8 ನೆಯ ತರಗತಿ ಸೇತುಬಂಧ ಶಿಕ್ಷಣ
2023-24 ಪ್ರಥಮಭಾಷೆ - ಕನ್ನಡ
ಪರಿಹಾರ ಬೋಧನೆ
-----------------------------------------------------------------------------------------
ಬುನಾದಿ ಸಾಮರ್ಥ್ಯ : 1
ಕನ್ನಡ ವರ್ಣಮಾಲೆಯಲ್ಲಿನ ಅಕ್ಷರಗಳನ್ನು, ಗುಣತಾಕ್ಷರ, ಸಂಯುಕ್ತಾಕ್ಷರಗಳನ್ನು ಸ್ವಷ್ಟವಾಗಿ ಗುರುತಿಸುವುದು
ವರ್ಣಮಾಲೆ ಪರಿಚಯ
ವರ್ಣಮಾಲೆ ಅಭ್ಯಾಸ ಚಟುವಟಿಕೆಗಳು
ಗುಣಿತಾಕ್ಷರ
ವ್ಯಂಜನಕ್ಕೆ ಸ್ವರ ಸೇರಿದಾಗ ಆಗುವ ಅಕ್ಷರವೇ ಗುಣಿತಾಕ್ಷರ. ಒಂದು ವ್ಯಂಜನಕ್ಕೆ
ಅ ದಿಂದ ಔ ವರೆಗಿನ ೧೩ ಸ್ವರಗಳು ಸೇರಿದರೆ ೧೩ ಗುಣಿತಾಕ್ಷರಗಳಾಗುತ್ತವೆ. ೩೪ ವ್ಯಂಜನಗಳಿಗೆ ತಲಾ ೧೩ ಸ್ವರಾಕ್ಷರಗಳನ್ನು ಸೇರಿಸುವುದರಿಂದ ೪೪೨ ಗುಣಿತಾಕ್ಷರಗಳನ್ನು ರಚಿಸಬಹುದು. ಈ ಗುಣಿತಾಕ್ಷರಗಳೇ ಕಾಗುಣಿ ತ ಅಕ್ಷರಗಳು. ಅದೇ ರೀತಿ ಯೋಗವಾಹಗಳನ್ನು ಸೇರಿಸಿ ಗುಣಿ ತಾಕ್ಷರಗಳನ್ನು ಮಾಡಬಹುದು
ಸಂಯುಕ್ತಾಕ್ಷರಗಳು
ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳಿಗೆ ಒಂದು ಸ್ವರ ಸೇರಿ ಆಗುವ ಅಕ್ಷರವೇ ಸಂಯುಕ್ತಾಕ್ಷರ. ಇದನ್ನು ದ್ವಿತ್ವಾಕ್ಷರ/ ಒತ್ತಕ್ಷರ ಎಂತಲೂ ಕರೆಯುವರು. ಸಂಯುಕ್ತಾಕ್ಷರದಲ್ಲಿ ಸಜಾತೀಯ ಹಾಗೂ ವಿಜಾತೀಯ ಎಂಬೆರಡು ವಿಧಗಳಿವೆ.
ಒಂದೇ ಜಾತಿಯ ಎರಡು ವ್ಯಂಜನಗಳು ಒಟ್ಟಿಗೆ ಸೇರಿ ಆಗುವ ಸಂಯುಕ್ತಾಕ್ಷರವೇ ಸಜಾತೀಯ ಸಂಯುಕ್ತಾಕ್ಷರ.
ಬೇರೆ ಬೇರೆ ಜಾತಿಯ ವ್ಯಂಜನಗಳು ಒಟ್ಟಿಗೆ ಸೇರಿ ಆಗುವ ಸಂಯುಕ್ತಾಕ್ಷರವೇ ವಿಜಾತೀಯ ಸಂಯುಕ್ತಾಕ್ಷರ
ಸಂಯುಕ್ತಾಕ್ಷರಗಳ ಕಲಿಕಾ ಚಟುವಟಿಕೆಗಳು
ಮೌಲ್ಯಮಾಪನ ಚಟುವಟಿಕೆ : ಕಿರುಪರೀಕ್ಷೆ -1
PDF download ಮಾಡಲು ಇಲ್ಲಿ ಕ್ಲಿಕ್ ಮಾಡಿ