ಬಸವಳಿದ ಇಳೆಗೆ ತಂಪೆರೆವ ಮಳೆಯಂತೆ ಇಂದಿನಬಿಡುವಿಲ್ಲದ ಕಾರ್ಯ ಒತ್ತಡ ಹಾಗೂ ಬದಲಾದ ಆಧುನಿಕ ಜೀವನ ಶೈಲಿಯಿಂದ ಹದಗೆಟ್ಟಿರುವ ಮಾನಸಿಕ ಹಾಗೂದೈಹಿಕ ಆರೋಗ್ಯಕ್ಕೆ ಯೋಗ ಸಂಜೀವಿನಿ ಆಗಿದೆ. ಇತ್ತೀಚಿನ
ಯೋಗ ಪದದ ಅರ್ಥ
ಯೋಗ ಪದವು ಯುಜ್ ಎಂಬ ಸಂಸ್ಕೃತ ಧಾತುವಿನಿಂದ ಬಂದಿದೆ, ಯೋಗ ಎಂದರೆ "ಸೇರಲು", ಅಥವಾ "ಒಗ್ಗೂಡಿಸಲು", ಎಂದರ್ಥ ಯೋಗ ಮನಸ್ಸು ಮತ್ತು ದೇಹದ ಏಕತೆಯನ್ನು ಸಂಕೇತಿಸುತ್ತದೆ; ಚಿಂತನೆ ಮತ್ತು ಕ್ರಿಯೆ; ಸಂಯಮ ಮತ್ತು ನೆರವೇರಿಕೆ; ಮಾನವ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯ, ಮತ್ತು ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನ.ವಾಗಿದೆ ಪ್ರಾಚೀನ ಭಾರತೀಯ ಸಂಪ್ರದಾಯದ ಅಮೂಲ್ಯ ಕೊಡುಗೆ, ಯೋಗವು ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಹೆಚ್ಚಿಸಲು ಅತ್ಯಂತ ವಿಶ್ವಾಸಾರ್ಹ ಸಾಧನವಾಗಿ ಹೊರಹೊಮ್ಮಿದೆ.
ಯುಜ್ಯತೇ ಅನೇನ ಇತಿಃ ಯೋಗಃ –
ಅನೇಕವನ್ನು (ಮನಸ್ಸು – ಅನೇಕ ಕಡೆ ಹರಿದಾಡುವ ಮನಸ್ಸನ್ನು) ಕೂಡಿಸುವುದು ಯೋಗ.ಯೋಗಸಾಧಕರು ಆರಂಭದಲ್ಲಿ ಪಠಿಸುವ ಒಂದು ಶ್ಲೋಕವಿದೆ.
” ಯೋಗೇನ ಚಿತ್ತಸ್ಯ ಪದೇನಾ ವಾಚಾಂ
ಮಲಂ ಶರೀರಸ್ಯಚ ವೈದ್ಯಕೇನ ||
ಯೋಪಾಕರೋಕ್ತಮ್ ಪ್ರವರಂ ಮುನೀನಾಂ
ಪತಂಜಲೀಂ ಪ್ರಾಂಜಲಿನ್ ರಾನತೋಸ್ಮಿ ||
ಈ ಶ್ಲೋಕಾರ್ಥವೂ ಸಹ ಯೋಗವೆಂದರೆ ಚಿತ್ತಶುದ್ಧಿಯನ್ನು ಮಾಡುವ ಪ್ರಕಿಯೆ ಎಂದಿದೆ.
ಪಾಣಿನಿಯು ವ್ಯಾಕರಣಶಾಸ್ತದಲ್ಲಿ ಯೋಗಕ್ಕೆ ಹಲವಾರು ಅರ್ಥಗಳನ್ನ ಕೊಟ್ಟಿದ್ದಾನೆ ಅದರಲ್ಲಿ “ಯುಜಿರೇ ಯೋಗೇ ” – ಯುಜ್ (ಸಮಾಧಿ ) ಸಾಧಿಸುವುದೇ ಯೋಗ , ಇಲ್ಲಿ ಸಮಾಧಿ ಎಂದರೆ ಮನಸ್ಸಿನ ಸಮಾಧಿ – ಮನೋಲಯ ಸಮಾಧಿ ಸ್ಥಿತಿಯನ್ನು ಸಾಧಿಸಯವ ಶಿಕ್ಷಣವೇ ಯೋಗ.
ಯೋಗ ಎಂದರೆ ಇತರೇ ದರ್ಶನಗಳಂತೆ
” ಅಥಾತೊ ಬ್ರಹ್ಮಜಿಜ್ಞಾಸ ” ಎಂದು ವಿಚಾರ ಮಾಡುತ್ತಾ ಜೀವ ಜಗತ್ತು ಈಶ್ವರರ ಬಗ್ಗೆ ಜಿಜ್ಞಾಸೆ ಮಾಡುವುದಲ್ಲ…!!!
ಯೋಗವೆಂದರೆ ಅನುಷ್ಟಾನ
ಈ ಕಾರಣಕ್ಕಾಗಿಯೇ ಯೋಗಸೂತ್ರ ರಚಿಸಿದ ಪತಂಜಲಿ ಮಹಾಮುನಿಗಳು ಆರಂಬದಲ್ಲಿ
“ಅಥ ಯೋಗಾನುಶಾಸನಂ ” ಎಂದಿರುವರು
ಯೋಗ ದಿನದ ಆಚರಣೆ
ಪ್ರತಿ ವರ್ಷ ವಿಶ್ವ ಯೋಗ ದಿನವನ್ನು ಜೂನ್ 21 ರಂದು ವಿಶ್ವದಾದ್ಯಂತ ಬಹಳ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಪ್ರತಿವರ್ಷ ಯೊಗದ ದಿನಾಚರಣೆಯು ಯೋಗ, ಧ್ಯಾನ, ಸಭೆಗಳು ಚರ್ಚೆಗಳು, ಸಾಂಸ್ಕೃತಿಕ ಪ್ರದರ್ಶನಗಳು ಇತ್ಯಾದಿಗಳನ್ನು ಅಭ್ಯಸಿಸುವುದರ ಮೂಲಕ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಯೋಗ ದಿನದ ಇತಿಹಾಸ
ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು 2014 ಡಿಸೆಂಬರ್ನಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ಭಾರತದ ಖಾಯಂ ಪ್ರತಿನಿಧಿಯಾಗಿರುವ ಅಶೋಕ್ ಕುಮಾರ್ ಮಂಡಿಸಿದ್ದರು. ವಿಶ್ವಸಂಸ್ಥೆಗೆ ಇದು ಐತಿಹಾಸಿಕ ಕ್ಷಣವಾಗಿದ್ದು, ಅದರ ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ಸೂಚಿಸಿದ್ದರು. ವಿಶ್ವ ಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಅನುಮೋದನೆಯನ್ನು ನೀಡಿದ್ದವು. ವಿಶ್ವಸಂಸ್ಥೆಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನ ಆಚರಿಸಲು ಕರೆ ನೀಡಿದ ಬಳಿಕ, ಡಿಸೆಂಬರ್ 11, 2014 ರಂದು, ಪ್ರತಿ ವರ್ಷ ಜೂನ್ 21 ರ ದಿನ ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುವ ಬಗ್ಗೆ ದೃಢಪಡಿಸಿದರು. ಅಂತರಾಷ್ಟ್ರೀಯ ಯೋಗ ದಿನದ ಪ್ರಸ್ತಾಪವನ್ನು ಯುನೈಟೆಡ್ ಸ್ಟೇಟ್ಸ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಿತು. ಯೋಗ ದಿನವನ್ನು ಮೊದಲು 21 ಜೂನ್ 2015 ರಂದು ವಿಶ್ವದಾದ್ಯಂತ ವಿಶ್ವ ಯೋಗ ದಿನ ಎಂದು ಆಚರಿಸಲಾಯಿತು
2015ರಲ್ಲಿ ಮೊದಲ ಅಂತರರಾಷ್ಟ್ರೀಯ ಯೋಗ ದಿನ ಆಚರಣೆ ಭಾರತದ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವ ಸಂಸ್ಥೆಯ ತಮ್ಮ ಭಾಷಣದಲ್ಲಿ ವರ್ಷದ ಅತಿ ದೀರ್ಘ ದಿನವಾದ ಜೂನ್ ೨೧ರಂದು ವಿಶ್ವ ಯೋಗ ದಿನ ಆಚರಿಸುವಂತೆ ಕರೆ ನೀಡಿದರು. 2015 ಜೂನ್ 21ರಂದು ಚೊಚ್ಚಲ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಆಯುಶ್ ಸಚಿವಾಲಯದ ನೇತೃತ್ವದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ರಾಜಪಥದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ 84 ರಾಷ್ಟ್ರಗಳ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, 21 ಯೋಗ ಆಸನಗಳನ್ನು ಅಭ್ಯಾಸಿಸಲಾಯಿತು.
ಚೊಚ್ಚಲ ಯೋಗ ದಿನ ಆಚರಣೆಯಲ್ಲೇ ಗಿನ್ನಿಸ್ ದಾಖಲೆ.
2015 ಜೂನ್ 21ರಂದು ಚೊಚ್ಚಲ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ರಾಜಪಥದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಎರಡು ಹೊಸ ಗಿನ್ನಿಸ್ ದಾಖಲೆಯನ್ನು ಸ್ಥಾಪಿಸಿತ್ತು. ಮೊದಲನೆಯದ್ದಾಗಿ ವಿಶ್ವದ ಅತಿ ದೊಡ್ಡ ಯೋಗ ಕ್ಲಾಸ್ನಲ್ಲಿ ದಾಖಲೆ ಸಂಖ್ಯೆಯ 35,985 ಮಂದಿ ಭಾಗವಹಿಸಿದ್ದರು.ಎರಡನೇಯದಾಗಿ ಗರಿಷ್ಠ ಸಂಖ್ಯೆಯ ರಾಷ್ಟ್ರೀಯತೆಯನ್ನು (84) ಹೊಂದಿರುವ ವ್ಯಕ್ತಿಗಳು ಭಾಗವಹಿಸಿದ್ದರು. ಅಲ್ಲದೇ 2015 ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸ್ಮರಣಾರ್ಥವಾಗಿ ಭಾರತೀಯ ರಿಸರ್ವ್ ಬ್ಯಾಂಕ್ 10 ರೂಪಾಯಿಯ ನಾಣ್ಯವನ್ನು ಬಿಡುಗಡೆ ಮಾಡಲಾಗಿತ್ತು.
ಜೂನ್ 21 ರಂದೇ ಯೋಗ ದಿನಾಚರಣೆ ಏಕೆ?
ಜೂನ್ 21 ವರ್ಷದಲ್ಲಿ ಉತ್ತರ ಗೋಳಾರ್ಧದ ಅತಿ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ. ಈ ದಿನವನ್ನು ಬೇಸಿಗೆ ಆಯನ ಸಂಕ್ರಾತಿ ದಿನವೆಂದು ಅಂದರೆ ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನವೆಂದು ಕರೆಯಲಾಗುತ್ತದೆ. ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ. ಇದು ದಕ್ಷಿಣಯಾನಕ್ಕೆ ಪರಿವರ್ತನೆ ಎಂದು ಗುರುತಿಸಲಾಗುತ್ತೆದೆ.
ದಕ್ಷಿಣ ಯಾನವನ್ನು ಆಧ್ಯಾತ್ಮಿಕ ಅಭ್ಯಸಗಳಿಗೆ ನೈಸರ್ಗಿಕ ಬೆಂಬಲವೆಂದು ಪರಿಗಣಿಸಲಾಗುತ್ತದೆ. ಆದಿ ಕಾಲದಲ್ಲಿ ಸೂರ್ಯಾಭಿಮುಖವಾಗಿ ದೃಷ್ಟಿ ನೆಟ್ಟು ಧೀವ್ಯ ಶಕ್ತಿ ಉದ್ದೀಪನಗೊಳಿಸುತ್ತದೆ ಎಂದು ಈ ದಿನವನ್ನು ನಂಬಲಾಗಿದೆ. ಹಾಗಾಗಿ ಈ ಪರಿವರ್ತನೆಯು ಯೋಗ ಅಭ್ಯಾಸಿಗರಿಗೆ ಬೆಂಬಲಿಸಲಾಗುತ್ತದೆ ಎಂಬ ನಂಭಿಕೆಯಿದೆ. ಬೇಸಿಗೆ ಆಯನ ಸಂಕ್ರಾತಿಯ ಬಳಿಕ ಮೊದಲ ಹುಣ್ಣಿಮೆಯನ್ನು ಗುರು ಪೂರ್ಣಿಮೆ ಎಂದು ಕರೆಯಲಾಗುತ್ತದೆ.
ಜೂನ್ 21 ಉತ್ತರ ಗೋಳಾರ್ಧದ ವರ್ಷದ ಅತಿ ದೀರ್ಘವಾದ ದಿನಾವಗಿದೆ. ಪ್ರಧಾನಿ ಮೋದಿ ತಮ್ಮ ಹೇಳಿಕೆಯಲ್ಲಿ ಭಾರತೀಯರಿಗೆ ಪ್ರಕೃತಿಗೆ ಗೌರವ ಸಲ್ಲಿಸುವುದು, ಆಧ್ಯಾತ್ಮಿಕತೆಯ ಅವಿಭಾಜ್ಯ ಅಂಗವಾಗಿದೆ. ಹಾಗೆಯೇ ಪ್ರಕೃತಿಯ ಕೊಡುಗೆಯನ್ನು, ಅತ್ಯಂತ ಪವಿತ್ರವೆಂದು ಪರಿಗಣಿಸುತ್ತೇವೆ ಎಂದು ಹೇಳಿದ್ದರು.
ಅಂತರರಾಷ್ಟ್ರೀಯ ಯೋಗ ದಿನ 2023 ರ ಥೀಮ್
ಅಂತರರಾಷ್ಟ್ರೀಯ ಯೋಗ ದಿನದ 2023 ರ ಥೀಮ್"ವಸುದೈವ ಕುಟುಂಬಕಂಗಾಗಿ ಯೋಗ" ಅಂತರರಾಷ್ಟ್ರೀಯ ಯೋಗ ದಿನದ ಆಚರಣೆಗಳು ಯೋಗದ ಸಮಗ್ರ ಸ್ವರೂಪದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಪಂಚದಾದ್ಯಂತ ನಿಯಮಿತ ಆಡಳಿತವಾಗಿ ಪ್ರಚಾರ ಮಾಡುವ ಗುರಿಯನ್ನು ಹೊಂದಿವೆ.
ಇದುವರೆಗಿನ ಯೋಗ ಆಚರಣೆಗಳು ಹಾಗೂ ಥೀಮ್ ಗಳು
|
ವರ್ಷ
|
ಥೀಮ್
|
ಸ್ಥಳ
|
|
2015
|
ಸಾಮರಸ್ಯತೆ ಹಾಗೂ ಶಾಂತಿಗಾಗಿ ಯೋಗ
|
ರಾಜಪಥ,ನವದೆಹಲಿ.
|
|
2016
|
ಯುವಕರನ್ನು ಸಂಪರ್ಕಿಸಿ
|
ಚಂಡೀಗಡ
|
|
2017
|
ಅರೋಗಯಕ್ಕಾಗಿ ಯೋಗ
|
ಲಕ್ನೋ
|
|
2018
|
ಶಾಂತಿಗಾಗಿ ಯೋಗ
|
ಡೆಹರಾಡೂನ್
|
|
2019
|
ಹವಾಮಾನ ಕ್ರಿಯೆ
|
ರಾಂಚಿ
|
|
2020
|
ಆರೋಗ್ಯಕ್ಕಾಗಿ ಯೋಗ-ಮನೆಯಲಿ ಯೋಗ
|
|
|
2021
|
ಯೋಗಕ್ಷೇಮಕ್ಕಾಗಿ ಯೋಗ
|
Who-m-yoga app ಬಿಡುಗಡೆ
|
|
2022
|
ಮಾನವೀಯತೆಗಾಗಿ ಯೋಗ
|
ಮೈಸೂರು
|
ಯೋಗದ ಮಹತ್ವ
ಯೋಗದ ಗುರಿಯು ಕೇವಲ ದೇಹವನ್ನು ಸರಿಪಡಿಸುವುದು ಮಾತ್ರವಲ್ಲ. ಮನಸ್ಸು, ದೇಹ ಮತ್ತು ಆತ್ಮ ಸೇರಿದ ಎಲ್ಲ ಮೂರು ಅಂಶಗಳನ್ನು ಶುದ್ದೀಕರಿಸಲು ನೆರವಾಗುತ್ತದೆ. ಇದು ನಾವು ಮತ್ತು ಪ್ರಕೃತಿ ಮಾತೆಯ ಜೊತೆ ಸಂರ್ಪಕವನ್ನು ಕಲ್ಪಿಸುತ್ತದೆ. ಇದು ನಮ್ಮನ್ನು ನಮ್ಮ ನೈಜತೆಯ ಹತ್ತಿರಕ್ಕೆ ಕೊಂಡೊಯ್ಯುತ್ತದೆ. ಯೋಗವು ವ್ಯಾಯಮ ಮಾತ್ರವಲ್ಲದೇ ನಿಮ್ಮೊಂದಿಗೆ, ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡುಹಿಡಿಯಲು ನೆರವಾಗುತ್ತದೆ. ನಮ್ಮ ಜೀವನಶೈಲಿ ಹಾಗೂ ಪ್ರಜ್ಞೆ ರಚಿಸುವ ಮೂಲಕ ಹವಮಾನ ಬದಲಾವಣೆ ನಿಭಾಯಿಸಲು ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಯೋಗವು ಮನಸ್ಸು ಮತ್ತು ದೇಹ, ಚಿಂತನೆ ಮತ್ತು ಕ್ರಿಯೆ, ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ. ಹಾಗೇಯೆ ಪ್ರಕೃತಿ ಮತ್ತು ಮನುಷ್ಯನ ನಡೆವೆ ಸಾಮರಸ್ಯವನ್ನುಂಟು ಮಾಡುತ್ತದೆ. ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸಲು ಸಹಾಯ ಮಾಡುತ್ತದೆ.
ಧೈರ್ಯಂ ಯಸ್ಯ ಪಿತಾ ಕ್ಷಮಾ ಚ ಜನನೀ ಶಾಂತಿಶ್ಚಿರಂ ಗೇಹಿನೀ
ಸತ್ಯಂ ಸೂರ್ಯಂ ಭಯಾ ಗತಃ ॥ ಸಂಯಮಃ.
ಶಯ್ಯಾ ಭೂಮಿತಂ ದಿಶೋಸ್ಪಿ ವಸನಂ ಜ್ಞಾನಾಮೃತಂ ಭೋಜನಂ
ಏತೇ ಯಸ್ಯ ಕುಟಿಮ್ಬಿನಖದಃ ॥ ಂ ಯೋಗಿನಃ ।।
ನಿಯಮಿತವಾಗಿ ಯೋಗಾಭ್ಯಾಸ ಮಾಡುವ ಮೂಲಕ, ಒಬ್ಬ ವ್ಯಕ್ತಿಯು ತಂದೆಯಂತೆ ರಕ್ಷಿಸುವ ಧೈರ್ಯ, ತಾಯಿಯಿಂದ ಕ್ಷಮೆ ಮತ್ತು ಶಾಶ್ವತ ಸ್ನೇಹಿತನಾಗುವ ಮಾನಸಿಕ ಶಾಂತಿಯಂತಹ ಕೆಲವು ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಬಹುದು. ಯೋಗದ ನಿಯಮಿತ ಅಭ್ಯಾಸದ ಮೂಲಕ ಸತ್ಯವು ನಮ್ಮ ಮಗುವಾಗುತ್ತದೆ, ನಮ್ಮ ಸಹೋದರಿಯನ್ನು ಕರುಣಿಸುತ್ತದೆ, ನಮ್ಮ ಸಹೋದರನನ್ನು ಸ್ವಯಂ ನಿಯಂತ್ರಣ ಮಾಡುತ್ತದೆ, ಭೂಮಿಯು ನಮ್ಮ ಹಾಸಿಗೆಯಾಗುತ್ತದೆ ಮತ್ತು ಜ್ಞಾನವು ನಮ್ಮ ಹಸಿವನ್ನು ನೀಗಿಸುತ್ತದೆ.
ನೆರವು : ಜಾಲತಾಣಗಳು
super sir, God bless you forever
ReplyDeleteThank u
Delete