ವಾಕ್ಯಗಳು -ಅಭ್ಯಾಸದ ಹಾಳೆಗಳು
ಈ ಕೆಳಗೆ ನೀಡಲಾದ ವಾಕ್ಯಗಳನ್ನು ಓದಿ, ಸಾಮಾನ್ಯವಾಕ್ಯ, ಸಂಯೋಜಿತ ವಾಕ್ಯ, ಮಿಶ್ರವಾಕ್ಯಗಳನ್ನು ಗುರುತಿಸಿ ಪ್ರತ್ಯೇಕವಾಗಿ ಬರೆಯಿರಿ.
ಮಾದರಿ: ಮಕ್ಕಳು ಹಾಲನ್ನು ಕುಡಿಯುತ್ತಾರೆ; ಆದರೆ ಅವರಿಗೆ ಕೊಡಲು ಸಾಕಷ್ಟು ಹಾಲಿರಲಿಲ್ಲ. (ಸಂಯೋಜಿತ ವಾಕ್ಯ)
೧.ಸುಮತಿಯು ತುಂಬಾ ಚೆನ್ನಾಗಿ ಶಹನಾಯಿ ನುಡಿಸಿದಳು.
೨.ಗಾಂಧೀಜಿಯವರು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಆಫ್ರಿಕಾಕ್ಕೆ ಹೋದರು.
೩.ವೀರಕುಮಾರನು ಪ್ರವಾಸಕ್ಕೆ ತೆರಳಲು ನಿರ್ಧರಿಸಿದನಾದರೂ ಅವನ ನಿರ್ಧಾರಕ್ಕೆ ಒಪ್ಪಿಗೆ ಸಿಗಲಿಲ್ಲ.
೪.ತಂದೆಯವರ ಅಪ್ಪಣೆ ದೊರೆಯಲಿಲ್ಲವೆಂಬ ವಿಷಯ ತಿಳಿದಾಗ ತುಂಬಾ ಮರುಗಿದ.
೫.ಗುರುಗಳು ಶಾಲೆಗೆ ಹೋದರೆಂಬ ಸುದ್ದಿ ತಿಳಿದು ಮಕ್ಕಳೆಲ್ಲರೂ ಓಡಿ ಬಂದರು.
೬.ವಿದ್ಯಾರ್ಥಿಗಳು ಕ್ರೀಡಾಕೂಟಕ್ಕೆ ಹೋದರು: ಆದರೆ ಶ್ರದ್ಧೆಯಿಂದ ಆಡಲಿಲ್ಲ.

ಮಾದರಿಯಂತೆ ಕೊಟ್ಟಿರುವ ಖಾಲಿ ಜಾಗದಲ್ಲಿ ಸೂಕ್ತ ಪದಗಳನ್ನು ಬಳಸಿ ಸರಳ ವಾಕ್ಯ ರಚಿಸಿ.
ಮಾದರಿ: ರಾಮನು ಹಾಡನ್ನು ಹಾಡಿದನು. (ಮಾತನ್ನು, ಕೃತಿಯನ್ನು, ಹಾಡನ್ನು)
೧) ರಹೀಮನು _____________ ಆಡುವನು. (ಆಟವನ್ನು, ನೋಟವನ್ನು, ಊಟವನ್ನು)
೨) ಶಾಂತಳೆಯು ___________ ಮಾಡಿದಳು. (ನರ್ತನವನ್ನು, ಶಾಲೆಯನ್ನು, ಹಾಡನ್ನು)
೩) ರಾಜನು ______________ ಮಾಡಿದನು. (ಯುದ್ಧವನ್ನು, ಮಳೆಯಿಂದ, ಹಾಡನ್ನು)
೪) ಅಂಬೇಡ್ಕರ್ರವರು ಹೆಚ್ಚಿನ ವಿದ್ಯಾಭ್ಯಾಸಕ್ಕೆ __________ ತೆರಳಿದರು. (ಪುಸ್ತಕದಿಂದ, ಇಂಗ್ಲೆಂಡಿಗೆ, ಬಸ್ಸನ್ನು)

೨. ಮಾದರಿಯಂತೆ ಸಂಯೋಜಿತ ವಾಕ್ಯಗಳನ್ನು ರಚಿಸಿ.
ಮಾದರಿ: ೧) ಮಕ್ಕಳು ಚೆಂಡನ್ನು ಆಡುತ್ತಾರೆ; ಆದರೆ ಅವರಿಗೆ ಕೊಡಲು ಸಾಕಷ್ಟು ಚೆಂಡುಗಳಿರಲಿಲ್ಲ.
೨) ಚನ್ನಕೇಶವನು ಚೆನ್ನಾಗಿ ಓದುತ್ತಾನೆ; ಆದ್ದರಿಂದ ತರಗತಿಯಲ್ಲಿ ಮೊದಲಿಗನಾಗಿದ್ದಾನೆ.
೩. ಮಾದರಿಯಂತೆ ಮಿಶ್ರವಾಕ್ಯಗಳನ್ನು ರಚಿಸಿ.
ಮಾದರಿ: ಶಾಲಾ ಮಕ್ಕಳ ನಾಟಕ ನೋಡಲು ಹೆಚ್ಚು ಜನ ಬರುವರೆಂದು ತಿಳಿದು ಶಿಕ್ಷಕರು ಸಂತಸಪಟ್ಟರು.
ಸೂಚನೆಗನುಸಾರವಾಗಿ ಬರೆಯಿರಿ.
ರಮೇಶ ಹಾಗೂ ರಹೀಮನು ಕೂಡಿ ಪತ್ರ ಬರೆಯುತ್ತಿದ್ದಾರೆ. ಈ ವಾಕ್ಯಗಳನ್ನು ಎರಡು ಸರಳ ವಾಕ್ಯಗಳನ್ನಾಗಿ ಬರೆಯಿರಿ.
ರೈತರು ದನಗಳನ್ನು ಸಾಕುತ್ತಾರೆ. ರೈತರು ಎಮ್ಮೆಯನ್ನು ಸಾಕುತ್ತಾರೆ. ಈ ಎರಡೂ ವಾಕ್ಯ ಸೇರಿಸಿ ಸಂಯೋಜಿತ ವಾಕ್ಯ ಮಾಡಿರಿ.
ಕರ್ತೃ ಕರ್ಮ ಕ್ರಿಯಾಪದಗಳು ಸೇರಿದ ಒಂದು ಪೂರ್ಣ ಅರ್ಥ ನೀಡುವ ವಾಕ್ಯವನ್ನು ಎಂತಹ ವಾಕ್ಯ ಎನ್ನುವರು?
ಎರಡು ಪ್ರತ್ಯೇಕವಾಗಿ ಮಾಡಬಹುದಾದ ವಾಕ್ಯಗಳು ಒಂದೇ ವಾಕ್ಯ ಆಗಿದ್ದರೆ ಅಂತಹ ವಾಕ್ಯವನ್ನು ಏನೆಂದು ಕರೆಯುತ್ತಾರೆ?
ಒಂದು ಪ್ರಧಾನ ವಾಕ್ಯಕ್ಕೆ ಅನೇಕ ಅಧೀನ ವಾಕ್ಯ ವೃಂದಗಳು ಸೇರಿ ವಾಕ್ಯವಾಗಿದ್ದಲ್ಲಿ ಅದು ಎಂತಹ ವಾಕ್ಯ?
ಈ ಕೆಳಗಿನ ಎರಡೂ ವಾಕ್ಯಗಳನ್ನು ಸೇರಿಸಿ ಒಂದೇ ವಾಕ್ಯ ಮಾಡಿ ಬರೆಯಿರಿ. (ಸಂಯೋಜಿತ ವಾಕ್ಯ)
ಸಂಯೋಜಿತ ವಾಕ್ಯ:
೧. ನೆನ್ನೆಯ ದಿನ ನಮ್ಮ ಊರಿನಲ್ಲಿ ಮಳೆ ಬಂದಿತು. ೨. ಇದ್ದಕ್ಕಿದ್ದಂತೆ ನದಿ ತುಂಬಿ ಹರಿಯಿತು.
೧) ರಾಮನ ಯಜ್ಞದ ಕುದುರೆಯನ್ನು ಲವನು ಕಟ್ಟಿಹಾಕಿದನು. ೨) ಇವರಿಬ್ಬರ ನಡುವೆ ಘೋರವಾದ ಯುದ್ಧ ನಡೆಯಿತು. ೪೬ ಸಂಯೋಜಿತ ವಾಕ್ಯ
ಸಂಯೋಜಿತ ವಾಕ್ಯ:
೧) ಬಾಲ್ಯದಿಂದಲೂ ರವಿಯ ಗೆಳೆಯ ರಾಜು. ೨) ರಾಜುವಿಗೆ ಇರುವ ಒಬ್ಬನೇ ಬಾಲ್ಯ ಗೆಳೆಯ ರವಿ.
ಸಂಯೋಜಿತ ವಾಕ್ಯ:
೧) ಕುವೆಂಪು ಅವರು ರಾಮಾಯಾಣ ಮಹಾಕಾವ್ಯವನ್ನು ಬರೆದಿದ್ದಾರೆ. ೨) ಕುವೆಂಪು ಅವರು ಕಾದಂಬರಿಯನ್ನೂ ಬರೆದಿದ್ದಾರೆ.
ಸಂಯೋಜಿತ ವಾಕ್ಯ:
ಕುಮುದ ಆಟದ ಮೈದಾನದಲ್ಲಿ ಓಡುವಾಗ ಎಡವಿ ಬಿದ್ದಳು. ೨) ಇದನ್ನು ನೋಡಿದ ರಾಮು ಕೈಹಿಡಿದು ಮೇಲೆತ್ತಿದನು.
ಸಂಯೋಜಿತ ವಾಕ್ಯ:
ಸೂಚನೆ: ನಾವು ಎರಡೂ ವಾಕ್ಯ ಕೂಡಿಸಿ ಒಂದೇ ವಾಕ್ಯ ಮಾಡುವಾಗ `ಆದ್ದರಿಂದ’, `ಆದುದರಿಂದ’, `ಮತ್ತು’ `ಹಾಗೂ’, `ಕೂಡಲೇ’ - ಎಂಬ ಪದ ಬಳಸಿದ್ದೀವೆಯಲ್ಲವೆ? ಈ ರೀತಿ ರಚಿಸಿದ ವಾಕ್ಯಗಳೇ ಸಂಯೋಜಿತ ವಾಕ್ಯ
ಈ ಕೆಳಗಿನ ಪದಗಳ ಗುಂಪನ್ನು ಕ್ರಮವಾಗಿ ಜೋಡಿಸಿ ಅರ್ಥಪೂರ್ಣ ವಾಕ್ಯ ಮಾಡಿ. (ಮಿಶ್ರವಾಕ್ಯ)