8 ನೆಯ ತರಗತಿ ಪದ್ಯಪಾಠ-5 ವಚನಾಮೃತ
ಬಹುಆಯ್ಕೆ ಪ್ರಶ್ನೆಗಳು.
1.ಶರಣ ತತ್ವದ ಮಹಾ ವಾಕ್ಯ ಯಾವುದು?.
ಎ.ಅರಿತರೆ ಶರಣ ಮರೆತರೆ ಮಾನವ
ಬಿ. ಒಲಿದರೆ ನಾರಿ ಮುನಿದರೆ ಮಾರಿ
ಸಿ. ಅರಿತರೆ ಮಾನವ ಮುನಿದರೆ ದಾನವ
ಡಿ. ಮಾನವನಾಗುವೆಯ ಇಲ್ಲ ದಾನವನಾಗುವೆಯ
2.ಕೃತಯುಗದಲ್ಲಿ ಶ್ರೀ ಗುರು ಶಿಷ್ಯನಿಗೆ ಹೇಗೆ ಬುದ್ಧಿಯ ಕಲಿಸುತ್ತಿದ್ದರು?
ಎ ಪಡೆದು
ಬಿ ಬೈದು
ಸಿ ಝಂಕಿಸಿ
ಡಿ ವಂದಿಸಿ
3.ಕಾಯಕವೇ ಕೈಲಾಸ ಎಂದು ಹೇಳಿದವರು ಯಾರು ?
ಎ.ಬಸವಣ್ಣ
ಬಿ ಅಲ್ಲಮಪ್ರಭು
ಸಿ ಆಯ್ದಕ್ಕಿ ಮಾರಯ್ಯ
ಡಿ ಅಮುಗೆರಾಯಮ್ಮ
4.. ಮನವ ಗೆದ್ದೆಹನೆಂದು, ತನುವ ಕರಗಿಸಿ ಕಾಯವ ಮರುಗಿಸಿ,
ನಿದ್ರೆಯ ಕೆಡಿಸಿ ವಿದ್ಯೆಯ ಕಲಿತಿಹನೆಂಬ ಬುದ್ಧಿಹೀನರಿರಾ ನೀವು ಕೇಳಿರೋ
ಈ ವಚನದ ಸಾಲುಗಳು ಇವರನ್ನು ಕುರಿತಾಗಿವೆ.
ಎ.ಮನವ ಗೆಲ್ಲಲು ವಿವಿಧ ದೈಹಿಕ ಕಸರತ್ತು ನಡೆಸುವ ಬುದ್ಧಿಹೀನರು
ಬಿ. ಅರಿಷಡ್ವರ್ಗಗಳನ್ನು ಜಯಿಸಿ ಜಗವ ಗೆದ್ದೆ ಶರಣರು
ಸಿ. ಯಾವಾಗಲೂ ಆಶನವ ಉಂಡು ಕಾಲ ಕಳೆಯುವ ಸೋಮಾರಿಗಳು
ಡಿ. ಮೇಲಿನ ಯಾರೂ ಅಲ್ಲ.
5.ದ್ವಾಪರ ಯುಗದಲ್ಲಿ ಶ್ರೀ ಗುರು ಕ್ರಿಷ್ಯನಿಗೆ ಹೇಗೆ ಬುದ್ಧಿಯ ಕಲಿಸುತ್ತಿದ್ದರು?
ಎ ವಂದಿಸಿ
ಬಿ ಒಡೆದು
ಸಿ ಬೈದು
ಡಿ ಝಂಕಿಸಿ
6. ಅಲ್ಲಮ ಪ್ರಭು ಅವರ ಅಂಕಿತನಾಮ ಯಾವುದು?
ಎ ಗುಹೇಶ್ವರ
ಬಿ ಅಮರೇಶ್ವರ
ಸಿ ಅಮುಗೆಶ್ವರ
ಡಿ ಅಪ್ಪಣ್ಣಪ್ರಿಯ ಚನ್ನಬಸವಣ್ಣ
7.ಕಾಯಕದಲ್ಲಿ ನಿರತನಾದರೆ ಯಾರ ದರ್ಶನವನ್ನು ಮರೆಯಬೇಕು?
ಎ ಗುರುದರ್ಶನ
ಬಿ. ದಾರಾವಾಹಿ ದರ್ಶನ
ಸಿ ಸಿನಿಮಾ ದರ್ಶನ
ಡಿ ದೂರದರ್ಶನ
8. ಆಯ್ದಕ್ಕಿ ಮಾರಯ್ಯ ಅವರ ಅಂಕಿತನಾಮ ಯಾವುದು?
ಎ. ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ
ಬಿ ಅಮುಗೆಶ್ವರ
ಸಿ ಅಮರೇಶ್ವರ
ಡಿ ಅಲ್ಲಮಪ್ರಭು
.
9. ಶ್ರೀ ಗುರು ಶಿಷ್ಯನಿಗೆ ಬೈದು ಬುದ್ಧಿಯ ಕಲಿಸುತ್ತಿದ್ದ ಯುಗ ಯಾವುದು?
ಎ. ಕೃತ ಯುಗ
ಬಿ ತ್ರೇತಾ ಯುಗ
ಸಿ ದ್ವಾಪರ ಯುಗ
ಡಿ ಕಲಿಯುಗ
10.ಆಯ್ದಕ್ಕಿ ಮಾರಯ್ಯ ಅವರು ಯಾವ ಸಮಯದಲ್ಲಿ ಗುರುದರ್ಶನ ಲಿಂಗ ಪೂಜೆ ಇವುಗಳನ್ನು ಮರೆಯಬೇಕು ಎಂದಿದ್ದಾರೆ?
ಎ ಕಾಯಕದಲ್ಲಿ ನಿರತವಾದಾಗ
ಬಿ ಮಲಗಿದ್ದಾಗ
ಸಿ ಯಾವಾಗಲೂ
ಡಿ.ಇಷ್ಟವಿಲ್ಲದಿದ್ದಾಗ
11. ಆಯ್ದಕ್ಕಿ ಮಾರಯ್ಯ ಅವರ ಪ್ರಕಾರ ಕೈಲಾಸ ಯಾವುದು?
ಎ ಕಾಯಕ
ಬಿ ಗುರುದರ್ಶನ
ಸಿ ಲಿಂಗಪೂಜೆ
ಡಿ ಜಂಗಮ ಸೇವೆ
12. ಕಾಗೆಯ ಮರಿ ಏನಾಗಲು ಸಾಧ್ಯವಿಲ್ಲ?
ಎ.ನವಿಲು
ಬಿ ಪಾರಿವಾಳ
ಸಿ.ಕೋಗಿಲೆ
ಡಿ ಗುಬ್ಬಚ್ಚಿ
13. ಮನವ ಗೆದ್ದೆಹನೆಂದು, ತನುವ ಕರಗಿಸಿ ಕಾಯವ ಮರುಗಿಸಿ,
ನಿದ್ರೆಯ ಕೆಡಿಸಿ ವಿದ್ಯೆಯ ಕಲಿತಿಹನೆಂಬ ಬುದ್ಧಿಹೀನರಿರಾ ನೀವು ಕೇಳಿರೋ
ಈ ವಚನದ ಸಾಲುಗಳು ಇವರನ್ನು ಕುರಿತಾಗಿವೆ.
ಎ.ಮನವ ಗೆಲ್ಲಲು ವಿವಿಧ ದೈಹಿಕ ಕಸರತ್ತು ನಡೆಸುವ ಬುದ್ಧಿಹೀನರು
ಬಿ. ಅರಿಷಡ್ವರ್ಗಗಳನ್ನು ಜಯಿಸಿ ಜಗವ ಗೆದ್ದೆ ಶರಣರು
ಸಿ. ಯಾವಾಗಲೂ ಆಶನವ ಉಂಡು ಕಾಲ ಕಳೆಯುವ ಸೋಮಾರಿಗಳು
ಡಿ. ಮೇಲಿನ ಯಾರೂ ಅಲ್ಲ.
14. ಜಂಗಮ ಪದದ ವಿರುದ್ಧಾರ್ಥಕ ಪದ ಯಾವುದು
ಎ ವಿದ್ವಾಂಸ
ಬಿ ಗುರು
ಸಿ ವಿರಕ್ತಿ
ಡಿ ಸ್ಥಾವರ
15 ಅರಿವು ಆಚಾರ ಸಮ್ಯಜ್ಞಾನವನ್ನು ಅರಿಯದೆ ನಾಮವು ಹೊತ್ತುಕೊಂಡು ತಿರುಗುವವರು ಯಾರು?
ಎ. ಜಾಣರು
ಬಿ ಗಾವಿಲರು
ಸಿ ಜ್ಞಾನಿಗಳು
ಡಿ ಗುರುಗಳು
16. ಅಮುಗೆ ರಾಯಮ್ಮ ಅವರ ಅಂಕಿತನಾಮ ಯಾವುದು?
ಎ.ಅಮುಗೆಶ್ವರ
ಬಿ ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ
ಸಿ.ಗುಹೇಶ್ವರ
ಡಿ. ಅಮರೇಶ್ವರ
17. ಅಮುಗೆ ರಾಯಮ್ಮ ಅವರು ಯಾರ ಮುಖವನ್ನು ನೋಡಲಾಗದು ಎನ್ನುತ್ತಾರೆ?
ಎ ಅರಿವು ಆಚಾರ ಸಮ್ಯಜ್ಞಾನವನ್ನು ಅರಿಯದೆ ನಾಮವ ಹೊತ್ತುಕೊಂಡು ತಿರುಗುವ ಗಾವಿಲರ
ಮುಖ
ಬಿ ಅರಿವು ಆಚಾರ ಸಮ್ಯ ಜ್ಞಾನವನ್ನು ಅರಿತಿರುವ ಜ್ಞಾನಿಗಳ ಮುಖ
ಸಿ ಅರಿವು ಆಚಾರ ಸಂಯ ಜ್ಞಾನವನ್ನು ಬೋಧಿಸುವ ಗುರುಗಳ ಮುಖ
ಡಿ ಅರಿವು ಆಚಾರ ಸಮ್ಯ ಜ್ಞಾನವನ್ನು ಅರಿಯುತ್ತಿರುವ ಶಿಷ್ಯರ ಮುಖ
18 ತನುವ ಕರಗಿಸಿ ಕಾಯ ಮರುಗಿಸಿ ವಿದ್ಯೆಯನ್ನು ಕಲಿತಿಹೇ ಎನ್ನುವವರು ಯಾರು?
ಎ ಶಿವಶರಣರು
ಬಿ.ಬುದ್ಧಿಹೀನರು
ಸಿ ಬುದ್ಧಿಜೀವಿಗಳು
ಈ. ವಿದ್ಯಾರ್ಥಿಗಳು
19. ಶಿವಶರಣೆ ಲಿಂಗಮ್ಮ ಅವರ ಅಂಕಿತನಾಮ ಯಾವುದು?
ಎ ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ
ಬಿ ಅಮುಗೆಶ್ವರ
ಸಿ ಅಮರೇಶ್ವರ
ಡಿ ಗುಹೇಶ್ವರ
20. ಬುದ್ಧಿಹೀನರು ಮನವ ಗೆಲ್ಲಲು ಮಾಡುವ ಕಸರತ್ತುಗಳು ಯಾವುವು?.
ಎ.ತನುವ ಕರಗಿಸುವುದು
ಬಿ ಕಾಯವ ಮರುಗಿಸುವುದು
ಸಿ. ನಿದ್ರೆಯ ಕೆಡಿಸುವುದು
ಡಿ ಮೇಲಿನ ಎಲ್ಲವೂ.
21.ಶರಣರು ಕೆಡಿಸುವ ನಿದ್ದೆಯನ್ನು ಹೇಗೆ ಗೆದ್ದಿದ್ದಾರೆ.?
ಎ.ಯೋಗಸಮಾಧಿಯ ಮಾಡಿ
ಬಿ. ನಿದ್ದೆ ಮಾಡದೆ
ಸಿ.ಸಾಕಷ್ಟು ನಿದ್ದೆ ಮಾಡಿ
ಡಿ. ಜಾಗರಣೆ ಮಾಡಿ
22.ಶರಣರು ಮನವನು ಗೆದ್ದಿರುವ ಬಗೆ ಹೇಗೆ?
ಎ.ಕಾಮ ,ಕ್ರೋಧ ನೀಗಿ,ಲೋಭ ಮೋಹ ಮತ್ಸರವ ಛೇದಸಿ
ಬಿ.ಆಸೆ ರೋಷವಳಿದು
ಸಿ.ಜಗದ ಪಾಶವ ಬಿಟ್ಟು
ಡಿ.ಮೇಲಿನ ಎಲ್ಲವೂ.
23.ಇವುಗಳಲ್ಲಿ ಗುಂಪಿಗೆ ಸೇರದ ಪದ ಗುರ್ತಿಸಿ ಆನೆ ಗಜ. ಹಯ. ಕರಿ
ಎ.ಆನೆ
ಬಿ.ಹಯ
ಸಿ.ಗಜ
ಡಿ.ಕರಿ
24.ಇವುಗಳಲ್ಲಿ ಗುಂಪಿಗೆ ಸೇರದ ಪದ ಗುರುತಿಸಿ
ಬಸವಣ್ಣ. ಕನಕದಾಸ ಅಲ್ಲಮಪ್ರಭು ಅಮುಗೆ ರಾಯಮ್ಮ.
ಎ.ಅಮುಗೆ ರಾಯಮ್ಮ
ಬಿ.ಅಲ್ಲಮಪ್ರಭು
ಸಿ. ಕನಕ ದಾಸ
ಡಿ.ಬಸವಣ್ಣ
25.ಇವುಗಳಲ್ಲಿ ಗುಂಪಿಗೆ ಸೇರದ ಪದ ಗುರ್ತಿಸಿ.
ಕಾಮ ಕ್ರೋಧ ಧನ ಲೋಭ
ಎ.ಕ್ರೋಧ
ಬಿ.ಕಾಮ.
ಸಿ.ಧನ.
ಡಿ.ಲೋಭ.
26.ಇವುಗಳಲ್ಲಿ ಗುಂಪಿಗೆ ಸೇರದ ಪದ ಗುರ್ತಿಸಿ
ದ್ವಾಪರಯುಗ ಕೃತ ಯುಗ ಸುವರ್ಣಯುಗ ಕಲಿ ಯುಗ
ಎ.ಕಲಿಯುಗ
ಬಿ.ಸುವರ್ಣಯುಗ
ಸಿ.ದ್ವಾಪರಯುಗ
ಡಿ.ಕೃತ ಯುಗ
27.ಇವುಗಳಲ್ಲಿ ಗುಂಪಿಗೆ ಸೇರದ ಪದ ಗುರ್ತಿಸಿ
ತನು ದೇಹ. ಮಾಯ. ಕಾಯ
ಎ.ತನು
ಬಿ.ದೇಹ.
ಸಿ.ಮಾಯ.
ಡಿ.ಕಾಯ
28. ಗುರುದರ್ಶನವಾದಡೂ ಮರೆಯಬೇಕು;
ಲಿಂಗಪೂಜೆಯಾದಡೂ ಮರೆಯಬೇಕು
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು
ಕಾಯಕವೆ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು
ಆಯ್ದಕ್ಕಿ ಮಾರಯ್ಯ ಅವರ ಈ ವಚನದ ಸಾಲುಗಳಲ್ಲಿ ಯಾವುದರ ಮಹತ್ವ ಸಾರಲಾಗಿದೆ?
ಎ.ಗುರು ದರ್ಶನ
ಬಿ.ಲಿಂಗಪೂಜೆ
ಸಿ.ಜಂಗಮಸೇವೆ
ಡಿ.ಕಾಯಕ
29. ಕೋಗಿಲೆ ಪದದ ತದ್ಭವ ರೂಪ ಏನು?
ಎ ಕೋಕಿಲ
ಬಿ ಸಂಖಿಲ
ಸಿ ಕೋಕಿಲೆ
ಡಿ ಕೊಕಿಲ
30.ಅಮುಗೆರಾಯಮ್ಮ ತನ್ನ ವಚನದಲ್ಲಿ ಭಗವಂತನ ಸಾಕ್ಷಾತ್ಕಾರವನ್ನು ಪಡೆಯಲು ತಿಳಿಸಿರುವ ಮಾರ್ಗಗಳು —
ಎ.ಅರಿವು
ಬಿ.ಆಚಾರ
ಸಿ.ಸಮ್ಯಜ್ಞಾನ
ಡಿ.ಮೇಲಿನ ಎಲ್ಲವೂ