ಲೇಖನ ಚಿಹ್ನೆಗಳು- ವ್ಯಾಕರಣಾಂಶಗಳು ಬಹುಆಯ್ಕೆ ಪ್ರಶ್ನೆಗಳು.
೧. ‘ನಿಮ್ಮ ಪುಸ್ತಕದಲ್ಲಿ ಗಾಂಧಿಮೇಲೆ ಒಂದು ಪಾಠವಿದೆಯಲ್ಲ’ ಇಲ್ಲಿ ಬಳಸಿರುವ ಚಿಹ್ನೆ……
ಎ) ಉದ್ಧರಣ ಬಿ) ಪ್ರಶ್ನಾರ್ಥಕ
ಸಿ) ಭಾವಸೂಚಕ ಡಿ) ವಾಕ್ಯವೇಷ್ಠನ
೨.ದನು ಪೇಳ್ದದಾರಿಯೊಳೆ ನಾವು ಬಂದಿಹೆವೆ ಈ ವಾಕ್ಯದ ಕೊನೆಗಿರಬೇಕಾದ ಲೇಖನಚಿಹ್ನೆ ಇದಾಗಿದೆ.
ಎ) ಪೂರ್ಣವಿರಾಮ ಬಿ) ಭಾವಸೂಚಕ
ಸಿ) ಉದ್ಧರಣ ಡಿ) ಪ್ರಶ್ನಾರ್ಥಕ
೩ ತಾವು ಕಡಿಮೆಮಾತಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ. ಇಲ್ಲಿ ಬಳಸಿರುವ ಚಿನ್ಹೆ
ಎ) ಉದ್ಧರಣ ಬಿ) ಆವರಣ
ಸಿ) ಪೂರ್ಣವಿರಾಮ ಡಿ) ಅರ್ಧವಿರಾಮ
೪. ಪಾರಿಭಾಷಿಕ ಪದಗಳನ್ನು ಬಳಸುವಾಗ ಈ ಚಿಹ್ನೆ ಬಳಸುತ್ತೇವೆ
ಎ) ವಾಕ್ಯವೇಷ್ಟನ ಬಿ) ಉದ್ಧರಣ
ಸಿ) ಅಲ್ಪವಿರಾಮ ಡಿ) ಅರ್ಧವಿರಾಮ
೫. ಒಬ್ಬರು ಹೇಳುವ ಮಾತನ್ನೇ ಯತಾವತ್ತಾಗಿ ಬರೆಯುವಾಗ ಈ ಚಿಹ್ನೆ ಬಳಸುತ್ತೇವೆ
ಎ) ವಾಕ್ಯವೇಷ್ಟನ ಬಿ) ಉದ್ದರಣ
ಸಿ) ಭಾವಸೂಚಕ ಡಿ) ಅರ್ಧವಿರಾಮ
೬. “ಶಿಕ್ಷಣವು ಕೆಲವೇ ಜನರ ಸ್ವತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧಹಕ್ಕಾಗ ಬೇಕು” ಇಲ್ಲಿ ಬಳಸಿರುವ ಚಿಹ್ನೆ
ಎ) ಪ್ರಶ್ನಾರ್ಥಕ ಬಿ) ಉದ್ಧರಣ
ಸಿ) ಅಲ್ಪವಿರಾಮ ಡಿ) ವಾಕ್ಯವೇಷ್ಟನ
೭ ಕನ್ನಡ ಭಾಷೆಯಲ್ಲಿ ಇಂಗ್ಲಿಷ್ , ಪ್ರಂಚ್, ಪರ್ಷಿಯನ್ ಭಾಷೆಗಳನ್ನ ಬಳಸಲಾಗಿದೆ. ಇಲ್ಲಿ ಬಳಸಿರುವ ಚಿನ್ಹೆ
ಎ) ವಾಕ್ಯವೇಷ್ಟನ ಬಿ) ಉದ್ಧರಣ
ಸಿ) ಅಲ್ಪವಿರಾಮ ಡಿ) ಅರ್ಧವಿರಾಮ
೮. ಹೆಚ್ಚಿನ ವಿವರಣೆಗಳನ್ನು, ಅರ್ಥಗಳನ್ನು ನೀಡುವ ಸಂದರ್ಭದಲ್ಲಿ ಬಳಸುವ ಲೇಖನ ಚಿಹ್ನೆ
ಎ) ಉದ್ಧರಣ ಚಿಹ್ನೆ ಬಿ) ವಾಕ್ಯವೇಷ್ಟನ
ಸಿ) ಆವರಣ ಡಿ) ವಿವರಣಾತ್ಮಕ
೯. ‘ಹರ್ಷ,ಅಚ್ಚರಿ ಸಂತೋಷ, ದು:ಖ, ಕೋಪ,ತಿರಸ್ಕಾರ, ಇತ್ಯಾದಿ ಭಾವನೆಗಳನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ ಬಲಸುವ ಚಿಹ್ನೆ
ಎ) ವಿವರಣಾತ್ಮಕ ಚಿನ್ಹೆ ಬಿ) ಪ್ರಶ್ನಾರ್ಥಕ
ಸಿ) ಉದ್ಧರಣ ಡಿ)
೧೦. ಒಂದು ಪೂರ್ಣ ಕ್ರಿಯೆಯಿಂದ ಕೂಡಿದ ವಾಕ್ಯದ ಕೊನೆಯಲ್ಲಿ ಬಳಸುವ ಚಿಹ್ನೆ ಇದು
ಎ) ಅರ್ಧವಿರಾಮ ಬಿ) ಪೂರ್ಣವಿರಾಮ
ಸಿ) ಅಲ್ಪವಿರಾಮ ಡಿ) ಪ್ರಶ್ನಾರ್ಥಕ
೧೧. ಅನೇಕ ಉಪ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದಾಗ ಉಪವಾಕ್ಯ ಮುಗಿದಾಗೆಲ್ಲಾ ಬಳಸಲಾಗುವ ಚಿಹ್ನೆ
ಎ) ಅರ್ಧವಿರಾಮ ಬಿ) ಅಲ್ಪವಿರಾಮ ಸಿ) ಪೂರ್ಣವಿರಾಮ ಡಿ) ಆವರಣ ಚಿಹ್ನೆ
೧೨. ಹರ್ಷ,ಆಸ್ಚರ್ಯ,ಸಂತೋಷ ವಿಷಾದ, ದು:ಖ,ಮುಂತಾದ ಭಾವನೆಗಳನ್ನುವ್ಯಕ್ತ ಪಡಿಸುವಾಗ ಬಳಸುವ ಚಿಹ್ನೆ ಇದು
ಎ) ಪ್ರಶ್ನಾರ್ಥಕ ಬಿ) ಭಾವಸೂಚಕ
ಸಿ) ಉದ್ಧರಣ ಡಿ) ಆವರಣ
೧೩. ಒಬ್ಬರು ಹೇಳಿದ ಮಾತನ್ನೇ ಯಥಾವತ್ತಾಗಿ ಬರೆಯುವಾಗ ಈ ಚಿಹ್ನೆಯನ್ನ ಬಳಸಲಾಗುವುದು.
ಎ) ಉದ್ಧರಣ ಚಿಹ್ನೆ ಬಿ) ವಾಕ್ಯವೇಷ್ಟನ ಚಿಹ್ನೆ ಸಿ) ಭಾವಸೂಚಕ ಚಿಹ್ನೆ ಡಿ) ಆವರಣ ಚಿಹ್ನೆ
೧೪.ಪಾರಿಭಾಷಿಕ ಪದಗಳನ್ನು ಬಳಸುವಾಗ ,ಅನ್ಯಭಾಷಾ ಪದಗಳನ್ನು ಬಳಸುವಾಗ. ಪ್ರಮುಖ ಪದಗಳನ್ನು ಸೂಚಿಸುವಾಗ,ಈ ಚಿಹ್ನೆಯನ್ನು ಬಳಸಬೇಕು.
ಎ) ವಾಕ್ಯವೇಷ್ಟನ ಬಿ) ಉದ್ಧರಣ
ಸಿ) ವಿವರಣ ಡಿ) ಆವರಣ.
೧೫ ಒಂದು ಅಭಿಪ್ರಾಯದ ವಿವರಣೆ ಮುಂದೆ ತಿಳಿಸಿದಂತೆ ಇದೆ ಎಂದು ತೋರಿಸುವ ಸಂದರ್ಭದಲ್ಲಿ ಈ ಚಿನ್ಹೆಯನ್ನುಬಳಸಲಾಗುವುದು
ಎ) ಆವರಣ ಚಿನ್ಹೆ ಬಿ) ವಾಕ್ಯವೇಷ್ಟನ ಚಿನ್ಹೆ
ಸಿ) ವಿವರಣಾತ್ಮಕ ಚಿನ್ಹೆ ಡಿ) ಉದ್ಧರಣ ಚಿನ್ಹೆ
೧೬. ಪಾರಿಭಾಷಿಕ ಪದಗಳನ್ನು ಬಳಸುವಾಗ, ಅನ್ಯಭಾಷಾಪದಗಳನ್ನು ಬಳಸುವಾಗ,ಪ್ರಮುಖ ಪದಗಳನ್ನು ಸೂಚಿಸುವಾಗ ಈ ಚಿನ್ಹೆಯನ್ನು ಬಳಸಬೇಕು.
ಎ) ಉದ್ಧರಣ ಬಿ) ವಾಕ್ಯವೇಷ್ಟನ
ಸಿ) ಆವರಣ ಡಿ) ವಿವರಣಾತ್ಮಕ
೧೭. ಒಂದು ಪದವನ್ನೋ ವಾಕ್ಯವನ್ನೋ ಹೇಳಿ ಅದಕ್ಕೆ ಸಮಾನಾರ್ಥಕ ಪದ/ವಾಕ್ಯವನ್ನೋ ಹೇಳುವಾಗ ಈ ಚಿಹ್ನೆಯನ್ನು ಬಳಸಬೇಕು.
ಎ) ವಿವಿರಣಾತ್ಮಕ ಬಿ) ವಾಕ್ಯವೇಷ್ಟನ ಸಿ) ಉದ್ಧರಣ ಡಿ) ಆವರಣ
೧೮. ಒಬ್ಬರು ಹೇಳಿದ ಮಾತನ್ನೇ ಯಥಾವತ್ತಾಗಿ ಬರೆಯುವಾಗ ಈ ಚಿಹ್ನೆಯನ್ನು ಬಳಸಲಾಗುವುದು
ಎ) ಆವರಣ ಬಿ) ಉದ್ಧರಣ
ಸಿ) ವಿವಿರಣಾ ಡಿ) ಭಾವಸೂಚಕ
೧೯. ಹರ್ಷ, ಸಂತೋಷ,ವಿಷಾದ, ದು:ಖ ಮುಂತಾದ ಭಾವನೆಗಳನ್ನು ಸೂಚಿಸುವ ಪದಗಳ ಮುಂದೆ ಈ ಚಿಹ್ನೆ ಬಳಸುವರು.
ಎ) ಪ್ರಶ್ನಾರ್ಥಕ ಬಿ) ಅರ್ಧವಿರಾಮ
ಸಿ) ಭಾವಸೂಚಕ ಡಿ) ಪ್ರಶ್ನಾರ್ಥಕ
೨೦. ಅನೇಕ ಉಪವಾಕ್ಯಗಳು ಒಂದು ಪ್ರಧಾನವಾಕ್ಯಕ್ಕೆ ಅಧೀನವಾಗಿದ್ದಾಗ ಉಪವಾಕ್ಯಗಳು ಮುಗಿದಾಗಲೆಲ್ಲಾ ಈ ಚಿನ್ಹೆ ಬಳಸುವರು.
ಎ) ಪೂರ್ಣವಿರಾಮ ಬಿ)ಅರ್ಧವಿರಾಮ
ಸಿ) ಅಲ್ಪವಿರಾಮ ಡಿ) ಪ್ರಶ್ನಾರ್ಥಕ
೨೧. “ನಿಲ್ಸಿ ನನ್ಮಕ್ಳ” ಇಲ್ಲಿರುವ ಚಿನ್ಹೆ
ಎ) ಪ್ರಶ್ನಾರ್ಥಕ ಬಿ) ಉದ್ಧರಣ
ಸಿ) ವಾಕ್ಯವೇಷ್ಠನ ಡಿ) ಭಾವಸೂಚಕ
೨೨. ನನಗಿಲ್ಲತಾಯಿ ಇಲ್ಲಿರಬೇಕಾದ ಚಿಹ್ನೆ
ಎ) ಪ್ರಶ್ನಾರ್ಥಕ ಬಿ) ಭಾವಸೂಚಕ
ಸಿ) ಉದ್ಧರಣ ಡಿ) ವಾಕ್ಯವೇಷ್ಠನ
೨೩. ಆಪ್ರಾಣಿ ತನ್ನ ಕುಲಧರ್ಮವನ್ನು ಪಾಲಿಸಿಕೊಂಡೆ ಬಂದಿತ್ತು ಈ ವಾಕ್ಯದಕೊನೆಯಲ್ಲಿರಬೇಕಾದ ಚಿಹ್ನೆ
ಎ) ಅಲ್ಪವಿರಾಮ ಬಿ) ಪ್ರಶ್ನಾರ್ಥಕ
ಸಿ) ಭಾವಸೂಚಕ ಡಿ) ಪೂರ್ಣವಿರಾಮ.
೩೪. ಮಡಿಯಬೇಕಾದರೆ ಮಾಡಿಯೇ ಮಡಿಯುತ್ತೇನೆ. ಇಲ್ಲಿರಬೇಕಾದ ಲೇಖನ ಚಿಹ್ನೆ
ಎ) ವಾಕ್ಯವೇಷ್ಠನ ಬಿ) ಭಾವಸೂಚಕ
ಸಿ) ಪ್ರಶ್ನಾರ್ಥಕ ಡಿ) ಪೂರ್ಣವಿರಾಮ
೨೫ ಅಯ್ಯೋ ಅವನು ಜಾರಿ ಬಿದ್ದನು. -ಈ ವಾಕ್ಯದಲ್ಲಿರಬೇಕಾದ ಲೇಖನ ಚಿಹ್ನೆ.
(ಎ) ಅರ್ಧವಿರಾಮ (ಬಿ) ಪೂರ್ಣವಿರಾಮ
(ಸಿ) ಭಾವಸೂಚಕ (ಡಿ) ಪ್ರಶ್ನಾರ್ಥಕ
೨೬.‘ಚೇರಿಂಗ್ ಕ್ರಾಸ್’ ಎಂಬ ಓಣ ಯಲ್ಲಿ ಆಂಗ್ಲರ ಸಾಮ್ರಾಜ್ಯವೈಭವವು ಕಂಡುಬರುವುದು - ಈ ವಾಕ್ಯದಲ್ಲಿ ‘ಚೇರಿಂಗ್ಕ್ರಾಸ್’ ಪದದಲ್ಲಿರುವ ಲೇಖನ ಚಿಹ್ನೆ :
(ಎ) ಪೂರ್ಣವಿರಾಮ (ಬಿ) ವಾಕ್ಯವೇಷ್ಟನ
(ಸಿ) ಅರ್ಧವಿರಾಮ (ಡಿ) ಪ್ರಶ್ನಾರ್ಥಕ
೨೭ ಅಬ್ಬಾ! ಆ ಜಲಪಾತ ಎಷ್ಟು ಎತ್ತರದಿಂದ ದುಮ್ಮಿಕ್ಕುತ್ತಿದೆ. - ಈ ವಾಕ್ಯದಲ್ಲಿ ಬಳಸಲಾಗಿರುವ ಲೇಖನ ಚಿಹ್ನೆ :
(ಎ) ಪೂರ್ಣವಿರಾಮ (ಬಿ) ವಾಕ್ಯವೇಷ್ಟನ
(ಸಿ) ಅರ್ಧವಿರಾಮ (ಡಿ) ಭಾವಸೂಚಕ
೨೮ ಒಂದು ಪೂರ್ಣಕ್ರಿಯೆಯಿಂದ ಕೂಡಿದ ವಾಕ್ಯದ ಕೊನೆಯಲ್ಲಿ ಈ ಪೂರ್ಣವಿರಾಮ ಚಿಹ್ನೆಯನ್ನು ಬಳಸಬೇಕು.
(ಎ) ಅರ್ಧವಿರಾಮ (ಬಿ) ಪೂರ್ಣವಿರಾಮ
(ಸಿ) ಭಾವಸೂಚಕ (ಡಿ) ಪ್ರಶ್ನಾರ್ಥಕ
೨೯ ಅನೇಕ ಉಪವಾಕ್ಯಗಳು ಒಂದು ಪ್ರಧಾನವಾಕ್ಯಕ್ಕೆ ಅಧೀನವಾಗಿದ್ದಾಗ ಉಪವಾಕ್ಯಗಳು ಮುಗಿದಾಗಲೆಲ್ಲ ಈ ಚಿಹ್ನೆಯನ್ನು ಬಳಸಲಾಗುವುದು.
ಎ) ಪ್ರಶ್ನಾರ್ಥಕ ಬಿ) ಅರ್ಧವಿರಾಮ
ಸಿ) ಭಾವಸೂಚಕ ಡಿ) ಪ್ರಶ್ನಾರ್ಥಕ
೩೦ ಒಂದು ಪದವನ್ನೋ ವಾಕ್ಯವನ್ನೋ ಹೇಳಿ ಅದಕ್ಕೆ ಸ ವ iÁನಾಥ ðP À ಪ ದ ವ ನೆ Æ್ನÃ ವಾಕ್ಯವನ್ನೋ ಹೇಳುವಾಗ ಈ ಚಿಹ್ನೆಯನ್ನು ಬಳಸಲಾಗುತ್ತದೆ.
ಎ) ಆವರಣ ಬಿ) ಉದ್ಧರಣ
ಸಿ) ವಿವರಣಾ ಡಿ) ಭಾವಸೂಚಕ