೮ ನೆಯ ತರಗತಿ ಸೇತುಬಂಧ ಶಿಕ್ಷಣ 2023-24 ಪ್ರಥಮಭಾಷೆ - ಕನ್ನಡ
ಪರಿಹಾರ ಬೋಧನೆ
—-----------------------------------------------------------------------------------------------------------------------------------------
ಬುನಾದಿ ಸಾಮರ್ಥ್ಯ : 4
ವಿಶಿಷ್ಟ ಪದಪುಂಜಗಳ ವಿವರಣೆ, ಹೊಸ ಪರಿಕಲ್ಪನೆ, ಸಮಾನಾರ್ಥಕ, ಭಿನ್ನಾರ್ಥಕ, ಅನೇಕಾರ್ಥ ಪದಗಳನ್ನುಗ್ರಹಿಸಿ, ಸ್ವತಂತ್ರವಾಗಿ ವಾಕ್ಯಗಳಲ್ಲಿ ಬಳಸುವ ಸಾಮರ್ಥ್ಯವನ್ನು ಹೆಚ್ಚಿಸುವುದು.
ನಾನಾರ್ಥಕ ಪದ :ಕನ್ನಡದಲ್ಲಿ ಕೆಲವು ಪದಗಳು ವಿವಿಧ ಅರ್ಥಗಳನ್ನು ನೀಡುತ್ತವೆ. ಇವನ್ನು ನಾವು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳಬೇಕು / ಅರ್ಥೆÊಸಿಕೊಳ್ಳಬೇಕು. ಹೀಗೆ ಒಂದೇ ಪದಕ್ಕೆ ಅನೇಕ ಅರ್ಥಗಳಿರುವುದನ್ನು‘‘ನಾನಾರ್ಥಕ ಪದ’’ಗಳೆನ್ನುತ್ತೇವೆ.
ಉದಾಹರಣೆ : ೧. ಬಟ್ಟೆ = ವಸ್ತ್ರ, ದಾರಿ
೨. ಅರಸು = ದೊರೆ, ಹುಡುಕು
೩. ಅಜ = ಆಡು, ಬ್ರಹ್ಮ
೪. ಕರ = ತೆರಿಗೆ, ಕೈ
೫. ಮುನಿ = ಸಿಟ್ಟು, ಋಷಿ
೬. ಕಾಡು = ಅರಣ್ಯ, ಪೀಡಿಸು
೭. ಬಳಿ = ಹತ್ತಿರ, ಲೇಪಿಸು
೮. ಅಂಬರ = ಬಟ್ಟೆ, ಆಕಾಶ
೯. ಅಡಿ = ಅಳತೆ ,ಪಾದ
೧೦. ನೆತ್ತಿ = ತಲೆ, ಶಿಖರ
೧೧. ಗುಡಿ = ಬಾವುಟ, ಮಂದಿರ
೧೨. ಊರು = ಹಳ್ಳಿ, ತೊಡೆ
೧೩. ಬೀಗ = ಕೀಲಿ, ನೆಂಟ
೧೪. ಸರಿ = ಚಲಿಸು, ಸೂಕ್ತ
೧೫. ಮಠ = ಶಾಲೆ, ಆಶ್ರಮ
೧೬. ಗಜ = ಆನೆ, ಅಳತೆ
ಸಮಾನಾರ್ಥಕ ಪದಗಳು : ಕನ್ನಡದಲ್ಲಿ ಒಂದೇ ಅರ್ಥವನ್ನು ಕೊಡುವ ಅನೇಕ ಪದಗಳಿವೆ. ಇಂತಹ ಪದಗಳಿಗೆ “ಸಮಾನಾರ್ಥಕ ಪದ” ಗಳೆನ್ನುವರು
ವೃತ್ತದೊಳಗಿನ ಪದಕ್ಕೆ ಅದೇ ಅರ್ಥ ಬರುವ ಪದಗಳೊಂದಿಗೆ ಗೆರೆ ಎಳೆದು ಜೋಡಿಸಿ.
ಮಾದರಿ :
ಅ. ಚಿತ್ರ ಗಮನಿಸಿ ಪದ ಬರೆಯಿರಿ.
ಮಾದರಿ : ವಾಸುವಿಗೆ ವ್ಯಾಪಾರದಲ್ಲಿ ನಷ್ಟ ಉಂಟಾಯಿತು.
ವಾಸುವಿನ ಅಣ್ಣನಿಗೆ ವ್ಯಾಪಾರದಲ್ಲಿ ಲಾಭ ಉಂಟಾಯಿತು.
೧. ರಾಧಾಳು ಲಕ್ಷಿö್ಮಯ ಹಿರಿಯ ಅಕ್ಕ.
ಲಕ್ಷಿö್ಮಯು ರಾಧಾಳ __________________ ತಂಗಿ.
೨. ಈ ಚೀಲ ತುಂಬಾ ಭಾರ ವಾಗಿದೆ.
ಆ ಚೀಲ ತುಂಬಾ _____________ ವಾಗಿದೆ.
೩. ವರುಣನ ಹಿಂದೆ ರವಿಯು ಕುಳಿತಿದ್ದನು.
ರವಿಯ _____________ ವರುಣನು ಕುಳಿತಿದ್ದನು.
೪. ಶುದ್ಧವಾದ ಗಾಳಿಯನ್ನೇ ಸೇವಿಸಬೇಕು.
______________ ಗಾಳಿಯನ್ನು ಸೇವಿಸಬಾರದು.
೫. ನಮ್ಮ ಮನೆ ಶಾಲೆಯಿಂದ ದೂರವಿದೆ.
ರಶ್ಮಿಯ ಮನೆ ಶಾಲೆಗೆ _______________ ಇದೆ.
೬. ಶಾಲೆಯ ಹೊರಗೆ ಆಟದ ಮೈದಾನವಿದೆ.
ನಾವು ಶಾಲೆಯ __________________ ಕುಳಿತು ಪಾಠ ಕೇಳುತ್ತೇವೆ.
೭. ಶ್ರದ್ಧೆಯಿಂದ ಓದಿದ್ದರಿಂದ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳು ಬಂದವು.
ಶ್ರದ್ಧೆಯಿಲ್ಲದ ಓದಿನಿಂದ ನನಗೆ ಪರೀಕ್ಷೆಯಲ್ಲಿ ___________ ಅಂಕಗಳು ಬಂದವು.
ರೈತನಿಗೆ ಮಳೆ ಬಾರದೆ ಇದ್ದುದ್ದರಿಂದ ತುಂಬಾ __________ ಉಂಟಾಯಿತು.
ಮೌಲ್ಯಮಾಪನ ಚಟುವಟಿಕೆಗಳು
[ ಹೊರಗೆ, ಭಾರ, ಮುಂದೆ, ಲಾಭ ]
೧. ಚೈತ್ರಳು ಬಸ್ಸಿನೊಳಗೆ ಹಿಂದೆ ಕುಳಿತಿದ್ದರೆ, ರಶ್ಮಿಯು ಬಸ್ಸಿನೊಳಗೆ __________
ಕುಳಿತಿದ್ದಳು.
೨. ವೇಣುವಿನ ಕೈ ಚೀಲ ತುಂಬಾ ಹಗುರವಾಗಿತ್ತು. ಆದರೆ ವಿಶ್ವಾಸನ ಕೈ ಚೀಲ ತುಂಬ
_________ ಆಗಿತ್ತು.
೩. ಅಜ್ಜಿಯು ಮನೆ ಒಳಗೆ ಕುಳಿತು ಪತ್ರಿಕೆ ಓದುತ್ತಿದ್ದಳು. ಆದರೆ ಅಜ್ಜನು ಮನೆಯ__________
ಕುಳಿತು ಪತ್ರಿಕೆ ಓದುತ್ತಿದ್ದನು.
೪. ಹೋದ ವರ್ಷ ಶಂಕರನಿಗೆ ವ್ಯಾಪಾರದಲ್ಲಿ ನಷ್ಟ ಉಂಟಾಯಿತು. ಆದರೆ ಈ ವರ್ಷ
ಅವನಿಗೆ ______ ಆಗಿರುತ್ತದೆ.