ಕೃದಂತಗಳು
ಧಾತುಗಳಿಗೆ ಕೃತ್ಪ್ರತ್ಯಯಗಳು ಸೇರಿ ಕೃದಂತಗಳೆನಿಸುವುವು. ಇವಕ್ಕೆ ಕೃನ್ನಾಮಗಳೆಂದೂ ಹೆಸರು.
ಕೃದಂತಗಳು - ಕೃದಂತನಾಮ (ಕೃನ್ನಾಮ), ಕೃದಂತ ಭಾವನಾಮ, ಕೃದಂತಾವ್ಯಯಗಳೆಂದು ಮೂರು ವಿಧ.
(೧) ಕೃದಂತ ನಾಮಗಳು
ಧಾತುಗಳಿಗೆ ಕರ ಅರ್ಥಗಳಲ್ಲಿಸಾಮಾನ್ಯವಾಗಿ ‘ಅ’ ಎಂಬ ಕೃತ್ಪ್ರತ್ಯಯವು ಬರುವುದು. ಆಗ ಧಾತುವಿಗೂ ಕೃತ್ ಪ್ರತ್ಯಯಕ್ಕೂ ಮಧ್ಯದಲ್ಲಿ ವರ್ತಮಾನ, ಭವಿಷ್ಯತ್ ಕಾಲಗಳಲ್ಲಿ ‘ವ’ ‘ಉವ’ ಎಂಬ
ಕಾಲಸೂಚಕ ಪ್ರತ್ಯಯಗಳೂ, ಭೂತಕಾಲದಲ್ಲಿ ‘ದ’ ಎಂಬ ಕಾಲಸೂಚಕ ಪ್ರತ್ಯಯವೂ, ನಿಷೇಧರ್ಥದಲ್ಲಿ ‘ಅದ’ ಎಂಬುದೂ ಆಗಮಗಳಾಗುತ್ತವೆ. ಇವನ್ನೇ ಕೃದಂತನಾಮಗಳೆನ್ನುವರು.
(೧) ವರ್ತಮಾನ ಕೃದಂತಕ್ಕೆ-
ಮಾಡು + ವ + ಅ = ಮಾಡುವ
ತಿನ್ನು + ವ + ಅ = ತಿನ್ನುವ
ಬರೆ + ಉವ + ಅ = ಬರೆಯುವ
ಇದರಂತೆ-ಹೋಗುವ, ಬರುವ, ತಿನ್ನುವ, ನೋಡುವ, ಓಡುವ, ನಡೆಯುವ, ಕಾಣುವ,
ಕೊಡುವ
(೨) ಭೂತ ಕೃದಂತಕ್ಕೆ-
ಮಾಡು + ದ + ಅ = ಮಾಡಿದ
ತಿನ್ನು + ದ + ಅ = ತಿಂದ
ಹೋಗು + ದ + ಅ = ಹೋದ
ಇದರಂತೆ ಬರೆದ, ನೋಡಿದ, ನಡೆದ, ಕಂಡ, ಕರೆದ-ಇತ್ಯಾದಿ.
(೩) ನಿಷೇಧ ಕೃದಂತಕ್ಕೆ-
ಮಾಡು + ಅದ + ಅ = ಮಾಡದ
ತಿನ್ನು + ಅದ + ಅ = ತಿನ್ನದ
ಇದರಂತೆ ಹೋಗದ, ಬರದ, ನೋಡದ, ನುಡಿಯದ, ಬರೆಯದ-ಇತ್ಯಾದಿ.
೨) ಕೃದಂತಭಾವನಾಮಗಳು (ಭಾವಕೃದಂತ)
ಕೃದಂತಭಾವನಾಮಗಳು-ಧಾತುಗಳ ಮೇಲೆ ಭಾವಾರ್ಥದಲ್ಲಿ ಕೃತ್ ಪ್ರತ್ಯಯಗಳು ಸೇರಿ ಕೃದಂತ ಭಾವನಾಮಗಳೆನಿಸುವುವು.
ಧಾತು
+ |
ಭಾವಾರ್ಥದಲ್ಲಿ ಕೃತ್ಪçತ್ಯಯ |
ಕೃದಂತ
ಭಾವನಾಮ |
|
|
|
|
|
ಮಾಡು+ |
ವುದು |
=
ಮಾಡುವುದು
- ನೋಡುವುದು,
ತಿನ್ನುವುದು |
|
ತಿನ್ನು
+ |
ಇಕೆ |
=
ತಿನ್ನುವಿಕೆ
- ನೋಡುವಿಕೆ,
ಬರೆಯುವಿಕೆ,
ಕೊರೆಯುವಿಕೆ |
|
ಅಂಜು+ |
ಇಕೆ |
=
ಅಂಜಿಕೆ
- ನಂಬಿಕೆ,
ಹೊಗಳಿಕೆ,ತೆಗಳಿಕೆ,
ಆಳಿಕೆ,ನಾಚಿಕೆ,
ಬಳಲಿಕೆ, |
|
ಉಡು
+ |
ಇಗೆ |
=
ಉಡಿಗೆ
- ತೊಡಿಗೆ,
ಅಡಿಗೆ,ಮುತ್ತಿಗೆ,
ಹಾಸಿಗೆ,
ಏಳಿಗೆ |
|
ಉಡು
+ |
ಗೆ |
=
ಉಡುಗೆ
- ತೊಡುಗೆ,
ನಂಬುಗೆ,ಹೊಲಿಗೆ,
ಏಳ್ಗೆ |
|
ಬರು
+ |
ಅವು |
=
ಬರವು
- ಸೆಳವು,
ಮರವು,ಒಲವು,
ಕಳವು,
ತೆರವು |
|
ಸಾ
+ |
ವು |
=
ಸಾವು
- ನೋವು,
ಮೇವು,ದಣಿವು,
ಅರಿವು |
|
ಕೊರೆ
+ |
ತ |
=
ಕೊರೆತ
- ಸೆಳೆತ,
ಕಟೆತ,
ಇರಿತ,ತಿವಿತ,
ಕುಣಿತ,
ಒಗೆತ |
|
ಓಡು
+ |
ಟ |
=
ಓಟ
- ಮಾಟ,
ಕೂಟ,
ನೋಟ,ಆಟ,
ಕಾಟ |
|
ನಡೆ
+ |
ವಳಿ |
=
ನಡೆವಳಿ
- ನುಡಿವಳಿ,
ಸಲುವಳಿ,ಹಿಡಿವಳಿ,
ಕೂಡುವಳಿ,ಮುಗಿವಳಿ |
|
ಕಾ
+ |
ಪು |
=
ಕಾಪು
- ಮೇಪು,
ತೀರ್ಪು,
ತಿಳಿಪು,ಹೊಳೆಪು,
ನೆನೆಪು, |
|
ಹೊಳೆ+ |
ಅಪು |
=
ಹೊಳಪು
- ನೆನಪು |
|
ಮುಗ್ಗು+ |
ಅಲು |
= ಮುಗ್ಗಲು
- ಒಣಗಲು,
ಜಾರಲು,ಬಿಕ್ಕಲು,
ಒಕ್ಕಲು |
|
ನಗು
+ |
ಎ |
=
ನಗೆ
- ಹೊರೆ |
|
ಬೆರೆ
+ |
ಅಕೆ |
=
ಬೆರಕೆ
- ಮೊಳಕೆ |
|
ಬೆಳೆ
+ |
ವಳಿಕೆ |
=
ಬೆಳೆವಳಿಕೆ
- ತಿಳಿವಳಿಕೆ,
ನಡೆವಳಿಕೆ |
|
ಮೆರೆ
+ |
ವಣಿಗೆ |
=
ಮೆರೆವಣಿಗೆ
- ಬೆಳವಣಿಗೆ,
ಬರೆವಣಿಗೆ |
|
ಅಳೆ
+ |
ಅತೆ |
=
ಅಳತೆ
- ನಡತೆ |
|
ಮುಳಿ
|
ಸು |
= ಮುಳಿಸು
- ತೊಳೆಸು,
ಮುನಿಸು |
|
ಮುರಿ
+ |
ಅಕು |
= ಮುರಕು
- ಹರಕು |
|
(೩) ಕೃದಾಂತಾವ್ಯಯಗಳು (ಅವ್ಯಯಕೃದಂತ)
ಧಾತುಗಳ ಮೇಲೆ ಉತ, ಉತ್ತ, ಅದೆ, ದರೆ, ಅಲು, ಅಲಿಕ್ಕೆ, ಅ, ಇ, ದು-ಇತ್ಯಾದಿ ಪ್ರತ್ಯಯಗಳು ಸೇರಿ ಕೃದಂತಾವ್ಯಯಗಳೆನಿಸುವುವು.
ಇವು ಪೂರ್ಣಕ್ರಿಯಾರ್ಥವನ್ನು ಕೊಡದೆ, ಇನ್ನೊಂದು ಕ್ರಿಯೆಯನ್ನಪೇಕ್ಷಿಸುವುದರಿಂದ ಇವನ್ನು ಅಪೂರ್ಣಕ್ರಿಯೆ ಅಥವಾ ನ್ಯೂನಕ್ರಿಯೆಗಳೆಂದು ಕರೆಯುವರು.
ಉದಾಹರಣೆಗೆ:
ಪ್ರತ್ಯಯಗಳು
|
ಧಾತು |
+ಪ್ರತ್ಯಯ |
= ಅವ್ಯಯಕೃದಂತ |
ಉತ
- |
ಮಾಡು |
+ ಉತ |
= ಮಾಡುತ, ಇದರಂತೆ
ನೋಡುತ,
ಮಾರುತ,
ಬರುತ |
ಉತ್ತ- |
ತಿನ್ನು |
+ ಉತ್ತ |
= ತಿನ್ನುತ್ತ, ಇದರಂತೆ
ನೋಡುತ್ತ,
ನಡೆಯುತ್ತ,
ಬರುತ್ತ |
ಅದೆ
- |
ಮಾಡು |
+ ಅದೆ |
= ಮಾಡದೆ, ಇದರಂತೆ
ನೋಡದೆ,
ತಿನ್ನದೆ,
ಬರೆಯದೆ |
ಅಲು
- |
ಬರು |
+ ಅಲು |
= ಬರಲು, ಇದರಂತೆ
ತಿನ್ನಲು,
ಉಣ್ಣಲು,
ನೋಡಲು, |
ಅಲಿಕ್ಕೆ
- |
ತಿನ್ನು |
+ ಅಲಿಕ್ಕೆ |
= ತಿನ್ನಲಿಕ್ಕೆ, ಇದರಂತೆ
ಮಾಡಲಿಕ್ಕೆ,
ತಿಳಿಯಲಿಕ್ಕೆ, |
ಅ
- |
ಹೇಳು |
+ ಅ |
= ಹೇಳ ಇದರಂತೆ
ಮಾಡ,
ನೋಡ,
ನುಡಿಯ |
ಇ
- |
ಮಾಡು |
+ ಇ |
= ಮಾಡಿ,
ಇದರಂತೆ
ಹೇಳಿ,
ಕೇಳಿ,
ನೋಡಿ |
ದು
- |
ತಿನ್ನು |
+ ದು |
= ತಿಂದು, ಇದರಂತೆ
ನುಡಿದು,
ನಡೆದು,
ಕರೆದು,
ಬರೆದು |