10ನೆಯ ತರಗತಿ ಕನ್ನಡ ನೋಟ್ಸ್
ಗದ್ಯ-೧ ಶಬರಿ
Shabari 10th Standard Kannada Notes
ಕೃತಿಕಾರರ ಪರಿಚಯ
: ಪು. ತಿ.
ನರಸಿಂಹಾಚಾರ್
ಪುತಿನ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ ಅವರು
ಸಾ.ಶ.
೧೯೦೫ ರಲ್ಲಿ
ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಜನಿಸಿದರು.
ಇವರು ಅಹಲ್ಯೆ, ಗೋಕುಲ ನಿರ್ಗಮನ, ಶಬರಿ, ವಿಕಟಕವಿವಿಜಯ, ಹಂಸದಮಯಂತಿ ಮತ್ತು
ಇತರ ರೂಪಕಗಳು, ಹಣತೆ, ರಸಸರಸ್ವತಿ, ಗಣೇಶ ದರ್ಶನ,
ಶಾರದಯಾಮಿನಿ, ಶ್ರೀಹರಿಚರಿತೆ, ರಥಸಪ್ತಮಿ, ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ಇವರಿಗೆ ‘ಹಂಸದಮಯಂತಿ ಮತ್ತು
ಇತರ ರೂಪಕಗಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ‘ಶ್ರೀಹರಿಚರಿತೆ’ ಕಾವ್ಯಕ್ಕೆ ಪಂಪಪ್ರಶಸ್ತಿಗಳು ಲಭಿಸಿವೆ
.
ಅ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
೧.ಶ್ರೀರಾಮನ ತಂದೆಯ ಹೆಸರೇನು?
ಶ್ರೀರಾಮನ ತಂದೆಯ ಹೆಸರು ದಶರಥ.
೨.ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು?
ಶ್ರೀರಾಮನಿಗೆ ಸಮರ್ಪಿಸಲು ಶಬರಿ ಪರಿಮಳಭರಿತ ಹೂವು, ಮಧುಪರ್ಕ ಮತ್ತು ರಸಭರಿತ ಹಣ್ಣು ಹಂಪಲುಗಳನ್ನು ಸಂಗ್ರಹಿಸಿದ್ದಳು.
೩.ಮತAಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?
ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಶಬರಿ.
೪.ರಾಮ ಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?
ರಾಮ ಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ದÀನು.
೫.ಶಬರಿ ಗೀತನಾಟಕದ ಕರ್ತೃ ಯಾರು?
ಶಬರಿ ಗೀತನಾಟಕದ ಕರ್ತೃ ಪು. ತಿ. ನರಸಿಂಹಾಚಾರ್
ಆ. ಈ ಕೆಳಗಿನ ರಶೆ್ನಗಳಿಗೆ ಎರಡು-ಮೂರು ವಾಕ್ಯದಲ್ಲಿ ಉತ್ತರಿಸಿ.
೧.ರಾಮನು ಗಿರಿವನವನ್ನು ಏನೆಂದು ಪ್ರಾರ್ಥಿಸಿದನು?
ರಾಮನು ಗಿರಿವನವನ್ನು ಕುರಿತು ಸೀತೆಯು ನನಗೆ ದೊರೆಯುವಳೇ? ಭೂಮಿಜಾತೆ, ಆತ್ಮಕಾಮಕಲ್ಪಲತೆ, ಚೆಲುವೆಯಾದ ಸೀತೆ ದೊರೆಯಳೇ? ಎಲೈ ಗಿರಿವನಗಳೇ ನಿಮ್ಮನ್ನು ಪ್ರಾರ್ಥಿಸುತ್ತೇನೆ. ಅವÀಳಿರುವ ನೆಲೆಯನ್ನು ಯಾರು ಬಲ್ಲಿರಿ? ನನ್ನ ಅರಸಿ ನನಗೆ ದೊರೆಯಳೇ? ದೊರೆವಳೇ? ನನ್ನ ಹೃದಯದ ಈ ದುಃಖವು ನಾಶವಾಗುತ್ತಿಲ್ಲವಲ್ಲ. ನನ್ನ ಎದೆ ಈ ಜಗವನ್ನು ಬಿಡದೆ ಸುಡುವಂತೆ ಕಾಡುತ್ತಿದೆ. ಹೇಳಿ ನನ್ನರಸಿ ದೊರೆವಳೇ? ಎಂದು ಗಿರಿವನವನ್ನು ಪ್ರಾರ್ಥಿಸಿದನು.
೨. ಲಕ್ಷ್ಮಣನು ಅಣ್ಣನನ್ನು ಹೇಗೆ ಸಂತೈಸಿದನು?
ಲಕ್ಷ್ಮಣನು ಸೀತೆಗಾಗಿ ಪರಿತಪಿಸುತ್ತಿದ್ದ ಅಣ್ಣನನ್ನು ಕುರಿತು ``ತಾಳಿಕೋ ಅಣ್ಣ ತಾಳಿಕೋ, ಸೂರ್ಯನೇ ತೇಜಗೆಡಲು ಕಾಂತಿಯನ್ನು ನೀಡುವವರು ಯಾರು? ರಾಮನೇ ಧೈರ್ಯಗೆಡಲು ಲೋಕಕ್ಕೆ ಧೈರ್ಯ ನೀಡುವವರಾರು?'' ಎಂದು ಸಂತೈಸಿದನು.
೩.ರಾಮನ ಸ್ವಾಗತಕ್ಕಾಗಿ ಶಬರಿ ಮಾಡಿಕೊಂಡಿದ್ದ ಸಿದ್ಧತೆಗಳೇನು?
ಶಬರಿಯು ಪ್ರತಿದಿನವೂ ವನಕ್ಕೆ ಹೋಗಿ ಫಲಭರಿತ ಪಕ್ವವಾದ ಹಣ್ಣುಗಳನ್ನು, ಕಂಪನ್ನು ಬೀರುವ ಹೂಗಳನ್ನು, ಜೇನುತುಪ್ಪ ಅಧಿಕವಾಗಿರುವ ಮಧುಪರ್ಕವನ್ನು ಸಿದ್ಧಮಾಡಿಕೊಂಡು ರಾಮ ಬಾರಯ್ಯ ಎಂದು ದಾರಿ ಕಾಯುತ್ತಿದ್ದಳು.
೪ ರಾಮಲಕ್ಷ್ಮಣರನ್ನು ಶಬರಿಯು ಉಪಚರಿಸಿದ ರೀತಿಯನ್ನು ವಿವರಿಸಿ.
ಶಬರಿಯು ರಾಮಲಕ್ಷ್ಮಣರನ್ನು ಕಂಡು ಬೆರಗಾಗಿ, ಹತ್ತಿರಕ್ಕೆ ಬಂದು ಮೈಯನ್ನು ಮುಟ್ಟಿ ಕಾಲಿಗೆ ಬಿದ್ದು ನಮಸ್ಕರಿಸಿ, ಕೈಯನ್ನು ಕಣ್ಣಿಗೊತ್ತಿಕೊಂಡು ಬಗೆಬಗೆಯ ಸುವಾಸನೆಯುಳ್ಳ ಹೂಮಾಲೆಯನ್ನು ಕೊರಳಿಗೆ ಹಾಕಿ ಸಂತಸಪಟ್ಟಳು. “ಜಗದಲ್ಲಿ ಇದರಷ್ಟು ರುಚಿಯಾದ ಹಣ್ಣೇ ಇಲ್ಲ, ನಿಮಗೆಂದೆ ತಂದಿದ್ದೇನೆ” ಎಂದು ಹೇಳುತ್ತಾ ಸವಿಯಾದ ಹಣ್ಣುಗಳನ್ನು ನೀಡಿ ಉಪಚರಿಸಿದಳು.
೫.ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು ಶಬರಿಗೆ ಏನು ಹೇಳಿದರು?
ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು ಶಬರಿಗೆ “ನೀನು ನೀಡಿದ ಆತಿಥ್ಯದಿಂದ ನಾವು ಸುಖವನ್ನು ಕಂಡೆವು. ನಾವು ನಿನಗೆ ಋಣಿಯಾಗಿದ್ದೇವೆ. ತಾಯಿ ಕಣ್ಣೀರೇಕೆ? ನಿನ್ನ ಆತಿಥ್ಯದಲ್ಲಿ ಸ್ವಲ್ಪವೂ ಕೊರತೆಯಾಗಿಲ್ಲ. ನಮ್ಮ ಅಯೋಧ್ಯೆಯ ಅರಮನೆಗಿಂತಲೂ ಹೆಚ್ಚಿನ ಸತ್ಕಾರ ಇಲ್ಲಿ ದೊರೆಯಿತು. ಇದು ಕಾಡು ಎಂಬುದನ್ನು ಮರೆತು ನಮ್ಮ ಮನೆಯೆಂಬ ಭಾವನೆ ಬಂದಿದೆ. ಆದ್ದರಿಂದ ನಿನ್ನನ್ನು ಅಬ್ಬೆ (ತಾಯಿ) ಎಂದು ತಿಳಿದಿದ್ದೇವೆ. ನಿನ್ನ ಸುಖದಲ್ಲಿ ನಮ್ಮ ಸುಖವನ್ನು ಕಂಡೆವು” ಎಂದು ಮುಂತಾಗಿ ಹೇಳಿದರು.
ಇ. ಸಂದರ್ಭ ಸಹಿತ ಸ್ವಾರಸ್ಯವನ್ನು ಬರೆಯಿರಿ.
೧.“ಆವುದೀ ಮರುಳು? ನಮ್ಮೆಡೆಗೆ ಬರುತಿಹುದು''
ಆಯ್ಕೆ: ಈ ಮೇಲಿನ ವಾಕ್ಯವನ್ನು ಶ್ರೀರಂಗ ಮತ್ತು ನಾ.ಕಸ್ತೂರಿ ಅವರು ಸಂಪಾದಿಸಿರುವ ‘ಏಕಾಂಕ ನಾಟಕಗಳು’ ಎಂಬ ಕೃತಿಯಿಂದ ಆಯ್ದ ಪು. ತಿ. ನರಸಿಂಹಾಚಾರ್ಯರು ಬರೆದಿರುವ ‘ಶಬರಿ’ ಎಂಬ ಗೀತನಾಟಕದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಶಬರಿಯನ್ನು ನೋಡಿದ ರಾಮನು ಲಕ್ಷ್ಮಣನಿಗೆ ಈ ಮಾತನ್ನು ಹೇಳಿದನು. ಮತಂಗಾಶ್ರಮದಲ್ಲಿ ರಾಮನ ದರ್ಶನಕ್ಕಾಗಿ ಶಬರಿ ಕಾಯುತ್ತಿದ್ದಳು. ಅದೇ ಸಂದರ್ಭದಲ್ಲಿ ರಾಮಲಕ್ಷ್ಮಣರು ಸೀತೆಯನ್ನು ಅರಸುತ್ತ ಮತಂಗಾಶ್ರಮಕ್ಕೆ ಬರುತ್ತಾರೆ. ಆಗ ಶಬರಿಯು ತನ್ನ ಕೈ, ಕಂಕುಳು, ತಲೆ ಮೇಲೆ ಹೂ, ಹಣ್ಣುಗಳನ್ನು ಇಟ್ಟುಕೊಂಡು ಬರುತ್ತಿದ್ದುದನ್ನು ಕಂಡು
ಆಶ್ಚರ್ಯ ಹಾಗೂ ಗಾಬರಿಯಿಂದ ‘ಯಾವುದು ಈ ಮರುಳು? ನಾವಿರುವ ಕಡೆಗೆ ಬರುತ್ತಿರುವಂತೆ ಕಾಣುತ್ತಿದೆ?’ ಎಂದು ಅವಿತುಕೊಳ್ಳುವ ಸಂದರ್ಭದಲ್ಲಿ ಈ ಮೇಲಿನ ವಾಕ್ಯವು ಬಂದಿದೆ.
ಸ್ವಾರಸ್ಯ: ಶಬರಿಯ ಮರುಳು ರೂಪವನ್ನು ನೋಡಿ ರಾಮ-ಲಕ್ಷ÷್ಮಣರೂ ಭಯಗೊಂಡು ಅವಿತುಕೊಂಡದ್ದು ಇಲ್ಲಿ ಸ್ವಾರಸ್ಯಕರವಾಗಿ ವ್ಯಕ್ತವಾಗಿದೆ.
೨. ``ನಾಚುತಿಹೆನೀ ಪೂಜ್ಯೆಯೀ ನಲುಮೆಯಿಂದ''
ಆಯ್ಕೆ: ಈ ಮೇಲಿನ ವಾಕ್ಯವನ್ನು ಶ್ರೀರಂಗ ಮತ್ತು ನಾ.ಕಸ್ತೂರಿ ಅವರು ಸಂಪಾದಿಸಿರುವ ‘ಏಕಾಂಕ ನಾಟಕಗಳು’ ಎಂಬ ಕೃತಿಯಿಂದ ಆಯ್ದ ಪು. ತಿ. ನರಸಿಂಹಾಚಾರ್ಯರು ಬರೆದಿರುವ ‘ಶಬರಿ’ ಎಂಬ ಗೀತನಾಟಕದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ರಾಮನು ಲಕ್ಷ್ಮಣನಿಗೆ ಹೇಳಿದನು. ರಾಮನಿಗಾಗಿ ಹಂಬಲಿಸುತ್ತಿದ್ದ ಶಬರಿಯನ್ನು ಕಂಡು ‘ದನು ಹೇಳಿದ ಶಬರಿ ಇವಳೇ ಇರಬಹುದು. ನಮ್ಮಿಂದ ಈಕೆಗೆ ಯಾವುದೇ ಉಪಕಾರ ಇಲ್ಲದಿದ್ದರೂ ಈಕೆಯು ನನ್ನನ್ನು ಇಷ್ಟೊಂದು ನಲ್ಮೆಯಿಂದ ನೆನೆಯುತ್ತಿದ್ದಾಳೆ. ಈ ಪೂಜ್ಯಳನ್ನು ಕಂಡರೆ ನನಗೆ ಸಂಕೋಚವಾಗುತ್ತಿದೆ’ ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ವಾಕ್ಯವನ್ನು ಹೇಳಲಾಗಿದೆ.
ಸ್ವಾರಸ್ಯ: ಶಬರಿಯ ಅನನ್ಯ ಭಕ್ತಿಭಾವ ನೋಡಿ ಸಂಕೋಚ ತಾಳುವ ರಾಮನ ಮನಃಸ್ಥಿತಿಯು ಇಲ್ಲಿ ವ್ಯಕ್ತವಾಗಿದೆ.
೩. ``ತಾಯಿ ದಾರಿಗರಿಗೆ ಬೀಡಿಲ್ಲಿ ದೊರೆಯುವುದೇ?''
ಆಯ್ಕೆ: ಈ ಮೇಲಿನ ವಾಕ್ಯವನ್ನು ಶ್ರೀರಂಗ ಮತ್ತು ನಾ.ಕಸ್ತೂರಿ ಅವರು ಸಂಪಾದಿಸಿರುವ ‘ಏಕಾಂಕ ನಾಟಕಗಳು’ ಎಂಬ ಕೃತಿಯಿಂದ ಆಯ್ದ ಪು. ತಿ. ನರಸಿಂಹಾಚಾರ್ಯರು ಬರೆದಿರುವ ‘ಶಬರಿ’ ಎಂಬ ಗೀತನಾಟಕದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ರಾಮನು ಶಬರಿಗೆ ಕೇಳುವ ಮಾತು ಇದಾಗಿದೆ. ಸೀತೆಗಾಗಿ ಹುಡುಕಾಡುತ್ತಾ ಬಂದ ರಾಮಲಕ್ಷ್ಮಣರು ಕಾಡೆಲ್ಲ ಸುತ್ತಿ ದಣಿದು ಮತಂಗಾಶ್ರಮಕ್ಕೆ ಬರುತ್ತಾರೆ. ಆಗ ಶಬರಿಯು ರಾಮನಿಗಾಗಿ ಅರ್ಪಿಸಲು ತಂದಿರಿಸಿದ್ದ ಹೂ ಹಣ್ಣುಗಳು ಇನ್ನೂ ಸಮರ್ಪಿತವಾಗಿಲ್ಲ. ಇದಕ್ಕಾಗಿ ಶಬರಿಯು ಬೇಸರಿಸಿ ಪುನಃ ಪುನಃ ಹೊಸದನ್ನು ಸಂಗ್ರಹಿಸಿ ತಂದು ರಾಮನಿಗಾಗಿ ಕೊಡಲು ಕಾತರಿಸುತ್ತಾ, ರಾಮನ ಗುಣಗಾನ ಮಾಡುತ್ತಾ, ಅವನಿಗಾಗಿ ಕಟ್ಟಿದ ಹೂಮಾಲೆಗೆ ಮುದ್ದಿಕ್ಕುತ್ತಾ ಸಂಭ್ರಮಿಸುತ್ತಿರುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ: ತನಗಾಗಿ ಹಂಬಲಿಸುತ್ತಿರುವ ಶಬರಿಯನ್ನು ಕುರಿತು ರಾಮನು ಏನೂ ಅರಿಯದವನಂತೆ “ದಾರಿಗರಾದ ನಮಗೆ ಇಲ್ಲಿ ಉಳಿದುಕೊಳ್ಳಲು ಸ್ಥಳಾವಕಾಶ ದೊರೆಯುವುದೇ?” ಎಂದು ಕೇಳುವುದು ಸ್ವಾರಸ್ಯಪೂರ್ಣವಾಗಿದೆ.
೪. ``ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ!''
ಆಯ್ಕೆ: ಈ ಮೇಲಿನ ವಾಕ್ಯವನ್ನು ಶ್ರೀರಂಗ ಮತ್ತು ನಾ. ಕಸ್ತೂರಿ ಸಂಪಾದಿಸಿರುವ ‘ಏಕಾಂಕ ನಾಟಕಗಳು’ ಎಂಬ ಕೃತಿಯಿಂದ ಆಯ್ದ ಪು. ತಿ. ನರಸಿಂಹಾಚಾರ್ಯರು ಬರೆದಿರುವ ‘ಶಬರಿ’ ಎಂಬ ಗೀತನಾಟಕದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಶಬರಿಯು ರಾಮನನ್ನು ಕುರಿತು ಹೇಳುವ ಮಾತಾಗಿದೆ. ಕಣ್ಣೀರಿಡುತ್ತಿದ್ದ ಶಬರಿಯನ್ನು ಕಂಡು ರಾಮನು ಕಣ್ಣ ನೀರಿದೇಕೆ ತಾಯಿ? ನೀವು ನಮಗೆ ನೀಡಿದ ಆತಿಥ್ಯದಲ್ಲಿ ಯಾವುದೇ ಕೊರತೆಯಿಲ್ಲ. ನಮ್ಮ ಅಯೋಧ್ಯೆಯ ಅರಮನೆಗಿಂತ ಹೆಚ್ಚಿನ ಸತ್ಕಾರ ಇಲ್ಲಿ ದೊರೆÀಕಿದೆ. ಇದು ಕಾಡು ಎಂಬುದನ್ನೇ ಮರೆತಿದ್ದೇವೆ. ನಿನ್ನನ್ನು ತಾಯಿ ಎಂದೆ ಭಾವಿಸಿದ್ದೇವೆ ಎಂದು ಹೇಳುವ ಸಂದರ್ಭದಲ್ಲಿ ಶಬರಿಯು ಈ ಮೇಲಿನಂತೆ ಹೇಳಿರುವ ಮಾತಾಗಿದೆ.
ಸ್ವಾರಸ್ಯ: ರಾಮನ ಉದಾರಗುಣ, ಮಾತು ಹಾಗೂ ರೂಪವನ್ನು ಹೊಗಳಿರುವುದು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.
೫. ``ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು''
ಆಯ್ಕೆ: ಈ ಮೇಲಿನ ವಾಕ್ಯವನ್ನು ಶ್ರೀರಂಗ ಮತ್ತು ನಾ.ಕಸ್ತೂರಿ ಸಂಪಾದಿಸಿರುವ ‘ಏಕಾಂಕ ನಾಟಕಗಳು’ ಎಂಬ ಕೃತಿಯಿಂದ ಆಯ್ದ ಪು. ತಿ. ನರಸಿಂಹಾಚಾರ್ಯರು ಬರೆದಿರುವ ‘ಶಬರಿ’ ಎಂಬ ಗೀತನಾಟಕದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ರಾಮನ ದರ್ಶನ ಭಾಗ್ಯದಿಂದ ಸಂತುಷ್ಟಳಾದ ಶಬರಿಯು ಮುಕ್ತಿಯನ್ನು ಪಡೆಯುವುದಕ್ಕಾಗಿ ಅಗ್ನಿ ಪ್ರವೇಶಿಸಿದ ಸಂದರ್ಭದಲ್ಲಿ ರಾಮನು ಈ ಮಾತನ್ನು ಹೇಳುತ್ತಾನೆ. ಉರಿಯುವ ದೀಪ ಬೆಳಕನ್ನು ಕೊಡುತ್ತದೆ. ಆ ದೀಪದ ಜ್ವಾಲೆಯ ಬುಡದಲ್ಲಿ ಬತ್ತಿಯ ಕರಕು (ಕಪ್ಪು) ಭಾಗವೂ ಇರುತ್ತದೆ. ಆದರೆ ಯಾರು ಆ ದೀಪದಲ್ಲಿ ಅದರ ಬೆಳಕನ್ನು ಮಾತ್ರ ಆಶಿಸುತ್ತಾರೋ ಅವರಿಗೆ ದೀಪದ ಬುಡದಲ್ಲಿರುವ ಕಪ್ಪು ಭಾಗ ಕಾಣುವುದಿಲ್ಲ. ಅಂದರೆ ಯಾರು ಒಳಿತನ್ನು ಮಾತ್ರ ಆಲೋಚಿಸುವರೋ ಅವರಿಗೆ ದೋಷ-ಕೆಡುಕುಗಳು ಗೋಚರಿಸುವುದಿಲ್ಲ ಎಂದು ಹೋಲಿಸಿ ಹೇಳುವಾಗ ಈ ಮೇಲಿನ ಮಾತನ್ನು ಹೇಳಲಾಗಿದೆ.
ಸ್ವಾರಸ್ಯ: ಶಬರಿಯ ತ್ಯಾಗ ಗುಣ, ಮುಕ್ತಿಗಾಗಿ ಪರಿತಪಿಸುವ ರೀತಿ ವ್ಯಕ್ತವಾಗಿದೆ.
ಈ ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
೧. ಶಬರಿಯ ಚಂತೆ ಹಿಂಗಿ ಹೋದ ಸಂದರ್ಭದ ಸ್ವಾರಸ್ಯವನ್ನು ವಿವರಿಸಿ.
ರಾಮಲಕ್ಷ್ಮಣರನ್ನು ಕಂಡು ಶಬರಿ ಹಿಗ್ಗಿ ಸಂತಸವನ್ನು ತುಂಬಿಕೊಳ್ಳುತ್ತಾಳೆ. ರಾಮಲಕ್ಷ÷್ಮಣರಿಗೆ ರುಚಿಕರ ಹಣ್ಣುಗಳನ್ನು ನೀಡಿ ಸತ್ಕರಿಸುತ್ತಾಳೆ. ರಾಮನನ್ನು ಕಂಡು ತಾನು ಪರಮಸುಖಿಯೆಂದು ನರ್ತಿಸುತ್ತಾಳೆ. ರಾಮನೂ ಕೂಡ ನಿನ್ನ ಆತಿಥ್ಯದಿಂದ ನಾವು ಅತ್ಯಂತ ಸಂತೋಷಗೊAಡಿದ್ದೇವೆ. ನಿನಗೆ ನಾವು ಯಾವಾಗಲು ಋಣಿಯಾಗಿರುತ್ತೇವೆ ಎನ್ನುತ್ತಾನೆ. ಆಗ ಶಬರಿಯು ಕಣ್ಣೀರು ತುಂಬಿಕೊAಡು, ‘ನನ್ನ ಜಾಡನ್ನು ಹಿಡಿದು ಬಂದು ಸಂತಸ ನೀಡಿದ್ದೀರಿ. ನಾನು ನಿಮ್ಮನ್ನು ಕಾಣಬೇಕೆಂದುಕೊAಡಿದ್ದ ಬಯಕೆ ಇಂದು ಈಡೇರಿತು. ನಾನೊಬ್ಬಳು ಬಡವಿ ಎಂದು ನನಗೆ ಮರುಕ ತೋರಿದಿರಾ?’ ಎಂದಳು. ಶ್ರೀರಾಮನು ‘ನಿನ್ನ ಆತಿಥ್ಯದಲ್ಲಿ ಸ್ವಲ್ಪವೂ ಕೊರತೆಯಿಲ್ಲ. ನಮ್ಮ ಅರಮನೆಗಿಂತ ನಿನ್ನ ಆಶ್ರಮವನ್ನು ನಮ್ಮ ಮನೆಯಂತೆ ಭಾವಿಸಿದ್ದೇವೆ ಮತ್ತು ನಿನ್ನನ್ನು ತಾಯಿಯಂತೆ ಭಾವಿಸಿದ್ದೇವೆ’ ಎಂದಾಗ ಶಬರಿಯು ‘ನಿನ್ನ ರೂಪಿನಂತೆ ಮಾತು ಕೂಡ ಉದಾರವಾಗಿದೆ. ನಾನು ಇಂದು ಧನ್ಯಳು. ಸಿದ್ಧರಾದ ಮತಂಗರು ನೀಡಿದ ವರವು ಇಂದು ನನಗೆ ಫಲಿಸಿತು. ಗುರುಗಳ ಪೂಜೆಯನ್ನು ಮಾಡಿದ ಪುಣ್ಯ ನನಗಿಂದು ಈ ರೀತಿಯಾಗಿ ದೊರಕಿದೆ. ನನ್ನ ಚಿಂತೆಯೆಲ್ಲ ಹಿಂಗಿ ಹೋಯಿತು’ ಎನ್ನುತ್ತಾಳೆ. ಆಗ
ಶ್ರೀರಾಮನು ‘ತಾಯಿ ನಿನ್ನ ಗುರುಗಳ ಮಹಿಮೆಯನ್ನು ನಾನು ಕೇಳಿದ್ದೇನೆ. ನಮ್ಮೆಲ್ಲ ಚಿಂತೆಯನ್ನು ಮರೆಸಿ ಶಾಂತಿ ನೀಡುವ ವನದಲ್ಲಿ ಪರಿಶುದ್ಧೆ ನೀನು. ನಮಗೂ ಈ ದಿನ ಸುದಿನ’ ಎಂದು ಶಬರಿಯನ್ನು ಹೊಗಳುತ್ತಾನೆ. ಹೀಗೆ ಶಬರಿಯ ಚಿಂತೆ ಹಿಂಗಿ ಹೋಯಿತು.
೨. ಶಬರಿಯ ಸಡಗರ ಸಂತೋಷ ಮೇಳದವರ ಹಾಡಿನಲ್ಲಿ ಹೇಗೆ ವರ್ಣಿತವಾಗಿದೆ?
ರಾಮನು ಬಂದು ತನ್ನ ಆಶ್ರಮದಲ್ಲಿ ನಿಂತಿರುವುದನ್ನು ನೋಡಿ ಶಬರಿಯು ಆಶ್ಚರ್ಯಪಟ್ಟಳು. ರಾಮನ ಹತ್ತಿರ ಬಂದು ರಾಮನನ್ನು ಮುಟ್ಟಿ, ಪಾದಕ್ಕೆ ನಮಸ್ಕರಿಸಿ, ಕೈಯನ್ನು ಕಣ್ಣಿಗೊತ್ತಿಕೊಂಡು ಕಣ್ಣೀರು ಸುರಿಸಿದಳು. ಗದ್ಗದಿತ ಸ್ವರದಿಂದ ``ಬನ್ನಿರಿ'' ಎಂದು ಆಹ್ವಾನಿಸಿದಳು. ಇಂದು ಏನು ಸಿದ್ಧತೆಯೇ ಇಲ್ಲವಲ್ಲ ಎಂದು ಹಂಬಲಿಸಿದಳು. ಮನಸ್ಸಿನ ಬಯಕೆಯಂತೆ ಬಗೆಬಗೆಯ ಕಂಪಿರುವ ವನಮಾಲೆಯನ್ನು ರಾಮನ ಕೊರಳಿಗಿಟ್ಟು ಹಿಗ್ಗಿದಳು. ಜಗತ್ತಿನಲ್ಲಿ ಇಂತಹ ರುಚಿಕರವಾದ ಹಣ್ಣೇ ಇಲ್ಲವೆಂದೂ ನಿಮಗಾಗಿಯೇ ತಂದಿದ್ದೇನೆAದು ಹೇಳುತ್ತಾ ರಾಮನ ಕೈಗಿತ್ತಳು. ಶಬರಿಯ ಸೇವೆಯಿಂದ ರಾಮನು ಸುಪ್ರಸನ್ನನಾದನು. ರಾಮ ಲಕ್ಷ÷್ಮಣರು ಧನ್ಯತಾಭಾವದಿಂದ ಮಂದಹಾಸ ಬೀರಿದರು. ಶಬರಿಯು “ಸುಖಿ ನಾ ಸುಖಿ ನಾ...” ಎಂದು ಹಾಡಿ ನರ್ತಿಸಿದಳು. ಹೀಗೆ ಶಬರಿಯ ಸಡಗರ ಸಂತೋಷ ಮೇಳದವರ ಹಾಡಿನಲ್ಲಿ ವರ್ಣಿತವಾಗಿದೆ.
೩. ‘ನಂಬಿ ಕೆಟ್ಟವರಿಲ್ಲ’ ಎಂಬ ಮಾತು ಶಬರಿಯ ಪಾಲಿಗೆ ಹೇಗೆ ನಿಜವಾಗಿದೆ ಎಂಬುದನ್ನು ಸಮರ್ಥಿಸಿ.
ಶಬರಿಯು ಮತಂಗ ಋಷಿಯ ಆಶ್ರಮದಲ್ಲಿ ವಾಸಿಸುತ್ತಿರುತ್ತಾಳೆ. ಸಿದ್ಧರಾದ ಮತಂಗ ಋಷಿಗಳು ಶಬರಿಯ ಮನದಾಸೆಯನ್ನು ತಿಳಿದವರಾಗಿದ್ದು, ರಾಮಲಕ್ಷ÷್ಮಣರು ಆಶ್ರಮಕ್ಕೆ ಬಂದೇ ಬರುತ್ತಾರೆ. ನಿನ್ನ ಇಷ್ಟಾರ್ಥ ನೆರವೇರುತ್ತದೆ ಎಂದಿದ್ದರು. ಅವರ ಮಾತಿನಂತೆ ರಾಮಲಕ್ಷ÷್ಮಣರು ಶಬರಿಯ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಆಗ ಶಬರಿಯು ರಾಮನ ದರ್ಶನದಿಂದ ಪುಳಕಿತಳಾದಳು. ಕಣ್ತುಂಬ ರಾಮನ ದರ್ಶನ ಮಾಡಿ ಪಾದಕ್ಕೆ ನಮಸ್ಕರಿಸಿ ಸಂಭ್ರಮಿಸಿದಳು. ಪರಿಮಳಭರಿತ ಹೂಮಾಲೆಯನ್ನು ರಾಮನ ಕೊರಳಿಗೆ ಹಾಕಿ, ರುಚಿಕರ ಹಣ್ಣುಗಳನ್ನು ನೀಡಿ ಉಪಚರಿಸಿದಳು. ಧನ್ಯಳಾದೆನೆಂದು ಸಂತಸ ವ್ಯಕ್ತಪಡಿಸಿದಳು. ಹಲವಾರು ವರ್ಷಗಳಿಂದ ರಾಮನ ದರ್ಶನಕ್ಕಾಗಿ ಕಾದು, ಮತಂಗ ಮುನಿಗಳ ಮಾತನ್ನು ನಂಬಿ, ರಾಮನು ಬರುವ ಕ್ಷಣವನ್ನೇ ಎದುರು ನೋಡುತ್ತಿದ್ದ ಶಬರಿಗೆ ರಾಮನ ದರ್ಶನವಾಯಿತು. ಶಬರಿಯ ಮನದಾಸೆ ಈಡೇರಿತು. ಇದರಿಂದಾಗಿ `ನಂಬಿಕೆಟ್ಟವರಿಲ್ಲ’ ಎಂಬ ಮಾತು ಶಬರಿಯ ಪಾಲಿಗೆ ನಿಜವಾಯಿತು.
ವ್ಯಾಕರಣಾಂಶಗಳು
ಈ ಕೆಳಗಿನ ಪ್ರತಿಯೊಂದು ಹೇಳಿಕೆಗೂ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಲಾಗಿದ್ದು ಸೂಕ್ತವಾದ ಉತ್ತರವನ್ನು ಆರಿಸಿ ಬರೆಯಿರಿ.
೧. ‘ಸನ್ಮಂಗಳ’ ಪದವು ಈ
ಸಂಧಿಯಾಗಿದೆ----------
ಎ. ಆಗಮ
ಬಿ. ಶ್ಚುತ್ವ
ಸಿ. ಅನುನಾಸಿಕ
ಡಿ. ಜಶ್ತ÷್ವ
೨. ‘ಶೋಕದುಲ್ಕೆ’ ಈ ಸಂಧಿಯಾಗಿದೆ -------------
ಎ. ಗುಣ
ಬಿ. ವೃದ್ಧಿ
ಸಿ. ಲೋಪ
ಡಿ. ಆಗಮ
೩. ‘ಪ್ರಾಣಾಹುತಿ’ ಪದವು ಈ
ಸಂಧಿಯಾಗಿದೆ---------
ಎ. ಸವರ್ಣದೀರ್ಘ ಬಿ.
ಯಣ್ ಸಿ.
ಜಶ್ತ÷್ವ ಡಿ. ಅನುನಾಸಿಕ
೪. ‘ಮರಮರಳಿ’ ಈ ಪದದಲ್ಲಿರುವ ವ್ಯಾಕರಣಾಂಶ ---------
ಎ. ಜೋಡುನುಡಿ ಬಿ.
ದ್ವಿರುಕ್ತಿ
ಸಿ. ಅನುಕರಣಾವ್ಯಯ ಡಿ.
ನಾಣ್ಣುಡಿ
೫. ‘ಧೃತಿಯಾನು’ ಪದವು ಈ
ಸಂಧಿಯಾಗಿದೆ--------
ಎ. ಲೋಪ
ಬಿ. ಆಗಮ ಸಿ.
ಆದೇಶ
ಡಿ. ಜಸ್ತ÷್ವ
ಮೊದಲೆರಡು ಪದಗಳಿಗೆ ಸಂಬAಧಿಸಿದAತೆ ಮೂರನೆಯ ಪದಕ್ಕೆ ಸಂಬAಧೀಕರಿಸಿ ಬರೆಯಿರಿ.
೧. ಐ ಔ : ಸಂಧ್ಯಕ್ಷರಗಳು : : ಅಂ ಅಃ : ________
೨. ದಿವ : ಸ್ವರ್ಗ : : ಧೃತಿ : _________
೩. ಅಬ್ಬೆ : ತಾಯಿ : : ಅರ್ತಿ : _______
೪. ಎಡೆ : ಸ್ಥಳ : : ಎರೆ : ________
೫. ತಪಸ್ವಿ : ತವಸಿ : : ತೃಷೆ : _________
೬. ಸುರಭಿ : ಕಾಮಧೇನು : : ಮಧುಕರ : _________
೭. ಹ್ರಸ್ವಸ್ವರ : ೬ : : ದೀರ್ಘಸ್ವರ : __________
೮. ವ್ಯಂಜನಗಳು : ೩೪ : : ಯೋಗವಾಹಗಳು : _________
೯. ಅಲ್ಪಪ್ರಾಣಾಕ್ಷರಗಳು : ೧೦ : : ಮಹಾಪಾಣಾಕ್ಷರಗಳು : ________
೧೦. ಅನುನಾಸಿಕಾಕ್ಷರಗಳು : ೫ : : ಅವರ್ಗೀಯ ವ್ಯಂಜನಗಳು :
Shabari 10th Standard Kannada Notes