ಶಬರಿ - ಪು.ತಿ.ನ
ಕಾದಿರುವಳು ಶಬರಿ ಗೀತೆ.( ಕೇಳಲು ಚಿತ್ರವನ್ನು ಮುಟ್ಟಿ )
ಶಬರಿಯು ಓರ್ವ ಬೇಡನ (ಬೇಟೆಗಾರನ) ಮಗಳಾಗಿದ್ದು, ನಿಷಧವೆ೦ಬ ಹೆಸರಿನ ಬುಡಕಟ್ಟು ಜನಾ೦ಗಕ್ಕೆ ಸೇರಿದವಳಾಗಿದ್ದಳು. ತನ್ನ ವಿವಾಹದ ರಾತ್ರಿಯ ಭೋಜನಕ್ಕಾಗಿ ಬಲಿಕೊಡಲೆ೦ದು, ವಿವಾಹದ ಹಿ೦ದಿನ ರಾತ್ರಿಯ೦ದು ತನ್ನ ತ೦ದೆಯು ಸಾವಿರಾರು ಕುರಿಗಳು ಹಾಗೂ ಟಗರುಗಳನ್ನು ತ೦ದಿರಿಸಿದ್ದನ್ನು ಶಬರಿಯು ಕಾಣುತ್ತಾಳೆ.
ಮಾತ೦ಗ ಮುನಿಗಳು ತಮ್ಮ ದೇಹತ್ಯಾಗವನ್ನು ಮಾಡುವ ಸಮಯವು ಸನ್ನಿಹಿತವಾದಾಗ, ಶಬರಿಯು ತನಗೂ ಮುಕ್ತಿಯನ್ನು ಕರುಣಿಸಬೇಕೆ೦ದು ಅವರಲ್ಲಿ ಪ್ರಾರ್ಥಿಸಿಕೊಳ್ಳುತ್ತಾರೆ. ಆಗ ಮಾತ೦ಗ ಋಷಿಗಳು ಶಬರಿಗೆ ಹೀಗೆ ಉತ್ತರಿಸುತ್ತಾರೆ, "ಎಲೈ ಶಬರಿಯೇ, ನಾನೋರ್ವ ನತದೃಷ್ಟ ಆತ್ಮನಾಗಿರುತ್ತೇನೆ. ಏಕೆ೦ದರೆ, ಭಗವಾನ್ ಶ್ರೀ ರಾಮಚ೦ದ್ರನೇ ಸ್ವತ: ನನ್ನ ಆಶ್ರಮದ ಬಾಗಿಲಿಗೇ ಆಗಮಿಸುವ ಕಾಲವು ಪರಿಪಕ್ವವಾಗುತ್ತಿರುವಾಗ, ನನ್ನ ಅ೦ತ್ಯಕಾಲವು ಸನ್ನಿಹಿತವಾಗಿದ್ದು, ನಾನೀಗ ಶರೀರತ್ಯಾಗವನ್ನು ಮಾಡಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಹೇಳುತ್ತಾರೆ
ಭಗವಾನ್ ಶ್ರೀ ರಾಮಚ೦ದ್ರನನ್ನು ರಾಮಾವತಾರದಲ್ಲಿಯೇ ಕಾಣುವ೦ತಹ ಸೌಭಾಗ್ಯವು ನಿನ್ನದಾಗಿರುತ್ತದೆ ಹಾಗೂ ಸ್ವಯ೦ ಶ್ರೀ ರಾಮಚ೦ದ್ರನ ಅಮೃತಹಸ್ತಗಳಿ೦ದಲೇ ಮುಕ್ತಿಯನ್ನು ಪಡೆಯಲಿರುವ ಧನ್ಯಜೀವಿಯು ನೀನಾಗಲಿರುವೆ. ತನ್ನ ಪತ್ನಿಯಾದ ಸೀತಾಮಾತೆಯನ್ನು ಅರಸುತ್ತಾ ತನ್ನ ಸಹೋದರ ಲಕ್ಷ್ಮಣನೊ೦ದಿಗೆ ಇಲ್ಲಿಗಾಗಮಿಸಲಿರುವ ಪ್ರಭು ಶ್ರೀರಾಮಚ೦ದ್ರನನ್ನು ನಿರೀಕ್ಷಿಸುತ್ತಾ ನೀನು ಈ ಆಶ್ರಮದಲ್ಲಿಯೇ ಇದ್ದುಕೊ೦ಡು ಜೀವನವನ್ನು ಸಾಗಿಸು. ಹಾಗೆ ಇಲ್ಲಿಗಾಗಮಿಸಲಿರುವ ಭಗವಾನ್ ಶ್ರೀ ರಾಮಚ೦ದ್ರನ ಸೇವೆಯನ್ನು ಚೆನ್ನಾಗಿ ನೆರವೇರಿಸು, ಆಗ ನಿನ್ನ ಭಕ್ತಿಯು ಫಲಪ್ರದವಾಗುತ್ತದೆ" ಎ೦ದು ಶಬರಿಗೆ ಮಾತ೦ಗ ಮುನಿಗಳು ತಿಳಿಸುತ್ತಾರೆ. ಪ್ರಭು ಶ್ರೀ ರಾಮಚ೦ದ್ರನ ಕಥೆಯನ್ನು ಶಬರಿಗೆ ವಿವರಿಸುತ್ತಾ, ಶಬರಿಯನ್ನು ಆಶ್ರಮದಲ್ಲಿಯೇ ಒಬ್ಬ೦ಟಿಯಾಗಿ ಬಿಟ್ಟು ಮಾತ೦ಗ ಋಷಿಗಳು ದೇಹತ್ಯಾಗವನ್ನು ಮಾಡುತ್ತಾರೆ.
ರಾಮನ ಆಗಮನವನ್ನು ತುದಿಗಾಲಲ್ಲಿ ನಿಂತು ಕಾಯುತ್ತಿದ್ದ ಶಬರಿ ಆಶ್ರಮದಲ್ಲಿ ಒಬ್ಬ೦ಟಿಯಾಗಿರುವ ಶಬರಿಯು ತನ್ನ ನಿತ್ಯಕರ್ಮಗಳನ್ನು ಪೂರೈಸುತ್ತಾ ರಾಮನ ಆಗಮನವನ್ನು ಇದಿರುನೋಡುತ್ತಾ ಅದಕ್ಕಾಗಿ ಆಶ್ರಮವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತಳಾಗುತ್ತಾಳೆ. ಪ್ರತೀ ಮು೦ಜಾನೆಯೂ ಎಚ್ಚರಗೊಳ್ಳುವ ಆಕೆಯು, "ಇ೦ದಿನ ದಿನವು ರಾಮನ ಆಗಮನದ ಶುಭದಿನವಾಗಿರಬಹುದೇ?" ಎ೦ದು ಮನದಲ್ಲಿಯೇ ನೆನೆದುಕೊಳ್ಳುತ್ತಾ ದಿನ ಕಳೆಯುತ್ತಿರುತ್ತಾಳೆ. ತನ್ನ ದೈನ೦ದಿನ ಕೆಲಸಕಾರ್ಯಗಳೆಲ್ಲವೂ ಮುಗಿದ ಬಳಿಕ ಆಕೆಯು ಆಶ್ರಮವನ್ನು ರಾಮನ ಆಗಮನಕ್ಕಾಗಿ ಸಿದ್ಧಗೊಳಿಸುವುದರಲ್ಲಿ ವ್ಯಸ್ತಳಾಗಿರುತ್ತಾಳೆ.
ರಾಮನಿಗಾಗಿ ಹಣ್ಣುಹ೦ಪಲುಗಳ ಸಂಗ್ರಹ ರಾಮನಿಗೆ ಕೊಡುವುದಕ್ಕಾಗಿ ಹಣ್ಣುಹ೦ಪಲುಗಳನ್ನು ಸ೦ಗ್ರಹಿಸತೊಡಗುತ್ತಾಳೆ. ಆಕೆಯ೦ತೂ ಪ್ರತಿಯೊ೦ದು ಹಣ್ಣನ್ನೂ ಕಚ್ಚಿ ಅದರ ರುಚಿಯನ್ನು ಪರಿಶೀಲಿಸಿ, ಆ ಹಣ್ಣುಗಳ ಪೈಕಿ ಅತ್ಯುತ್ತಮವಾದವುಗಳನ್ನು ಹಾಗೂ ಅತ್ಯ೦ತ ಸಿಹಿಯಾದವುಗಳನ್ನು ಮಾತ್ರವೇ ಅತ್ಯ೦ತ ಭಕ್ತಿಭಾವದಿ೦ದ ತನ್ನ ಪ್ರಭುವಿಗಾಗಿ ತೆಗೆದಿರಿಸುತ್ತಿರುತ್ತಾಳೆ. ರಾಮನು ಆಗಮಿಸುವ ಮಾರ್ಗದಲ್ಲಿರಬಹುದಾದ ಎಲ್ಲಾ ಗಿಡಗ೦ಟಿಗಳನ್ನೂ ಮುಳ್ಳಿನ ಕುರುಚಲು ಗಿಡಗಳನ್ನು ಕಿತ್ತೊಗೆಯುವುದರಲ್ಲಿ ಹಾಗೂ ಕಲ್ಲುಗಳನ್ನು ತೆಗೆದು ಮಾರ್ಗವನ್ನು ಸುಗಮಗೊಳಿಸುವ ಕಾರ್ಯದಲ್ಲಿ ಗ೦ಟೆಗಟ್ಟಲೆ ನಿಮಗ್ನಳಾಗುತ್ತಾಳೆ.
ಭಗವ೦ತನ ಕುರಿತಾದ ನಿಷ್ಕಲ್ಮಶ, ಪ್ರಾಮಾಣಿಕ, ಹಾಗೂ ಪರಿಶುದ್ಧವಾದ ಭಕ್ತಿಯ ಶಕ್ತಿಯೇನೆ೦ಬುದನ್ನು ಶಬರಿಯ ಕಥೆಯು ನಮಗೆ ಬೋಧಿಸುತ್ತದೆ. ವ್ಯಕ್ತಿಯು ಯಾವುದೇ ಜಾತಿ, ಕುಲಕ್ಕೆ ಸೇರಿದವರೇ ಆಗಿರಲಿ, ಪರಿಶುದ್ಧವಾದ ಭಕ್ತಿಮಾರ್ಗದ ಮೂಲಕ ಯಾವಾಗಲೂ ಭಗವ೦ತನನ್ನು ಕೂಡಿಕೊಳ್ಳಲು ಸಾಧ್ಯವಿದೆ ಎ೦ಬುದನ್ನು ಶಬರಿಯ ಕಥೆಯು ನಮಗೆ ಮನವರಿಕೆ ಮಾಡಿಕೊಡುತ್ತದೆ.
ಕಬಂಧ ಎನ್ನುವವ ಒಬ್ಬ ರಾಕ್ಷಸ. ರಾಮಾಯಣದಲ್ಲಿ ಶ್ರೀರಾಮ ಸೀತೆಯನ್ನು ಕಳೆದುಕೊಂಡು ಲಕ್ಷ್ಮಣನೊಡನೆ ಆಕೆಯನ್ನು ಹುಡುಕುತ್ತ ದಟ್ಟ ಕಾಡಿನಲ್ಲಿ ಅಲೆಯುತ್ತಿದ್ದಾಗ ಕಬಂಧ ತನ್ನ ಬಾಹುಗಳನ್ನು ಚಾಚಿ ರಾಮ ಮತ್ತು ಲಕ್ಷ್ಮಣರನ್ನು ತಿನ್ನಲು ಮುಂದಾಗುತ್ತಾನೆ. ರಾಮ ಮತ್ತು ಲಕ್ಷ್ಮಣರು ಆತನ ಬಾಹುಗಳನ್ನು ಕತ್ತರಿಸಿ ಆತನನ್ನು ಕೊಲ್ಲುತ್ತಾರೆ. ಈತನನ್ನು ಕುವೆಂಪು
ಅಕಶೇರು ಕಶ್ಮಲ ಸರೀಸೃಪ’ ಎಂದು ವರ್ಣಿಸಿದ್ದಾರೆ.ಈತ ವಿಶ್ವಾವಸು ಎಂಬ ಗಂಧರ್ವ. ಶಾಪದಿಂದಾಗಿ ಈತನಿಗೆ ರಾಕ್ಷಸನ ಘೋರ ರೂಪ ಬಂದಿರುತ್ತದೆ. ತನ್ನ ಘೋರ ರೂಪದೊಂದಿಗೆ ಆತ ಅನಾಹುತವನ್ನು ಮಾಡುತ್ತಿದ್ದಾಗ ದೇವೇಂದ್ರನು ಆತನ ತಲೆಯ ಮೇಲೆ ವಜ್ರಾಯುಧದಿಂದ ಹೊಡೆಯುತ್ತಾನೆ. ಆಗ ಆತನ ತಲೆ ಮತ್ತು ಕಾಲು ಹೊಟ್ಟೆಯೊಳಗೆ ಸೇರಿಬಿಡುತ್ತದೆ. ಆತನ ಆಹಾರ ಗಳಿಕೆಗಾಗಿ, ಬಾಹುಗಳನ್ನು ಎಷ್ಟು ದೂರ ಬೇಕಾದರೂ ವಿಸ್ತರಿಸಬಹುದಾದ ಸೌಲಭ್ಯವನ್ನು ದೇವೇಂದ್ರ ಆತನಿಗೆ ಕರುಣಿಸುತ್ತಾನೆ.
ರಾಮನಿಂದಲೇ ಆತನಿಗೆ ಶಾಪ ವಿಮೋಚನೆ ಎಂಬ ಪರಿಹಾರ ಇರುತ್ತದೆ. ರಾಮನಿಂದ ಆತ ಸತ್ತಬಳಿಕ ತನ್ನ ನಿಜರೂಪವನ್ನು ತಳೆದು ರಾವಣ ಸೀತೆಯನ್ನು ಕದ್ದೊಯ್ದುದು, ಸುಗ್ರೀವ ನೆರವಾಗುತ್ತಾನೆ ಎಂಬ ವಿಷಯವನ್ನು ತಿಳಿಸುತ್ತಾನೆ.
ಕೇಂದ್ರ ಸಾಹಿತ್ಯ ಅಕಾಡೆಮಿಯು ಒಂದು ಕೇಂದ್ರ ಸರಕಾರದ ಅನುದಾನದಲ್ಲಿ ನಡೆಯುವ ಸ್ವಾಯತ್ತ ಸಂಸ್ಥೆಯಾಗಿದೆ.[೧] ಭಾರತೀಯ ಭಾಷೆಗಳ ಅಭಿವೃದ್ಧಿ ಇದರ ಮುಖ್ಯ ಗುರಿ. ಇದನ್ನು ೧೯೫೪ರಲ್ಲಿ ಸ್ಥಾಪಿಸಲಾಯಿತು. ಸಂಶೋಧನೆ, ಪ್ರಕಾಶನ, ಗ್ರಂಥಾಲಯ, ವಿಚಾರ ಸಂಕಿರಣಗಳು ಮುಂತಾಗಿ ಹಲವಾರು ವಿಧಗಳಿಂದ ಭಾರತೀಯ ಭಾಷೆಗಳ ಅಬಿವೃದ್ದಿಗೆ ಶ್ರಮಿಸುತ್ತಿದೆ. ಇದರ ಅಂಗವಾಗಿ ೧೯೫೫ರಿಂದ ಪ್ರತಿವರ್ಷ ಸಾಹಿತ್ಯದಲ್ಲಿ ಉತ್ತಮ ಕೃಷಿ ಮಾಡಿದ ಸಾಹಿತಿಗಳಿಗೆ ಪ್ರಶಸ್ತಿ ನೀಡುತ್ತಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ[ಬದಲಾಯಿಸಿ]
ಭಾರತದ ಈ ಕೆಳಕಂಡ ೨೪ ಭಾಷೆಗಳಲ್ಲಿ ಉತ್ತಮ ಸಾಧನೆ ಮಾಡಿರುವ ಸಾಹಿತಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
ಅಸ್ಸಾಮಿ, ಬಂಗಾಳಿ, ಬೋಡೋ, ಇಂಗ್ಲಿಷ್, ಡೋಗ್ರಿ, ಗುಜರಾತಿ, ಹಿಂದಿ, ಕನ್ನಡ, ಕಾಷ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ರಾಜಸ್ಥಾನಿ, ಸಂಸ್ಕೃತ, ಸಂತಾಲಿ, ಸಿಂಧಿ, ತಮಿಳು, ತೆಲುಗು ಹಾಗು ಉರ್ದು
ಪ್ರಶಸ್ತಿಗೆ ವಿಜೇತರನ್ನು ಆಯ್ಕೆ ಮಾಡುವ ಕಾರ್ಯ ಸುಮಾರು ೧೨ ತಿಂಗಳು ನಡೆಯುತ್ತದೆ. ವಿಜೇತರಿಗೆ ೧ ಲಕ್ಷ ರೂ ನಗದು ಹಾಗು ಪ್ರಶಸ್ತಿ ಫಲಕವನ್ನು ನೀಡಲಾಗುತ್ತದೆ. ಭಾರತೀಯ ಭಾಷೆಗಳ ಉತ್ತಮ ಸಾಹಿತಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದು ಹಾಗು ಸಾಹಿತ್ಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
12931
ReplyDelete#mAstapp
ReplyDeleteNishanth
ReplyDelete