8 ನೆಯ ತರಗತಿ ಗದ್ಯಪಾಠನ-5 ಹೂವಾದ ಹುಡುಗಿ
ಬಹುಆಯ್ಕೆ ಪ್ರಶ್ನೆಗಳು
1.ಹೂವಾದ ಹುಡುಗಿ ಜನಪದ ಕಥೆಯ ಲೇಖಕರು______________
A ಮಾಸ್ತಿ ವೆಂಕಟೇಶ ಅಯ್ಯಂಗಾರ್.
B ಯು.ಆರ್ ಅನಂತಮೂರ್ತಿ
C ಎ. ಕೆ.ರಾಮಾನುಜನ್.
D ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ.
2. ಎ.ಕೆ.ರಾಮಾನುಜನ್ ಅವರು ಮೈಸೂರಿನಲ್ಲಿ ________ರಂದು ಜನಿಸಿದರು
A 1919
B 1929
C 1939
D 1949
3. ಹೂವಾದ ಹುಡುಗಿ ಜನಪದ ಕಥೆಯನ್ನು ಶ್ರೀ.ಎ.ಕೆ. ರಾಮಾನುಜನ್ ಅವರ _____________ಕೃತಿಯಿಂದ ಆರಿಸಲಾಗಿದೆ.
A ಹೊಕ್ಕುಳಲ್ಲಿ ಹೂವಿಲ್ಲ ಮತ್ತು ಇತರ ಕವಿತೆಗಳು
B ಕುಂಟೋಬಿಲ್ಲೆ
C ಮತ್ತೊಬ್ಬನ ಆತ್ಮ ಚರಿತ್ರೆ.
D ಸಾಲು ಸಂಪಿಗೆ ನೆರಳು
4. “ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್” ಎಂ ಕವಿರಾಜಮಾರ್ಗಕಾರನ ಮಾತು ಈ ಸಾಹಿತ್ಯದ ಮಹತ್ವವನ್ನು ಸಾರುತ್ತದೆ.?
A ಪ್ರಬಂಧ ಸಾಹಿತ್ಯ
B ಪ್ರವಾಸ ಸಾಹಿತ್ಯ
C ಜನಪದ ಸಾಹಿತ್ಯ
D ಆತ್ಮಕಥೆ.
5. ಹೂವಿನ ಗಿಡವಾಗುತ್ತಿದ್ದವರು ಯಾರು ?
A ಮುದುಕಿಯ ಹಿರಿಯ ಮಗಳು
B ಮುದುಕಿಯ ಕಿರಿಯ ಮಗಳು
C ದೊರೆಯ ಹಿರಿಯ ಮಗಳು
D ದೊರೆಯ ಕಿರಿ ಮಗಳು
6. ಮುದುಕಿಯ ಕಿರಿಯ ಮಗಳು ಹೂವಿನ ಗಿಡವಾಗುತ್ತಿದ್ದ ಘಟನೆಯನ್ನು ಕ್ರಮವಾಗಿ ಬರೆಯಿರಿ.
1.ತಂಗಿ ಹೂವಿನ ಗಿಡವಾದಳು, ಅಕ್ಕ ತನಗೆ ಬೇಕಾದಷ್ಟು ಹೂವನ್ನು ಕಿತ್ತುಕೊಂಡಳು
2.ಯಥಾಸ್ಥಿತಿಯಂತೆ ತಂಗಿ ಲಕ್ಷಣವಾಗಿ ಮನುಷ್ಯಳಾದಳು
3. ಮುದುಕಿಯ ಕಿರಿ ಮಗಳು ದೇವರನ್ನು ನೆನೆದು ಕುಳಿತಳು ಅಕ್ಕ ಒಂದು ಬಿಂದಿಗೆ ನೀರನ್ನು ಅವಳ ಮೇಲೆ ಸುರಿದಳು
4. ನಂತರ ಮತ್ತೊಂದು ತಂಬಿಗೆ ನೀರನ್ನು ಗಿಡದ ಮೇಲೆ ಸುರಿದಳು
A 1 2 3 4
B 1 3 2 4
C 3 1 4 1
D 4 3 2 1
7. ತಂಗಿ ಅಕ್ಕನಿಗೆ ಹೂವನ್ನು ಮಾರಲು ಎಲ್ಲಿಗೆ ತೆಗೆದುಕೊಂಡು ಹೋಗಲು ತಿಳಸಿದಳು?
A ಜಾತ್ರೆಗೆ
B ಸಂತೆಗೆ
C ಪಕ್ಕದ ಊರಿಗೆ
D ದೊರೆ ಮನೆಗೆ
8. “ ಅಮ್ಮ, ಹೂವು ಘಮಘಮ ಅಂತಾವೆ ಕೊಡಿಸಿ ಕೊಡು “ ಎಂದವರು____________________
A ಮುದುಕಿಯ ಹಿರಿಯ ಮಗಳು
B ಮುದುಕಿಯ ಕಿರಿಯ ಮಗಳು
C ದೊರೆಯ ಹಿರಿಯ ಮಗಳು
D ದೊರೆಯ ಕಿರಿ ಮಗಳು
9. ಹೂವಾದ ಹುಡುಗಿ ಇದು ________________ ಕಥೆ.
A ಪಂಚತಂತ್ರದ ಕಥೆ
B ಪುರಾಣ ಕಥೆ
C ನೀತಿ ಕಥೆ
D ಜನಪದ ಕಥೆ.
10. ಹೂವನ್ನು ತೆಗೆದುಕೊಂಡು ದೊರೆಯ ಹೆಂಡತಿ ಕೊಟ್ಟ ಹಣ____________________
A ಒಂದು ಮೊಗೆ
B ಮೂರು ಮೊಗೆ
C ಐದು ಮೊಗೆ
D ಎರಡು ಮೊಗೆ
11. ಅಕ್ಕ ತಂಗಿಯರು ಸಂಗ್ರಹಿಸಿದ ಒಟ್ಟು ಹಣ __________-
A ಒಂದು ಮೊಗೆ
B ಮೂರು ಮೊಗೆ
C ಐದು ಮೊಗೆ
D ಎರಡು ಮೊಗೆ
12. ತಂಗಿ ಹೂವಿ ಗಿಡವಾಗುತ್ತಿದ್ದ ಸ್ಥಳ___________________-
A ಮುದುಕಿಯ ಗುಡಿಸಲು
B ದೊರೆಯ ಮನೆ
C ಗುಡಿಸಲಿನ ಮುಂದೆ ಇರುವ ದೊಡ್ಡ ಮರ
D ಅರಮನೆಯ ಪಕ್ಕದಲ್ಲಿದ್ದ ಸುರಹೊನ್ನೆ ತೋಟ.
13.ಹೂವಾಗುವ ಹುಡುಗಿಯನ್ನು ಮದುವೆಯಾದವರು_________
A ದೊರೆ
B ದೊರೆಯ ಮಗ
C ಹೂವು ಮಾರುವವನು
D ಹೂವು ಬೆಳೆಯುವವನು
14. ದೊರೆಯ ಕಿರಿ ಮಗಳು ದೊರೆಯ ಹೆಂಡತಿ ಬಳಿ ಹೇಳಿದ ದೂರು ಏನು ?
A ಹಣ ಕೊಟ್ಟಿಲ್ಲವೆಂದು
B ಊಟ ಕೊಟ್ಟಿಲ್ಲವೆಂದು
C ಹೊಸ ಬಟ್ಟೆ ಕೊಟ್ಟಿಲ್ಲವೆಂದು
D ಹೂವು ಕೊಟ್ಟಿಲ್ಲವೆಂದು
15. ದೊರೆ ಮಗಳು ಸ್ನೇಹಿತೆಯರು ಹಾಗೂ ಅತ್ತಿಗೆಯೊಂದಿಗೆ ಯಾಔ ತೋಟಕ್ಕೆ ಹೋದಳು ?
A ಮಾವಿನ ತೋಟ
B ಸುರಗಿ ತೋಟ
C ಸುರಹೊನ್ನೆ ತೋಟ
D ನೀಲಗಿರಿ ತೋಟ
16. ಹೂವಾಗುವ ಹುಡುಗಿ ಇವರಿಂದ ಕಷ್ಟಕ್ಕೆ ಸಿಲಕಿ ಯಾತನೆ ಅನುಭವಿಸಿದಳು.
A ದೊರೆಯ ಹಿರಿಯ ಮಗಳಿಂದ
B ದೊರೆಯ ಕಿರಿಯ ಮಗಳಿಂದ
C ದೊರೆಯ ಹೆಂಡತಿಯಿಂದ
D ದೊರೆಯ ಮಗನಿಂದ
17. ದೊರೆಯ ಮಗ ಮತ್ತು ಅವನ ಹೆಂಡತಿಯನ್ನುತನ್ನ ದಾದಿಯರಿಂದ ಉಪಚರಿಸಿ ದವರು _______________
A ದೊರೆಯ ಹೆಂಡತಿ
B ದೊರೆಯ ಹಿರಿಯ ಮಗಳು
C ಮುದುಕಿ
D ಮುದುಕಿಯ ಹಿರಿಯ ಮಗಳು
18. ಮುದುಕಿಯ ಕಿರಿಯ ಮಗಳು ಹೂವಿನ ಗಿಡವಾಗಲು ಕಾರಣ________________
A ಮನರಂಜನೆಗಾಗಿ
B ಆಟವಾಡಲು
C ತನ್ನ ತಾಯಿಗೆ ಸಹಾಯ ಮಾಡಲು
D ತನ್ನ ಅಕ್ಕನನ್ನು ಸಂತೋಷಪಡಿಸಲು
19. ಹೂವಾಗುವ ಹುಡುಗಿಯ ವಿಚಾರವನ್ನು ದೊರೆಯ ಮಗ ಯಾರ ಬಳಿ ಹೇಳಿದ ?
A ದೊರೆಯ ಬಳಿ
B ದೊರೆಯ ಹೆಂಡತಿ ಬಳಿ
C ಮಂತ್ರಿಯ ಬಳಿ
D ಮಂತ್ರಿಯ ಮಗನ ಬಳಿ
20. ತಾಯಿಗೆ ನೆರವಾಗಲು ಮಗಳು ಹೂವಿನ ಗಿಡವಾಗುವ ಈ ಕಥೆಯಲ್ಲಿರುವ ಮುಖ್ಯ ಮೌಲ್ಯಗಳು_______________
A ಪ್ರೀತಿ,ಸಹಕಾರ ಮನೋಭಾವ
B ಹೆಣ್ಣಿನ ಸಹನೆ
C ದಾಂಪತ್ಯದ ಅನ್ಯೋನ್ಯತೆ.
D ಮೇಲಿನ ಎಲ್ಲವೂ.