9 ನೆಯ ತರಗತಿ ಸೇತುಬಂಧ ಶಿಕ್ಷಣ ಪ್ರಥಮಭಾಷೆ ಕನ್ನಡ
ಪರಿಹಾರ ಬೋಧನೆ.
-----------------------------------------------------------------
ಬುನಾದಿ ಸಾಮರ್ಥ್ಯ : 4 ಸರಳ ವ್ಯಾಕರಣಾಂಶಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ
ಲೇಖನಚಿಹ್ನೆಗಳ ಬಗ್ಗೆ ತಿಳಿಯಿರಿ.
ಬರವಣ ಗೆಯಲ್ಲಿ ಲೇಖನ ಚಿಹ್ನೆಗಳ ಪಾತ್ರ ಅತ್ಯಂತ ಮುಖ್ಯವಾದದ್ದು, ಲೇಖನ ಚಿಹ್ನೆಗಳಿಲ್ಲದ
ಬರವಣ ಗೆ ಸ್ಪಷ್ಟಾರ್ಥವನ್ನು ಕೊಡದೆ ತೊಡರುಗಳಿಗೆ ಕಾರಣವಾಗುವುದುಂಟು. ಹಾಗಾಗಿ ಲೇಖನ
ಚಿಹ್ನೆಗಳು ಅತ್ಯಂತ ಅಗತ್ಯ. ಇಲ್ಲಿ ಕೊಟ್ಟಿರುವ ವಿವರಗಳನ್ನು ಗಮನಿಸೋಣ.
೧. ಪೂರ್ಣವಿರಾಮ (.): ಒಂದು ಪೂರ್ಣ ಕ್ರಿಯೆಯಿಂದ ಕೂಡಿದ ವಾಕ್ಯದ ಕೊನೆಯಲ್ಲಿ ಈ
ಪೂರ್ಣ ವಿರಾಮ ಚಿಹ್ನೆಯನ್ನು ಬಳಸಬೇಕು.
ಉದಾ: ವಿದ್ಯಾರ್ಥಿಗಳು ಪದ್ಯವನ್ನು ಹಾಡುತ್ತಾರೆ.
೨. ಅರ್ಧವಿರಾಮ (;): ಅನೇಕ ಉಪವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದಾಗ
ಉಪವಾಕ್ಯಗಳು ಮುಗಿದಾಗಲೆಲ್ಲ ಈ ಚಿಹ್ನೆಯನ್ನು ಬಳಸಲಾಗುವುದು.
೩. ಅಲ್ಪವಿರಾಮ (,): ಸಂಬೋಧನೆಯ ಮುಂದೆ ಹಾಗೂ ಕರ್ತೃ, ಕರ್ಮ, ಕ್ರಿಯಾ ಪದಗಳಿಗೆ ಬೇರೆ
ಬೇರೆ ವಿಶೇಷಣಗಳು ಬರುವಾಗ ಕೊನೆಯ ವಿಶೇಷಣ ಬಿಟ್ಟು ಉಳಿದವುಗಳ ಮುಂದೆ
ಅಲ್ಪವಿರಾಮ ಬಳಸಬೇಕು.
ಉದಾ: ಬಟ್ಟೆಗಿರಣ , ರಟ್ಟು, ಪೆನ್ಸಿಲ್, ಬೆಂಕಿಕಡ್ಡಿ ತಯಾರಿಕಾ ಘಟಕಗಳನ್ನು ಸ್ಥಾಪಿಸಲಾಗಿದೆ.
೪. ಪ್ರಶ್ನಾರ್ಥಕ (?): ಪ್ರಶ್ನೆ ರೂಪದ ಪದ ಮತ್ತು ವಾಕ್ಯಗಳ ಮುಂದೆ ಪ್ರಶ್ನಾರ್ಥಕ ಚಿಹ್ನೆಯನ್ನು
ಬಳಸಲಾಗುವುದು.
ಉದಾ: ಧನಂಜಯ ಯಾರ ಮಗ?
೫. ಭಾವಸೂಚಕ ಚಿಹ್ನೆ (!): ಹರ್ಷ, ಆಶ್ಚರ್ಯ, ಸಂತೋಷ, ವಿಷಾದ, ದುಃಖ ಮುಂತಾದ
ಭಾವನೆಗಳನ್ನು ಸೂಚಿಸುವ ಪದಗಳ ಮುಂದೆ ಈ ಚಿಹ್ನೆಯನ್ನು ಬಳಸಲಾಗುವುದು.
ಉದಾ: ಅಯ್ಯೋ! ಹೀಗಾಗಬಾರದಿತ್ತು!
೬. ಉದ್ಧರಣ (“ ’’): ಒಬ್ಬರು ಹೇಳಿದ ಮಾತನ್ನೇ ಯಥಾವತ್ತಾಗಿ ಬರೆಯುವಾಗ ಈ ಚಿಹ್ನೆಯನ್ನು
ಬಳಸಲಾಗುವುದು.
ಉದಾ: “ಶಿಕ್ಷಣವು ಕೆಲವೇ ಜನರ ಸೊತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ
ಹಕ್ಕಾಗಬೇಕು” ಎಂದು ಸರ್.ಎಂ.ವಿಶ್ವೇಶ್ವರಯ್ಯನವರು ಹೇಳಿದರು.
೭. ವಾಕ್ಯ ವೇಷ್ಠನ ಚಿಹ್ನೆ (‘ ’) : ಪಾರಿಭಾಷಿಕ ಪದಗಳನ್ನು ಬಳಸುವಾಗ, ಅನ್ಯಭಾಷೆಯ
ಪದಗಳನ್ನು ಬಳಸುವಾಗ ಪ್ರಮುಖ ಪದಗಳನ್ನು ಸೂಚಿಸುವಾಗ ಈ ಚಿಹ್ನೆಯನ್ನು
ಬಳಸಲಾಗುವುದು.
ಉದಾ: ಕನ್ನಡ ಭಾಷೆಯಲ್ಲಿ 'ಇಂಗ್ಲೀಷ್' 'ಪರ್ಷಿಯನ್' 'ಪೋರ್ಚುಗೀಸ್' ಭಾಷೆಗಳ
ಪದಗಳನ್ನು ಬಳಸಲಾಗುತ್ತದೆ.
೮. ಆವರಣ ಚಿಹ್ನೆ ( ): ಒಂದು ಪದವನ್ನೋ ವಾಕ್ಯವನ್ನೋ ಹೇಳಿ ಅದಕ್ಕೆ ಸಮಾನಾರ್ಥಕ
ಪದವನ್ನೋ ವಾಕ್ಯವನ್ನೋ ಹೇಳುವಾಗ ಈ ಚಿಹ್ನೆಯನ್ನು ಬಳಸಲಾಗುತ್ತದೆ.
ಉದಾ: ನೀರನ್ನು ವಿಭಜಿಸಿದರೆ ಆಮ್ಲಜನಕ (ಆಕ್ಸಿಜನ್) ಜಲಜನಕ. (ಹೈಡ್ರೋಜನ್)ಗಳು
ಉತ್ಪತ್ತಿಯಾಗುತ್ತವೆ.
೯. ವಿವರಣಾತ್ಮಕ ಚಿಹ್ನೆ :- : ಒಂದು ಅಭಿಪ್ರಾಯದ ವಿವರಣೆ ಮುಂದೆ ತಿಳಿಸಿದಂತೆ ಇದೆ ಎಂದು
ತೋರಿಸುವ ಸಂದರ್ಭದಲ್ಲಿ ಈ ಚಿಹ್ನೆಯನ್ನು ಬಳಸಲಾಗುತ್ತದೆ.
ಉದಾ: ಪಂಚ ಮಹಾವಾದ್ಯಗಳು: ತಾಳ, ಹಳಗ, ಗಂಟೆ, ಮೌರಿ, ಸನಾದಿ
ಉ) ಈ ವಾಕ್ಯಗಳಿಗೆ ಸೂಕ್ತ ಲೇಖನ ಚಿಹ್ನೆ ಹಾಕೋಣ :-
೧. ಮೈಸೂರಿನಲ್ಲಿ ದಸರಾ ಉತ್ಸವ ನಡೆಯುತ್ತಿದೆ
೨. ಛೀ ರಸ್ತೆಯಲ್ಲೇ ಕಸ ಎಸೆಯುತ್ತಿದ್ದಾರೆ
೩. ನಾಳೆ ಶಾಲೆಗೆ ರಜೆ ಇದೆ ಎಂದು ಮುಖ್ಯ ಗುರುಗಳು ತಿಳಿಸಿದರು
೪. ಆಹಾ ಈ ಹುಡುಗಿ ಎಷ್ಟೊಂದು ಘಾಟಿ
೫. ಶಾರುಕ್ಖಾನ್ ಇಂದು ಏಕೆ ಶಾಲೆಗೆ ಬರಲಿಲ್ಲ
೬. ಕುವೆಂಪುರವರಿಗೆ ಪಂಪ ಪ್ರಶಸ್ತಿ ರಾಷ್ಟçಕವಿ ಪ್ರಶಸ್ತಿ ಕರ್ನಾಟಕ ರತ್ನ ಮುಂತಾದಪ್ರಶಸ್ತಿಗಳು ಸಂದಿವೆ
ಋ) ಈ ಕೆಳಗಿನ ಗದ್ಯಭಾಗ ಓದಿ ಅಗತ್ಯ ಇರುವ ಕಡೆ ಸೂಕ್ತ ಲೇಖನ ಚಿಹ್ನೆ ಹಾಕಿರಿ.
ಪ್ರಸನ್ನ ಕುಮಾರ ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿ ಈತನನ್ನು ಎಲ್ಲಾ ಗೆಳೆಯರು ಗಾಂಧಿ ಎಂದೇ
ಕರೆಯುತ್ತಿದ್ದರು ಪ್ರಸನ್ನ ಕುಮಾರನನ್ನು ಆರೀತಿ ಗೆಳೆಯರು ಕರೆಯಲು ಕಾರಣವಿದೆ ಆತ ಮನೆ
ಅಂಗಡಿ ಶಾಲೆ ತೋಟ ಎಲ್ಲೇ ಹೋದರೂ ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದನು
ಶಾಲೆಯ ಬಳಿ ಯಾರಾದರೂ ಗಲೀಜು ಮಾಡುವುದನ್ನು ಕಂಡರೆ ನೀವು ಏಕೆ ಇಲ್ಲಿ ಗಲೀಜು
ಮಾಡುತ್ತೀರಿ ಇದು ನಮ್ಮ ಶಾಲೆ ಎಂದು ಸ್ವಾಭಿಮಾನದಿಂದ ಕೇಳಿಯೇ ಬಿಡುತ್ತಿದ್ದನು ಆತನಿಗೆ
ಸಂಗೀತ ಸಾಹಿತ್ಯ ಚಿತ್ರಕಲೆ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ ಈತ ಸದಾ ಚಟುವಟಿಕೆ ಇಂದ ಕೂಡಿದ
ವಿದ್ಯಾರ್ಥಿಯಾಗಿದ್ದನು ಒಮ್ಮೆ ತನ್ನ ಸಹಪಾಠಿ ಜಾರಿಬಿದ್ದಾಗ ಅಯ್ಯೋ ಎಂದು ಚೀರುತ್ತಾ ಓಡಿ
ಆತನನ್ನು ಹಿಡಿದೆತ್ತಿದ್ದನು ಆತನ ಗುಣ ನಡತೆ ಗುರುತಿಸಿ ಶಾಲೆಯ ಮುಖ್ಯಗುರುಗಳು ವಿದ್ಯಾದೀಪ
ಪ್ರಶಸ್ತಿ ನೀಡಿ ಗೌರವಿಸಿದ್ದರು.
ಕೆಳಗಿನ ವಾಕ್ಯಗಳಲ್ಲಿ ಕರ್ತೃ, ಕರ್ಮ, ಕ್ರಿಯಾಪದಗಳನ್ನು ಆಯ್ದು ಬರೆಯಿರಿ.
ಈ ಕೆಳಗಿನ ಪದಗಳನ್ನು ಸರಿಯಾಗಿ ಜೋಡಿಸಿ ಅರ್ಥಪೂರ್ಣ ವಾಕ್ಯಗಳನ್ನು ಮಾಡಿ.
ಈ ಕೆಳಗಿನ ಪದಗಳನ್ನು ಅರ್ಥಪೂರ್ಣವಾಗಿ ಸೇರಿಸಿ ಪ್ರಶ್ನೆಗಳನ್ನು ರಚಿಸಿ ಅನಂತರ ಉತ್ತರಿಸಿರಿ.
ಕೆಳಗೆ ಕೊಟ್ಟಿರುವ ವಾಕ್ಯಗಳಲ್ಲಿ ಕರ್ಮ, ಕ್ರಿಯಾ, ಹಾಗೂ ಕರ್ತೃಪದಗಳನ್ನು ಆರಿಸಿ ಬರೆಯಿರಿ.
೧. ಅಮ್ಮ ಮಾವಿನಹಣ್ಣನ್ನು ತಿಂದಳು.
೨. ರಮೇಶನು ಬಸ್ಸಿನಲ್ಲಿ ಪ್ರಯಾಣ ಮಾಡಿದನು.
೩. ನಳಿನಾ ಪ್ರತಿ ದಿನವು ಶಾಲೆಗೆ ಹೋಗುತ್ತಿದ್ದಳು.
೪. ಕುದುರೆಯು ರಸ್ತೆಯಲ್ಲಿ ವೇಗವಾಗಿ ಓಡುತ್ತಿತ್ತು.
೫. ಅಜ್ಜಿಯು ರುಚಿಯಾದ ಕಾಫಿಯನ್ನು ಮಾಡಿಕೊಟ್ಟಳು.
ಸಂಧಿಗಳು
ಕನ್ನಡ ಸಂಧಿಗಳು
ಪೂರ್ವಪದ, ಉತ್ತರ ಪದಗಳಾದ ನಮ್ಮ ನಡುವೆ ಸ್ವರ ಬಿಟ್ಟುಹೋದರೆ ಲೋಪಸಂಧಿ ಎಂದು ಬರೆಯಬೇಕು. ಯ್, ವ ಎಂಬ ವ್ಯಂಜನ ಬಂದರೆ ಆಗಮ ಸಂಧಿ ಎಂದು ಬರೆಯಬೇಕು. ಒಬ್ಬರ ಬದಲಾಗಿ ಮತ್ತೊಂದು ವ್ಯಂಜನ ಬಂದರೆ ಆದೇಶ ಸಂಧಿ ಎಂದು ಬರೆಯಿರಿ
ಅಭ್ಯಾಸ
ಅ) ಈ ಕೆಳಗಿನ ವಾಕ್ಯಗಳಲ್ಲಿ ಗೆರೆ ಎಳೆದ ಪದಗಳನ್ನು ಬಿಡಿಸಿ ಬರೆಯಿರಿ.
೧. ಊರಲ್ಲಿ ಸಂಕ್ರಾAತಿ ಹಬ್ಬವನ್ನು ಮಾಡಿದರು.
೨. ರೈತರು ತೆನೆಯನ್ನು ಕೊಯ್ದು ಚೀಲದಲ್ಲಿ ತುಂಬಿದರು.
೩. ಮಳೆಗಾಲದಲ್ಲಿ ಹೊಲಗದ್ದೆಗಳು ಹಸಿರಾಗಿರುತ್ತವೆ.
೪. ಕೆರೆಯಲ್ಲಿ ನೀರು ತುಂಬಿದೆ.
೫. ಹುಲ್ಲುಗಾವಲಿನಲ್ಲಿ ದನ ಕರುಗಳು ಮೇಯುತ್ತಿವೆ.