10 ನೆಯ ತರಗತಿ ಪ್ರಥಮಭಾಷೆ ಕನ್ನಡ
ಗದ್ಯಪಾಠ- 1 ನಮ್ಮ ಭಾಷೆ ವಸ್ತುನಿಷ್ಠ ಮಾದರಿ ಪ್ರಶ್ನೆಗಳು.
1.
ಭಾಷೆ
ಇದ್ದೂ ಅದರ ಪೀಯೂಷವನ್ನು ಕುಡಿದು ಅರಗಿಸಿಕೊಳ್ಳದ ವ್ಯಕ್ತಿ_____________ಸರಿ.
ಎ. ಮಹಾನ್ ವ್ಯಕ್ತಿಯೇ ಬಿ ಜಂತುವೇ
ಸಿ ಸಮಾಜಸುಧಾರಕನೇ ಡಿ ಪಕ್ಷಿಯೇ
2. ಭಾಷೆ ಯಾವುದಕ್ಕೆ ಸಾಧನವಾಗಿದೆ ?
ಎ. ನಮ್ಮ ಸುತ್ತಮುತ್ತಲಿನವರೊಡನೆ ಜಗಳವಾಡುವುದಕ್ಕೆ ಮಾತ್ರ
ಬಿ ನಮ್ಮ
ಸೊತ್ತಮುತ್ತಲಿನವರೊಡನೆ ದೂರವಾಣಿಯಲ್ಲಿ ಮಾತನಾಡುವುದಕ್ಕೆ ಮಾತ್ರ
ಸಿ ನಮ್ಮ ಸುತ್ತಮುತ್ತಲಿವರೊಡನೆ ವ್ಯವಹರಿಸುವುದಕ್ಕೆ ಮತ್ತು
ವಿಚಾರ ವಿನಿಮಯ ಮಾಡುವುದಕ್ಕೆ.
ಡಿ ಮೇಲಿನ ಯಾವುದಕ್ಕೂ ಅಲ್ಲ.
3. ಮಕ್ಕಳಿಗೆ
ಮೊಲೆಯೂಡುವ ಎಲ್ಲಾ ಪ್ರಾಣಿಗಳು ತಮ್ಮ ಮಕ್ಕಳಿಗೆ ಈ ವಿಚಾರವಾಗಿ ತರಪೇತು ಕೊಡುತ್ತವೆ.
ಎ. ಚಲನವಲನ ಹಾಗೂ ಆಹಾರ ವಿಚಾರವಾಗಿ
ಬಿ
ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸುವ ವಿಚಾರವಾಗಿ
ಸಿ
ಬಟ್ಟೆಗಳನ್ನು ಧರಿಸುವ ಮತ್ತು ಶುಚಿಗೊಳಿಸುವ ವಿಚಾರವಾಗಿ
ಡಿ ಮಾತನಾಡುವುದು
ಮತ್ತು ಹಾಡು ಹೇಳುವುದು.
4. ಮಾನವನು ತನ್ನಲ್ಲಿರುವ ಈ ಶಕ್ತಿಯಿಂದ ಜಂಗಮ ಜಗತ್ತಿನ ಇತರ ಜಂತುಗಳಿಗಿಂತ
ಭಿನ್ನವಾಗಿದ್ದಾನೆ.
ಎ. ತೋಳಿನ ಶಕ್ತಿಯಿಂದ ಬಿ
ಸ್ನಾಯುಶಕ್ತಿಯಿಂದ
ಸಿ ಮಾನಸಿಕ ಶಕ್ತಿಯಿಂದ ಡಿ ವಿಶಿಷ್ಠ ಮೇಧಾಶಕ್ತಿಯಿಂದ
5. ಭಾಷೆಯ ಪ್ರಯೋಜನ
ಮನುಷ್ಯನಿಗೆ ಇಲ್ಲದಿದ್ದರೆ ಆತ ಏನಾಗಿ ಉಳಿಯುತ್ತಿದ್ದ?
ಎ. ಜಂತುವಾಗಿ ಬಿ ಮನುಷ್ಯನಾಗಿ
ಸಿ ಪಕ್ಷಿಯಾಗಿ ಡಿ
ಕ್ರಿಮಿಕೀಟವಾಗಿ
.OMR DOWNLOAD ಮಾಡಲು ಇಲ್ಲಿ ಕ್ಲಿಕ್ ಮಾಡಿ.
6. ಕಿರಿಯಪ್ರಾಣಿಗಳು ಹಿರಿಯ ಪ್ರಾಣಿಗಳಂತೆ ಕಾರ್ಯಮಾಡುವುದನ್ನು
ಹೀಗೆ ಕಲಿಯುತ್ತವೆ.
ಎ. ನೋಡುವುದರಿಂದ ಬಿ ಅನುಕರಣದಿಂದ
ಸಿ
ನಟಿಸುವುದರಿಂದ
ಡಿ ಅವುಗಳ ಜೊತೆ ವಾಸಿಸುವುದರಿಂದ
7. ಎಂ ಮರಿಯಪ್ಪಭಟ್ಟರು ಜನಿಸಿದ ವರ್ಷ--------------
ಎ. 1906 ಬಿ 1907
ಸಿ 1908 ಡಿ
1909
8. ಇದು ಸುಂದರ ವ್ಯಾವಹಾರಿಕ ಭಾಷೆ ಆದರೆ ಗ್ರಾಂಥಿಕ
ಭಾಷೆಯಲ್ಲ____________
ಎ. ಸಂಸ್ಕೃತ ಬಿ ಕನ್ನಡ
ಸಿ ತುಳು ಡಿ
ಇಂಗ್ಲೀಷ್
9.ಜನರು ಮಾತನಾಡುವುದಕ್ಕೆ ಹಾಗೂ ವ್ಯವಹರಿಸುವುದಕ್ಕೆ ಬಳಸುವ ಭಾಷೆ__________________
ಎ. ಆಡುಭಾಷೆ
ಬಿ ಗ್ರಾಂಥಿಕ ಭಾಷೆ
ಸಿ ವ್ಯಾವಹಾರಿಕ ಭಾಷೆ
ಡಿ
ನಮ್ಮ ಭಾಷೆ
10 ಕನ್ನಡ ಸಂಸ್ಕೃತಗಳ ಮಿಶ್ರಣ ಎಣ್ಣೆ ತುಪ್ಪದ ಮಿಶ್ರಣದಂತೆ ಅಸ್ವಾದು
ಎಂದವರು_________________
ಎ. 12 ನೆಯ ಶತಮಾನದ ಕವಿ ನಯಸೇನ ಬಿ ಮಹಲಿಂಗರಂಗ
ಸಿ ಎಂ. ಮರಿಯಪ್ಪ
ಭಟ್ಟರು ಡಿ ಪ್ರಾಕ್ತನ ವಿಮರ್ಶಕ ಸುಮರ್
11.ಎಲ್ಲಾ ವ್ಯಾವಹಾರಿಕ ಭಾ಼ಷೆಗಳು ________________________ಭಾಷೆ
ಆಗಬೇಕಿಲ್ಲ.
ಎ. ಗ್ರಾಂಥಿಕ ಬಿ ಸುಂದರ
ಸಿ ಪ್ರಸಿದ್ಧ ಡಿ ಪ್ರಚಾರ
12. ನಮ್ಮ ಭಾಷೆ ಗದ್ಯಪಾಠವನ್ನು ಎಂ. ಮರಿಯಪ್ಪಭಟ್ಟರ ಈ ಕೃತಿಯಿಂದ
ಆರಿಸಲಾಗಿದೆ.
ಎ. ಛಂದಸ್ಸಾರ ಬಿ ಜಾತಕತಿಲಕಂ
ಸಿ ತುಳು-ಇಂಗ್ಲೀಷ್ ನಿಘಂಟು ಡಿ ಕನ್ನಡ ಸಂಸ್ಕೃತಿ
13.ಗುಂಪಿಗೆ ಸೇರದ ಪದ ಗುರ್ತಿಸಿ.______________________
ಎ. ಕನ್ನಡ ಬಿ ತುಳು
ಸಿ ಇಂಗ್ಲೀಷ್ ಡಿ ಉರ್ದು
14. ಅಭಿವೃದ್ಧಿಹೊಂದಿ ಗ್ರಂಥರಚನೆಯಲ್ಲಿ ಬಳಕೆಯಾಗುವ ಭಾ಼ಷೆಗೆ ಹೀಗೆನ್ನುವರು___________________
ಎ. ಗ್ರಾಮ್ಯಭಾಷೆ ಬಿ ಆಡುಭಾಷೆ
ಸಿ ವ್ಯಾವಹಾರಿಕ
ಭಾ಼ಷೆ ಡಿ ಗ್ರಾಂಥಿಕ ಭಾ಼ಷೆ
15.ಈ ಭಾಷೆಯನ್ನು ದೇವಭಾಷೆ ಎನ್ನುವರು ____________________
ಎ. ಸಂಸ್ಕೃತ ಬಿ ಕನ್ನಡ
ಸಿ ಹಿಂದಿ ಡಿ ಇಂಗ್ಲೀಷ್
.OMR DOWNLOAD ಮಾಡಲು ಇಲ್ಲಿ ಕ್ಲಿಕ್ ಮಾಡಿ.
16. ಕನ್ನಡ ಸುಲಿದ ಬಾಳೆಯ ಹಣ್ಣಿನಂತೆ, ಸಿಗುರು ತೆಗೆದ ಕಬ್ಬಿನಂತೆ,ಉಷ್ಣಅಳಿದ
ಹಾಲಿನಂತೆ,ಸುಲಭವೂ ರುಚಿಯುಳ್ಳದ್ದೂ ಆಗಿದೆ ಎಂದು ಉದ್ಘೋಷಿಸಿದ ಕವಿ _______________________
ಎ. ಎಂ. ಮರಿಯಪ್ಪ ಭಟ್ಟರು
ಬಿ ಮಹಲಿಂಗರಂಗ
ಸಿ 12 ನೆಯ ಶತಮಾನದ ಕವಿ ನಯಸೇನ
ಡಿ ಪ್ರಾಕ್ತನ ವಿಮರ್ಶಕ
ಸುಮರ್
17.ನವಶಿಲಾಯುಗದ ಮಾನವ ,ಸಂಚಾರಿ ಜೀವನವನ್ನು ತ್ಯಜಿಸಿ ಒಂದೆಡೆ ಬೀಡುಬಿಟ್ಟು
ಆಸ್ತಿ, ಮನೆ , ಬದುಕು ಮೊದಲಾದ ಭಾವನೆಗಳನ್ನು ತಳೆಯುವುದಕ್ಕೆ ಎಂದು ಮೊದಲು ಮಾಡಿದನೋ ಅಂದು ಆತನಿಗೆ
___________________________ಅವಶ್ಯಕತೆ ಉಂಟಾಯಿತು.
ಎ. ಭಾಷೆಯ ಅವಶ್ಯಕತೆ ಬಿ ವಾಹನಗಳ ಅವಶ್ಯಕತೆ
ಸಿ ಲೆಕ್ಕವಿಡುವ
ಅವಶ್ಯಕತೆ ಡಿ ಗ್ರಂಥಗಳ
ಅವಶ್ತಕತೆ.
18.ನೈಲ್ ಮತ್ತು ಕ್ರಿಟಗಿರಿ ಪ್ರದೇಶಗಳಲ್ಲಿಉಪಲಬ್ಧವಾದ ಪುರಾತನ ಅವಶೇಷಗಳಲ್ಲಿ ವ್ಯಾಪಾರ, ವ್ಯವಹಾರ ಲೆಕ್ಕಗಳಿಗೆ ಸಂಬಂಧಿಸಿದ ಲಿಪಿ ಸಾಕ್ಷ್ಯ
ಕಂಡುಕೊಂಡವರು____________________________
ಎ. ಎಂ. ಮರಿಯಪ್ಪ ಭಟ್ಟರು ಬಿ ಪ್ರಾಕ್ತನ ವಿಮರ್ಶಕ ಸುಮರ್
ಸಿ 12ನೆಯ ಶತಮಾನದ
ನಯಸೇನ ಡಿ ಮಹಲಿಂಗರಂಗ
19..ದಿವಾನ,ಸರಕಾರ,ಮುನಷಿ,ಸರದಾರ,ದವಲತ್ತು,ಮುಸಾಫರ್,ಕಛೇರಿ,ಸುಬೇದಾರ,ಅಮಲ್ದಾರ,ತಹಸಿಲ್ದಾರ
ಇವು ___________ ಭಾಷೆಯಿಂದಬಂದು ಕನ್ನಡ ನುಡಿಬೊಕ್ಕಸವನ್ನು
ಸೇರಿಕೊಂಡಿವೆ.
ಎ. ಇಂಗ್ಲೀಷ್ ಬಿ
ಪೋರ್ಚುಗೀಸ್
ಸಿ ಸಂಸ್ಕೃತ,ಪ್ರಾಕೃತ ಡಿ ಪರ್ಷಿಯನ್
20.ಜ್ಞಾನಭಂಡಾರ ಭದ್ರವಾಗಿದ್ದು ಹೀಗೆ.____________________________________
ಎ. ಮುಂದೆ ಮಾನವನಿಗೆ
ಬಿಡುವು ಹೆಚ್ಚಿದಂತೆ ಜೀವನದ ಸೌಕರ್ಯಗಳನ್ನು ವಿಶಿಷ್ಠ ಮೇಧಾಶಕ್ತಿಯಿಂದ ಅಭಿವೃದ್ಧಿಗೊಳಿಸತ್ತಾ ಹೋದಂತೆ
ತನ್ನ ಆಗುಹೋಗುಗಳನ್ನು ಕಾವ್ಯರೂಪಕ್ಕೆ ಇಳಿಸುವ ಮಾರ್ಗ ಕಂಡುಕೊಂಡಾಗ
ಬಿ ಲೆಕ್ಕ ಪತ್ರಗಳನ್ನು ಇಡಲು ಉಪಯುಕ್ತವಾದ ಮೂಲಲಿಪಿಯನ್ನು
ಮತ್ತಷ್ಟು ಪರಿಷ್ಕರಿಸುತ್ತಾ ಸುಂದರವಾದ ಸಾಹಿತ್ಯಕೃತಿಗಳನ್ನು ಬರೆದಿಡುವುದನ್ನು ಮಾನವ ಕಲಿತುಕೊಂಡಾಗ
ಸಿ ಆ ಲಿಪಿಯ ಮೂಲಕ ಪರಂಪರೆಯಿಂದ ಬಂದ ಎಷ್ಟೋ ವಿಷಯಗಳನ್ನು
ಬರೆದಿಡಲು ಸಾಧ್ಯವಾಯಿತು.
ಡಿ ಮೇಲಿನ ಎಲ್ಲವೂ
21.ಕನ್ನಡಕ್ಕೆ ಬಹಳ ಕಾಲದಿಂದಲೂ ಪೋಷಣೆ ಕೊಡುತ್ತಾ ಬಂದಿರುವ ಭಾಷೆ
_______________________-
ಎ. ಇಂಗ್ಲೀಷ್ ಬಿ ಹಿಂದಿ
ಸಿ ಸಂಸ್ಕೃತ ಡಿ ಮೇಲಿನ ಎಲ್ಲವೂ
22.ಅನೇಕ ಪಂಡಿತರು ಉತ್ತಮ ಕಾವ್ಯಗಳನ್ನು ರಚಿಸಲು ಕಾರಣ
_____________________________
ಎ. ರಾಮಾಯಣವನ್ನು
ಕನ್ನಡದಲ್ಲಿ ವಿವರಿಸಬೇಕೆಂಬ ಅಭಿಲಾಷೆಯಿಂದ
ಬಿ ಮಹಾಭಾರತವನ್ನು ಕನ್ನಡದಲ್ಲಿ ವಿವರಿಸಬೇಕೆಂಬ ಅಭಿಲಾಷೆಯಿಂದ
ಸಿ ಭಗವದ್ಗೀತೆಯನ್ನು ಕನ್ನಡದಲ್ಲಿ ವಿವರಿಸಬೇಕೆಂಬ ಅಭಿಲಾಷೆಯಿಂದ
ಡಿ ವೈದಿಕ ಹಾಗೂ ಧಾರ್ಮಿಕ
ತತ್ವಗಳನ್ನು ಕನ್ನಡದಲ್ಲಿ ವಿವರಿಸಬೇಕೆಂಬ ಅಭಿಲಾಷೆಯಿಂದ
23. ಮೇಧಾಶಕ್ತಿ ಪದದ ಅರ್ಥ_____________
ಎ. ಕುದುರೆಯ ಶಕ್ತಿ ಬಿ ತಿನ್ನುವ ಶಕ್ತಿ
ಸಿ ವಿಶೀಷ್ಠ ಬುದ್ಧಿಶಕ್ತಿ ಡಿ ಜ್ಞಾನಪಕ ಶಕ್ತಿ
24. ಕನ್ನಡ ಭಾಷೆ ಹದಗೊಂಡ ಬಗೆ ಹೀಗೆ
_________________________________
ಎ. ಅನೇಕ ಕವಿಗಳು
ಕನ್ನಡ ಅಭಿವೃದ್ಧಿ ಹೊಂದಬೇಕಾದರೆ ಕನ್ನಡ ಪದಗಳ ಬಳಕೆ ಹೆಚ್ಚಾಗಬೇಕೆಂದು ಸಾರಿದರು ಅಂಥವರ ವಾಣಿಯಿಂದ
ಕನ್ನಡದ ವೀಣೆ ಮೃದು ಮಧುರವಾಗಿ ಮಿಡಿಯಿತು.
ಬಿ ಮುಂದೆ ಬಸವೇಶ್ವರ ಅಲ್ಲಮಪ್ರಭುಗಳಂತಹ ಶರಣವರೇಣ್ಯರು
, ಚಾಮರಸ, ಕುಮಾರವ್ಯಾಸರಂತಹ ಕವಿಪುಂಗವರು, ಪುರಂದರದಾಸ, ಕನಕದಾಸರಂತಹ ದಾಸ ಶ್ರೇಷ್ಠರು ಸುಲಂ ಮಾಋಘೌಣಣೇ
ತುಳಿದರು.
ಸಿ ಎಲ್ಲರೂ ತಮ್ಮತಮ್ಮ ಅನುಭವಸಾರವನ್ನು ಸುಲಭವೂ ಸುಂದರವೂ
ಸಹಜವೂ ಆದ ಮಾತುಗಳಿಂದ ಹೃದಯ ಮುಟ್ಟುವಂತೆ ಅಭಿವ್ಯಕ್ತಪಡಿಸಿದರು
ಡಿ ಮೇಲಿನ ಎಲ್ಲಾ ಅಂಶಗಳು.
25. ಸರ್ವಸಂಪನ್ನತೆಯಿಂದ ಕೂಡಿ ಉತ್ತಮ ಗ್ರಾಂಥಿಕ ಭಾಷೆಯಾಗಿದ್ದರೂ
ವ್ಯಾವಹಾರಿಕ ಭಾಷೆಯಾಗಿರದ ಭಾಷೆ ಇದು________
ಎ. ತುಳು ಬಿ ಪಾಳಿ
ಸಿ ಮರಾಠಿ ಡಿ
ಸಂಸ್ಕೃತ
.OMR DOWNLOAD ಮಾಡಲು ಇಲ್ಲಿ ಕ್ಲಿಕ್ ಮಾಡಿ.
26. ಕವಿ ಮಹಲಿಂಗರಂಗ
ಹದಗೊಂಡ ಕನ್ನಡವನ್ನು ಕುರಿತು ಹೀಗೆ ಉದ್ಘೋಷಿಸಿದ್ದಾನೆ__________________
ಎ. ಕನ್ನಡ ಸುಲಿದ ಬಾಳೆಯ
ಹಣ್ಣಿನಂತೆ
ಬಿ ಸಿಗುರು ತೆಗೆದ ಕಬ್ಬಿನಂತೆ
ಸಿ ಉಷ್ಣಅಳಿದ ಹಾಲಿನಂತೆ,ಸುಲಭವೂ ರುಚಿಯುಳ್ಳದ್ದೂ ಆಗಿದೆ
ಡಿ ಮೇಲಿನ ಎಲ್ಲವೂ.
27.ಯಾರ ಆಳ್ವಿಕೆಯ ಅವಧಿಯಲ್ಲಿ ಪರ್ಷಿಯನ್ ಭಾಷೆಯಿಂದ ಶಬ್ಧಗಳು ಕನ್ನಡಕ್ಕೆ ಬಂದಿವೆ
ಎ. ಮಹಮ್ಮದೀಯರ ಆಳ್ವಿಕೆಯ
ಅವಧಿಯಲ್ಲಿ
ಬಿ ದೆಹಲಿ ಸುಲ್ತಾನರ ಆಳ್ವಿಕೆಯ ಅವಧಿಯಲ್ಲಿ
ಸಿ ಇಂಗ್ಲೀಷರ ಆಳ್ವಿಕೆಯ ಅವಧಿಯಲ್ಲಿ
ಡಿ ಡಚ್ಚರ ಆಳ್ವಿಕೆಯ
ಅವಧಿಯಲ್ಲಿ
28. ಕನ್ನಡ ____________ಭಾಷಾ ವರ್ಗಕ್ಕೆ ಸೇರಿದೆ.
ಎ. ದ್ರಾವಿಡ ಭಾಷಾ ವರ್ಗ
ಬಿ ಇಂಡೋ-ಆರ್ಯನ್ ಭಾಷಾ ವರ್ಗ
ಸಿ ಟಿಬೇಟೋ- ಬರ್ಮನ್
ಡಿ ಜರ್ಮನಿಕ್
ಭಾಷಾ ವರ್ಗ.
29 ಇದು ಲಿಪಿಯ ಮೊದಲ ಜಾಡು __________________________-
ಎ. ಪ್ರಾಕ್ತನ ವಿಮರ್ಶಕ ಸುಮೇರ್ ನೈಲ್ ಮತ್ತು ಕ್ರಿಟಗಿರಿ ಪ್ರದೇಶಗಳಲ್ಲಿಉಪಲಬ್ಧವಾದ
ಪುರಾತನ ಅವಶೇಷಗಳಲ್ಲಿ ವ್ಯಾಪಾರ, ವ್ಯವಹಾರ ಲೆಕ್ಕಗಳಿಗೆ
ಸಂಬಂಧಿಸಿದ ಲಿಪಿ ಸಾಕ್ಷ್ಯ ಕಂಡುಕೊಂಡಿದ್ದು
ಬಿ ನವಶಿಲಾಯುಗದ ಮಾನವ ,ಸಂಚಾರಿ ಜೀವನವನ್ನು ತ್ಯಜಿಸಿ ಒಂದೆಡೆ ಬೀಡುಬಿಟ್ಟು ಆಸ್ತಿ, ಮನೆ ,
ಬದುಕು ಮೊದಲಾದ ಭಾವನೆಗಳನ್ನು ತಳೆಯುವುದಕ್ಕೆ ಎಂದು ಮೊದಲು ಮಾಡಿದ್ದು
ಸಿ ನಯಸೇನ ತಕ್ಕುದೇ ಬೆರೆಸಲ್ಕೆ ಘೃತಮುಮಂ ತೈಲಮಂ ಎಂದು ಹೇಳಿದ್ದು
ಡಿ ಮಹಲಿಂಗರಂಗ ಕನ್ನಡ ಸಿಗುರು ತೆಗೆದ ಕಬ್ಬಿನಂತೆ,ಉಷ್ಣಅಳಿದ ಹಾಲಿನಂತೆ ಎಂದಾಗ
30.ಕನ್ನಡದ ಉಡುಪನ್ನು ಧರಿಸಿ ಒಳಗೆ ಬಂದಿರುವ ರೈಲು, ಮೋಟರು, ಹೋಟ್ಲು,
ಆಫೀಸು, ಇಸ್ಕೂಲು, ಸಿನಿಮಾ,ರೇಡಿಯೋ ಆಸ್ಪತ್ರೆ, ಕೋರ್ಟು,ಡಿಕ್ರಿ,
ಲೈಟು ಈ ಪದಗಳು _______________ಭಾಷೆಗೆ ಸೇರಿವೆ.
ಎ. ಪೋರ್ಚುಗೀಸ್ ಬಿ ಸಂಸ್ಕೃತ,ಪ್ರಾಕೃತ
ಸಿ ಇಂಗ್ಲೀಷ್ ಡಿ ಪರ್ಷಿಯನ್
31 ಪೋರ್ಚುಗೀಸಿನಿಂದ
ಕನ್ನಡಕ್ಕೆ ಬಂದಿರುವ ಪದಗಳಿಗೆ ಉದಾಹರಣೆ _______________
ಎ. ಬಟಾಟೆ ಬಿ ಅನಾನಸು
ಸಿ ಜಂಗಾಲ ಡಿ ಮೇಲಿನ
ಎಲ್ಲವೂ
32.ಎರೆಡರೆಡು ಭಾಷೆಗಳನ್ನಾಡುವ ಜನರಿರುವ ಗಡಿಪ್ರದೇಶಗಳನ್ನು ಹೀಗೆ
ಕರೆಯುವರು._________________
ಎ.
ಏಕಭಾ಼ಷಾ ಪ್ರದೇಶ ಬಿ ದ್ವಿ ಭಾ಼ಷಾ
ಪ್ರದೇಶ
ಸಿ ಹೊರನಾಡು ಪ್ರದೇಶ ಡಿ ಗಡಿನಾಡು
ಪ್ರದೇಶ
33.ಕಣ್ಗೊಳಿಸು,ಕಣ್ಣಿಡು, ಕಣ್ಣೆಂಜಲು ಇವು _________________ವ್ಯಾಕರಣಾಂಶಕ್ಕೆ
ಉದಾಹರಣೆ.
ಎ. ದ್ವಿರುಕ್ತಿ ಬಿ ಜೋಡುನುಡಿ
ಸಿ ನುಡಿಗಟ್ಟು ಡಿ ನಾಣ್ನುಡಿ.
34.ಒಂದು ಭಾಷೆ ಸತ್ವಪೂರ್ಣವಾಗಬೇಕಾದರೆ ಅದನ್ನಾಡುವ ಜನರು __________________ಆಗಿರಬೇಕು.
ಎ. ಅಭಿಮಾನಧನರು ಬಿ ಬುದ್ಧಿಶಾಲಿಗಳು
ಸಿ ಪ್ರಯೋಗಶೀಲರು ಡಿ ಮೇಲಿನ
ಎಲ್ಲವೂ
35. ಪೀಯೂಷ ಪದದ ಅರ್ಥ_______________________
ಎ. ಬಿಸಿಯೂಟ ಬಿ ಪಾಯಸ
ಸಿ ವಿಷ ಡಿ ಅಮೃತ
36 ಭಾರತೀಯರಾದ ನಾವು ಹೀಗೆ ಮಾಡಿದರೆ ನಮ್ಮ ದೇಶದ ಸಂಸ್ಕೃತಿ ಮುಂದುವರಿಯುತ್ತದೆ.
ಎ. ನೆರೆಹೊರೆಯ ಭಾಷೆಗಳನ್ನು ದ್ವೇಷಿಸಬಾರದು
ಬಿ
ನಮ್ಮ ನಮ್ಮ ಭಾಷೆಗಳನ್ನು ಗೌರವಿಸಬೇಕು
ಸಿ ನಮ್ಮ ಭಾಷೆಯನ್ನು
ಪ್ರೀತಿಸಿ ಅಭಿವೃದ್ಧಿಗೊಳಿಸಬೇಕು
ಡಿ ಮೇಲಿ ಎಲ್ಲವೂ.
37. ಈ ಭಾಷೆಯನ್ನು ಜೀವದ್ಭಾಷೆ ಎನ್ನುತ್ತಾರೆ
___________________________
ಎ. ಗ್ರಾಮ್ಯಭಾಷೆಯನ್ನು ಬಿ ವ್ಯವಹಾರಿಕ ಭಾಷೆಯನ್ನು
ಸಿ ಕನ್ನಡಭಾಷೆಯನ್ನು ಡಿ ಗ್ರಾಂಥಿಕ
ಭಾ಼ಷೆಯನ್ನು
38.
ಆಂಗ್ಲಭಾಷೆ ವಿಶ್ವವ್ಯಾಪಿಯಾಗುವುದಕ್ಕೆ ಕಾರಣ____________________
ಎ. ದೇಶ ವಿದೇಶಗಳ ಭಾಷೆ ಹಾಗೂ ಸಾಹಿತ್ಯ ಸಂಸ್ಕೃತಿಯನ್ನು ಆಂಗ್ಲಪಂಡಿತರು
ಮುಕ್ತ ಮನಸ್ಸಿನಿಂದ ಅಭ್ಯಸಿಸಿದರು.
ಬಿ
ಮಹಾ ಮೇಧಾವಿಗಳು ತಮ್ಮ ಆಸೆ, ಆಕಾಂಕ್ಷೆ,ವಿಚಾರಮುಂತಾದವನ್ನು
ಆ ಭಾಷೆಯ ಮುಖಾಂತರವೇ ಹೇಳಬೇಕೆಂಬ ಉಜ್ವಲ ಅಭಿಮಾಣವುಳ್ಳವರಾಗಿದ್ದರು
ಸಿ ಆಂಗ್ಲವಿಜ್ಞಾನಿಗಳು,ರಾಜಕಾಋಣಿಗಳು,
ಅರ್ಥಶಾಸ್ತ್ರಜ್ಞರು,ಹೀಗೆ ಎಲ್ಲರೂ ತಮ್ಮ ಭಾಷೆಯನ್ನೇ ಬಳಸಿದರು
ಡಿ ಮೇಲಿನ
ಎಲ್ಲವೂ
39. ಕಂಗಾಲು ಎಂದರೆ _____________________
ಎ. ಕರಿಯ ಕಾಲು ಬಿ ದಿಕ್ಕು ತೋಚದಿರುವುದು
ಸಿ ಕುದುರೆಯ ಕಾಲು ಡಿ ಕಣ್ಣಿಗೆ
ಕಾಣುವ ಕಾಲು
40. ಈ ಭಾಷೆಯಿಂದ ಕನ್ನಡಕ್ಕೆ ಬಂದಿರುವ ಪದಗಳನ್ನು ತತ್ಸಮ-ತದ್ಭವ ಎನ್ನುವರು.
ಎ. ಪರ್ಷಿಯನ್ ಬಿ ಪೋರ್ಚುಗೀಸ್
ಸಿ ಸಂಸ್ಕೃತ, ಪ್ರಾಕೃತ ಡಿ ಇಂಗ್ಲೀಷ್
.OMR DOWNLOAD ಮಾಡಲು ಇಲ್ಲಿ ಕ್ಲಿಕ್ ಮಾಡಿ.