ತದ್ಧಿತಾಂತಗಳು ಕನ್ನಡ ವ್ಯಾಕರಣ ನೋಟ್ಸ್. ( Taddhitantagalu kannada Grammer notes)
ತದ್ಧಿತಾಂತಗಳು (ತದ್ಧಿತ+ಅಂತ)
‘ತದ್ಧಿತ’ ಎಂಬ ಹೆಸರಿನ ಪ್ರತ್ಯಯವನ್ನು ಅಂತದಲ್ಲಿ ಉಳ್ಳುದೇ ತದ್ಧಿತಾಂತವೆನಿಸುವುದು.
ತದ್ಧಿತಾAತ-ನಾಮಪದಗಳ ಮೇಲೆ ಹಲವಾರು ಅರ್ಥಗಳಲ್ಲಿ ಗಾರ, ಕಾರ, ಇಗ, ಆಡಿಗ, ವಂತ, ವಳ, ಇಕ, ಆಳಿ-ಇತ್ಯಾದಿ ತದ್ಧಿತ ಪ್ರತ್ಯಯಗಳು ಸೇರಿ ತದ್ಧಿತಾಂತಗಳೆನಿಸುವುವು.
ಈ ತದ್ಧಿತ ಪ್ರತ್ಯಯಗಳು ಸೇರುವಾಗ ಪ್ರಾಯಶಃ ಮಧ್ಯದ ವಿಭಕ್ತಿ ಪ್ರತ್ಯಯವು ಲೋಪವಾಗುವುದು.
ಇವುಗಳಲ್ಲಿ- (೧) ತದ್ಧಿತಾಂತ ನಾಮ (೨) ತದ್ಧಿತಾಂತ ಭಾವನಾಮ (೩) ತದ್ಧಿತಾಂತಾವ್ಯಯಗಳೆAದು ಮೂರು ಬಗೆ.
(೧) ತದ್ಧಿತಾಂತ ನಾಮಗಳು :
ನಾಮಪದಗಳ ಮೇಲೆ ಗಾರ, ಕಾರ, ಇಗ, ವಂತ ಇತ್ಯಾದಿ ಪ್ರತ್ಯಯಗಳು ಬಂದುತದ್ಧಿತಾAತ ನಾಮಗಳಾಗುತ್ತವೆ
ಉದಾಹರಣೆಗೆ:
ತದ್ಧಿತ ಪ್ರತ್ಯಯ |
ನಾಮಪದ + |
ಅರ್ಥ = |
ತದ್ಧಿತ ಪ್ರತ್ಯಯ |
ತದ್ಧಿತಾಂತನಾಮ |
ಗಾರ - |
ಮಾಲೆಯನ್ನು+ |
ಕಟ್ಟುವವನು = |
ಗಾರ |
- ಮಾಲೆಗಾರ |
|
ಬಳೆಯನ್ನು + |
ಮಾರುವವನು = |
ಗಾರ |
- ಬಳೆಗಾರ |
|
ಮೋಸವನ್ನು+ |
ಮಾಡುವವನು = |
ಗಾರ |
-ಮೋಸಗಾರ |
|
ಪಾಲನ್ನು + |
ಹೊಂದುವವನು = |
ಗಾರ |
- ಪಾಲುಗಾರ |
|
ಛಲವನ್ನು + |
ಹೊಂದಿದವನು = |
ಗಾರ |
- ಛಲಗಾರ |
ಕಾರ - |
ಓಲೆಯನ್ನು + |
ತರುವವನು = |
ಕಾರ |
- ಓಲೆಕಾರ |
|
ಕೋಲನ್ನು + |
ಹಿಡಿಯುವವನು = |
ಕಾರ |
- ಕೋಲುಕಾರ |
|
ಕೈದನ್ನು + |
ಹಿಡಿದಿರುವವನು = |
ಕಾರ |
- ಕೈದುಕಾರ |
ಇಗ |
ಕನ್ನಡವನ್ನು + |
ಬಲ್ಲವನು = |
ಇಗ |
- ಕನ್ನಡಿಗ |
|
ಲೆಕ್ಕವನ್ನು + |
ಬಲ್ಲವನು = |
ಇಗ |
- ಲೆಕ್ಕಿಗ |
|
ಚೆನ್ನನ್ನು + |
ಉಳ್ಳುವ = |
ಇಗ |
- ಚೆನ್ನಿಗ |
|
ಗಂದವನ್ನು + |
ಮಾರುವವನು = |
ಇಗ |
-ಗಂದಿಗ |
|
ಗಾಣವನ್ನು + |
ಆಡಿಸುವವನು = |
ಇಗ |
- ಗಾಣಿಗ |
ವಂತ- |
ಹಣವನ್ನು + |
ಉಳ್ಳವನು = |
ವಂತ |
-ಹಣವAತ |
|
ಸಿರಿಯನ್ನು + |
ಉಳ್ಳವನು = |
ವಂತ |
-ಸಿರಿವAತ |
ವಳ- |
ಮಡಿಯನ್ನು + |
ಮಾಡುವವನು = |
ವಳ |
-ಮಡಿವಳ |
ವಾಳ |
|
|
|
- ಮಡಿವಾಳ |
|
ಹಡಪವನ್ನು + |
ಆಚರಿಸುವವನು = |
ವಳ |
- ಹಡಪವಳ |
ಆಡಿಗ- |
ಹಾವನ್ನು + |
ಆಡಿಸುವವನು = |
ಆಡಿಗ |
- ಹಾವಾಡಿಗ |
|
ಹೂವನ್ನು + |
ಕಟ್ಟುವವನು = |
ಆಡಿಗ |
- ಹೂವಾಡಿಗ |
ಇಕ – |
ಕರಿಯದನ್ನು + |
ಉಳ್ಳವನು = |
ಇಕ |
- ಕರಿಕ |
|
ಬಿಳಿಯದನ್ನು+ |
ಉಳ್ಳವನು = |
ಇಕ |
- ಬಿಳಿಕ |
ಆಳಿ - |
ಮಾತನ್ನು + |
ಹೆಚ್ಚು ಆಡುವ = |
ಆಳಿ |
- ಮಾತಾಳಿ |
|
ಓದನ್ನು + |
ಹೆಚ್ಚು = |
ಆಳಿ |
- ಓದಾಳಿ |
ಆಳಿ - |
ಜೂದನ್ನು + |
ಆಡುವವನು = |
ಆಳಿ |
- ಜೂದಾಳಿ |
ಗುಳಿ - |
ಲಂಚವನ್ನು + |
ತೆಗೆದುಕೊಳ್ಳುವನು |
ಗುಳಿ |
- ಲಂಚಗುಳಿ |
ಅನೆಯ- |
ಹತ್ತು + |
ಸಂಖ್ಯೆಯನ್ನುಳ್ಳು= |
ಅನೆಯ |
- ಹತ್ತನೆಯ |
|
ಒಂದು + |
ಸಂಖ್ಯೆಯನ್ನುಳ್ಳು= |
ಅನೆಯ |
- ಒಂದನೆಯ |
ಆರ – |
ಕುಂಬವನ್ನು + |
ಮಾಡುವವನು = |
ಆರ |
- ಕುಂಬಾರ |
ಸ್ತಿçÃಲಿಂಗದಲ್ಲಿ ಬರುವ ತದ್ಧಿತ ಪ್ರತ್ಯಯಗಳು
ಸ್ತಿçÃಲಿಂಗದಲ್ಲಿ ಇತಿ, ಇತ್ತಿ, ಗಿತ್ತಿ, ತಿ, ಇ, ಎ ಇತ್ಯಾದಿ ತದ್ಧಿತ ಪ್ರತ್ಯಯಗಳು ಬಂದು ಸ್ತಿçÃಲಿಂಗದ ತದ್ಧಿತಾಂತಗಳು ಸಿದ್ಧಿಸುವುವು.
ಉದಾಹರಣೆಗೆ: ಇತಿ - ಬೀಗಿತಿ, ಬ್ರಾಹ್ಮಣಿತಿ
ಇತ್ತಿ - ಒಕ್ಕಲಗಿತ್ತಿ, ಹೂವಾಡಗಿತ್ತಿ
ಗಿತ್ತಿ - ನಾಯಿಂದಗಿತ್ತಿ, ಅಗಸಗಿತ್ತಿ
ತಿ - ಗೊಲ್ಲತಿ, ವಡ್ಡತಿ, ಮಾಲೆಗರ್ತಿ
ಇ - ಅರಸಿ, ಅಣುಗಿ
ಎ - ಕಳ್ಳೆ, ಜಾಣೆ, ಗುಣವಂತೆ, ಇತ್ಯಾದಿ-
(೨) ತದ್ಧಿತಾಂತ ಭಾವನಾಮಗಳು
ತದ್ಧಿತಾಂತಭಾವನಾಮಗಳು-ಸಾಮಾನ್ಯವಾಗಿ μಂಷ್ಠೀವಿಭಕ್ತಾ÷್ಯAತಗಳಾದ ನಾಮಪದಗಳ ಮುಂದೆ ಭಾವಾರ್ಥದಲ್ಲಿ ತನ, ಇಕೆ, ಪು, ಮೆ - ಇತ್ಯಾದಿ ತದ್ಧಿತಪ್ರತ್ಯಯಗಳು ಸೇರಿ ತದ್ಧಿತಾಂತಭಾವನಾಮಗಳೆನಿಸುವುವು.
ಉದಾಹರಣೆಗೆ:
ಪ್ರತ್ಯಯ ನಾಮಪದ ಭಾವಾರ್ಥದಲ್ಲಿ ಪ್ರತ್ಯಯ - ತದ್ಧಿತಾಂತ ಭಾವನಾಮ |
ತನ - ದೊಡ್ಡವನ (ಭಾವ) - ತನ - ದೊಡ್ಡತನ |
ಜಾಣನ (ಭಾವ) - ತನ - ಜಾಣತನ; |
ಇದರಂತೆ
ದಡ್ಡತನ, ಚಿಕ್ಕತನ, ಸಣ್ಣತನ ಹುಡುಗತನ, ಕಿರಿತನ, ಕಳ್ಳತನ,ಕೆಟ್ಟತನ,ಸೋಮಾರಿತನ-ಇತ್ಯಾದಿ |
ಇಕೆ - ಬ್ರಾಹ್ಮಣನ (ಭಾವ) - ಇಕೆ
- ಬ್ರಾಹ್ಮಣಿಕೆ |
ಚಲುವಿನ (ಭಾವ) - ಇಕೆ - ಚಲುವಿಕೆ; |
ಇದರಂತೆ
ಗೌಡಿಕೆ, ಉನ್ನತಿಕೆ, ತಳವಾರಿಕೆ, |
ಉ - ಕಿವುಡನ (ಭಾವ) - ಉ -
ಕಿವುಡು |
ಕುಳ್ಳನ (ಭಾವ) - ಉ - ಕುಳ್ಳು; |
ಇದರಂತೆ ಕುರುಡು, ಕುಂಟು, ಮೂಕು, ತೊದಲು, -ಇತ್ಯಾದಿ. |
ಪು - ಬಿಳಿದರ (ಭಾವ) - ಪು -
ಬಿಳುಪು |
ಕರಿದರ (ಭಾವ) - ಪು -
ಕಪುö್ಪ |
ಇನಿದರ (ಭಾವ) - ಪು -
ಇಂಪು |
ತಣ್ಣನೆಯದರ (ಭಾವ) - ಪು -
ತಂಪು |
ನುಣ್ಣನೆಯದರ(ಭಾವ) - ಪು -
ನುಣುಪು |
ಮೆ - ಜಾಣನ (ಭಾವ) - ಮೆ -
ಜಾಣ್ಮೆ |
ಜಾಣೆಯ (ಭಾವ) - ಮೆ - ಜಾಣ್ಮೆ |
ಕೂರಿತ್ತರ (ಭಾವ) - ಮೆ - ಕೂರ್ಮೆ |
ಪಿರಿದರ (ಭಾವ) - ಮೆ - ಪೆರ್ಮೆ |
ಹಿರಿದರ (ಭಾವ) - ಮೆ -
ಹಿರಿಮೆ |
|
(೩) ತದ್ಧಿತಾಂತಾವ್ಯಯಗಳು
ನಾಮಪದಗಳ ಮುಂದೆ ಅಂತೆ, ವೊಲ್, ವೊಲು, ವೋಲ್, ವೋಲು, ತನಕ, ವರೆಗೆ, ಮಟ್ಟಿಗೆ, ಓಸ್ಕರ, ಇಂತ, ಆಗಿ, ಓಸುಗ-ಇತ್ಯಾದಿ ಪ್ರತ್ಯಯಗಳು ಸೇರಿ ತದ್ಧಿತಾಂತಾವ್ಯಯಗಳೆನಿಸುವುವು.
ಈ ಪ್ರತ್ಯಯಗಳು ಬಂದಾಗ ನಾಮಪದದಲ್ಲಿರುವ ವಿಭಕ್ತಿಪ್ರತ್ಯಯವು ಲೋಪವಾಗುವುದಿಲ್ಲ.
ಉದಾಹರಣೆಗೆ:
ಅಂತೆ |
ರಾಮನಂತೆ, ಚಂದ್ರನAತೆ, ಭೀಮನಂತೆ, ಅವನಂತೆ |
ವೊಲ್ |
ರಾಮನವೊಲ್, ಚಂದ್ರನವೊಲ್, ಭೀಮನವೊಲ್, ಅವನವೊಲ್ |
ವೊಲು |
ರಾಮನವೊಲು, ಚಂದ್ರನವೊಲು, ಭೀಮನವೊಲು, ನಿನ್ನವೊಲು |
ವೋಲು |
ಮನೆಯವೋಲು, ಅವನವೋಲು, ಚಂದ್ರನವೋಲು |
ವೋಲ್ |
ಮನೆಯವೋಲ್, ಅವನವೋಲ್, ಚಂದ್ರನವೋಲ್ |
ತನಕ |
ಮನೆಯತನಕ, ಊರತನಕ, ಅಲ್ಲಿಯತನಕ |
ವರೆಗೆ |
ಊರವರೆಗೆ, ಚಂದ್ರನವರೆಗೆ |
ಮಟ್ಟಿಗೆ |
ಅವನಮಟ್ಟಿಗೆ, ನನ್ನಮಟ್ಟಿಗೆ, ನಿನ್ನಮಟ್ಟಿಗೆ |
ಓಸ್ಕರ |
ಅವನಿಗೋಸ್ಕರ, ರಾಮನಿಗೋಸ್ಕರ |
ಸಲುವಾಗಿ |
ನನ್ನ ಸಲುವಾಗಿ, ನಿನ್ನ ಸಲುವಾಗಿ |
ಇಂತ |
ಅವನಿಗಿಂತ, ಇವನಿಗಿಂತ |
ಆಗಿ |
ಅವನಿಗಾಗಿ, ನನಗಾಗಿ, ನಿನಗಾಗಿ |
ಓಸುಗ |
ರಾಮನಿಗೋಸುಗ, ಕಳ್ಳನಿಗೋಸುಗ |
ತದ್ಧಿತಾಂತಗಳು ಕನ್ನಡ ವ್ಯಾಕರಣ ನೋಟ್ಸ್. ( Taddhitantagalu kannada Grammer notes)