ಸುಕುಮಾರಸ್ವಾಮಿಯ ಕಥೆ.
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿ.
೧. ಸುಕುಮಾರಸ್ವಾಮಿಯ ತಂದೆತಾಯಿಗಳ ಹೆಸರೇನು?
ಸುಕುಮಾರಸ್ವಾಮಿಯ ತಂದೆ ತಾಯಿಗಳ ಸೂರದತ್ತ – ಯಶೋಭದ್ರೆ.
೨. ಸುಕುಮಾರಸ್ವಾಮಿಗೆ ಯಾವ ಪಟ್ಟವನ್ನು ಕಟ್ಟಲಾಯಿತು?
ಸುಕುಮಾರಸ್ವಾಮಿಗೆ ಸೆಟ್ಟಿಯ ಪಟ್ಟ ಪಟ್ಟವನ್ನು ಕಟ್ಟಲಾಯಿತು.
೩. ನೈಮಿತ್ತಿಕನು ಸುಕುಮಾರಸ್ವಾಮಿಯ ಬಗ್ಗೆ ಏನು ಹೇಳಿದನು?
ನೈಮಿತ್ತಿಕನು ಸುಕುಮಾರಸ್ವಾಮಿಯ ಬಗ್ಗೆ ಈತನುಯಾವ ಒಂದು ಕಾಲದಲ್ಲಿ ಋಷಿಯರ ರೂಪವನ್ನು
ಕಾಣುತ್ತಾನೋ ಅಂದು ತಪ್ಪಸ್ಸಿಗೆ ಹೋಗುತ್ತಾನೆಂದು ಹೇಳಿದನು .
೪. ಯಶೋಭದ್ರೆಯು ರತ್ನ ಕಂಬಳಿಗಳನ್ನು ಯಾರಿಗೆ ಕೊಟ್ಟಳು ?
ಯಶೋಭದ್ರೆಯು ರತ್ನ ಕಂಬಳಿಗಳನ್ನು ತನ್ನ ಮೂವತ್ತೆರಡು ಸೊಸೆಯಂದಿರಿಗೆ ಕೊಟ್ಟಳು.
೫. ಅರಸ ವೃಷಭಾಂಕನ ಉಂಗುರವು ಯಾವಾಗ ಕೆಳಕ್ಕೆ ಬಿದ್ದಿತು?
ಅರಸ ವೃಷಭಾಂಕನ ಉಂಗುರವು ಸ್ನಾನ ಮಾಡುವಾಗ ಕೆಳಕ್ಕೆ ಬಿದ್ದಿತು.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
೧. ಸುಕುಮಾರಸ್ವಾಮಿಯು ಹೇಗೆ ಸುಖಭೋಗಗಳನ್ನು ಅನುಭವಿಸುತ್ತಿದ್ದನು?
ಉತ್ತರ : ಸುಕುಮಾರಸ್ವಾಮಿಯು ಯುವಕನಾಗಿ ಅತ್ಯಂತ ರೂಪ,ಲಾವಣ್ಯ,ಸೌಭಾಗ್ಯ, ಕಾಂತಿಯಿಂದ
ಕೂಡಿದವನಾಗಿದ್ದು ಆತನಿಗೆ ಮೂವತ್ತೆ ರಡು ಲತಾಗೃಹಗಳು , ಅತ್ಯಂತ ರೂಪ, ಲಾವಣ್ಯ, ಸೌಭಾಗ್ಯ,
ಕಾಂತಿ, ಹಾವಭಾವ ವಿಲಾಸದಿಂದ ಸೌಂರ್ಯಗಳ ಒಡತಿಯರಾದ ದೇವಲೋಕದ ಅಪ್ಸರ ಸ್ತೀಯರನ್ನೇ
ಹೋಲುವಂತಹ ಮೂವತ್ತೆರಡು ಹೆಂಡತಿಯರು ಇದ್ದರು. ಮೂವತ್ತೆರಡು ನಾಟ್ಯಶಾಲೆಗಳು ,
ಮೂವತ್ತೆರಡು ಕೋಟಿಸಂಪತ್ತು, ಪಂಚರತ್ನಗಳು ಇದ್ದವು. ಇವುಗಳೊಂದಿಗೆ ಕೂಡಿ ಭೋಗೋಪಭೋಗ
ಸುಖಗಳನ್ನು ಅನುಭವಿಸುತ್ತಿದ್ದನು.
೨. ಅರಸ ವೃಷಭಾಂಕನು ಆಶ್ಚರ್ಯಗೊಳ್ಳಲು ಕಾರಣವೇನು?
ಉತ್ತರ : ವೃಷಭಾಂಕನು ಕೊಂಡುಕೊಳ್ಳಲಾಗದ ರತ್ನಗಂಬಳಿಗಳನ್ನ ಸುಕುಮಾರ ಸ್ವಾಮಿಯ ತಾಯಿ
ಯಶೋಭದ್ರೆ ಖರೀದಿಸಿದಳು. ಅವುಗಳನ್ನು ಮೂವತ್ತೆರಡು ತುಂಡುಗಳನ್ನಗಿ ಮಾಡಿ ಸೊಸೆಯಂದಿರಿಗೆ
ನೀಡಿದಳು. ಅವರು ಅವುಗಳನ್ನು ಚಪ್ಪಲಿಗಳಿಗೆ ಸಿಕ್ಕಿಸಿಕೊಂಡರು . ಈ ಸಂಗತಿಯನ್ನು ತಿಳಿದು ವೃಷಭಾಂಕನು
ಆಶ್ಚರ್ಯಪಟ್ಟನು.
೩. ವೃಷಭಾಂಕನು ಸುಕುಮಾರಸ್ವಾಮಿಗೆ ವ್ಯಾದಿಯಿದೆ ಎಂದುಕೊಳ್ಳಲು ಕಾರಣವೇನು?
ಉತ್ತರ :ವೃಷಭಾಂಕನು ಸುಕುಮಾರಸ್ವಾಮಿಯ ಮನೆಗೆ ಆಗಮಿಸಿದಾಗ,ಸಜ್ಜನರೊ ಸೇವಕರೊ
ಬಿಳಿಸಾಸುವೆಗಳನ್ನು ಮಂಗಳಕರವೆಂದು ಇಬ್ಬರಿಗೂ ಮಂತ್ರಾಕ್ಷತೆಯನ್ನು ಹಾಕಿದರು. ಆ ಬಿಳಿ ಸಾಸವೆ
ಕಾಳುಗಳು ಸುಕುಮಾರಸ್ವಾಮಿ ಕುಳಿತಿದ್ದ ಆಸನದಲ್ಲಿ ಒತ್ತಿದ್ದರಿಂದ ,ಸೊಂಟವನ್ನುಅಲುಗಾಡಿಸಿದನು .
ದೀಪ ನೋಡಿದಾಗ ಅವನ ಕಣ್ಣೀರು ಸುರಿಯುತ್ತಿತ್ತು. ಊಟಮಾಡುವಾಗ ಸುಕುಮಾರಸ್ವಾಮಿ ಅರ್ಧ
ಆಹಾರ ನುಂಗುತ್ತಾ ಇನ್ನುಳಿದ ಅರ್ಧ ಆಹಾರವನ್ನು ಉಗುಳುತ್ತಿದ್ದನು .ಅದನ್ನು ಅರಸನು ನೋಡಿ
ಸುಕುಮಾರಸ್ವಾಮಿಗೆ ವ್ಯಾದಿಯಿದೆ ಎಂದು ಭಾವಿಸಿದನು.
೪. ಸುಕುಮಾರಸ್ವಾಮಿಯ ವ್ಯಾದಿಗೆ ಮದ್ದನ್ನು ಏಕೆ ಮಾಡಿಸಿಲ್ಲ ಎಂದು ಅರಸನು ಕೇಳಿದಾಗ
ತಾಯಿ ಯಶೋಭದ್ರೆಯು ಏನೆಂದು ಹೇಳಿದಳು?
ಉತ್ತರ :ದೇವಾ ಆತನಿಗೆ ಇವು ರೋಗವಲ್ಲವು ಮಂತ್ರಾಕ್ಷತೆ ಹಾಕಿದ್ದರಿಂದ ಬಿಳಿ ಸಾಸಿವೆಗಳು ಒತ್ತಲು
ಸಹಿಸದೆ ಸೊಂಟವನ್ನು ಅಲುಗಾಡಿಸಿದನು,ಮತ್ತೆ ಆತನೂ ಯಾವ ಕಾಲದಲ್ಲೂ ಮಾಣಿಕ್ಯದ ಬೆಳಕಿನಲ್ಲಿ
ಇರುವುದರಿಂದ ದೀಪದ ಬೆಳಕಿಗೆ ಸಹಿಸದೆ ಕಣ್ಣಿರು ಬರುತ್ತಿದೆ, ಮತ್ತೆ ನೀವು ಬಂದಿದ್ದರಿಂದ
ಕಮಲನೀಲೋತ್ಪಲದಲ್ಲಿಟ್ಟು ಸುವಾಸನೆ ಭರಿಸಿದ ಅಕ್ಕಿಯಲ್ಲಿ ಬೇರೆ ಅಕ್ಕಿಯನ್ನು ಬೆರೆಸಿ ಅನ್ನವನ್ನು
ಮಾಡಿದ್ದರಿಂದ ಸುವಾಸಿತಅಕ್ಕಿಯ ಅನ್ನವನ್ನು ನುಂಗುತ್ತಿದ್ದನು , ಉಳಿದ ಅನ್ನವನ್ನು ಉಗುಳುತ್ತಿದ್ದನು.
ಆದುದರಿಂದ ಇವು ವ್ಯಾಧಿಗಳಲ್ಲ ಎಂದು ಹೇಳಿದಳು.
( Sukumaraswamy kathe 10th standard kannada notes)
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
೧. ಸುಕುಮಾರಸ್ವಾಮಿಯ ಕಥೆಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
ಉತ್ತರ : ಈ ಜಂಬೂದ್ವೀಪದ ದಕ್ಷಿಣ ಭಾಗದ ¨ಭರತಕ್ಷೇತ್ರದಲ್ಲಿ ಆವಂತಿ ಎಂಬ ನಾಡಿನಲ್ಲಿ ಉಜ್ಜಯನಿ
ಎಂಬ ಪಟ್ಟಣವಿತ್ತು. ಆ ಪಟ್ಟಣದ ಯಶೋಭದ್ರೆ ಮತ್ತು ಸೂರದತ್ತರ ಮಗನೆ ಸುಕುಮಾರಸ್ವಾಮಿ.
ನಂತರ ಸುಕುಮಾರಸ್ವಾಮಿಗೆ ಸೆಟ್ಟಿ ಪಟ್ಟವನ್ನು ಕಟ್ಟಲಾಯಿತು. ಸುಕುಮಾರಸ್ವಾಮಿಯುಯುವಕನಾಗಿ
ಅತ್ಯಂತ ರೂಪ,ಲಾವಣ್ಯ,ಸೌಭಾಗ್ಯ, ಕಾಂತಿಯಿಂದ ಕೂಡಿದವನಾಗಿದ್ದು, ಆತನಿಗೆ ಮೂವತ್ತೆರಡು
ಲತಾಗೃಹಗಳು , ಅತ್ಯಂತ ರೂಪ,ಲಾವಣ್ಯ, ಸೌಭಾಗ್ಯ, ಕಾಂತಿ, ಹಾವಭಾವ ವಿಲಾಸದಿಂದ ಸೌಂರ್ಯಗಳ
ಒಡತಿಯರಾದ ದೇವಲೋಕದ ಅಪ್ಸರ ಸ್ತೀಯರನ್ನೇ ಹೋಲುವಂತಹಮ್ ಮೂವತ್ತೆರಡು ದಿವ್ಯಸ್ತ್ರೀಯರು
(ಹೆಂಡತಿಯರು)ಇದ್ದರು. ಮೂವತ್ತೆರಡು ನಾಟ್ಯಶಾಲೆಗಳು , ಮೂವತ್ತೆರಡು ಕೋಟಿ ಸಂಪತ್ತು, ಪಂಚರತ್ನಗಳು
ಇದ್ದವು. ಇವುಗಳೊಂದಿಗೆ ಕೂಡಿ ಭೋಗೋಪಭೋಗ ಸುಖಗಳನ್ನು ಅನುಭವಿಸುತ್ತಿದ್ದನು.ಮತ್ತೊಂದು ದಿವಸ
ಒಬ್ಬ ನೈಮಿತ್ತಿಕನು(ಜೋಹಿಸ) ಬಂದು ಈ ಸುಕುಮಾರ ಸ್ವಾಮಿ ಯಾವ ಒಂದು ಕಾಲದಲ್ಲಿ ಋಷಿಯರ
ರೂಪವನ್ನುಕಾಣುತ್ತಾನೋ ಅಂದು ತಪಸ್ಸಿಗೆ ಹೋಗುತ್ತಾನೆಂದು ಅಪ್ಪಣೆ ಮಾಡಿದನು . ಆ ಮಾತನ್ನು
ತಾಯಿ ಯಶೋಭದ್ರೆ ಕೇಳಿ ತನ್ನ ಮನೆಯನ್ನು ಋಷಿಗಳು ,ಹೊಕ್ಕದಂತೆ ಬಾಗಿಲಿಗೆ ಕಾವಲುಗಾರರನ್ನ
ನೇಮಿಸಿದಳು. ಹೀಗೆ ಕಾಲವು ಕಳೆಯಲು ಮತ್ತೊಂದು ದಿವಸ ರತ್ನದೀಪದಿಂದ ಒಬ್ಬ ವ್ಯಾಪಾರಿಲಕ್ಷದಿನಾರಗಳ
ಬೆಲೆಯುಳ್ಳ ರತ್ನಕಂಬಳಿಗಳನ್ನು ತೆಗೆದುಕೊಂಡು ಉಜ್ಜಯಿನಿಗೆ ಮಾರಲು ಬಂದಾಗ ಯಶೋಭದ್ರೆ
ಲಕ್ಷದಿನಾರಗಳನ್ನು ಕೊಟ್ಟು ರತ್ನಗಂಬಳಿಗಳನ್ನು ತೆಗೆದುಕೊಂಡು ಮೂವತ್ತೆರಡು ಸೊಸೆಯಂದಿರಿಗೆ
ಹಂಚಿಕೊಟ್ಟಳು. ಅವರು ಆ ರತ್ನಕಂಬಳಿಯ ತುಂಡುಗಳನ್ನು ತಮ್ಮ ತಮ್ಮ ಚಪ್ಪಲಿಗಳಲ್ಲಿ ಸೇರಿಸಿದರು
ಎಂಬ ಮಾತನ್ನು ವೃಷಭಾಂಕ ಅರಸನು ಕೇಳಿ ಆಶ್ಚರ್ಯಪಟ್ಟನು. ಅವರ ಐಶ್ವರ್ಯವನ್ನು ನೋಡುವೆನು
ಎಂದು ಮನೆಗೆ ಬಂದನು.
ರಾಜನು ಸುಕುಮಾರಸ್ವಾಮಿಯನ್ನು ಮನ್ಮಥನನ್ನು ಅಪ್ಪಿಕೊಳ್ಳುವಂತೆ ಅಪ್ಪಿಕೊಂಡನು. ನಂತರ ದಿವ್ಯವಾದ
ಹಾಸಿಗೆಯ ಮೇಲೆಕೂರಿಸಿದನು. ಆಗ ಸ್ವಜನ ಪರಿಜನರೆಲ್ಲರು ಮಂಗಳಕರವಾದದು ಎಂದು ಬಿಳಿಸಾಸಿವೆಗಳನ್ನು
ಇಬ್ಬರಿಗೂ ಮಂತ್ರಾಕ್ಷತೆಯನ್ನು ಹಾಕಿದರು. ಬಿಳಿಸಾಸಿವೆಗಳು ಸುಕುಮಾರಸ್ವಾಮಿಯ ಆಸನದಲ್ಲಿ ಒತ್ತಿದಾಗ
ಸೊಂಟವನ್ನು ಅಲುಗಾಡಿಸಿದನು . ದೀಪವನ್ನು ನೋಡಿದಾಗ ಕಣ್ಣೀರು ಸುರಿಸಿದನು. ಸುಕುಮಾರಸ್ವಾಮಿಯ
ಜೊತೆಗೂಡಿ ನಾನಾ ಪ್ರಕಾರದ ಸಿಹಿಯಾದ ತಿನಿಗಳನ್ನು ಊಟ ಮಾಡುತ್ತಿರುವಾಗ ಸುಕುಮಾರಸ್ವಾಮಿಯು
ಅರ್ಧಹಾರವನ್ನು ನುಂಗುತ್ತಿದ್ದನು ಇನ್ನು ಅರ್ಧಹಾರವನ್ನು ಉಗುಳುತ್ತಿದ್ದನು. ಇದನ್ನು ಕಂಡು ವೃಷಭಾಂಕನು
ಈತನಿಗೆ ಯಾವುದೋ ವ್ಯಾಧಿ(ರೋಗ)ಇದೆ ಎಂದು ತಿಳಿದು ಯಶೋಭದ್ರೆಗೆ ಅಮ್ಮಾ ನಮ್ಮ ತಮ್ಮನ ಸೊಂಟದ
ಭಾಗಕ್ಕೂ,ಕಣ್ಣೀರೂ ಬರುವುದಕ್ಕೂ,ಆಹಾರದಲ್ಲಿ ರುಚಿ ಇಲ್ಲದಿರುವುದುಕ್ಕೂ ಔಷಧವನ್ನು ಮಾಡಿಸಿಲ್ಲವೇಕೆ
ಎನ್ನಲು, ದೇವಾ ಆತನಿಗೆ ಇವು ರೋಗವಲ್ಲವು ಮಂತ್ರಾಕ್ಷತೆ ಹಾಕಿದ್ದರಿಂದ ಬಿಳಿ ಸಾಸಿವೆಗಳು ಒತ್ತಲು ಸಹಿಸದೆ
ಸೊಂಟವನ್ನು ಅಲುಗಾಡಿಸಿದನು , ಮತ್ತೆ ಆತನೂ ಯಾವ ಕಾಲದಲ್ಲೂ ಮಾಣಿಕ್ಯದ ಬೆಳಕಿನಲ್ಲಿ ಇರುವುದರಿಂದ
ದೀಪದ ಬೆಳಕಿಗೆ ಸಹಿಸದೆ ಕಣ್ಣಿರು ಬರುತ್ತಿದೆ,ಮತ್ತೆ ನೀವು ಬಂದಿದ್ದರಿಂದ ಕಮಲನೀಲೋತ್ಪಲದಲ್ಲಿಟ್ಟು
ಸುವಾಸನೆ ¨ಭರಿಸಿದ ಅಕ್ಕಿಯಲ್ಲಿ ಬೇರೆ ಅಕ್ಕಿಯನ್ನು ಬೆರೆಸಿ ಅನ್ನವನ್ನು ಮಾಡಿದ್ದರಿಂದಸುವಾಸಿತ ಅಕ್ಕಿಯ
ಅನ್ನವನ್ನು ನುಂಗುತ್ತಿದ್ದನು , ಉಳಿದ ಅನ್ನವನ್ನು ಉಗುಳುತ್ತಿದ್ದನು. ಅದರಿಂದ ಈತನಿಗೆ ಈ ಆವಸ್ಥೆಗಳು
ಆದವು ಎನ್ನುವುದನ್ನುಕೇಳಿ ಆಶ್ಚರ್ಯಗೊಂಡು ಈತನ ಕ್ಷಣಮಾತ್ರದ ಭೋಗಕ್ಕೋ ಸುಖಕ್ಕೂ ನಮ್ಮ ಎಲ್ಲಾ
ಕಾಲದಲ್ಲೂ ಅರಸುತನವನ್ನು ಮಾಡಿದಭೋಗೋಪಭೋಗಗಳು ಸಮಾನವಲ್ಲ . ಅದರಿಂದ ಈ ಲೋಕದಲ್ಲಿ
ಈತನೇ ಶ್ರೇಷ್ಠನಾದ ಸುಖಿ ಎಂದು ಹೇಳಿ ಅರಸನು ಆವಂತಿ ಸುಕುಮಾರಎಂದು ಹೆಸರನ್ನು ಇಟ್ಟನು .
೨.‘ಸುಕುಮಾರ’ – ಎಂಬ ಹೆಸರು ಸುಕುಮಾರ ಸ್ವಾಮಿಗೆ ಹೇಗೆ ಅನ್ವರ್ಥವಾಗುತ್ತದೆ? ವಿವರಿಸಿ.
ಉತ್ತರ :ಸುಕುಮಾರಸ್ವಾಮಿಯು ಯುವಕನಾಗಿ ಅತ್ಯಂತ ರೂಪ,ಲಾವಣ್ಯ,ಸೌಭಾಗ್ಯ, ಕಾಂತಿಯಿಂದ ಕೂಡಿದವನಾಗಿದ್ದು,
ಆತನಿಗೆ ಮೂವತ್ತೆರಡುಲತಾಗೃಹಗಳು , ಅತ್ಯಂತ ರೂಪ, ಲಾವಣ್ಯ, ಸೌಭಾಗ್ಯ, ಕಾಂತಿ, ಹಾವಭಾವ
ವಿಲಾಸದಿಂದ ಸೌಂರ್ಯಗಳ ಒಡತಿಯರಾದ ದೇವಲೋಕದ ಅಪ್ಸರಸ್ತೀಯರನ್ನೇ ಹೋಲುವಂತಹ ಮೂವತ್ತೆರಡು ದಿವ್ಯಸ್ತ್ರೀಯರು(ಹೆಂಡತಿಯರು)ಇದ್ದರು. ಮೂವತ್ತೆರಡು
ನಾಟ್ಯಶಾಲೆಗಲು , ಮೂವತ್ತೆರಡು ಕೋಟಿಸಂಪತ್ತು, ಪಂಚರಗಳು ಇದ್ದವು. ಇವುಗಳೊಂದಿಗೆ ಕೂಡಿ
ಭೋಗೋಪಭೋಗ ಸುಖಗಳನ್ನು ಅನುಭವಿಸುತ್ತಿದ್ದನು.ವೃಷಭಾಂಕ ಅರಸನು ಸುಕುಮಾರ ಸ್ವಾಮಿಯ
ಕೋಮಲವಾದ ಶರೀರವನ್ನು ನೋಡಿ ಮನ್ಮಥನನ್ನ ಅಪ್ಪಿಕೊಳ್ಳುವಂತೆ ಅಪ್ಪಿಕೊಂಡನು. ಸ್ವಜನ
ಒತ್ತಿದಾಗ ಸೊಂಟವನ್ನು ಅಲುಗಾಡಿಸಿದ್ದನ್ನು ಗಮನಿಸಿದಾಗ ಆತ ಮೃದುಶರೀರವುಳ್ಳವನಾಗಿದ್ದನೆಂದು
ತಿಳಿಯಬಹುದು. ದೀಪವನ್ನುನೋಡಿದಾಗ ಕಣ್ಣೀರು ಸುರಿಸಿದನು ಎಂಬುದನ್ನು ನೋಡಿದಾಗ ಯಾವಾಗಲೂ
ಮಾಣಿಕ್ಯದ ಬೆಳಕಿನಲ್ಲಿ ಇರುತ್ತಿದ್ದನು ಎಂಬ ಆತನಸೂಕ್ಷ್ಮದ್ರುಷ್ಟಿಯನ್ನು ಅರಿಯಬಹುದು. ಊಟ
ಮಾಡುತ್ತಿರುವಾಗ ಸುಕುಮಾರಸ್ವಾಮಿಯು ಕಮಲನೀಲೋತ್ಪಲದಲ್ಲಿಟ್ಟು ಸುವಾಸನೆ ಭರಿಸಿದ
ಅಕ್ಕಿಯಲ್ಲಿಬೇರೆ ಅಕ್ಕಿಯನ್ನು ಬೆರೆಸಿ ಅನ್ನವನ್ನು ಮಾಡಿದ್ದರೂ ಸುವಾಸಿತ ಅಕ್ಕಿಯ ಅನ್ನವನ್ನು
ಮಾತ್ರ ನುಂಗುತ್ತಿದ್ದನು, ಉಳಿದ ಅನ್ನವನ್ನು ಉಗುಳುತ್ತಿದ್ದನುಎಂಬುದನ್ನು ಗಮನಿಸಿದರೆ ಆತನ
ಸುಆಹಾರದ ವಿಚಾರ ತಿಳಿಯುತ್ತದೆ. ಇಂತಹ ವಿಚಾರಗಳನ್ನು ತಿಳಿದ ಅರಸ ಆಶ್ಚರ್ಯಗೊಂಡು
ಈತನಕ್ಷಣಮಾತ್ರದ ¨ಭೋಗಕ್ಕೋ ಸುಖಕ್ಕೂ ನಮ್ಮ ಎಲ್ಲಾ ಕಾಲದಲ್ಲೂ ಅರಸುತನವನ್ನು ಮಾಡಿದ¨
ಭೋಗೋಪಭೋಗಗಳು ಸಮಾನವಲ್ಲ . ಅದರಿಂದ ಈಲೋಕದಲ್ಲಿ ಈತನೇ ಶ್ರೇಷ್ಠನಾದ ಸುಖಿ ಎಂದು
ಹೇಳಿ ಅರಸನು ಆವಂತಿ ಸುಕುಮಾರ ಎಂದು ಹೆಸರನ್ನು ಇಟ್ಟದ್ದು ಆತನ ಹೆಸರಿಗೆ ಸುಕುಮಾರಎಂಬ
ಹೆಸರಿಗೆ ಅನ್ವಯ ವಾಗುತ್ತದೆ.
ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
೧.“ರಿಸಿಯರ ರೂಪಂ ಕಾಣ್ಗುಮಂದೀತನು೦ ತಪಂಬಡುಗುಮ್”
ಆಯ್ಕೆ :ಈ ವಾಕ್ಯವನ್ನು ‘ಶಿವಕೋಟ್ಯಾಚಾರ್ಯರು ’ಬರೆದಿರುವ ‘ವಡ್ಡಾರಾಧನೆ ’ ಕೃತಿಯಿಂದ ಆರಿಸಲಾದ
ಸುಕುಮಾರಸ್ವಾಮಿ ಕಥೆ ’ಎಂಬ ಪಾಠ ದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ ಈ ಮಾತನ್ನು ಒಂದು ದಿನ ನೈಮಿತ್ತಿಕನೊಬ್ಬನು ಸುಕುಮಾರಸ್ವಾಮಿಯನ್ನು ನೋಡಿ ಯಾವ
ಒಂದು ಕಾಲದಲ್ಲಿಋಷಿಗಳ ರೂಪವನ್ನು ಕಾಣುವನೋ ಅಂದು ಈತನು ತಪಸ್ಸಿಗೆ ಹೋಗುವನು ಎಂದು
ನೈಮಿತ್ತಕನು ಯಶೋಭದ್ರೆಗೆ ಹೇಳುತ್ತಾನೆ.
ಸ್ವಾರಸ್ಯ : ಸುಕುಮಾರಸ್ವಾಮಿ ವೈರಾಗ್ಯ ಹೊಂದಿ ತಪಸ್ಸಿಗೆ ಹೋಗುವುದರ ಮುನ್ಸೂಚನೆ ನೀಡುವ
ನೈಮಿತ್ತಿಕನ ಮಾತು ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ.
೨. “ನಮ್ಮನಾಳ್ವರುಮೊಳರೆ ಎಂದು ವಿಸ್ಮಯಂಬಟ್ಟು”
ಆಯ್ಕೆ ಈ ವಾಕ್ಯವನ್ನು ‘ಶಿವಕೋಟ್ಯಾಚಾರ್ಯರು ’ಬರೆದಿರುವ ‘ವಡ್ಡಾರಾಧನೆ ’ ಕೃತಿಯಿಂದ ಆರಿಸಲಾದ‘
ಸುಕುಮಾರಸ್ವಾಮಿ ಕಥೆ ’ಎಂಬ ಪಾಠ ದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ ಈ ವಾಕ್ಯವನ್ನು ಸುಮಾರಸ್ವಾಮಿಯು ತಾಯಿ ಯಶೋಭದ್ರೆಗೆ ಹೇಳಿದನು. ರಾಜ ವೃಷಭಾಂಕನು
ಸುಕುಮಾರ ಸ್ವಾಮಿಯ ಮನೆಗೆ ಬಂದು ಸುಕುಮಾರನು ಎಲ್ಲಿದ್ದಾನೆ ?ಎಂದು ವಿಚಾರಿಸಿದಾಗ ಯಶೋಭದ್ರೆ
“ ಸ್ವಾಮಿ, ಅವನು ಬಹಳ ಸಾದು , ನೀವು ಬರುವುದನ್ನು ಅವನುತಿಳಿಯನು ಎಂದಾಗ ಅರಸನು ಆತನು ಬರುವಂತೆ ದೂತರೊಡನೆ ಹೇಳಿಕಳುಹಿಸಿ ಎಂದಾಗ ಯಶೋಭದ್ರೆ
ತಾನೆ ಸುಕುಮಾರನಲ್ಲಿಗೆ ಹೋಗಿ“ಮಗನೇ , ಅರಸರು ಬಂದರು ಬಾ ಎಂದಾಗ ಸುಕುಮಾರನು
“ನಮ್ಮನಾಳ್ವರುಮೊಳರೆ ಎಂದು ವಿಸ್ಮಯಂಬಟ್ಟು” (ನಮ್ಮನ್ನು ಆಳುವವರು ಇರುವರೆ
ಎಂದು ಆಶ್ಚರ್ಯಪಟ್ಟು) ಎಂದು ಹೇಳುತ್ತಾನೆ.
ಸ್ವಾರಸ್ಯ ಸುಖೋಪಭೋಗದಲ್ಲಿದ್ದ ಸುಕುಮಾರನಿಗೆ ನಮ್ಮನ್ನು ಆಳುವವರೊ ಇದ್ದಾರೆ ಎಂಬುದು
ತಿಳಿಯದಿರುವ ಮತ್ತು ವಿಸ್ಮಯಗೊಳ್ಳುವ ವಿಷಯ ಇಲ್ಲಿ ಸ್ವಾರಸ್ಯಕರವಾಗಿ ಮೂಡಿಬಂದಿದೆ..
೩.“ಅರ್ಧಾಹಾರಮ೦ ನುಂಗುಗುಮರ್ಧಾಹಾರಮನುಗುೞ್ಗುಮದ ನೋಡಿ”
ಆಯ್ಕೆ ಈ ವಾಕ್ಯವನ್ನು ‘ಶಿವಕೋಟ್ಯಾಚಾರ್ಯರು ’ಬರೆದಿರುವ ‘ವಡ್ಡಾರಾಧನೆ ’ ಕೃತಿಯಿಂದ ಆರಿಸಲಾದ
‘ಸುಕುಮಾರಸ್ವಾಮಿ ಕಥೆ ’ಎಂಬ ಪಾಠ ದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ ವೃಷಭಾಂಕನು ಸುಕುಮಾರನೊಂದಿಗೆ ಕುಳಿತುಕೊಂಡು ನಾನಾ ಪ್ರಕಾರದ ಸಿಹಿಯಾದ
ತಿನಿಸುಗಳನ್ನು ಊಟಮಾಡುತ್ತಿದ್ದ ಸಂದರ್ಭದಲ್ಲಿದಲ್ಲಿ ಸುಕುಮಾರಸ್ವಾಮಿ ಅರ್ಧ ಆಹಾರವನ್ನು
ನುಂಗುತ್ತಿರಲು ಅರ್ಧ ಆಹಾರವನ್ನು ಉಗುಳುವುದನ್ನು ನೋಡಿ ಇದು ಸಹ ಒಂದು ರೋಗ, ಊಟದ
ಮೇಲೆ ರುಚಿಯಿಲ್ಲದುದು” ಎಂದು ರಾಜನು ಭಾವಿಸಿಕೊಂಡ ಸಂದರ್ಭದಲ್ಲಿ ಈ ಮಾತು ಉಲ್ಲೇಖವಾಗಿದೆ.
ಸ್ವಾರಸ್ಯ ಸುಕುಮಾರಸ್ವಾಮಿ ಸುವಾಸನೆಯಿಂದ ಕೂಡಿದ ಅಕ್ಕಿಯ ಅನ್ನವನ್ನು ಮಾತ್ರ ನುಂಗುತ್ತಿದ್ದನು
ಬೇರೆ ಅಕ್ಕಿಯಿಂದ ಮಾಡಿದ ಅನ್ನುವನ್ನುಉಗುಳುತ್ತಿದ್ದದ್ದನ್ನು ನೋಡಿದರೆ ಆತನ ಜೀವನ
ಸುಖೋಪಭೋಗವಾಗಿತ್ತು ಎಂಬುದನ್ನು ಈ ವಾಕ್ಯದ ಮೂಲಕ ಕವಿ ಸ್ವಾರಸ್ಯಪೂರ್ಣವಾಗಿ
ವರ್ಣಿಸಿದ್ದಾನೆ.
೪.“ಅವಂತಿ ಸುಕುಮಾರನೆಂದು ಪೆಸರನಿಟ್ಟಂ”
ಆಯ್ಕೆ ಈ ವಾಕ್ಯವನ್ನು ‘ಶಿವಕೋಟ್ಯಾಚಾರ್ಯರು ’ಬರೆದಿರುವ ‘ವಡ್ಡಾರಾಧನೆ ’ ಕೃತಿಯಿಂದ ಆರಿಸಲಾದ
‘ಸುಕುಮಾರಸ್ವಾಮಿ ಕಥೆ ’ಎಂಬ ಪಾಠ ದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ಸುಕುಮಾರನು ಅನುಭವಿಸುತ್ತಿದ್ದ ಸುಖಭೋಗಗಳನ್ನು ನೋಡಿದ ರಾಜನು
“ಈತನ ಕ್ಷಣ ಮಾತ್ರ ಭೋಗಸುಖಕ್ಕೂ ನಮ್ಮಅರಸುತನದ ಕಾಲದಲ್ಲಿ ಅನುಭವಿಸಿದ ಎಲ್ಲಾ
¨ಭೋಗೋಪಗಗಳು ಸಮಾನವಲ್ಲ . ಆದುದರಿಂದ ಈ ಲೋಕದಲ್ಲಿ ಈತನೇ ಶ್ರೇಷ್ಠನಾದ ಸುಖಿಎಂದು
ಅವನಿಗೆ “ಅವಂತಿ ಸುಕುಮಾರನೆಂದು ಪೆಸರನಿಟ್ಟಂ”ಎಂದು ಲೇಖಕರು ಹೇಳಿದ ಸಂಧರ್ಭದಲ್ಲಿ
ಈ ಮಾತು ಬಂದಿದೆ.
ಸ್ವಾರಸ್ಯ : ಸುಕುಮಾರಸ್ವಾಮಿಯ ವೈಭವನ್ನು ಮೆಚ್ಚಿ ಈತನ ವೈಭವ ಮುಂದೆ ತನ್ನ ವೈಭವ ಸಮವಲ್ಲ
ಎಂದು ವೃಷಭಾಂಕನ್ನು ಸುಕುಮಾರನಿಗೆ ಅವಂತಿ ಸುಕುಮಾರ ಎಂದು ಹೆಸರಿಟ್ಟಿದ್ದು ಸ್ವಾರಸ್ಯಪೂರ್ಣವಾಗಿ
ಮೂಡಿಬಂದಿದೆ.