ಬೆಡಗಿನ ತಾಣ ಜಯಪುರ - 9 ನೆಯತರಗತಿ ಕನ್ನಡ ನೋಟ್ಸ್.
ಕೃತಿಕಾರರ ಪರಿಚಯ :
ಶ್ರೀಯುತರ ಮೂಕಜ್ಜಿಯ ಕನಸುಗಳುಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ , ಯಕ್ಷಗಾನ ಬಯಲಾಟ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಮೈಮನಗಳ ಸುಳಿಯಲ್ಲಿ ಕೃತಿಗೆ ಪಂಪ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ ,
1 , ರೈಗಳ ಮನೆ ಎಂಥ ಪ್ರದೇಶದಲ್ಲಿತ್ತು ?
ರೈಗಳ ಮನೆಯು ಸುತ್ತಲೂ ಉಸುಬು ಹರಡಿದ್ದ ಮರುಭೂಮಿಯ ಪ್ರದೇಶದಲ್ಲಿತ್ತು .
2 , ಲೇಖಕರಿಗೆ ಜಯಪುರದ ಮನೆಗಳ ಮೇಲೆ ಮೋಹವೇಕೆ ?
ಜಯಪುರದ ಮನೆಗಳು ಒಂದೊಂದು ಮನೆಯೂ ಒಂದೊಂದು ಶೈಲಿಯದೂ ಒಂದೊಂದು ದೇಶದ್ದೂ ಆಗಿ ಕಾಣಿಸುವುದಿಲ್ಲ . ಆದುದರಿಂದಲೇ ಲೇಖಕರಿಗೆ ಅವುಗಳ ಮೇಲೆ ಮೋಹ .
3. ಜಯಪುರದ ಜನರಿಗೆ ಯಾವ ಯಾವ ಬಣ್ಣಗಳು ಇಷ್ಟ ?
ಜಯಪುರದ ಜನರಿಗೆ ಕೆಂಪು , ಕಿತ್ತಳೆ , ಹಳದಿ ಎಂದರೆ ಇಷ್ಟ .
4 , ಜಯಪುರದ ಪೂರ್ವದ ರಾಜಧಾನಿ ಯಾವುದು ?
ಅಂಬೇರ ಜಯಪುರದ ಪೂರ್ವಕಾಲದ ರಾಜಧಾನಿ .
5 , ಲೇಖಕರಿಂದ ಹಂಬಲವೇನು ?
ಜಯಪುರದ ಜಾನಪದ ನೃತ್ಯಗಳನ್ನು ನೋಡಬೇಕೆಂಬ ಹಂಬಲ ಲೇಖಕರದ್ದಾಗಿತ್ತು .
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ ,
1 , ಜಯಪುರದ ಬೀದಿ ಹಾಗೂ ಮನೆಗಳ ಸೌಂದರ್ಯವನ್ನು ವರ್ಣಿಸಿ ,
ಜಯಪುರದ ಮುಖ್ಯಬೀದಿಗಳು ಬೀದಿಗಳು ಒಂದು ಶತಮಾನದ ಹಿಂದೆ ನಿರ್ಮಾಣವಾಗಿದ್ದರೂ ಬಹಳ ಅಗಲವಾದ ಬೀದಿಗಳವು : ನೇರವಾದವುಗಳು ಬಹುದೂರದಿಂದ ಕಾಣಿಸುವ ಅಂಗಡಿ – ಮನೆಗಳ ದೇಶೀ ವಾಸ್ತುರಚನೆ ಚೆನ್ನಾಗಿ ಶೋಭಿಸುತ್ತದೆ .ಇಲ್ಲಿನ ಒಂದೊಂದು ಮನೆಯೂ ಒಂದೊಂದು ಶೈಲಿಯದೂ ಒಂದೊಂದು ದೇಶದ್ದೂ ಆಗಿ ಕಾಣಿಸುವುದಿಲ್ಲ . ಇಲ್ಲಿನ ಮುಖ್ಯ ಬೀದಿಗಳು ಸಂಧಿಸುವಲ್ಲಿ ಸುಂದರವಾದ ಚೌಕಗಳಿವೆ . ಕೆಲವೊಂದು ಕಡೆಗಳಲ್ಲಿ : ಮಹಾದ್ವಾರಗಳಿವೆ .
2. ಲೇಖಕರ ಮೊದಲ ಅಂಬೇರ ಭೇಟಿಗೂ ಇತ್ತೀಚಿನ ಭೇಟಿಗೂ ಯಾವ ವ್ಯತ್ಯಾಸವಿತ್ತು ?
ಜಯಪುರ ಲೇಖಕರ ಪಾಲಿಗೆ ಹೊಸತಾಗಿರಲಿಲ್ಲ . ಹದಿನೈದು ವರ್ಷಗಳ ಹಿಂದೊಮ್ಮೆ ಹೋಗಿದ್ದರು . ಆಗ ಅಂಬೇರ ಬೆಟ್ಟದಲ್ಲಿ ಜನವಸತಿ ಇದ್ದಿರಲಿಲ್ಲ . ಹಲವಾರು ಪ್ರಾಚೀನ ಗುಡಿಗೋಪುರಗಳು ಗೂಬೆಯ ಮನೆಗಳಾಗಿದ್ದವು .ಈಗ ಹಾಗಿಲ್ಲ ; ನೂರಾರು ಸಿಂಧೀ ಕುಟುಂಬಗಳು ಅಲ್ಲಿ ಮನೆ ಮಾಡಿಕೊಂಡಿ ವಾಸ ಮಾಡುತ್ತಿವೆ . ದೇವಾಲಯದಲ್ಲಿ ಪೂಜೆ ನಡೆಯುತ್ತಿದೆ . ಎಂದು ಮೊದಲ ಭೇಟಿಗೂ ಇತ್ತೀಚಿನ ಭೇಟಿಗೂ ಇರುವ ವ್ಯತ್ಯಾಸವನ್ನು ಲೇಖಕರು ತಿಳಿಸಿದ್ದಾರೆ .
3 , ಮೀರಾಬಾಯಿ ದೇವಾಲಯದ ಸೌಂದರ್ಯವನ್ನು ವಿವರಿಸಿ .
ಅಂಬೇರ ಬೆಟ್ಟದಲ್ಲಿ ಮೂರು ಅಂತಸ್ತಿನ ಅರಮನೆ ಇದೆ . ಈ ಅರಮನೆಯ ಆವರಣದ ಹಿಂದುಗಡೆ ಇರುವ ತಗ್ಗಿನ ಕಣಿವೆಯ ತಳದಲ್ಲೇ ಕಾಣಿಸುತ್ತದೆ ಮೀರಾಬಾಯಿಯ ದೇವಾಲಯ . ಮೀರಾಬಾಯಿ ಗಿರಿಧರನಾಗರನನ್ನು ಪೂಜಿಸಿದ ಸ್ಥಳವಿದು . ಕೆಳಗಿಳಿದು ಹೋಗಿ ಗುಡಿಯನ್ನು ನೋಡಿದರೆ ಅದರ ಸೊಬಗು ಚೆನ್ನಾಗಿ ಕಾಣುತ್ತದೆ . ನಕ್ಷತ್ರಾಕೃತಿಯನ್ನು ತುಂಬಿಕೊಂಡ ಗರ್ಭಗೃಹ , ನವರಂಗಗಳಿವೆ .
4 ಲೇಖಕರು ನೋಡಿದ ಜನಪದ ನೃತ್ಯದ ಸೊಬಗನ್ನು ಚಿತ್ರಿಸಿ ,
ಲೇಖಕರಿಗೆ ಜಯಪುರದ ಜನಪದ ನೃತ್ಯ ನೋಡಬೇಕೆಂಬ ಹಂಬಲ ಇತ್ತು , ಊರಿನ ಜನಸಾಮಾನ್ಯರ ನೃತ್ಯವದು , ಇಬ್ಬರು ಯೌವನಸ್ಥರು ಸ್ತ್ರೀಯರ ಉಡುಗೆ ಉಟ್ಟಿದ್ದರು . ಮಾರವಾಡಿ ಸ್ತ್ರೀಯರಂತೆ ತಲೆಗೆ ಸೆರಗು ಹಾಕಿಕೊಂಡು ಮುಖತೋರಿಸದೆ ಕುಣಿಯತೊಡಗಿದರು .ಹಿಮ್ಮೇಳಕ್ಕೆ ಡೋಳು ತಮಟೆಗಳಿದ್ದವು . ಮುಂಭಾಗದಲ್ಲಿ ಸ್ತ್ರೀವೇಷದ ನರ್ತಕರು ಲಾಸ್ಯವೆಸಗಿದರು .ಅವರ ಕಾಲಿನ ನಡಿಗೆಯಲ್ಲೂ ಕೈಗಳ ಚಲನೆಯಲ್ಲೂ ಜಾಣ್ಣೆ ಚೆಲುವುಗಳೆರಡೂ ಇದ್ದವು .
1 ಜಯಪುರದ ಜನರಿಗೆ ಬಣ್ಣಗಳ ಬಗೆಗೆ ಇರುವ ಮೋಹವನ್ನು ತಿಳಿಸಿ .
ಜಯಪುರ ಬಣ್ಣಗಾರರ ತವರೂರು . ಬಣ್ಣ ಹಾಕುವ ಕುಶಲಿಗರು ಈ ಊರಿನಲ್ಲಿ ಬಹಳ ಮಂದಿ ಇದ್ದಾರೆ . ಬಣ್ಣದ ಮೋಹವಿರುವ ಜನರೂ ಬಹಳ ಇದ್ದಾರೆ .ಗಿಡಮರಗಳಿಲ್ಲದ ಸ್ಥಳದಲ್ಲಿ ವಾಸಿಸುವ ಜನರಿಗೆ , ಕಣ್ಣಿನ ತಣಿವು ಹೇಗೆ ಬರಬೇಕು ? ಆದ್ದರಿಂದಲೇ ಇಲ್ಲಿನ ಜನರು ಅದರಲ್ಲೂ ಹೆಂಗಸರೂ ರಂಗುರಂಗಿನ ಲಂಗ , ಪಾಯಿಜಾಮಾ , ಸೀರೆ , ರವಿಕೆ , ಮೇಲುದೆ ತೊಡುವ ಅಭ್ಯಾಸದವರು . ಅದರಲ್ಲೂ ಕೆಂಪು , ಕಿತ್ತಳೆ , ಹಳದಿ ಎಂದರೆ ಪ್ರಾಣ . ನಿತ್ಯವೂ ಹೋಳಿ ಹುಣ್ಣಿಮೆ ಮಾಡುವವರಂತೆ ಬಣ್ಣದ ಚಲ್ಲಾಟ ಅವರ ಬಟ್ಟೆಗಳಲ್ಲಿ , ಗಂಡಸರೂ ರಂಗುರಾಯರೇ .ಅವರ ಪಂಚೆ , ಅಂಗಿಗಳಲ್ಲಿ ರಂಗು ಕಾಣಿಸದಿದ್ದರೂ ಮುಂಡಾಸಿನ ಮೂವತ್ತು ಮೊಳಗಳಲ್ಲಿ ಮುನ್ನೂರು ಬಣ್ಣಗಳನ್ನು ಮೆರೆಯಿಸುವುದುಂಟು .
2. ಅಂಬೇರ ಬೆಟ್ಟದ ಮೂರು ಅಂತಸ್ತಿನ ಅರಮನೆಯ ಒಳಾಂಗಣ ಚೆಲುವನ್ನು ತಿಳಿಸಿ ,
ಅಂಬೇರ ಬೆಟ್ಟದಲ್ಲಿ ಮೂರು ಅಂತಸ್ತಿನ ಅರಮನೆ ಇದೆ . ಈ ಅರಮನೆಯ ಮೊದಲ ಅಂತಸ್ತಿನಲ್ಲಿ ಪುಟ್ಟ ದೇವಾಲಯವಿದೆ . ಈ ಪುಟ್ಟ ಮಂದಿರವು ಚಿತ್ರ ಕೆಲಸಗಳಿಂದ ಕೂಡಿದ ಹಾಲುಗಲ್ಲಿನ ರಚನೆಯಾಗಿದೆ , ಗೊಡೆಗಳೆಲ್ಲವೂ ಹಾಲುಗಲ್ಲಿನವೇ ; ನೆಲವೂ ಅದರದ್ದೇ . ಸ್ತಂಭಗಳೂ ಅವುಗಳದ್ದೇ .ಗುಡಿ ಚಿಕ್ಕದಾಗಿದ್ದರೂ ಶಾಂತವಾಗಿ ಕಾಣಿಸುವ ಮಂದಿರ , ಗುಡಿಯ ವಿಗ್ರಹ ಮಾತ್ರ ಆಕಾರ ಹಾಗೂ ಅಲಂಕಾರಗಳಿಂದ ಅಷ್ಟೊಂದು ಶೋಭಿಸದು . ಎರಡನೆಯ ಅಂತಸ್ತಿನಲ್ಲಿ ದೊಡ್ಡದೊಂದು ಸಭಾಂಗಣ ಇದೆ ಇದು ವಿಶಾಲವಾದ ಹಾಲುಗಲ್ಲಿನ ರಚನೆ ,ಅದರ ಚಾವಣಿ , ರಜಪುತಾನದ ಶೈಲಿಯ ಕಮಾನು ಮತ್ತು ಕಂಬಗಳು ತುಂಬ ಲಲಿತವಾಗಿದ್ದು , ಪರಸ್ಪರ ಹೊಂದಿಕೊಂಡು , ಈ ರಚನೆಗೆ ಚಲುವನ್ನು ನೀಡಿವೆ . ಮೂರನೆಯ ಅಂತಸ್ತಿನಲ್ಲಿ ರಾಜರ ಅಂತಃಪುರ ಇದೆ .ಇಲ್ಲಿನ ಕೆಲವು ಭಾಗಗಳಲ್ಲಿ ಚಂದ್ರಕಾಂತ ಶಿಲೆಯ ಸುಂದರ ಮಂಟಪಗಳವ . ಶಿಲೆಯನ್ನು ಕೆತ್ತಿ ಬಣ್ಣದ ಕಲ್ಲುಗಳಿಂದ ಕೊರೆದು ತುಂಬಿಸಿದೆ ಲತಾಮುಷ್ಪಗಳ ಚಿತ್ತಾವಳಿಗಳೂ ಇವೆ .ಇನ್ನೊಂದೆರಡು ಚಾವಡಿಗಳು ಕನ್ನಡಿಯ ಚೂರುಗಳನ್ನು ಸುಣ್ಣದ ಗಾರೆಯಲ್ಲಿ ಅಂಟಿಸಿ , ಚಿತ್ರವಿಚಿತ್ರ ಪ್ರತಿರೂಪಗಳನ್ನು ನಿರ್ಮಿಸಿ ಅಲಂಕರಿಸಿದಂತಹ ಕಂಬ , ಮುಚ್ಚಿಕಗಳುಳ್ಳ ರಚನೆ. ಕತ್ತಲಿನಲ್ಲಿ ದೀವಿಗೆ ಹೊತ್ತಿಸಿದಾಗ , ಲಕ್ಷೇಪಲಕ್ಷ ಈ ಗಾಜಿನ ತುಣುಕುಗಳು , ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತವೆ.
3. ಜಂತ್ರ ಮಂತ್ರದ ವಿಶೇಷತೆಯನ್ನು ಪರಿಚಯ ಮಾಡಿಕೊಡಿ .
‘ ಜಂತ್ರ ಮಂತ್ರ ‘ ಹಳೆಯ ಏಗೋಳವಿಜ್ಞಾನದ ಪರಿಶೀಲನಾಲಯ , ಖಗೋಳಶಾಸ್ತ್ರಜ್ಞರು ಗ್ರಹ , ಸೂರ್ಯ ಚಂದ್ರ , ತಾರಾಮಂಡಲಗಳನ್ನು ಅಳೆದು , ಪರಿಶೀಲಿಸಿ ನೋಡುವ ಸಲುವಾಗಿ , ಇಲ್ಲಿ ವಿಚಿತ್ರವಾದ ಸಾಧನಗಳನ್ನು ನೆಟ್ಟಿದ್ದಾರೆ .ಇಂಥ ಹತ್ತೆಂಟು ವಿಧದ ಸಾಧನಗಳ ವಿಚಿತ್ರ ರಚನೆಗಳಿವೆ . ಗಳಿಗೆ ಅಳೆಯವುದಕ್ಕೆ , ಪ್ರತಿಯೊಂದು ತಿಂಗಳಿನಲ್ಲೂ ಸೂರ್ಯ , ನಕ್ಷತ್ರಗಳ ಗತಿ ಪರಿಶೀಲಿಸುವುದಕ್ಕೆ ಏನೇನೋ ಏರ್ಪಾಟುಗಳಿವೆ . ಪ್ರತಿಯೊಂದು ಸಾಧನದ ಮೇಲೂ ಅವುಗಳ ಉಪಯೋಗ ಮತ್ತು ಕಾಲವನ್ನು ಅಳೆಯುವ ರೀತಿ ಮೊದಲಾದುವನ್ನು ನಮೂದಿಸಿದೆ .ದೂರದರ್ಶಿಯ ಸಹಾಯವಿಲ್ಲದೆ , ಬರಿಗಣ್ಣಿನಿಂದಲೇ ಖಗೋಳದ ಗ್ರಹಗಳ ಗತಿಯನ್ನು ಅಳೆಯಲು ಮಾಡಿದ ಈ ಸಾಧನಗಳು , ಗಣಿತಕ್ಕೂ ಸೂಕ್ಷ್ಮ ಪರಿಶೀಲನೆಗೂ ಹಿರಿಯರು ಸಲ್ಲಿಸಿದ ಕಾಣಿಕೆ .
1. “ ಅಲ್ಲಿ ಮಧ್ಯಾಹ್ನ ವೇಳ ಸ್ನಾನಕ್ಕೆ ನೀರು ಕಾಯಿಸುವ ಅಗತ್ಯವಿಲ್ಲ .
ಆಯ್ಕೆ : ಈ ವಾಕ್ಯವನ್ನು ಶಿವರಾಮಕಾರಂತರ ‘ ಅಬುವಿನಿಂದ ಬರಾಮಕ್ಕೆ ‘ ಕೃತಿಯಿಂದ ಆಯ್ದ ` ಬೆಡಗಿನತಾಣ ಜಯಪುರ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಜಯಪುರದಲ್ಲಿ ನ ಲೇಖಕರ ಸ್ನೇಹಿತರಾದ ರೈಗಳ ಮನೆಯು ಸುತ್ತಲೂ ಉಸುಬು ಹರಡಿದ್ದ ಮರುಭೂಮಿಯ ಪ್ರದೇಶದಲ್ಲಿತ್ತು . ಇಲ್ಲಿಉಸುಬಿನ ಕಾವಿನಿಂದ ನಲ್ಲಿಯ ನೀರು ಕಾದೇ ಬರುತ್ತಿತ್ತು . ಆ ಸಂದರ್ಭದಲ್ಲಿ ಲೇಖಕರು ಮಧ್ಯಾಹ್ನ ವೇಳೆ ಸ್ನಾನಕ್ಕೆ ನೀರು ಕಾಯಿಸುವ ಅಗತ್ಯವಿಲ್ಲ ,ಎಂಬ ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ಜಯಪುರದ ಬಿಸಿಲಿನ ತಾಪವನ್ನು ಸ್ವಾರಸ್ಯಕರವಾಗಿ ವರ್ಣಿಸಲಾಗಿದೆ.
2 “ ಗಂಡಸರೂ ರಂಗರಾಯರೇ “
ಆಯ್ಕೆ : ಆಯ್ಕೆ : ಈ ವಾಕ್ಯವನ್ನು ಶಿವರಾಮಕಾರಂತರ ‘ ಅಬುವಿನಿಂದ ಬರಾಮಕ್ಕೆ ‘ ಕೃತಿಯಿಂದ ಆಯ್ದ ` ಬೆಡಗಿನತಾಣ ಜಯಪುರ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಜಯಪುರದ ಜನರಿಗೆ ಬಣ್ಣಗಳ ಮೇಲೆ ಅಪಾರವಾದ ಮೋಹ , ಇವರಿಗೆ ಕೆಂಪು , ಕಿತ್ತಳೆ , ಹಳದಿ ಎಂದರೆ ಪ್ರಾಣ . ಇಲ್ಲಿನ ಹೆಂಗಸರು ಬಣ್ಣಬಣ್ಣದ ಲಂಗ , ಪಾಯಿಜಾಮಾ , ಸೀರೆ , ರವಿಕೆ , ಮೇಲುದೆ ತೊಡುತ್ತಾರೆ . ಗಂಡಸರೂ ಸಹ ಬಣ್ಣಬಣ್ಣದ ಅಂಗಿ , ಮಂಚಿ , ಮುಂಡಾಸನ್ನು ಧರಿಸಿ ರಂಗು ರಂಗಾಗಿ ಕಾಣುತ್ತಾರೆ .ಎಂದು ಹೇಳುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ಜಯಪುರವು ಗಿಡಮರಗಳಿಲ್ಲದ ಊರು . ಇಲ್ಲಿ ವಾಸಿಸುವ ಜನರಿಗೆ , ಕಣ್ಣಿನ ತಣಿವು ಹೇಗೆ ಬರಬೇಕು , ಆದ್ದರಿಂದ ಇಲ್ಲಿನ ಜನರು ಬಟ್ಟೆಗಳಲ್ಲಿ ಬಣ್ಣಗಳನ್ನು ಕಾಣುವುದನ್ನು ಸ್ವಾರಸ್ಯಕರವಾಗಿ ಲೇಖಕರು ಹೇಳಿದ್ದಾರೆ .
3 , “ ಪ್ರಾಚೀನ ಗುಡಿಗೋಪುರಗಳು ಗೂಬೆಯ ಮನೆಗಳಾಗಿದ್ದವು ”
ಆಯ್ಕೆ : ಆಯ್ಕೆ : ಈ ವಾಕ್ಯವನ್ನು ಶಿವರಾಮಕಾರಂತರ ‘ ಅಬುವಿನಿಂದ ಬರಾಮಕ್ಕೆ ‘ ಕೃತಿಯಿಂದ ಆಯ್ದ ` ಬೆಡಗಿನತಾಣ ಜಯಪುರ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಲೇಖಕರು ಹದಿನೈದು ವರ್ಷಗಳ ಹಿಂದೊಮ್ಮೆ ಜಯಪುರಕ್ಕೆ ಹೋಗಿದ್ದರು . ಆಗ ಅಂಬೇರ ಬೆಟ್ಟದಲ್ಲಿ ಜನವಸತಿ ಇದ್ದಿರಲಿಲ್ಲ . ಹಲವಾರು ಪ್ರಾಚೀನ ಗುಡಿಗೋಪುರಗಳು ಗೂಬೆಯ ಮನೆಗಳಾಗಿದ್ದವು . ಇದನ್ನು ನೋಡಿದ ಸಂದರ್ಭದಲ್ಲಿ ಈ ಮಾತನ್ನು ಲೇಖಕರು ಹೇಳಿದ್ದಾರೆ .
ಸ್ವಾರಸ್ಯ : ಜಯಪುರವು ದಿನದಿಂದಕ್ಕೆ ಅಭಿವೃದ್ಧಿಯಾಗಿದೆ . ಈಗ ಜಯಪುರದ ಅಂಬೇರ ಬೆಟ್ಟದಲ್ಲಿ ಗುಡಿಗೋಪುರದಲ್ಲಿ ದೇವರಿಗೆ ಪೂಜೆ ಸಲ್ಲಿಸುತ್ತಿರುವ ಅಂಶ , ಜನರು ಅಲ್ಲಿ ವಾಸಿಸುವ ಅಂಶ ಸ್ವಾರಸ್ಯಕರವಾಗಿದೆ .
4 “ ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತದೆ ”
ಆಯ್ಕೆ : ಆಯ್ಕೆ : ಈ ವಾಕ್ಯವನ್ನು ಶಿವರಾಮಕಾರಂತರ ‘ ಅಬುವಿನಿಂದ ಬರಾಮಕ್ಕೆ ‘ ಕೃತಿಯಿಂದ ಆಯ್ದ ` ಬೆಡಗಿನತಾಣ ಜಯಪುರ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಮೂರನೆಯ ಅಂತಸ್ತಿನಲ್ಲಿ ರಾಜರ ಅಂತಃಮರ ಇದೆ . ಈ ಅರಮನೆಯ ಚಾವಡಿಗಳಿಗೆ ಕನ್ನಡಿಯ ಚೂರುಗಳನ್ನು ಸುಣ್ಣದ ಗಾರೆಯಲ್ಲಿ ಅಂಟಿಸಿ , ಚಿತ್ರವಿಚಿತ್ರ ಪ್ರತಿರೂಪಗಳನ್ನು ನಿರ್ಮಿಸಿ ಅಲಂಕರಿಸಿದಂತಹ ಕಂಬ , ಮುಚ್ಚಿಕೆಗಳುಳ್ಳ ರಚನೆ . ಕತ್ತಲಿನಲ್ಲಿ ದೀವಿಗೆ ಹೊತ್ತಿಸಿದಾಗ , ಲಕೋಪಲಕ್ಷ ಈ ಗಾಜಿನ ತುಣುಕುಗಳು , ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತವೆ , ಆ ಸಂದರ್ಭದಲ್ಲಿ ಈ ಮಾತನ್ನು ಲೇಖಕರು ಹೇಳಿದ್ದಾರೆ .
ಸ್ವಾರಸ್ಯ : ರಜಪೂತ ಅರಸರುಗಳು ತಮ್ಮ ಅಂತಃಮರದಲ್ಲಿಯೇ ನಕ್ಷತ್ರಲೋಕವನ್ನು ಸೃಷ್ಟಿಸಿರುವುದು . ಅವರ ರಸಿಕ ಜೀವನದ ದ್ಯೋತಕವಾಗಿರುವುದನ್ನು ಲೇಖಕರು ಸ್ವಾರಸ್ಯಕರವಾಗಿ ವರ್ಣಿಸಿದ್ದಾರೆ .