ಅಲಂಕಾರ- ಬಹು ಆಯ್ಕೆ ಪ್ರಶ್ನೆಗಳು
೧. ‘ಕಣ್ಣಿನ ತೋರಣ’ ಈ ಅಲಂಕಾರಕ್ಕೆ ಸೇರಿದೆ…………
ಎ) ರೂಪಕ ಬಿ) ದೃಷ್ಟಾಂತ
ಸಿ) ಉತ್ಪ್ರೇಕ್ಷಾಲಂಕಾರ ಡಿ) ಉಪಮಾ
೨ ‘ಹಸುಮಕ್ಕಳು’ ಇಲ್ಲಿರುವ ಅಲಂಕಾರ…………….
ಎ) ರೂಪಕ ಬಿ) ಉಪಮ
ಸಿ) ಉತ್ಪ್ರೇಕ್ಷಾಲಂಕಾರ ಡಿ) ಯಾವುದೂಅಲ್ಲ
೩. ‘ಅಗ್ನಿದಿವ್ಯ’ ಇದು ಈ ಅಲಂಕಾರಕ್ಕೆ ಉದಾಹರಣೆ……
ಎ) ರೂಪದ ಬಿ) ದೃಷ್ಟಾಂತ
ಸಿ) ಉಪಮಾ ಡಿ) ಅರ್ಥಾಂತರನ್ಯಾಸ
೪. ‘ಗುಂಡುಹೊಡೆದರು ಮುಂಗಾರಿಸಿಡಿಲ ಸಿಡಿದ್ಹಾಂಗ’ ಇಲ್ಲಿರುವ ಅಲಂಕಾರ
ಎ) ದೃಷ್ಟಾಂತ ಬಿ) ರೂಪಕ
ಸಿ) ಉಪಮಾ ಡಿ) ಶ್ಲೇಷ
೫. ‘ನಡುವೆ ಹಾಕ್ಕೊಂಡು ಹೊಡದರೊ ಗುಂಡ ಕರುಣ ಇಲ್ಲದ್ಹಂಗ ಇದು ಈ ಅಲಂಕಾರ
ಎ) ದೃಷ್ಟಾಂತ ಬಿ) ರೂಪಕ
ಸಿ) ಉಪಮಾ ಡಿ) ಶ್ಲೇಷಾ
೬ ಶಬ್ದಾಲಂಕಾರಗಳಲ್ಲಿ ಇದು ಇಲ್ಲ
ಎ) ಅನುಪ್ರಾಸ ಬಿ) ಗಮಕ
ಸಿ) ಯಮಕ ಡಿ) ಚಿತ್ರಕವಿತ್ವ
೭ ಎಳಗಿಳಿಗಳಬಳಗಗಳು ನಳನಳಿಸಿ ಬೆಳೆದ ಕಳೆವಿಯ ಎಳೆಯಕಾಳಿಗೆ ಎಳಸಿ ಬಂದವು’ಇದು ಅಲಂಕಾರ
ಎ) ಉಪಮ ಬಿ) ಅರ್ಥಾಲಂಕಾರ
ಸಿ) ವ್ಯತ್ಯಾನುಪ್ರಾಸ ಡಿ) ಶಬ್ದಾಲಂಕಾರ
೮ ಮಾತುಬಲ್ಲವನಿಗೆ ಜಗಳವಿಲ್ಲ ಊಟಬಲ್ಲವನಿಗೆ ರೋಗವಿಲ್ಲ’ಇಲ್ಲಿನ ಅಲಂಕಾರ
ಎ) ದೃಷ್ಟಾಂತ ಬಿ) ಉಪಮ
ಸಿ) ಉತ್ಪ್ರೇಕ್ಷಾಲಂಕಾರ ಡಿ) ರೂಪಕ
೯ ಇದು ಶಬ್ದಾಲಂಕಾರದಲ್ಲಿ ಒಂದು
ಎ) ಗಮಕ ಬಿ) ಯಮಕ
ಸಿ) ರೂಪಕ ಡಿ) ದೀಪಿಕ
೧೦ ಇದು ಅರ್ಥಾಲಂಕಾರದಲ್ಲಿ ಒಂದು
ಎ) ಯಮಕ ಬಿ) ಅನುಪ್ರಾಸ
ಸಿ) ಗಮಕ ಡಿ) ರೂಪಕ
೧೧. ಅಮೃತದೊಳು ವಿಷಬೆರೆತಂತೆ ‘ ಇಲ್ಲಿರುವ ಅಲಂಕಾರ
ಎ) ರೂಪಕ ಬಿ) ಉಪಮಾ
ಸಿ) ಶೇಷಾ ಡಿ) ದೃಷ್ಟಾಂತ
೧೨. ಮರವನ್ನೇರಿದ ಮರ್ಕಟನಂತೆ’ ಇಲ್ಲಿರುವ ಉಪಮಾನ
ಎ) ಮರ್ಕಟ ಬಿ) ಮರ
ಸಿ) ಅಂತೆ ಡಿ) ಮರ್ಕಟ ಮರ
೧೩. ‘ಮಾಣ ಕ್ಯ ದೀಪ್ತಿ’ ಇಲ್ಲಿರುವ ಅಲಂಕಾರ
ಎ) ಉಪಮಾ ಬಿ) ಶ್ಲೇಷಾ
ಸಿ) ರೂಪಕ ಡಿ) ದೃಷ್ಟಾಂತ
೧೪. ಎರುಡು ಬೇರೆ ಬೇರೆ ವಾಕ್ಯಗಳು ಉಪಮೇಯ, ಉಪಮಾನ ಅರ್ಥಸದೃಶ್ಯದಿಂದ ಬಿಂಬಪ್ರತಿಬಿಂಬ ಭಾವದಂತೆ ತೊರುತ್ತಿದ್ದಲ್ಲಿ
ಎ) ಉಪಮಾ ಬಿ) ರೂಪಕಾ
ಸಿ) ಅರ್ಥತಾಂತರನ್ಯಾಸ ಡಿ) ದೃಷ್ಟಾಂತ
೧೫. ಉಪಮೇಯ, ಉಪಮಾನ ಗಳ ಅಭೇದ ಕಲ್ಪನೆ ಇದ್ದಲ್ಲಿ-
ಎ) ಶ್ಲೇಷಾ ಬಿ) ಉಪಮಾಲಂಕಾರ ಸಿ) ರೂಪಕಾಲಂಕಾರ ಡಿ) ದೃಷ್ಟಾಂತ
೧೬. ಅಲಂಕಾರಗಳಲ್ಲಿ ಎಷ್ಟು ವಿಧಗಳು
ಎ) ಎರಡು ಬಿ) ಮೂರು
ಸಿ) ನಾಲ್ಕು ಡಿ) ಐದು
೧೭ ‘ವರ್ಣ್ಯದ ಮತ್ತೊಂದು ಹೆಸರು
ಎ) ಉಪಮಾ ಬಿ) ಶ್ಲೇಷಾ
ಸಿ) ಉಪಮಾನ ಡಿ) ದೃಷ್ಟಾಂತ
೧೮. ಉಪಮಾನ ವನ್ನು ಹೀಗೆ ಕರೆಯುತ್ತಾರೆ
ಎ) ವರ್ಣ್ಯ ಬಿ) ಅವರ್ಣ್ಯ
ಸಿ) ಉಪಮೇಯ ಡಿ) ದೃಷ್ಟಾಂತ
೧೯ ‘ಜಾತಿಯ ಬಚ್ಚಲು’ ಇಲ್ಲಿರುವ ಅಲಂಕಾರ
ಎ) ರೂಪಕ ಬಿ) ಉಪಮ
ಸಿ) ದೃಷ್ಟಾಂತ ಡಿ) ಅರ್ಥಾಂತರನ್ಯಾಸ
೨೦. ‘ಗುಡಿಮನೆ’ ಇಲ್ಲಿರುವ ಅಲಂಕಾರ
ಎ) ಉಪಮಾ ಬಿ) ಅರ್ಥಾಲಂಕಾರ
ಸಿ) ರೂಪಕ ಡಿ) ದೃಷ್ಟಾಂತ
೨೧. ‘ರಾಜೀವಸಖ’ ಇಲ್ಲರುವ ಅಲಂಕಾರ
ಎ) ರೂಪಕ ಬಿ) ಅರ್ಥಾಂತರನ್ಯಾಸ
ಸಿ) ಉಪಮಾ ಡಿ) ಶ್ಲೇಷಾ
೨೨ ಎರಡು ಬೇರೆ ಬೇರೆ ವಾಕ್ಯಗಳು ಉಪಮೇಯ ಉಪಮಾನ ಅರ್ಥ ಸಾದೃಶ್ಯದಿಂದ ಬಿಂಬ ಪ್ರತಿಬಿಂಬ ಭಾವದಂತೆ ತೋರುತ್ತಿದ್ದರೆ ಅದು ಈ ಅಲಂಕಾರ
ಎ) ಉಪಮಾ ಬಿ) ರೂಪಕ
ಸಿ) ಅರ್ಥಾಂತರನ್ಯಾಸ ಡಿ) ದೃಷ್ಟಾಂತ
೨೩. ಉಪಮೇಯ ಉಪಮಾನಗಳ ಅಭೇದ ಕಲ್ಪನೆಯೇ
ಎ) ಶ್ಲೇಷ ಬಿ) ಉಪಮಾಅಲಂಕಾರ
ಸಿ) ರೂಪಕಲಂಕಾರ ಡಿ)ದೃಷ್ಟಾಂತ
೨೪. ‘ಬಳಾರಿಯ ಮನೆಯಂ ಪರಕೆಯ ಕುರಿಯಂ ಪೊಗಿಸುವಂತೆ ಇಲ್ಲಿರುವ ಅಲಂಕಾರ
ಎ) ಶ್ಲೇಷಾ ಬಿ) ಉಪಮಾ
ಸಿ) ರೂಪಕಾ ಡಿ) ಅರ್ಥಾಂತರನ್ಯಾಸ
೨೫”ಹಸುರಾಗಸ,ಹಸುರು ಮುಗಿಲು ಹಸರುಗದ್ದೆಯಾ ಬಯಲು” ಈ ಸಾಲಿನಲ್ಲಿರುವ ಅಲಂಕಾರ ಇದು
ಎ) ಛೇಕಾನುಪ್ರಾಸ ಬಿ) ಉಪಮಾಲಂಕಾರ
ಸಿ) ಯಮಕಾಲಂಕಾರ ಡಿ) ರೂಪಕಾಲಂಕಾರ
೨೬ “ಹಸುರತ್ತಲ್ ಹಸುರಿತ್ತಲ್ ಹಸುರೆತ್ತಲ್ “ ಈ ಸಾಲಿನ್ಲಲಿರುವ ಅಲಂಕಾರವಿದು
ಎ) ರೂಪಕ ಬಿ) ವ್ಯತ್ಯಾನುಪ್ರಾಸ
ಸಿ) ಛೇಕಾನುಪ್ರಾಸ ಡಿ) ಉಪಮಾ
೨೭. ನೀಚರಿಗೆ ಮಾಡಿದ ಉಪಕಾರವು ಹಾವಿಗೆ ಹಾಲೆರೆದಂತೆ” ಈ ವಾಕ್ಯದಲ್ಲಿರುವ ಅಲಂಕಾರ
ಎ) ರೂಪಕ ಬಿ) ಉಪಮಾ
ಸಿ) ಅರ್ಥಾಂತರನ್ಯಾಸ ಡಿ) ದೃಷ್ಟಾಂತ
೨೮ ಎರಡೆರಡು ವ್ಯಂಜನಗಳು ಪುನರಾವರ್ತನೆಗೊಂಡರೆ ಅದನ್ನು ಹೀಗೆನ್ನುವರು
ಎ) ಛೇಕಾನುಪ್ರಾಸ ಬಿ) ವ್ಯತ್ಯಾನುಪ್ರಾಸ
ಸಿ) ಯಮಕ ಡಿ) ರೂಪಕ
೨೯ ‘ತನ್ನ ಬಡ ಬಂಧುವಾದ ಬೆಕ್ಕಿನಂತೆ’ ಇಲ್ಲಿರುವ ಅಲಂಕಾರ
ಎ) ಶ್ಲೇಷಾ ಬಿ) ರೂಪಕ
ಸಿ) ಉಪಮಾ ಡಿ) ದೃಷ್ಟಾಂತ
೩೦. ‘ವದನಾರವಿಂದ’ ಈ ಅಲಂಕಾರವಾಗಿದೆ.
ಎ) ದೃಷ್ಟಾಂತ ಬಿ) ಉಪಮಾ
ಸಿ) ಶ್ಲೇಷಾ ಡಿ) ರೂಪಕ
೩೧ ಉಪಮೇಯವಾದ ವಸ್ತುವನ್ನು ಅಥವಾ ಸನ್ನಿವೇಶವನ್ನು ಉಪಮಾನವಾದ ವಸ್ತುವನ್ನಾಗಿ ಕಲ್ಪಿಸಿ ಹೇಳುವ ಅಲಂಕಾರವಿದು
ಎ) ಉಪಮಾ ಬಿ) ದೃಷ್ಟಾಂತ
ಸಿ) ಶ್ಲೇಷಾ ಡಿ) ಉತ್ಪ್ರೇಕ್ಷಾಲಂಕಾರ
೩೨ ಒಂದು ಪದವು ಒಂದಕ್ಕಿಂತ ಹೆಚ್ಚು ಅರ್ಥಕೊಡುವಂತಿದ್ದರೆ ಅಂತಹ ಪದಗಳಿರುವ
ಅಲಂಕಾರವನ್ನು ಹೀಗೆನ್ನುವರು---
ಎ) ಅರ್ಥಾಲಂಕಾರ ಬಿ) ಉಪಮಾಲಂಕಾರ
ಸಿ) ಶ್ಲೇಷಾಲಂಕಾರ ಡಿ) ಉತ್ಪ್ರೇಕ್ಷಾಲಂಕಾರ
೩೩ ‘ಮುಖಕಮಲ’ ಪದವು ಈ ಅಲಂಕಾರಕ್ಕೆ ಉದಾಹರಣೆ.
(ಎ) ಯಮಕ (ಬಿ) ಉಪಮಾ
(ಸಿ) ಶ್ಲೇಷಾ (ಡಿ) ರೂಪಕ
೩೪. ‘ಶಬ್ದ ಅಥವಾ ಪದಗಳ ಜೋಡಣೆಯ ಮೂಲಕ ಕಾವ್ಯ ಅಥವಾ ಮಾತಿನ ಸೌಂರ್ಯ ಹೆಚ್ಚಿದರೆ’ ಅದನ್ನು ಈ ಅಲಂಕಾರವೆಂದು ಕರೆಯಲಾಗುತ್ತದೆ.
(ಎ) ಅರ್ಥಾಲಂಕಾರ (ಬಿ) ಉಪಮಾಲಂಕಾರ
(ಸಿ) ಶಬ್ದಾಲಂಕಾರ (ಡಿ) ರೂಪಕಾಲಂಕಾರ
೩೫ “ಭೀಮ ದರ್ಯೋಧನರು ಮದಗಜಗಳಂತೆ ಹೋರಾಡಿದರು” ಈ ವಾಕ್ಯದಲ್ಲಿ ಉಪಮಾನ ಪದ.
(ಎ) ಭೀಮದುರ್ಯೋಧನರು (ಬಿ) ಮದಗಜಗಳು
(ಸಿ) ಅಂತೆ (ಡಿ) ಹೋರಾಡಿದರು
೩೬. ಈ ಕೆಳಗಿನವುಗಳಲ್ಲಿ ಶಬ್ದಾಲಂಕಾರಕ್ಕೆ ಉದಾಹರಣೆ:
(ಎ) ಉಪಮಾಲಂಕಾರ (ಬಿ) ರೂಪಕಾಲಂಕಾರ
(ಸಿ) ಯಮಕಾಲಂಕಾರ (ಡಿ) ಉತ್ಪ್ರೇಕ್ಷಾಲಂಕಾರ
೩೭ ‘ಅಚ್ಛೋದ ಸರೋವರವು ತ್ರೈಲೋಕ್ಯ ಲಕ್ಷ್ಮಿಯು ತನ್ನ ಸೌಂರ್ಯವನ್ನು ನೋಡಲು ಮಾಡಿಟ್ಟ ರನ್ನಗನ್ನಡಿಯೋ ಎಂಬಂತೆ ಶೋಭಿಸಿತು.’ ಇಲ್ಲಿರುವ ಅಲಂಕಾರ:
(ಎ) ಉಪಮಾ (ಬಿ) ದೃಷ್ಟಾಂತ
(ಸಿ) ಉತ್ಪ್ರೇಕ್ಷಾಲಂಕಾರ (ಡಿ) ಅರ್ಥಾಂತರನ್ಯಾಸ
೩೮. ‘ಆತನು ಪರೀಕ್ಷೆಯಲ್ಲಿ ಪ್ರಥಮಸ್ಥಾನ ಪಡೆದು ಉತ್ತೀರ್ಣನಾದನು. ಬುದ್ಧಿವಂತರಾದ ಮಕ್ಕಳಿಗೆ ಪರೀಕ್ಷೆಯೊಂದು ಲೆಕ್ಕವೇ?’ ಇಲ್ಲಿರುವ ಅಲಂಕಾರ:
(ಎ) ಅರ್ಥಾಂತರನ್ಯಾಸ (ಬಿ) ದೃಷ್ಟಾಂತ
(ಸಿ) ಉತ್ಪ್ರೇಕ್ಷಾಲಂಕಾರ (ಡಿ) ರೂಪಕ
೩೯. ‘ಪದ ಅಥವಾ ವಾಕ್ಯದ ಅರ್ಥ ಚಮತ್ಕಾರದಿಂದ ಕಾವ್ಯದ ಸೌಂದರ್ಯ ಹೆಚ್ಚಿದರೆ’ ಅದು ಈ ಅಲಂಕಾರವಾಗಿದೆ.
(ಎ) ಅರ್ಥಾಲಂಕಾರ (ಬಿ) ರೂಪಕಾಲಂಕಾರ
(ಸಿ) ಶಬ್ದಾಲಂಕಾರ (ಡಿ) ಉಪಮಾಲಂಕಾರ
೪೦. ‘ಮಾತು ಬಲ್ಲವನಿಗೆ ಜಗಳವಿಲ್ಲ; ಊಟ ಬಲ್ಲವನಿಗೆ ರೋಗವಿಲ್ಲ’ ಈ ವಾಕ್ಯದಲ್ಲಿರುವ ಅಲಂಕಾರ:
(ಎ) ಉತ್ಪ್ರೇಕ್ಷಾಲಂಕಾರ (ಬಿ) ರೂಪಕ
(ಸಿ) ದೃಷ್ಟಾಂತ (ಡಿ) ಉಪಮಾ
೪೦. “ಮಗುವಿನ ಮನಸ್ಸು ಹೂವಿನಂತೆ ಮೃದುವಾಗಿದೆ” ಈ ವಾಕ್ಯದಲ್ಲಿರುವ ಸಮಾನಧರ್ಮ:
(ಎ) ಮಗುವಿನ (ಬಿ) ಮನಸ್ಸು
(ಸಿ) ಹೂವಿನಂತೆ (ಡಿ) ಮೃದು
೪೧. ‘‘ಒಳಗಿನ ಮಂದಿ ಗುಂಡು ಹೊಡಿದರೊ ಮುಂಗಾರಿ ಸಿಡಿಲ ಸಿಡಿದ್ಹಾಂಗ’’ ಇಲ್ಲಿರುವ ಅಲಂಕಾರ:
(ಎ) ಉತ್ಪ್ರೇಕ್ಷಾಲಂಕಾರ (ಬಿ) ರೂಪಕ
(ಸಿ) ದೃಷ್ಟಾಂತ (ಡಿ) ಉಪಮಾ
೪೨. ‘ನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನ ದೊಂದಳವು?’ ಈ ವಾಕ್ಯದಲ್ಲಿರುವ ಅಲಂಕಾರ:
(ಎ) ಉಪಮಾ (ಬಿ) ರೂಪಕ
(ಸಿ) ಉತ್ಪ್ರೇಕ್ಷಾಲಂಕಾರ (ಡಿ) ದೃಷ್ಟಾಂತ
೪೩. ‘ಒಂದು ಅಥವಾ ಎರಡು ವ್ಯಂಜನಾಕ್ಷರಗಳು ಪದ್ಯದ ಸಾಲುಗಳಲ್ಲಿ ಮತ್ತೆ ಮತ್ತೆ ಪುನರಾವರ್ತನೆಗೊಂಡರೆ’ ಅದನ್ನು ಈ ಅಲಂಕಾರವೆಂದು ಕರೆಯುತ್ತಾರೆ;
(ಎ) ಛೇಕಾನುಪ್ರಾಸ (ಬಿ) ಚಿತ್ರಕವಿತ್ವ
(ಸಿ) ಯಮಕ (ಡಿ) ವೃತ್ಯನುಪ್ರಾಸ
೪೪. ‘ಒಂದು ಪದವು ಒಂದಕ್ಕಿಂತ ಹೆಚ್ಚು ಅರ್ಥಕೊಡುವಂತಿದ್ದು ಉಪಮೇಯವಾಗಿಯೂ ಉಪಮಾನವಾಗಿಯೂ ವರ್ಣಿತವಾಗಿದ್ದರೆ’ ಹೀಗೆಂದು ಕರೆಯುತ್ತಾರೆ;
(ಎ) ದೃಷ್ಟಾಂತಾಲಂಕಾರ (ಬಿ) ಉಪಮಾಲಂಕಾರ
(ಸಿ) ಶಬ್ದಾಲಂಕಾರ (ಡಿ) ಶ್ಲೇಷಾಲಂಕಾರ
೪೫. ‘ಅಳ್ಳಿರಿಯುತಿಪ್ಪ ಎಮ್ಮ ಒಡಲಬೇಗೆಯ ಬೆಂಕಿಯುರಿ ನಿನ್ನನಿರಿಯದೆ ಪೇಳು ವಿಶ್ವಾಮಿತ್ರ” ಇಲ್ಲಿರುವ ಅಲಂಕಾರ:
(ಎ) ಉತ್ಪ್ರೇಕ್ಷಾಲಂಕಾರ (ಬಿ) ದೃಷ್ಟಾಂತ
(ಸಿ) ಉಪಮಾ (ಡಿ) ರೂಪಕ
೪೬ ಈ ಕೆಳಗಿನವುಗಳಲ್ಲಿ ಅರ್ಥಾಲಂಕಾರಕ್ಕೆ ಉದಾಹರಣೆ:
(ಎ) ಯಮಕ (ಬಿ) ರೂಪಕ
(ಸಿ) ಅನುಪ್ರಾಸ (ಡಿ) ಚಿತ್ರಕವಿತ್ವ
೪೭ ‘ಎರಡೆರಡು ವ್ಯಂಜನಗಳು ಪದ್ಯದ ಸಾಲುಗಳಲ್ಲಿ ಪುನರಾವರ್ತನೆಗೊಂಡರೆ’ ಅದನ್ನು ಈ ಅಲಂಕಾರವೆAದು ಕರೆಯುತ್ತಾರೆ;
(ಎ) ಛೇಕಾನುಪ್ರಾಸ (ಬಿ) ಚಿತ್ರಕವಿತ್ವ
(ಸಿ) ಯಮಕ (ಡಿ) ವೃತ್ಯನುಪ್ರಾಸ
೪೮ ‘‘ಸಿಡಿಲ ಸಿಡಿದ್ಹಾಂಗ ಗುಂಡು ಸುರಿದಾವ’’ ಇಲ್ಲಿರುವ ಅಲಂಕಾರ:
(ಎ) ಉತ್ಪ್ರೇಕ್ಷಾಲಂಕಾರ (ಬಿ) ರೂಪಕ
(ಸಿ) ಉಪಮಾ (ಡಿ) ದೃಷ್ಟಾಂತ
೪೯. ‘ಮೂರು ಅಥವಾ ಅದಕ್ಕಿಂತ ಹೆಚ್ಚು ಅಕ್ಷರಗಳುಳ್ಳ ಪದವಾಗಲಿ, ಪದಭಾಗವಾಗಲಿ ಒಂದು ಪದ್ಯದ ಆದಿ, ಮಧ್ಯ ಅಥವಾ ಅಂತ್ಯದಲ್ಲಿ ನಿಯತವಾಗಿ ಪುನಃ ಪುನಃ ಬಂದರೆ ಅದು’ ಅದನ್ನು ಈ ಅಲಂಕಾರವೆಂದು ಕರೆಯುತ್ತಾರೆ;
(ಎ) ಛೇಕಾನುಪ್ರಾಸ (ಬಿ) ಚಿತ್ರಕವಿತ್ವ
(ಸಿ) ಯಮಕ (ಡಿ) ವೃತ್ಯನುಪ್ರಾಸ
೫೦. “ನೀಚರಿಗೆ ಮಾಡಿದ ಉಪಕಾರವು ಹಾವಿಗೆ ಹಾಲೆರೆದಂತೆ” ಇಲ್ಲಿರುವ ಅಲಂಕಾರ :
(ಎ) ಉತ್ಪ್ರೇಕ್ಷಾಲಂಕಾರ (ಬಿ) ರೂಪಕ
(ಸಿ) ಉಪಮಾ (ಡಿ) ದೃಷ್ಟಾಂತ
೫೧. “ಮಾರಿಗೌತಣವಾಯ್ತು ನಾಳಿನ ಭಾರತವು” ಇಲ್ಲಿರುವ ಅಲಂಕಾರ:
(ಎ) ದೃಷ್ಟಾಂತ (ಬಿ) ಉತ್ಪ್ರೇಕ್ಷಾಲಂಕಾರ
(ಸಿ) ರೂಪಕ (ಡಿ) ಶ್ಲೇಷಾ
೫೨. “ದುಷ್ಟಬುದ್ಧಿ ತನ್ನ ತಂದೆಯಂ ಕೊಂದಲ್ಲದೆ ಮಾಣೆನೆಂದುಯ್ವಂತುಯ್ದು ಬಳಾರಿಯ ಮನೆಯಂ ಪರಕೆಯ ಕುರಿಯಂ ಪುಗಿಸುವಂತೆ ವಟವಿಟಪಿ ಕೋಟರಕುಟೀರಾಂತರಮಂ ಪುಗಿಸಿ” ಇಲ್ಲಿರುವ ಅಲಂಕಾರ:
(ಎ) ಉಪಮಾ (ಬಿ) ರೂಪಕ
(ಸಿ) ಶ್ಲೇಷಾ (ಡಿ) ಚಿತ್ರಕವಿತ್ವ