾಂತಿ ಸ್ಥಾಪನೆ ಮಾಡಿ ” ಎಂದು ವಿಷ್ಣವರ್ಧನನು ತನ್ನ ಸೈನಿಕರಿಗೆ ಹೇಳಿದನು
3 , ಬನದಮ್ಮನ ಹಳ್ಳಿಯ ದೇವಾಲಯದ ಮುಂದೆ ಯಾವ ವಿಚಾರವಾಗಿ ಚರ್ಚೆ ನಡೆದಿತ್ತು ?
ಬೀರಣ್ಣ ತನ್ನ ಮೂಡಲ ದಿಕ್ಕಿನಲ್ಲಿರುವ ಹಳ್ಳಿ ಹೊಲವನ್ನು ಈರಣ್ಣನಿಗೆ ನೂರಾ ಎಂಟು ಹೊನ್ನಿಗೆ ಕೊಟ್ಟಿದ್ದ ಎರಡು ವರ್ಷಗಳ – ಹೊಲದಲ್ಲಿ ಉಳುಮೆ ಮಾಡೋವಾಗ ನಿನ್ನೆ ದಿನಾ ಒಂದು ಕೊಪ್ಪರಿಗೆ ಬಂಗಾರ ಸಿಗುತ್ತದೆ . ಇದನ್ನು ಈರಣ್ಣ ಪೂಜೆ ಮಾಡಿ ಬೀರಣ್ಣನ ಮನೆಗೆ ತೆಗೆದುಕೊಂಡು ಹೋಗಿ , ‘ ತೆಗೆದುಕೊಳ್ಳಷ್ಟ ಇದು ನೀನು ಕೊಟ್ಟ ಹೊಲದಾಗೆ ಸಿಕ್ಕಿತು … ಯಾರೋ ನಿನ್ನ ಹೂರ್ವಿಕರು ನಿನಗಾಗಿ ಇಟ್ಟುದು ಅಂತಾ ಕಾಣಿಸುತ್ತದೆ ‘ ಎಂದು ಹೇಳಿದನು . ಆದರೆ ಹೊಲ ಮಾರಿದ ಮೇಲೆ ಆ ನೆಲದ ಹಕ್ಕು ತನಗಿಲ್ಲ ಎಂದು ಬೀರಣ್ಣ ವಾದಿಸಿದನು .ಬನದಮ್ಮನ ಹಳ್ಳಿಯ ದೇವಾಲಯದ ಮುಂದೆ ಈ ವಿಚಾರವಾಗಿ ಚರ್ಚೆ ನಡೆದಿತ್ತು .
4. ದೈವದವರ ತೀರ್ಪಿನ ಬಗೆಗೆ ಶಾಂತಲೆಯ ಅಭಿಪ್ರಾಯವೇನು ?
ಉತ್ತರ : ಈರಣ್ಣ ಮತ್ತು ಬೀರಣ್ಣ ಇಬ್ಬರೂ ಕೊಪ್ಪರಿಗೆ ಬಂಗಾರವನ್ನು ತಮ್ಮ ಬಳಿ ಇಟ್ಟುಕೊಳ್ಳಲು ಒಪ್ಪದಿದ್ದಾಗ ಗ್ರಾಮದ ಮುಖ್ಯಸ್ಥ ಕೇತುಮಲ್ಲ ‘ ಇಬ್ಬರಿಗೂ ಬೇಡವಾದ ಹಣ ರಾಜ್ಯದ ಬೊಕ್ಕಸ ಸೇರಲಿ ‘ ಎಂದನು . ನ್ಯಾಯ ತೀರ್ಮಾನ ಮಾಡುತ್ತಾನೆ. ಕೂಡಲೆ ಮರದ ಮರೆಯಲ್ಲಿದ್ದ ಶಾಂತಲೆ ಮುಂದೆ ಬಂದು , “ ಕೂಡದು … ಕೂಡದು …ಎಂದು ಕೂಗಿದಳು . ಬೊಕ್ಕಸಕ್ಕೆ ಸೇರಲು ಇದು ಸಾಮ್ರಾಟರ ದುಡಿಮೆಯಲ್ಲ … ಅವರ ಬೆವರಿನ ಫಲ ಅಲ್ಲ … ಅದು ಪ್ರಜೆಗಳ ಬೆವರಿನ ಫಲ ” ಆದ್ದರಿಂದ ಅದು ನಿಮ್ಮ ಊರಿನ ಹಣ ನಿಮೂರಿನ ಏಳಿಗೆಗಾಗಿಯೇ ವಿನಿಯೋಗವಾಗಲಿ . ” ಎಂದು ಅಭಿಪ್ರಾಯ ಪಟ್ಟಳು
5 , ಶಾಂತಲೆಯು ನೀಡಿದ ತೀರ್ಪೇನು ?
ಇದು ದೈವದ ದುಡ್ಡು , ದೇವಕಾರ್ಯಕ್ಕೆ ವಿನಿಯೋಗವಾಗಬೇಕಾದ್ದು ಧರ್ಮ ಸಂಸ್ಕೃತಿಯ ಶ್ರೀಮಂತಿಕೆಗೆ ಸಾಕ್ಷಿಯಾಗಿ ಒಂದು ಕಲಾದೇಗುಲವನ್ನು ರಾಜಧಾನಿ ದ್ವಾರಸಮುದ್ರದಲ್ಲಿ ನಿರ್ಮಿಸಬೇಕು ಎಂದು . ಅವಳ ದೇಗುಲಗಳ ಶಿಲ್ಪಕಲೆ ಹೊಯ್ಸಳರ ಶೈಲಿಗೆ ಮಾದರಿಯಾಗಿರಬೇಕು … ವೇಲಾಪುರಿಯ ಚೆನ್ನಕೇಶವ ದೇವಾಲಯಕ್ಕಾಗಿ ಈ ಹೊನ್ನು ವಿನಿಯೋಗವಾಗಲಿ..ಎಂದು ಶಾಂತಲೆ ತೀರ್ಪು ನೀಡಿದಳು .
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ
1 , ಚೋಳ ದೊರೆ ಕುಲೋತ್ತುಂಗನು ಹೊಯ್ಸಳ ಸಾಮ್ರಾಜ್ಯದ ಮೇಲೆ ಯುದ್ಧ ಸಾರಲು ಇದ್ದ ಕಾರಣ ಹಾಗೂ ಪರಿಣಾಮವನ್ನು ವಿವರಿಸಿ,
ಹೊಯ್ಸಳ ಸಾಮ್ರಾಜ್ಯದ ಪ್ರಗತಿಯನ್ನು ಕಂಡ ಪರರಾಜರ ಕಣ್ಣುಗಳು ಕೆಂಪಾದವು , ಅದರಲ್ಲೂ ದಿನೇ ದಿನೇ ಪ್ರವರ್ಧಮಾನಕ್ಕೆ ಬರುತ್ತಿರುವ ವಿಷ್ಣುವರ್ಧನ ಭೂಪಾಲನನ್ನು ಬಡಿಯಬೇಕೆಂದು ಶತ್ರು ರಾಜರುಗಳು ಕಾಯುತ್ತಿದ್ದರು .ಅವರಲ್ಲಿ ಚೋಳಮಂಡಲದ ಕುಲೋತ್ತುಂಗನು ಪ್ರಮುಖನಾದವನು . ಗಂಗರ ತಲಕಾಡು ಅವನ ಸ್ವಾಧೀನದಲ್ಲಿತ್ತು. ಕುಲೋತ್ತುಂಗ ಪ್ರಚಂಡ ಆಶಾವಾದಿ . ಅಖಂಡ ಭರತಖಂಡದ ಒಡೆತನವನ್ನು ಬಯಸುತ್ತಿದ್ದ ದುರಾತಾಪಿಶಾಚಿಯಾಗಿದ್ದನು .
ಹೊಯ್ಸಳ ಸಾಮ್ರಾಜ್ಯವನ್ನು ತನ್ನ ವಶ ಮಾಡಿಕೊಳ್ಳಲೆಂದು ಆಶಿಸಿ , ಹೊಯ್ಸಳ ಸಾಮ್ರಾಜ್ಯದ ಮೇಲೆ ಯುದ್ಧ ಸಾರಿದನು , ಚೋಳರಿಗೂ ಮತ್ತು ಹೊಯ್ಸಳರಿಗೂ ಮಳವಳ್ಳಿ , ಮುಡುಕುತೊರೆಗಳ ಬಳಿಯಲ್ಲಿ ಘನಘೋರ ಯುದ್ಧ ನಡೆದು ; ಹೊಯ್ಸಳರ ಕೈ ಮೇಲಾಗಿ ಚೋಳಸೇನೆ ಕಂಗಾಲಾಯಿತು ,ಆದಿಯಮ ಯುದ್ಧದಲ್ಲಿ ಮಡಿದ . ಅವನ ಸತ್ತ ಸುದ್ದಿ ತಿಳಿಯುತ್ತಲೆ ಚೋಳಸೇನೆ ದಿಕ್ಕಾಪಾಲಾಗಿ ಓಡಿತು . ತಲಕಾಡ ಕೋಟೆ ಸುಲಭವಾಗಿ ವಿಷ್ಣುವರ್ಧನ ಭೂಪಾಲನ ಕೈವಶವಾಯಿತು . ಸಮಸ್ತ ಸೇನೆಯು “ ತಲಕಾಡುಗೊಂಡನಿಗೆ ಜಯವಾಗಲಿ ‘ ಎಂದು ಜೈಕಾರ ಹಾಕಿತು .
2 , ಬನದಮ್ಮನ ಹಳ್ಳಿಯ ಪಂಚಾಯಿತಿಯಲ್ಲಿ ನಡೆದ ನ್ಯಾಯ ಹಾಗೂ ಅದರ ತೀರ್ಪಿನ ಬಗ್ಗೆ ವಿವರಿಸಿ
ವಿಷ್ಣುವರ್ಧನ ಭೂಪಾಲನು ರಾಜ್ಯದಲ್ಲಿ ಇಲ್ಲದಿದ್ದಾಗ ರಾಜಧಾನಿಯಲ್ಲಿ ಸಂರಕ್ಷಕಳಾಗಿ ನಿಂತಿದ್ದ ದೇವತೆ ಎಂದರೆ ಮಹಾರಾಣಿ ಶಾಂತಲಾದೇವಿ . ಗಂಡುಡೆಯನ್ನುಟ್ಟು ಯುವರಾಜ ಕುಮಾರ ಉದಯಾದಿತ್ಯನನ್ನು ಜೊತೆಯಲ್ಲಿ ಕರೆದುಕೊಂಡು ರಾಜ್ಯ ಸಂಚಾರ ಮಾಡಲು ಹೊರಟಳು . ಬನದಮ್ಮನಳ್ಳಿಯ ಬನಶಂಕರಿಯ ದೇವಾಲಯದ ಮುಂಭಾಗದ ಕಟ್ಟೆಯ ಮೇಲೆ ನೂರಾರು ಜನರು ಒಂದು ಪಂಚಾಯಿತಿ ನೆರೆದಿದ್ದುದು ಕಾರಣ ಬೀರಣ್ಣ ಎಂಬುವವನು ತನ್ನ ಹೊಲವನ್ನು ಈರಣ್ಣನಿಗೆ ಮಾರಾಟ ಮಾರಣ್ಣ ಈರಣ್ಣ ಹೊಲವನ್ನು ಉಳುಮೆ ಮಾಡುತ್ತಿರುವಾಗ ಅವನಿಗೆ ಒಂದು ಕೊಪ್ಪರಿಗೆ ಬಂಗಾರ ದೊರೆಯಿತು ,
ಅದನ್ನು ಈರಣ್ಣ ಬಳಿ ಇಟ್ಟುಕೊಳ್ಳಲಿಲ್ಲ . ಈ ವಿಚಾರವಾಗಿ ಪಂಚಾಯಿತಿಯಲ್ಲಿ ಚರ್ಚೆ ನಡೆದ ಮೇಲೆ ಅಧ್ಯಕ್ಷ ಕೇತುಮಲ್ಲ ನಾಯಕ ‘ ಈ ಹೊನ್ನು ರಾಜ್ಯದ ಬೊಕ್ಕಸ ಸೇರಲಿ ‘ ಎಂದು ಹೇಳಿದ . ಜನರೆಲ್ಲರೂ ಒಪ್ಪಿದರು . ಆದರೆ ಮಾರುವೇಷದಲ್ಲಿದ್ದ ಶಾಂತಲಾ “ ಈ ಕೊಪ್ಪರಿಗೆಯ ಬಂಗಾರ ರಾಜ್ಯದ ಬೊಕ್ಕಸ ಸೇರಲು ಇದು ಸಾಮ್ರಾಟರ ದುಡಿಮೆಯಲ್ಲ ” ಎಂದಾಗ , ನಾವೆಲ್ಲರೂ ಹೊಯ್ಸಳೇಶ್ವರನ ಮಕ್ಕಳು ಎಂದ ಮೇಲೆ ಇದು ಅವರಿಗೆ ಸೇರಬೇಕು ಎಂದು ಕೇತುಮಲ್ಲ ಹೇಳಿದ ,
“ ಅಣ್ಣಗಳಿರಾ ನಿಮ್ಮಂತಹ ಪ್ರಜೆಗಳನ್ನು ಪಡೆದ ರಾಜ ಅದೆಷ್ಟು ಪುಣ್ಯವಂತನೋ ” ಎಂದಳು ಶಾಂತಲೆ , ಆಗ ಶಾಂತಲೆ ಮುಂಡಾಸು ತೆಗೆದಳು . ಜನರೆಲ್ಲರಿಗೂ ಬಹಳ ಸಂತೋಷವಾಯಿತು , ನಂತರ ಶಾಂತಲೆ ಕೊಪ್ಪರಿಗೆ ಬಂಗಾರವು ದೇವ ಕಾರ್ಯಕ್ಕೆ ವಿನಿಯೋಗವಾಗಬೇಕು ಎಂದು ಹೇಳಿ ಕೇತುಮಲ್ಲ ನಾಯಕರು ನಮಗೆಲ್ಲರಿಗೂ ಹಿರಿಯರು ದ್ವಾರ ಸಮುದ್ರದಲ್ಲಿ ನಿರ್ಮಾಣವಾಗುವ ಅವಳಿ ದೇವಾಲಯಗಳು ಅವರ ಹೆಸರಿನಲ್ಲಿಯೇ ನಿರ್ಮಾಣವಾಗಲಿ ಎಂದು ಹೇಳಿದಳು . ಕಟ್ಟುವ ದೇವಾಲಯಗಳು ಹೊಯ್ಸಳೇಶ್ವರ ಶಾಂತಲೇಶ್ವರ ಎಂಬ ಹೆಸರಿನಲ್ಲಿರಲಿ ಎಂದು ಒಕ್ಕೊರಲಿನಿಂದ ಜನರೆಲ್ಲರೂ ಕೂಗಿದರು .
ಈ ) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ ,
1 , “ತಲಕಾಡುಗೊಂಡನ ಜಯವಾಗಲಿ”
ಆಯ್ಕೆ : ಈ ವಾಕ್ಯವನ್ನು ಸಾ . ಶಿ . ಮರುಳಯ್ಯ ಅವರು ರಚಿಸಿರುವ ‘ ನಾಟ್ಯ ಮಯೂರಿ ‘ ಎಂಬ ಕೃತಿಯಿಂದ ಆಯ್ದ ‘ ಪ್ರಜಾನಿಷ್ಠೆ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಹೊಯ್ಸಳರ ರಾಜನಾದ ವಿಷ್ಣುವರ್ಧನನು ಚೋಳರ ದಂಡನಾಯಕನಾದ ಆದಿಯಮನನ್ನು ಯುದ್ಧದಲ್ಲಿ ಸೋಲಿಸಿ ತಲಕಾಡನ್ನು ತನ್ನ ಕೈ ವಶಮಾಡಿಕೊಳ್ಳುತ್ತಾನೆ . ಆ ಸಂದರ್ಭದಲ್ಲಿ ಗೆದ್ದ ರಾಜನಿಗೆ ತನ್ನ ಸೈನಿಕರು ಈ ಮೇಲಿನಂತೆ ಜೈಕಾರ ಸಹ ಈ ಹಾಕಿದರು .
ಸ್ವಾರಸ್ಯ : ಹೊಯ್ಸಳರ ರಾಜನಾದ ವಿಷ್ಣುವರ್ಧನ ಯುದ್ಧ ಗೆದ್ದಾಗ ಆಗುವ ಹರ್ಷವನ್ನು ವ್ಯಕ್ತಿ ಪಡಿಸಿರುವುದು ಸ್ವಾರಸ್ಯ ಪೂರ್ಣವಾಗಿ ಮೂಡಿ ಬಂದಿದೆ
2. “ ಸೆರೆಸಿಕ್ಕ ಸೈನಿಕರ ಮೇಲೆ ದೌರ್ಜನ್ಯ ನಡೆಸುವುದು ಯೋಧ ಧರ್ಮವಲ್ಲ”
. ಆಯ್ಕೆ : ಈ ವಾಕ್ಯವನ್ನು ಸಾ . ಶಿ . ಮರುಳಯ್ಯ ಅವರು ರಚಿಸಿರುವ ‘ ನಾಟ್ಯ ಮಯೂರಿ ‘ ಎಂಬ ಕೃತಿಯಿಂದ ಆಯ್ದ ‘ ಪ್ರಜಾನಿಷ್ಠೆ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಚೋಳರು ಮತ್ತು ಹೊಯ್ಸಳರ ನಡುವೆ ಮಳವಳ್ಳಿ , ಮುಡುಕುತೊರೆಗಳ ಬಳಿಯಲ್ಲಿ ಘನಘೋರ ಯುದ್ಧ ನಡೆಯಿತು . ಈ ಯುದ್ಧದಲ್ಲಿ ಆದಿಯಮನು ಮಡಿದು , ತಲಕಾಡು ವಿಷ್ಣುವರ್ಧನನ ಕೈ ವಶವಾಯಿತು .ಅನೇಕರು ತಲಕಾಡನ್ನು ಲೂಟಿ ಮಾಡಬೇಕೆಂದು ಹೇಳಿದಾಗ ವಿಷ್ಣುವರ್ಧನನು ಅದಕ್ಕೆ ಅವಕಾಶ ಕೊಡಲಿಲ್ಲ . ಆ ಸಂದರ್ಭದಲ್ಲಿ ವಿಷ್ಣುವರ್ಧನನು ಈ ಮಾತನ್ನು ಹೇಳಿದನು
ಸ್ವಾರಸ್ಯ : ಇಲ್ಲಿ ಸೋತ ರಾಜ್ಯವನ್ನು ಲೂಟಿ ಮಾಡುವುದು , ಸೆರೆ ಸಿಕ್ಕ ಸೈನಿಕರನ್ನು ಹಿಂಸಿಸುವ ಬಗ್ಗೆ ವಿಷ್ಣುವರ್ಧನನಿಗೆ ಇರುವ ನಿಲುವು ಸ್ವಾರಸ್ಯಕರವಾಗಿದೆ .
3 , “ ತಂಬುಲ ಆಗದ ಮ್ಯಾಲೆ ಮತ್ತೆ ಎತ್ತಿ ಬಾಯಿಗಾಕೊಳೋ ಕೆಟ್ಟತನ ಬ್ಯಾಡಾ “
ಆಯ್ಕೆ : ಈ ಸಾ . ಶಿ . ಮರುಳಯ್ಯ ಅವರು ರಚಿಸಿರುವ ‘ ನಾಟ್ಯ ಮಯೂರಿ ‘ ಎಂಬ ಕೃತಿಯಿಂದ ಆಯ್ದ ‘ ಪ್ರಜಾನಿಷ್ಠೆ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಈರಣ್ಣನು ಬೀರಣ್ಣನಿಂದ ಕೊಡು ಕೊಂಡ ಹೊಲದಲ್ಲಿ ಉಳುಮೆ ಮಾಡುತ್ತಿರುವಾಗ ಒಂದು ಕೊಪ್ಪರಿಗೆ ಬಂಗಾರ ಸಿಗುತ್ತದೆ .ಇದಕ್ಕೆ ಪೂಜೆ ಮಾಡಿ ಈರಣ್ಣನು ಬೀರಣ್ಣನಿಗೆ “ ಇದು ನಿನ್ನ ಹೊಲದಲ್ಲಿ ಸಿಕ್ಕಿದೆ ತೆಗೆದು ಕೊ ‘ ಎಂದು ಕೊಡಲು ಬಂದ ಸಂದರ್ಭದಲ್ಲಿ ಬೀರಣ್ಣನು ಈ ಮಾತನ್ನು ಹೇಳುತ್ತಾನೆ ,
ಸ್ವಾರಸ್ಯ : ಬನದಮ್ಮನಹಳ್ಳಿಯ ರೈತರಾದ ಬೀರಣ್ಣ , ಈರಣ್ಣನ ಪ್ರಮಾಣಿಕತೆಯು ಸ್ವಾರಸ್ಯ ಪೂರ್ಣವಾಗಿ ಮೂಡಿ ಬಂದಿದೆ .