ಸಂಧಿಗಳು ( ಭಾಗ -1 )
ಉದಾ : ಪದ + ಪದ = ಸಂಧಿರೂಪ
ಅವನ + ಅಂಗಡಿ = ಅವನಂಗಡಿ
ಕುಲ + ಅನ್ನು = ಕುಲವನ್ನು
ಬೆಟ್ಟ + ತಾವರೆ = ಬೆಟ್ಟದಾವರೆ
ಮಳೆ + ಕಾಲ = ಮಳೆಗಾಲ
ಹೀಗೆ ಒಂದು ಪದ ಇನ್ನೊಂದು ಪದದೊಡನೆ ಸೇರಿದಾಗ ಪೂರ್ವಪದದ ಅಂತ್ಯದಲ್ಲಿ ಮತ್ತು ಉತ್ತರಪದದ ಆದಿಯಲ್ಲಿ ಮೂರು ಬಗೆಯ ಕಾರ್ಯಗಳು ನಡೆಯಬಹುದು.
೧ ಅಕ್ಷರವೊಂದು ಲೋಪವಾಗಬಹುದು,
೨ ಇನ್ನೊಂದು ಆಗಮಿಸಬಹುದು,
೩ ಒಂದು ಅಕ್ಷರ ಹೋಗಿ ಅದರ ಸ್ಥಾನದಲ್ಲಿ ಬೇರೆಯೇ ಅಕ್ಷರ ಬರಬಹುದು. ಇದನ್ನು ‘ಸಂಧಿಕಾರ್ಯ’ ಎನ್ನುವರು.
ಕನ್ನಡ - ಕನ್ನಡ ಪದಗಳು ಸೇರಿ ಸಂಧಿಯಾದರೆ ಅಂತಹ ಸಂಧಿಗಳನ್ನು ಕನ್ನಡ ಸಂಧಿ ಎಂದು ಕರೆಯುತ್ತೇವೆ.
ಸಂಸ್ಕöÈತ-ಸAಸ್ಕöÈತ ಪದಗಳು ಸೇರಿ ಸಂಧಿಯಾದರೆ ಅಂತಹ ಸಂಧಿಗಳನ್ನು ಸಂಸ್ಕöÈತ ಸಂಧಿ ಎಂದು ಕರೆಯುತ್ತೇವೆ.
ಸಂಧಿಯಾಗುವಾಗ ಸ್ವರದ ಮುಂದೆ ಸ್ವರ ಇದ್ದು ಸಂಧಿಯಾದರೆ ಅದು ಸ್ವರಸಂಧಿ.
ಸ್ವರದ ಮುಂದೆ ವ್ಯಂಜನ ಅಥವಾ ವ್ಯಂಜನದ ಮುಂದೆ ಸ್ವರ ಅಥವಾ ವ್ಯಂಜನದ ಮುಂದೆ ವ್ಯಂಜನ ಇದ್ದು ಸಂಧಿಯಾದರೆ ಅದು ವ್ಯಂಜನ ಸಂಧಿ.
ಕನ್ನಡ ಸಂಧಿಗಳು
ಕನ್ನಡ - ಕನ್ನಡ ಪದಗಳು ಸೇರಿ ಸಂಧಿಯಾದರೆ ಅಂತಹ ಸಂಧಿಗಳನ್ನು ಕನ್ನಡ ಸಂಧಿ ಎಂದು ಕರೆಯುತ್ತೇವೆ
ಕನ್ನಡದಲ್ಲಿ ಮೂರು ಸಂಧಿಗಳಿವೆ ಅವುಗಳೆಂದರೆ
1 ಲೋಪಸಂಧಿ ( ಕನ್ನಡ ಸ್ವರಸಂಧ
2 ಆಗಮ ಸಂಧಿ ( ಕನ್ನಡ ಸ್ವರಸಂಧಿ)
3 ಆದೇಶ ಸಂಧಿ ( ಕನ್ನಡ ವ್ಯಂಜನ ಸಂಧಿ)
೧.ಲೋಪಸಂಧಿ :
ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವಪದದ ಕೊನೆಯಲ್ಲಿರುವ ಸ್ವರವು ಲೋಪವಾದರೆ ಅದನ್ನು ‘ಲೋಪಸಂಧಿ’ ಎನ್ನುವರು.
ಸೂತ್ರ : ಪೂರ್ವಪದ + ಉತ್ತರಪದ = ಸಂಧಿಪದ
ಸ್ವರ + ಸ್ವರ = ಪೂರ್ವಪದದ ಕೊನೆಯ ಸ್ವರ ಲೋಪ
ಉದಾ: ಪೂರ್ವಪದ + ಉತ್ತರಪದ = ಸಂಧಿಪದ
ಊರು + ಊರು = ಊರೂರು
( ಉ + ಊ ) ( ಊ ) ಪೂರ್ವಪದದ ಉ ಕಾರ ಲೋಪ
ಬಲ್ಲೆನು + ಎಂದು = ಬಲ್ಲೆನೆಂದು
( ಉ ) ( ಎ ) ( ಎ ) ಪೂರ್ವಪದದ ಉ ಕಾರ ಲೋಪ
ಊರು + ಇಂದ = ಊರಿಂದ
( ಉ ) ( ಇ ) ( ಇ ) ಪೂರ್ವಪದದಉ ಕಾರ ಲೋಪ
ಮಾತು + ಅನ್ನು = ಮಾತನ್ನು
(ಉ) + (ಅ) = (ಅ) ಪೂರ್ವಪದದ ಉ ಕಾರ ಲೋಪ
ದೇವರು + ಇಂದ = ದೇವರಿಂದ
(ಉ + ಇ) = ಇ ಪೂರ್ವಪದದ ಉ ಕಾರ ಲೋಪ
ಬಲ್ಲೆನು + ಎಂದು = ಬಲ್ಲೆನೆಂದು
(ಉ + ಎ) (ಎ) ಪೂರ್ವಪದದ ಉ ಕಾರ ಲೋಪ
ಏನು + ಆದುದು = ಏನಾದುದು
(ಉ + ಆ) ಆ ಪೂರ್ವಪದದ ಉ ಕಾರ ಲೋಪ
ಇವನಿಗೆ + ಆನು = ಇವನಿಗಾನು
(ಎ + ಆ) = ಆ ಪೂರ್ವಪದದ ಎ ಕಾರ ಲೋಪ
ಅವನ + ಊರು = ಅವನೂರು (ಅಕಾರ ಲೋಪ)
(ಅ + ಊ) ಊ ಪೂರ್ವಪದದ ಅ ಕಾರ ಲೋಪ
೨ ಆಗಮ ಸಂಧಿ
ಸ್ವರದ ಮುಂದೆ ಸ್ವರವು ಬಂದಾಗ ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಧ್ಯದಲ್ಲಿ ಯಕಾರವನ್ನೋ ಅಥವಾ ವಕಾರವನ್ನೋ ಹೊಸದಾಗಿ ಸೇರಿಸಿ ಹೇಳುತ್ತೇವೆ. ಇದಕ್ಕೆ ‘ಆಗಮ ಸಂಧಿ’ ಎನ್ನುವರು.
ಪೂರ್ವಪದ + ಉತ್ತರಪದ = ಸಂಧಿಪದ
ಸೂತ್ರ : ಆ, ಇ, ಈ, ಎ, ಏ, ಐ (ಸ್ವರ) + ಸ್ವರ = ಯ್ ಕಾರಾಗಮ
ಉ, ಊ, ಋ, ಓ (ಸ್ವರ) + ಸ್ವರ = ವ್ ಕಾರಾಗಮ
ಉದಾ : ಪೂರ್ವಪದ + ಉತ್ತರಪದ = ಸಂಧಿಪದ
1.ಗಿರಿ + ಅನ್ನು = ಗಿರಿಯನ್ನು
(ಇ + ಅ) ಯ್ ಕಾರಾಗಮ
2. ಮೀ + ಅಲು = ಮೀಯಲು
(ಈ + ಅ) ಯ್ ಕಾರಾಗಮ
3.ಕೆರೆ + ಅನ್ನು = ಕೆರೆಯನ್ನು
(ಎ + ಅ) ಯ್ ಕಾರಾಗಮ
4. ಮೆ + ಇಸು = ಮೇಯಿಸು
(ಏ + ಇ) ಯ್ ಕಾರಾಗಮ
5. ಮೈ + ಅನ್ನು = ಮೈಯನ್ನು
(ಐ + ಅ) ಯ್ ಕಾರಾಗಮ
6. ಮಡು + ಅನ್ನು = ಮಡುವನ್ನು
(ಉ + ಅ) ವ್ ಕಾರಾಗಮ
7.ಪೂ + ಇಂದ = ಪೂವಿಂದ
(ಊ + ಇ) ವ್ ಕಾರಾಗಮ
8 ಮಾತೃ + ಅನ್ನು = ಮಾತೃವನ್ನು
(ಋ + ಅ) ವ್ ಕಾರಾಗಮ
9 ಗೋ + ಅನ್ನು = ಗೋವನ್ನು
(ಓ + ಅ) ವ್ ಕಾರಾಗಮ
೩ ಆದೇಶ ಸಂಧಿ
ಪೂರ್ವಪದದ ಕೊನೆಯಲ್ಲಿರುವ ಸ್ವರ ಅಥವಾ ವ್ಯಂಜನದ ಮುಂದೆ ಕ,ತ,ಪ ಗಳು ಬಂದು ಸಂಧಿಯಾಗುವಾಗ ಉತ್ತರಪದದ ಆದಿಯಲ್ಲಿರುವ ಕ ತ ಪ ವ್ಯಂಜನಗಳಿಗೆ ಕ್ರಮವಾಗಿ ಗ ದ ಬ ವ್ಯಂಜನಗಳು ಆದೇಶವಾಗಿ ಬರುವುದಕ್ಕೆ ಆದೇಶ ಸಂಧಿ ಎನ್ನುವರು
ಸೂತ್ರ : ಪೂರ್ವಪದ + ಉತ್ತರಪದ = ಸಂಧಿಪದ
ಸ್ವರ ಅಥವಾ ವ್ಯಂಜನ + ಕ,ತ,ಪ = ಕ,ತ,ಪಗಳಿಗೆ ಗ,ದ,ಬ ಆದೇಶ
ಉದಾ : ಹುಲ್ಲು + ಕಾವಲು = * ಹುಲ್ಲುಗಾವಲು (ಕ ಕಾರಕ್ಕೆ ಗಕಾರಾದೇಶ)
ಹಳ + ಕನ್ನಡ = ಹಳಗನ್ನಡ (ಕಕಾರಕ್ಕೆ ಗಕಾರಾದೇಶ)
ಕಳೆ + ಕೂಡಿ = ಕಳೆಗೂಡಿ (ಕಕಾರಕ್ಕೆ ಗಕಾರಾದೇಶ)
ಎಳೆ + ಕರು = ಎಳೆಗರು (ಕಕಾರಕ್ಕೆ ಗಕಾರಾದೇಶ)
ಮನೆ + ಕೆಲಸ = ಮನೆಗೆಲಸ (ಕಕಾರಕ್ಕೆ ಗಕಾರಾದೇಶ)
ಮೈ + ತೊಳೆ = ಮೈದೊಳೆ (ತಕಾರಕ್ಕೆ ದಕಾರಾದೇಶ)
ಮೇರೆ + ತಪುö್ಪ = ಮೇರೆದಪುö್ಪ (ತಕಾರಕ್ಕೆ ದಕಾರಾದೇಶ)
ಕಣ್ + ಪನಿ = ಕಂಬನಿ (ಪಕಾರಕ್ಕೆ ಬಕಾರಾದೇಶ)
ಬೆನ್ + ಪತ್ತು = (ಬೆಂಬತ್ತು) (ಪಕಾರಕ್ಕೆ ಬಕಾರಾದೇಶ)
ಎಳ + ಪೆರೆ = ಎಳವರೆ (ಪಕಾರಕ್ಕೆ ವಕಾರಾದೇಶ)
ಬೆಮರ್ + ಪನಿ = ಬೆಮರ್ವನಿ (ಪಕಾರಕ್ಕೆ ವಕಾರಾದೇಶ)
ಬೇರ್ + ಬೆರಸಿ = ಬರ್ವೆರಸಿ (ಬಕಾರಕ್ಕೆ ವಕಾರಾದೇಶ)
ಕಡು + ಬೆಳ್ಪು = ಕಡುವೆಳ್ಪು (ಬಕಾರಕ್ಕೆ ವಕಾರಾದೇಶ)
ಎಳ + ಬಳ್ಳಿ = ಎಳವಳ್ಳಿ (ಬಕಾರಕ್ಕೆ ವಕಾರಾದೇಶ)
ಮೆಲ್ + ಮಾತು = ಮೆಲ್ವಾತು (ಮಕಾರಕ್ಕೆ ವಕಾರಾದೇಶ)
ನೆಲೆ + ಮನೆ = ನೆಲೆವನೆ (ಮಕಾರಕ್ಕೆ ವಕಾರಾದೇಶ)