ಛಂದಸ್ಸು-ಬಹುಆಯ್ಕೆಪ್ರಶ್ನೆಗಳು
1 ‘ಅಂಶ ಗಣ’ಗಳಲ್ಲಿ ಇದು ಸೇರುವುದಿಲ್ಲಾ
ಎ) ಬ್ರಹ್ಮ ಗಣ ಬಿ) ಶಿವಗಣ
ಸಿ) ರುದ್ರಗಣ ಡಿ) ವಿಷ್ಣುಗಣ
2 ‘ಕಾವ್ಯ ಓದುವಾಗ ಅಥವಾ ಹಾಡುವಾಗ ಉಸಿರು ತೆಗೆದು ಕೊಳ್ಳಲು ನಿಲ್ಲುವ ಸ್ಥಳಕ್ಕೆ ಹೀಗೆನ್ನುವರು.
ಎ) ಗಣ ಬಿ) ಪ್ರಾಸ
ಸಿ) ಯತಿ ಡಿ) ಮಾತ್ರೆ
3 ‘ಎಂತಲೂ” ಈ ಪದದಲ್ಲಿನ ಅಕ್ಷರಗಣ ಇದು
ಎ) ಜಗಣ ಬಿ) ಮಗಣ
ಸಿ) ಸಗಣ ಡಿ) ರಗಣ
4 ಪದ್ಯ ರಚನಾ ನಿಯಮವನ್ನು ಹೀಗೆನ್ನುವರು
ಎ) ಅಲಂಕಾರ ಬಿ) ಛಂದಸ್ಸು
ಸಿ) ಕವನ ಡಿ) ಕಾವ್ಯ
5. ‘ಸ,ಭ,ರ,ನ,ಮ,ಯ ಗಣವು
ಎ) ಸ್ರಗ್ದರಾ ಬಿ) ಮತ್ತೇಭ ವಿಕ್ರೀಡಿತ
ಸಿ) ಚಂಪಕಮಾಲಾ ಡಿ) ಮಹಾಸ್ರಗ್ದ÷್ಧರಾ
6 ‘ಬಾಲಕ’ ಇದು ಭಗಣ ವಾದರೆ ಮರರೆ ಇದು ಏನು?
ಎ) ಮಗಣ ಬಿ) ನಗಣ
ಸಿ) ಯುಗಣ ಡಿ) ತಗಣ
7. ಗುರು ಲಘು ಮೂರಿರೆ
ಎ) ಜಗಣ ಬಿ) ಮನಗಣ
ಸಿ) ಸಗಣ ಡಿ) ತಗಣ
8. ‘ಧಾರುಕ’ ಈ ಪದವು ಗಣದಲ್ಲಿದೆ.
ಎ) ಯಗಣ ಬಿ) ರಗಣ
ಸಿ) ಭಗಣ ಡಿ) ತಗಣ
9 ಗುರುಲಘು ಕೊನೆಯಲ್ಲಿ ಬರಲು
ಎ) ಸತಗಣ ಬಿ) ಮನಗಣ
ಸಿ) ಜರಗಣ ಡಿ) ಭಯಗಣ
10. ‘ಕರಿಯ’ ಪದವು ಈ ಗಣಕ್ಕೆ ಉದಾ?
ಎ) ನಗಣ ಬಿ) ಭಗಣ
ಸಿ) ಯಗಣ ಡಿ) ಜಗಣ
11. ‘ಸಾಗರ’ ಪದದ ಗಣ
ಎ) ತಗಣ ಬಿ) ರಗಣ
ಸಿ) ಭಗಣ ಡಿ) ಯಗಣ
12. ‘ವಿದ್ಯಾರ್ಥಿ’ ಈ ಪದದಲ್ಲಿರುವ ಗಣ
ಎ) ಮಗಣ ಬಿ) ಸಗಣ
ಸಿ) ತಗಣ ಡಿ) ಜಗಣ
13. ‘ಖ್ಯಾತ ಕರ್ನಾಟಕ’ಗಳೆಂದು ಪ್ರಸಿದ್ಧವಾಗಿರುವ ಅಕ್ಷರ ವೃತ್ತಗಳು
ಎ) 4. ಬಿ) 6 ಸಿ) 21 ಡಿ) 8
14. ಚಂಪಕಮಾಲ ವೃತ್ತದಲ್ಲಿ ಗಣಗಳ ಸಂಖ್ಯೆ
ಎ) 7 ಗಣ ಬಿ) 6 ಗಣ
ಸಿ) 5 ಗಣ ಡಿ) 4 ಗಣ
15. ವೃತ್ತದಲ್ಲಿ ಎಷ್ಟು ಪಾದಗಲಿರುತ್ತವೆ.
ಎ) 1 ಪಾದ ಬಿ) 3 ಪಾದ
ಸಿ) 4 ಪಾದ ಡಿ) 6 ಪಾದ
16 ಚಂಪಕಮಾಲಾ ವೃತ್ತದಲ್ಲಿರುವ ಅಕ್ಷರಗಳ ಸಂಖ್ಯೆ
ಎ) 19 ಬಿ) 20 ಸಿ) 21 ಡಿ) 22
17. ನಾಲ್ಕು ಸಾಲಿನ ಪದ್ಯಕ್ಕೆಹೀಗೆನ್ನುವರು
ಎ) ತ್ರಿಪದಿ ಬಿ) ದ್ವಿಪದಿ
ಸಿ)ಷಟ್ಪದಿ ಡಿ) ಚೌಪದಿ
18 ಒಂದು ಅಕ್ಷರ ಉಚ್ಚರಿಸಲು ಬೇಕಾದ ಕಾಲವನ್ನು---ಎಂಬ ಮಾನದಿಂದಅಳೆಯುವರು.
ಎ) ಗಳಿಗೆ ಬಿ) ಸೆಕೆಂಡ್
ಸಿ) ಕ್ಷಣ ಡಿ) ಮಾತ್ರೆ
19. ‘ಷಟ್ಪದಿ’ ಇದು ಒಂದು-----ಛಂದಸ್ಸು
ಎ) ಮಾತ್ರಾಛಂದಸ್ಸು ಬಿ)ಅಕ್ಷರಛಂದಸ್ಸು ಸಿ) ರಗಳೆ ಡಿ)ತ್ರಿಪದಿ
20“ಷಟ್ಪದಿ’ ಒಂದು----- ಸಾಲಿನ ಛಂದಸ್ಸು
ಎ) ಮೂರುಸಾಲಿನಪದ್ಯ ಬಿ)ಆರುಸಾಲಿನಪದ್ಯ
ಸಿ)ನಾಲ್ಕುಸಾಲಿನಪದ್ಯ ಡಿ)ಐದುಸಾಲಿನಪದ್ಯ
21. ‘ ಷಟ್ಪದಿ’ ಎಂಬುದು -------
ಎ) ಅಕ್ಷರ ಛಂದಸ್ಸು ಬಿ)ಮಾತ್ರಾಛಂದಸ್ಸು
ಸಿ)ಅಲಂಕಾರ ಡಿ)ಪ್ರಾಸ
22. “ಷಟ್ಪದಿಯಲ್ಲಿ ----- ಬಗೆಗಳಿವೆ
ಎ) ಮೂರು ಬಿ) ಆರು
ಸಿ) ಎಂಟು ಡಿ) ನಾಲ್ಕು
23. ಷಟ್ಟದಿ’ ಪ್ರಕಾರಗಳು
ಎ) ೮ ಬಿ) ೯ ಸಿ) ೪ ಡಿ) ೬
24. ಭಾಮಿನಿ ಷಟ್ಟದಿ ಒಟ್ಟು ಮಾತ್ರೆಗಳು
ಎ) ೧೦೪ ಬಿ) ೧೦೨ ಸಿ) ೧೦೧ ಡಿ) ೧೦೮
25.ಕಂದ’ಪದ್ಯಇದು ಎಷ್ಟು ಸಾಲುಗಳಿಂದ ಕೂಡಿದೆ
ಎ) ೪ ಬಿ) ೨ ಸಿ) ೧ ಡಿ) ೩
26 ‘ಕಂದ’ಪದ್ಯದಲ್ಲಿರುವ ಒಟ್ಟು ಮಾತ್ರೆಗಳ ಸಂಖ್ಯೆ
ಎ) ೩೨ ಬಿ)೫೪ ಸಿ) ೬೪ ಡಿ) ೪೪
27 ‘ಉತ್ಪಲಮಾಲಾವೃತ್ತದ ಪ್ರತೀಸಾಲಿನ ಒಟ್ಟು ಅಕ್ಷರಗಳ ಸಂಖ್ಯೆ------
ಎ) ೧೮ ಬಿ) ೨೧ ಸಿ) ೨೦ ಡಿ) ೧೯
28 ‘ಸೆಚ್ಚೆಚ್ಚು’ ಈ ಪದದಲ್ಲನ ಅಕ್ಷರಗಣ ------
ಎ) ಭಗಣ ಬಿ) ತಗಣ
ಸಿ) ರಗಣ ಡಿ) ಸಗಣ
29 ‘ಸ,ತ,ತ,ನ,ಸ,ರ,ರ,ಗಣಗಳಿರುವ ವೃತ್ತ ಛಂದಸ್ಸು--
ಎ) ಉತ್ಪಲ ಬಿ)ಸ್ರಗ್ದರ
ಸಿ) ಮಹಾಸ್ರಗ್ಚರಾ ಡಿ)ಚಂಪಕ
30. ‘ಭ,ರ,ನ,ಭ,ಭ,ರ, ಇದು ಯಾವ ವೃತ್ತದ ಗಣಗಳು
ಎ) ಉತ್ಪಲಮಾಲಾವೃತ್ತ ಬಿ)ಚಂಪಕಮಾಲಾ
ಸಿ)ಸ್ರಗ್ದರಾ ಡಿ) ಮಹಾಸ್ರಗ್ದರಾವೃತ್ತ
31. ‘ಮ,ರ,ಭ,ನ,ಯ,ಯ,ಯ ಈ ವೃತ್ತದ ಗಣಗಳು
ಎ) ಉತ್ಪಲಮಾಲಾ ಬಿ) ಚಂಪಕಮಾಲಾ
ಸಿ) ಸ್ರಗ್ದರಾ ಡಿ) ಮಹಾಸ್ರಗ್ದರಾ
32. ಮಹಾಸ್ರಗ್ದರಾವೃತ್ತದ ಗಣಗಳು
ಎ)ಭ,ರ,ನ,ಭ,ಭ,ರ, ಬಿ)ಮ,ರ,ನ,ಭ,ಯ,ಯ,ಯ
ಸಿ) ಸ,ತ,ತ,ನ,ಸ,ರ,ರ ಡಿ)ಮ,ಸ,ಜ,ಸ,ತ,ತ
33. - - - ಇದು ( ಮೂರು ಗುರುಗಳಿರುವ ಗಣ)
ಎ) ಮಗಣ ಬಿ) ತಗಣ
ಸಿ) ಸಗಣ ಡಿ) ನಗಣ
34. ವೃತ್ತದಲ್ಲಿ ಎಷ್ಟು ಪಾದಗಳಿರುತ್ತವೆ.
ಎ) ಒಂದು ಪಾದ ಬಿ) ಮೂರುಪಾದ
ಸಿ) ನಾಲ್ಕುಪಾದ ಡಿ) ಆರುಪಾದ
35. ಖ್ಯಾತಕರ್ನಾಟಕ ವೃತ್ತವು
ಎ) ಅಕ್ಷರಗಣ ಬಿ) ಮಾತ್ರಾಗಣ
ಸಿ) ಗಣ ಡಿ) ಮಾತ್ರೆ
36. ಕಂದಪದ್ಯವು
ಎ) ಅಕ್ಷರಗಣ ಬಿ)ಮಾತ್ರಾಗಣ
ಸಿ) ಗಣ ಡಿ) ಮಾತ್ರೆ
37 ‘ಅಣುಗಾಳ್’ ಈ ಪದದಲ್ಲಿನ ಮಾತ್ರಾಗಣವಿದು
ಎ) ಸ ಗಣ ಬಿ) ಭ ಗಣ
ಸಿ) ರ ಗಣ ಡಿ) ಯ ಗಣ
38. ಗುಂಪಿಗೆ ಸೇರದ ಗಣ ಇದು
ಎ) ಬ್ರಹ್ಮಗಣ ಬಿ) ರುದ್ರಗಣ
ಸಿ) ಯ ಗಣ ಡಿ) ವಿಷ್ಣುಗಣ
39 ಚಂಪಕ ಮಾಲಾವೃತ್ತದಲ್ಲಿನ ಪ್ರತೀ ಸಾಲಿನ ಒಟ್ಟು ಅಕ್ಷರಗಳ ಮೊತ್ತ
ಎ) ೨೦ ಬಿ) ೨೧ ಸಿ) ೨೨ ಡಿ)೧೯
40 ಸ,ಭ,ರ,ನ,ಮ,ಯ,ಲ,ಗು’ಈ ಅಕ್ಷರಗಣ ದಿಂದ ಕೂಡಿದಛಂದಸ್ಸು ಇದು
ಎ) ಕಂದಪದ್ಯ ಬಿ) ಚಂಪಕಮಾಲಾವೃತ್ತ
ಸಿ) ಮತ್ತೇಭವಿಕ್ರೀಡಿತವೃತ್ತ ಡಿ) ಉತ್ಪಲಮಾಲಾವೃತ್ತ
41. ರಗಳೆಯಲ್ಲಿನ ಪ್ರಕಾರಗಳು
ಎ) ೩ ಬಿ) ೪ ಸಿ) ೫ ಡಿ) ೧
42. ವಾರ್ಧಕ ಷಟ್ಪದಿಯ ಒಟ್ಟು ಮಾತ್ರೆಗಳು
ಎ) ೧೩೪ ಬಿ) ೧೪೪ ಸಿ) ೧೫೪ ಡಿ) ೧೦೪
43. ರಗಳೆಯ ಪ್ರಕಾರಗಳಲ್ಲಿ ಇದು ಅಲ್ಲ
ಎ) ಮಂದಾನಿಲ ಬಿ) ಉತ್ಸಾಹ
ಸಿ)ಲಲಿತಾ ಡಿ) ಲಲಿತ
44. ಪ್ರಾರಂಭದ ಪ್ರತಿ ಸಾಲಿನಲ್ಲಿ ಐದು ಮಾತ್ರೆಗಳ ನಾಲ್ಕುಗಣವಿರುವ ರಗಳೆ
ಎ) ಲಲಿತಾ ಬಿ) ಉತ್ಸಾಹ
ಸಿ) ಲಲಿತ ಡಿ) ಮಂದಾನಿಲ
45. ಪ್ರಾರಂಭದ ಪ್ರತಿಸಾಲಿನಲ್ಲಿ ನಾಲ್ಕು ಮಾತ್ರೆಗಳನಾಲ್ಕು ಗಣಗಳಿರುವ ರಗಳೆ
ಎ) ಲಲಿತ ಬಿ) ಲಲಿತಾ
ಸಿ) ಉತ್ಸಾಹ ಡಿ) ಮಂದಾನಿಲ
46. ಪ್ರಾರಂಭದ ಪ್ರತಿಸಾಲಿನಲ್ಲಿಮೂರು ಮಾತ್ರೆಗಳ ನಾಲ್ಕು ಗಣಗಳಿರುವ ರಗಳೆ
ಎ) ಲಲಿತಾ ಬಿ) ಉತ್ಸಾಹ
ಸಿ) ಲಲಿತ ಡಿ) ಮಂದಾನಿಲ
47 ಷಟ್ಟದಿ ಪ್ರಕಾರ ಒಂದು----ಛಂದಸ್ಸು
ಎ)ಅಕ್ಷರ ಛಂದಸ್ಸು ಬಿ)ಮಾತ್ರಾಛಂದಸ್ಸು
ಸಿ)ಅಂಶಗಣಛಂದಸ್ಸು ಡಿ) ರುಧ್ರಗಣ ಛಂದಸ್ಸು
48 ಷಟ್ಪದಿಯಲ್ಲಿ -------ಸಾಲುಗಳಿವೆ
ಎ) ೩ ಬಿ) ೪ ಸಿ) ೬ ಡಿ) ೮
49 ಮಂದಾನಿಲ ರಗಳೆ ಒಟ್ಟು ಮಾತ್ರೆ-----
ಎ) ೧೨ ಬಿ) ೨೦ ಸಿ) ೧೮ ಡಿ) ೧೬
50. ಪ್ರತೀಸಾಲಿನ ಉತ್ಸಾಹ ರಗಳೆ ಒಟ್ಟು ಮಾತ್ರೆ-----
ಎ)೨೦ ಬಿ)೧೬ ಸಿ) ೧೪ ಡಿ) ೧೨