ಕೃದಂತಗಳು – ಅಭ್ಯಾಸದ
ಹಾಳೆಗಳು
ಅ. ಕೊಟ್ಟಿರುವ ಪದಗಳಲ್ಲಿನ ಧಾತುಗಳನ್ನು ಬೇರ್ಪಡಿಸಿ ಬರೆಯಿರಿ.
೧. ಮಾಡಿದ =
೨. ಹೋಗುವ =
೩. ತಿಂದ =
೪. ಬರೆಯುವ
೫. ನೋಡಿ =
೬. ನೆನೆಪು
೭. ಕೊರೆತ =
೮. ತಿಳಿವಳಿಕೆ =
೯. ಬರೆವಣಿಗೆ =
೧೦. ಉಣ್ಣದೆ =
ಆ. ಈ ಕೆಳಗಿನ ಬಿಡಿಸಿ ಬರೆದ ಪದಗಳಲ್ಲಿ ಕಾಲ ಸೂಚಕ ಪ್ರತ್ಯಯ ಮತ್ತು ಕೃತ್ ಪ್ರತ್ಯಯಗಳನ್ನುಗುರುತಿಸಿ ಮತ್ತು ಪದಗಳನ್ನು ಕೂಡಿಸಿ ಬರೆಯಿರಿ:
ಇ. ಕೊಟ್ಟಿರುವ ಪ್ರಶ್ನೆಗಳಿಗೆ / ಅಪೂರ್ಣ ಹೇಳಿಕೆಗಳಿಗೆ ಪ್ರತಿಯೊಂದಕ್ಕೂ ನಾಲ್ಕು ಆಯ್ಕೆಗಳನ್ನು ಕೊಡಲಾಗಿದೆ ಅವುಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ ಕ್ರಮಾಕ್ಷರದೊಂದಿಗೆ ಬರೆಯಿರಿ.
೧. ಧಾತುಗಳಿಗೆ ಕರ್ತೃ ಮೊದಲಾದ ಅರ್ಥದಲ್ಲಿ ಸಾಮಾನ್ಯವಾಗಿ ಬರುವ ಕೃತ್ ಪ್ರತ್ಯಯ
ಅ) ಒ ಆ) ಉ ಇ) ಅ ಈ) ಎ
ಉ.____________________________________________________________________
೨. ಧಾತುಗಳಿಗೆ ಕರ್ತೃ ಮೊದಲಾದ ಅರ್ಥದಲ್ಲಿ ಸಾಮಾನ್ಯವಾಗಿ ಬರುವ ಪ್ರತ್ಯಯಕ್ಕೆ ಹೀಗೆನ್ನುವರು:
ಅ) ಕೃತ್ ಪ್ರತ್ಯಯ ಆ) ತದ್ಧಿತ ಪ್ರತ್ಯಯ ಇ) ವಿಭಕ್ತಿ ಪ್ರತ್ಯಯ ಈ) ಆಖ್ಯಾತ ಪ್ರತ್ಯಯ
ಉ.____________________________________________________________________
೩. ಧಾತುವಿಗೂ ಕೃತ್ ಪ್ರತ್ಯಯಕ್ಕೂ ಮಧ್ಯದಲ್ಲಿ ವರ್ತಮಾನ ಭವಿಷ್ಯತ್ ಕಾಲದಲ್ಲಿ ಬರುವ ಕಾಲಸೂಚಕ ಪ್ರತ್ಯಯಗಳಿವು
ಅ) ದ, ಅದ ಆ) ವ, ಉವ ಇ) ತ, ಉತ್ತ ಈ) ಉತ್ತ, ಆದ
ಉ.____________________________________________________________________
೪. ಧಾತುವಿಗೂ ಕೃತ್ ಪ್ರತ್ಯಯಕ್ಕೂ ಮಧ್ಯದಲ್ಲಿ ನಿಷೇಧಾರ್ಥದಲ್ಲಿ ಬರುವ ಪ್ರತ್ಯಯವಿದು
ಅ) ದ ಆ) ಅದ ಇ)ಅದು ಈ) ಅ
ಉ.
____________________________________________________________________
೫. ಮಾಡದೆ - ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ
ಅ) ನಿಷೇಧ ಕೃದಂತ ಆ) ಭೂತ ಕೃದಂತ ಇ) ಕೃದಂತಾವ್ಯಯ ಈ) ಕೃದಂತನಾಮ
ಉ.
____________________________________________________________________
೬. ವರ್ತಮಾನ ಕೃದಂತಕ್ಕೆ ಈ ಪದವು ಉದಾಹರಣೆಯಾಗಿದೆ
ಅ) ಬಾಳುವ ಆ) ಬಾಳದ ಇ) ಬಾಳುವಿಕೆ ಈ) ಬಾಳಲು
ಉ.
____________________________________________________________________
೭. ಕೃದಂತಭಾವನಾಮಕ್ಕೆ ಈ ಪದವು ಉದಾಹರಣೆಯಾಗಿದೆ
ಅ) ನಗುತ್ತ ಆ) ನಗುವ ಇ) ನಗದ ಈ) ನಗುವುದು
ಉ.
____________________________________________________________________
ಈ. ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ.
೧. ಕೃದಂತಗಳಲ್ಲಿನ ವಿಧಗಳು _________ ,
__________ ಮತ್ತು ______________
೨. ಕೃದಂತನಾಮಗಳಲ್ಲಿನ ವಿಧಗಳು _________ ,
__________ ಮತ್ತು __________
೩. ಧಾತುಗಳ ಮೇಲೆ ಭಾವಾರ್ಥದಲ್ಲಿ ಕೃತ್ ಪ್ರತ್ಯಯಗಳು ಸೇರಿ __________ ಎನಿಸುವುವು.
೪. ಧಾತುಗಳಿಂದ ಹುಟ್ಟಿ ಅವ್ಯಯದ ಗುಣಗಳನ್ನು ಪಡೆದಂತಹ ಪದಗಳನ್ನು __________ ಎನ್ನುವರು.
ಉ. ಕೊಟ್ಟಿರುವ ಧಾತುಗಳನ್ನು ಬಳಸಿಕೊಂಡು ಅವುಗಳಿಂದ ಕೃದಂತ ನಾಮ, ಕೃದಂತ ಭಾವನಾಮ ಮತ್ತು ಕೃದಂತಾವ್ಯಯ ಪದಗಳನ್ನು ರಚಿಸಿ.
ಊ. ಕೊಟ್ಟಿರುವ ಪದಗಳಲ್ಲಿ ಕೃದಂತ ನಾಮ, ಕೃದಂತ ಭಾವನಾಮ ಮತ್ತು ಕೃದಂತಾವ್ಯಯ ಪದಗಳನ್ನು ಪಟ್ಟಿ ಮಾಡಿರಿ. ನೋಡಿದ, ಅಂಜಿಕೆ, ಬಾಳಲಿಕ್ಕೆ, ಬರೆಯುವ, ನೋಡಿ, ಅಂಜಲು, ತೊಡದ, ತೊಡುಗೆ, ನೋಟ, ಅಂಜಿದ, ಬಾಳುವಿಕೆ, ತೊಡದೆ, ಬರವಣಿಗೆ, ಬಾಳುವ, ಬರೆದು
ಋ. ಮೊದಲೆರೆಡು ಪದಗಳಿಗಿರುವ ಸಂಬಂಧದಂತೆ ಮೂರನೆ ಪದಕ್ಕೆ ಸರಿಹೊಂದುವ ಸಂಬಂಧೀ ಪದವನ್ನು ಬರೆಯಿರಿ.
೧. ನಂಬಿಕೆ : ಕೃದಂತಭಾವನಾಮ :: ಮಾಡಿ :
_______________
೨. ಮಾಡಲು : ಕೃದಂತಾವ್ಯಯ :: ಮಾಟ :
_______________
೩. ನಡೆಯುವ : ವರ್ತಮಾನ ಕೃದಂತ :: ನಡೆಯದ :
_______________
೪. ಓಡಿದ : ಕೃದಂತನಾಮ :: ನಗುವುದು :
_______________
೫. ತಿನ್ನುವುದು : ಕೃದಂತಭಾವನಾಮ :: ತಿಂದ :
_______________
ಎ. ಕೊಟ್ಟಿರುವ ಕೃದಂತ ಪದಗಳನ್ನು ಬಳಸಿಕೊಂಡು ಸ್ವಂತ ವಾಕ್ಯವನ್ನು ರಚಿಸಿ.
೧. ಬರೆದ =
__________________________________________________________ .
೨. ಹಾಡದ =
__________________________________________________________ .
೩. ಕೇಳುವ =
__________________________________________________________ .
೪. ಕಟ್ಟಿದ =
__________________________________________________________ .
೫. ತಿಳಿವಳಿಕೆ =
__________________________________________________________ .
೬. ಹೊಳೆಪು =
__________________________________________________________ .
೭. ಕಾಟ =
__________________________________________________________ .
೮. ಕಲಿಸಿ =
__________________________________________________________ .
ಏ. ಕೊಟ್ಟಿರುವ ವಾಕ್ಯಗಳಲ್ಲಿರುವ ಕೃದಂತಗಳನ್ನು ಗುರುತಿಸಿ ಬರೆಯಿರಿ.
ಐ. ‘ಹೇಳುವ’ ಎನ್ನುವ ಕೃದಂತನಾಮಕ್ಕೆ ಲಿಂಗಗಳಿಗನುಗುಣವಾಗಿ ವಿಭಕ್ತಿಪ್ರತ್ಯಯಗಳನ್ನು ಸೇರಿಸಿ ಬರುವ ರೂಪವನ್ನು ಗಮನಿಸಿ ಮಾದರಿಯಂತೆ ಮುಂದುವರೆಯಿರಿ: