ಕ್ರಿಯಾಪದದೊಂದಿಗೆ ನಾಮಪದದ ಸಂಬಂಧವನ್ನು ತಿಳಿಸುವ ಕರ್ತೃ, ಕರ್ಮ, ಕರಣ ಮುಂತಾದ ಕಾರಕಾರ್ಥ ವನ್ನು ವಿಭಜಿಸಿ ಹೇಳುವ ಪ್ರತ್ಯಯಗಳೇ ವಿಭಕ್ತಿಪ್ರತ್ಯಯಗಳು.
ಕಾರಕಾರ್ಥಗಳು
1 ಪ್ರಥಮಾ ವಿಭಕ್ತಿ ; ಕತ್ರಾರ್ಥದಲ್ಲಿ
ಈ ವಿಭಕ್ತಿ ಪ್ರತ್ಯಯಗಳು ನಾಮಪ್ರಕೃತಿಗೆ ಬಂದು ಸೇರುವಾಗ ಹೆಚ್ಚಾಗಿ `ಅ’ ಕಾರಾಂತ ಪದಗಳಿಗೆ `ನ’ ಕಾರವೂ (ರಾಮನು, ರಾಮನನ್ನು, ರಾಮನಲ್ಲಿ ಇತ್ಯಾದಿ) `ಎ’ ಕಾರಾಂತ ಪದಗಳಿಗೆ `ಯ’ ಕಾರವೂ (ಮನೆಯು, ಮನೆಯಿಂದ, ಮನೆಯ, ಮನೆಯಲ್ಲಿ)ಆದೇಶವಾಗಿ ಬರುತ್ತವೆ.
ವಿಭಕ್ತಿ ಪಲ್ಲಟ :
ನಾವು ಮಾತನಾಡುವಾಗ ಪ್ರಕೃತಿಗಳಿಗೆ ಯಾವ ವಿಭಕ್ತಿ ಪ್ರತ್ಯಯವನ್ನು ಬಳಸಬೇಕೋ ಅದನ್ನು ಬಳಸದೆ ಬೇರೆ ವಿಭಕ್ತಿ ಪ್ರತ್ಯಯವನ್ನು ಬಳಸಿ ಮಾತಾನಾಡುವುದುಂಟು. ಹೀಗೆ ಒಂದು ವಿಭಕ್ತಿ ಪ್ರತ್ಯಯದ ಬದಲಿಗೆ ಅರ್ಥ ವ್ಯತ್ಯಾಸವಾಗದಂತೆ ಇನ್ನೊಂದು ವಿಭಕ್ತಿ ಪ್ರತ್ಯಯವನ್ನು ಬಳಸುವ ಕ್ರಮಕ್ಕೆ ‘ವಿಭಕ್ತಿ ಪಲ್ಲಟ’ ಎಂದು ಹೇಳುತ್ತೇವೆ.
ದ್ವಿತೀಯಾ ಬದಲಿಗೆ ಚತುರ್ಥೀ ವಿಭಕ್ತಿ ಸೇರಿದಾಗ -
ಊರನ್ನು ಸೇರಿದನು (ದ್ವಿತೀಯಾ) ಊರಿಗೆ ಸೇರಿದನು (ಚತುರ್ಥೀ)
- ಬೆಟ್ಟವನ್ನು ಹತ್ತಿದನು (ದ್ವಿತೀಯಾ) ಬೆಟ್ಟಕ್ಕೆ ಹತ್ತಿದನು. (ಚತುರ್ಥೀ)
ಪಂಚಮೀ ಬದಲಿಗೆ ತೃತೀಯಾ ವಿಭಕ್ತಿ ಸೇರಿದಾಗ –
- ಮರದ ದೆಸೆಯಿಂದ ಹಣ್ಣು ಬಿತ್ತು (ಪಂಚಮೀ)
ಮರದಿಂದ ಹಣ್ಣು ಬಿತ್ತು (ತೃತೀಯಾ)
- ಕೌರವನ ದೆಸೆಯಿಂದ ಕೇಡಾಯ್ತು (ಪಂಚಮೀ)
ಕೌರವನಿಂದ ಕೇಡಾಯ್ತು (ತೃತೀಯಾ)
ಷಷ್ಠೀ ಬದಲಿಗೆ ಚತುರ್ಥೀ ವಿಭಕ್ತಿ ಸೇರಿದಾಗ
- ನಮ್ಮ ಚಿಕ್ಕಪ್ಪ (ಷಷ್ಠೀ) ನಮಗೆ ಚಿಕ್ಕಪ್ಪ (ಚತುರ್ಥೀ)
- ಅಯೋಧ್ಯೆಯ ರಾಜ (ಷಷ್ಠೀ) ಅಯೋಧ್ಯೆಗೆ ರಾಜ (ಚತುರ್ಥೀ)