No title
Author -
personಮಂಜುನಾಥ.ಎಲ್.ಈ
10:25 PM
0
share
ಮಂಜುನಾಥ.ಎಲ್.ಈ
ನಾನು ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮ ಹೋಬಳಿಯ ಕಾವೇರಿ ನದಿ ದಂಡೆಯಲ್ಲಿರುವ ಲಕ್ಷ್ಮೀಪುರ ಗ್ರಾಮದಲ್ಲಿ 1977 ರಲ್ಲಿ ಜನಿಸಿದೆ.ತಂದೆ ಈರಯ್ಯ ತಾಯಿ ಸಣ್ಣದೇವಮ್ಮ .ನನ್ನ ಶಿಕ್ಷಣ ಹುಟ್ಟೂರು, ಹೊಳೇನರಸಿಪುರ,ಸಾಲಿಗ್ರಾಮ,ಕೆ.ಆರ್.ನಗರ,ಮತ್ತು ಮೈಸೂರಿನಲ್ಲಿ ಆಯಿತು.
1998 ರ ಆಗಸ್ಟ್ ನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕೆಡಗ ಸ.ಹಿ.ಪ್ರಾ.ಶಾಲೆಯಲ್ಲಿ ವೃತ್ತಿ ಜೀವನ ಆರಂಭ .ಪ್ರಸ್ತುತ ಸ.ಪ್ರೌ.ಶಾಲೆ ಅಂಕನಹಳ್ಳಿ ಚುಂಚನಕಟ್ಟೆ ಹೋಬಳಿ ಇಲ್ಲಿ ಕನ್ನಡ ಭಾಷಾ ಶಿಕ್ಷಕನಾಗಿ ( ಬಡ್ತಿ) ಕರ್ತವ್ಯ ನಿರ್ವಹಿಸುತ್ತಿದ್ದೇನೆ.
ಕನ್ನಡ ದಲ್ಲಿ ಎಂ.ಎ ಪದವಿ ಪಡೆದಿರುವ ನಾನು ಯು.ಜಿ.ಸಿ ನೆಟ್ ಪರೀಕ್ಷೆಯಲ್ಲಿ 2013ರ ಡಿಸೆಂಬರ್ ನಲ್ಲಿ ಉತ್ತೀರ್ಣನಾಗಿರುವೆ.ಯಾವುದೇ ಗಣಕಯಂತ್ರ ಕಲಿಕಾ ತರಗತಿಗಳಿಗೆ ಹಾಜರಗದಿದ್ದರೂ ಮೈಸೂರಿನ ಡಯಟ್ ನಲ್ಲಿ ಪಡೆದ STF,, ಹಾಗೂ TALPತರಬೇತಿಗಳ ನೆರವಿನೊಂದಿಗೆ ನನ್ನ ತರಗತಿಯ ಬೋಧನೆ ಮತ್ತು ಕಲಿಕೆಗೆ ಬೇಕಾದ ಸಾಮಾಗ್ರಿಗಳೆಲ್ಲವೂ ಒಂದೆಡೆ ದೊರಕಲೆಂಬ ಸದಾಶಯದೊಂದಿಗೆ ಈ ಬ್ಲಾಗ್ ತೆರೆದಿದ್ದೇನೆ .ನೋಡಿ ಸಲಹೆ ನೀಡಿ ಪ್ರೋತ್ಸಾಹಿಸಿ