ಹೊಸಹಾಡು – ಕಯ್ಯಾರ ಕಿಞ್ಞಣ್ಣ ರೈ
(9 ನೆಯ ತರಗತಿ ಕನ್ನಡ ನೋಟ್ಸ್- .9 th standard kannada notes )
ಕೃತಿಕಾರರ ಪರಿಚಯ
ಶ್ರೀಯುತ ಕಯ್ಯಾರ ಕಿಞ್ಞಣ್ಣ ರೈ ಅವರು ಕ್ರಿ ಶ 1915 ರಲ್ಲಿ ಕಾಸರಗೋಡು ಜಿಲ್ಲೆಯ ಕಯ್ಯಾರ ಗ್ರಾಮದಲ್ಲಿ ಜನಿಸಿದರು .
ಇವರು ಶ್ರೀಮುಖ , ಐಕ್ಯಗಾನ , ಪುನರ್ನವ ಚೇತನ ಮತ್ತು ಕೊರಗ , ಗಂಧವತಿ ಕವನ ಸಂಕಲನಗಳನ್ನು ವಿರಾಗಿಣಿ ನಾಟಕವನ್ನು ರಚಿಸಿದ್ದಾರೆ .ಅನ್ನದೇವರು ಮತ್ತು ಇತರೆ ಕಥೆಗಳು ಸಣ್ಣಕಥಾ ಸಂಕಲನ , ರತ್ನಾಕರ , ಪರಶುರಾಮ , ಎ . ಬಿ . ಶೆಟ್ಟಿ ಜೀವನ ಚರಿತ್ರೆ , ದುಡಿತವೇ ನನ್ನ ದೇವರು- ಆತ್ಮಕಥೆಯನ್ನು ರಚಿಸಿದ್ದಾರೆ.
ಶ್ರೀಯುತರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಆಳ್ವಾಸ್ ನುಡಿಸಿರಿ ಪ್ರಶಸ್ತಿ , ನಾಡೋಜ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
1. ಕವಿ ಎಂತಹ ಹಾಡು ಹಾಡಬೇಕೆಂದು ಬಯಸುವರು ?
ನವಭಾವ , ನವಜೀವನ , ನವಶಕ್ತಿ ತುಂಬಿಸುವ ಹಾಡನ್ನು ಹಾಡಬೇಕು ಎಂದು ಕವಿ ಬಯಸುವರು ,
2. ವೀರಧ್ವನಿ ಹೇಗೆ ಏರಬೇಕು ?
ತೀವ್ರತರಹ ಗಂಭೀರ ಭಾವನೆಯ ತೆರೆ ಮಸಗಿ ವೀರ ಧ್ವನಿ ಏರಬೇಕು
3. ಕಡಿದೊಗೆಯಬೇಕಾದ ಪಾಶಗಳು ಯಾವುವು ?
ಜಾತಿ , ಕುಲ , ಮತ , ಧರ್ಮ ಈ ಪಾಶಗಳನ್ನು ಕಡಿದೊಗೆಯಬೇಕು .
4. ಹಾಡು ನುಡಿಗುಂಡುಗಳು ಯಾವುದರ ಬೆನ್ನಟ್ಟಬೇಕು ?
ಹಾಡಿನ ನುಡಿಗುಂಡುಗಳು ಭಯದ ಬೆನ್ನಟ್ಟಬೇಕು .
5 , ಬಾನು ಬುವಿ ಯಾವುದರಿಂದ ಬೆಳಗಬೇಕು ?
ಜಡನಿದ್ರೆಯಿಂದ ಸಿಡಿದೆದ್ದು ವೀರ ಅಟ್ಟಹಾಸದಲ್ಲಿ ಭಾನು ಭುವಿ ಬೆಳಗಬೇಕು
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯದಲ್ಲಿ ಉತ್ತರಿಸಿ ,
1 ಕವಿ ಎಂತಹ ಹಾಡನ್ನು ಹಾಡಿದಾಗ ವೀರಧ್ವನಿಯೇರಬೇಕು ಎಂದು ಬಯಸುತ್ತಾರೆ ?
ಹೊಸ ಭಾವನೆ , ಹೊಸ ಜೀವನ ಹಾಗೂ ಹೊಸ ಶಕ್ತಿ ತುಂಬಿ ಬದುಕಿಗೆ ಹೊಸ ತಿರುವನ್ನು ನೀಡಬಲ್ಲ . ಹೊಸ ಆಶಯವನ್ನು ನೀಡಿ , ಜೀವನದ ಗತಿಯನ್ನು ಬದಲಿಸಿ ಹೊಸ ಹುರುಪನ್ನು ತುಂಬಬಲ್ಲ ಹಾಡನ್ನು ಹಾಡಬೇಕು .ಈ ಹಾಡನ್ನು ಗಂಭೀರವಾದ ಭಾವನೆಗಳಿಂದ ಹಾಡಬೇಕು . ಆಗ ವೀರಧ್ವನಿ ಮುಗಿಲೆತ್ತರಕ್ಕೆ ಏರಬೇಕು ಎಂದು ಕವಿ ಬಯಸುತ್ತಾರೆ .
2. ಕವಿ ಎಂತಹ ಹಾಡು ಗುಡುಗಬೇಕು ಎಂದು ಆಶಿಸುತ್ತಾರೆ ?
ಜಾತಿ , ಕುಲ , ಮತ , ಧರ್ಮ ಪಾಶಗಳನ್ನು ಕಡಿದೊಗೆಯಬೇಕು ಹಳೆಯ ಮೌಡ್ಯವನ್ನು ಕಡಿದೊಗೆದು ಹೊಸ ಭಾವನೆಗಳನ್ನು ಸೃಜಿಸಬಲ್ಲ ಹೊಸ ಹಾಡನ್ನು ಸ್ವಾಭಿಮಾನದಿಂದ ಆತ್ಮವಿಶ್ವಾಸದಿಂದ ಎದೆಯೆತ್ತಿ ಹಾಡಬೇಕು ಆ ಹಾಡು : ಯುಗಯುಗ ಕಳೆದರೂ , ಲೋಕ ಲೋಕಗಳ ಆಚೆಯೂ ಗುಡುಗಿನ ರೀತಿಯಲ್ಲಿ ಪ್ರತಿಧ್ವನಿಸಬೇಕು ಎಂದು ಕವಿ ಆಶಿಸುತ್ತಾರೆ .
3 . ಈ ಹಾಡು ಹೊಸತು ಎಂದು ಕವಿ ಹೇಳಲು ಕಾರಣವೇನು ?
ಕವಿ ವೀರ ಭರವಸೆಯನ್ನು ಮೂಡಿಸುವ ಹಾಡನ್ನು ಒಮ್ಮೆ ಕೇಳಿ ನೋಡಬೇಕೆಂದು ಜಗಜ್ಜನನಿಯಲ್ಲಿ ಪ್ರಾರ್ಥಿಸುತ್ತಾರೆ .ಏಕೆಂದರೆ ಹಾಡಿನಲ್ಲಿ ಅಂದಿನ ಪಾಡು ಮುಗಿದು , ಇಂದು ಹೊಸ ಹುರುಪಿನೊಂದಿಗೆ ಹೊಸ ಹಾಡನ್ನು ಹಾಡುತ್ತಿದ್ದಾರೆ , ಆದ್ದರಿಂದ ಕವಿ ಈ ಹಾಡು ಹೊಸದು ಎಂದು ಹೇಳಿದ್ದಾರೆ .
ಇ) ಕೊಟ್ಟಿರುವ ಪ್ರಶ್ನೆಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .
1. ಹೊಸಹಾಡು ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .
ಬದುಕಿಗೆ ಹೊಸ ತಿರುವನ್ನು ನೀಡಬಲ್ಲ , ಹೊಸ ಆಶಯವನ್ನು , ಜೀವನದ ಗತಿಯನ್ನು ಬದಲಿಸಿ ಹೊಸ ಹುರುಪನ್ನು ತುಂಬಬಲ್ಲ . ಹಳೆಯ ಮೌಡ್ಯವನ್ನು ಕಡಿದೊಗೆದು ಹೊಸ ಭಾವನೆಗಳನ್ನು ಸೃಜಿಸಬಲ್ಲ ಹೊಸ ಹಾಡನ್ನು ಹಾಡಬೇಕು .ಆ ಹಾಡು ಎಲ್ಲರಲ್ಲೂ ಕ್ರಾಂತಿಯನ್ನುಂಟು ಮಾಡಬೇಕು , ಅದರ ಮಾರ್ದನಿಗಳು ಭೂಮಿ – ಆಕಾಶದಲ್ಲಿ ತುಂಬಬೇಕು , ಎಲ್ಲ ಕೀಳರಿಮೆಗಳನ್ನು ಕಡಿದೊಗೆದು , ಹೊಸ ಹುರುಪನ್ನು ತುಂಬುವ ಹಾಡು ಇದಾಗಿದೆ .ಹೊಸಹಾಡು ಪ್ರಕೃತಿ ಜೀವನದ ಕಣಕಣದಲ್ಲೂ ಹೇಗೆ ಸಮ್ಮಿಳಿತಗೊಂಡಿದೆ ಎಂದು ಸೊಗಸಾಗಿ ವರ್ಣಿಸಿದ್ದಾರೆ . ಹೊಸಭಾವನೆ , ಹೊಸಜೀವನ ಹಾಗೂ ಹೊಸ ಶಕ್ತಿಯಿಂದ.ತುಂಬಿ ತುಳುಕುವ ಹಾಡನ್ನು ಒಮ್ಮೆಯಾದರು ಹಾಡಬೇಕು ಹರಿತವಾದ ಗಂಭೀರವಾದ ಭಾವನೆಗಳು ಅಲೆಅಲೆಯಾಗಿ ಹರಡುವ ರೀತಿಯಲ್ಲಿ ವೀರಧ್ವನಿಯು ಮುಗಿಲೆತ್ತರಕ್ಕೆ ಏರಬೇಕು ಜಾತಿ , ಕುಲ , ಧರ್ಮ , ಮತ ಪಾಶಗಳನ್ನು ಕಡಿದೊಗೆಯಬೇಕು .ಎದೆಯುಬ್ಬಿಸಿ ಆತ್ಮವಿಶ್ವಾಸದಿಂದ ಸ್ವಾಭಿಮಾನದಿಂದ ಹಾಡನ್ನು ಹಾಡಬೇಕು ಆ ಹಾಡು ಅತ್ಯುನ್ನತವೂ ಶ್ರೇಷ್ಟವೂ ಆದ ಹಿಮಾಲಯದ ಶಿಖರವನ್ನೇರಿ ಹಾಡಬೇಕು .ಆಹಾಡಿನ ನುಡಿಗುಂಡುಗಳು ಹತ್ತು ದಿಕ್ಕುಗಳಲ್ಲಿ ಹಾರಿ ಶತ್ರುಗಳಲ್ಲಿ ಭಯವನ್ನುಂಟುಮಾಡಿ ಅವರನ್ನು ಓಡಿಸಿ ಮಾರ್ದನಿಸಬೇಕು . ಇಂತಹ ಸ್ಪೂರ್ತಿಯ ಚಿಲುಮೆಯಾಗುವ ಹಾಡನ್ನು ಹಾಡಬೇಕು , ಅದು ನಿತ್ಯ ನೂತನವಾಗಿರಬೇಕೆಂಬುದು ಈ ಪದ್ಯದ ಸಾರಾಂಶವಾಗಿದೆ .
ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,
1. ತೀವ್ರ ಗಂಭೀರ ಭಾವನೆಯ ತೆರೆಮಸಗಿ ವೀರಧ್ವನಿಯೇರಬೇಕು
”ಆಯ್ಕೆ : ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರು ಸಂಪಾದಿಸಿರುವ ` ಶತಮಾನದ ಗಾನ ‘ ಕವನಸಂಕಲನ ದಿಂದ ಆಯ್ದು ‘ ಹೊಸಹಾಡು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಈ ಮಾತನ್ನು , ಹೊಸಹಾಡು ನವಭಾವ ನವಜೀವನ , ನವಶಕ್ತಿಯನ್ನು ತುಂಬಿಸುವಂತಿರಬೇಕು ಎಂದು ಹೇಳುವ ಸಂದರ್ಭದಲ್ಲಿ ಕವಿ ಹೇಳಿದ್ದಾರೆ .
ಸ್ವಾರಸ್ಯ : ಹಾಡಿಗೆ ಮನುಷ್ಯನ ಬದುಕಿಗೆ ಹೊಸ ತಿರುವನ್ನು ಕೊಡುವ ಶಕ್ತಿಯಿದೆ . ಅಂತಹ ಹಾಡನಲ್ಲಿ ಗಂಭೀರವಾದ ಭಾವನೆಗಳಿರಬೇಕು ಅದು ವೀರಧ್ವನಿಯನ್ನು ಮೂಡಿಸಬೇಕು ಎಂಬುದು ಸ್ವಾರಸ್ಯಕರವಾಗಿದೆ .
2 ” ಯುಗಯುಗಗಳಾಚೆಯಲ್ಲಿ ಲೋಕಲೋಕಾಂತರದಲ್ಲಿ ಆ ಹಾಡು ಗುಡುಗಬೇಕು ”
ಆಯ್ಕೆ : ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರು ಸಂಪಾದಿಸಿರುವ ‘ ಶತಮಾನದ ಗಾನ ‘ ಕವನಸಂಕಲನ ದಿಂದ ಆಯ್ದು ‘ ಹೊಸಹಾಡು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ ,
ಸಂದರ್ಭ ಈ ಮಾತನ್ನು ಕವಿ . ಜಾತಿ , ಕುಲ , ಮತ ಧರ್ಮಗಳ , ಪಾಶಗಳನ್ನು ಕಡಿದೊಗೆದು ಹಾಡನ್ನು ಹಾಡಬೇಕು . ಈ ಹಾಡು ಯುಗಯುಗಗಳಾಚೆ , ಲೋಕಲೋಕಗಳಾಚೆ ಕೇಳಬೇಕು ಎಂದು ಹೇಳುವ ಸಂದರ್ಭದಲ್ಲಿ ಹೇಳಿದ್ದಾರೆ
ಸ್ವಾರಸ್ಯ : ಸಮಾಜದಲ್ಲಿರುವ ಜಾತಿ , ಕುಲ , ಮತ , ಧರ್ಮಗಳ ಪಾಶಗಳು ನಾಶವಾಗಿ ಮನುಜ ಮತದ ಹಾಡು ಕೇಳಬೇಕು ಎಂಬ ಭಾವನೆಯು ಸ್ವಾರಸ್ಯಕರವಾಗಿದೆ .
3. “ ಜಡನಿದ್ರೆ ಸಿಡಿದೆದ್ದ ವೀರಾಟಹಾಸದಲಿ ಬಾನು ಭುವಿ ಬೆಳಗಬೇಕು
ಆಯ್ಕೆ : ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರು ಸಂಪಾದಿಸಿರುವ ` ತತಮಾನದ ಗಾನ ‘ ಕವನಸಂಕಲನ ‘ ದಿಂದ ಆಯ್ದು ‘ ಹೊಸಹಾಡು ‘ ಎಂಬ ಪದ್ಯಭಾಗದಿಂದ ಅಧಿಸಲಾಗಿದೆ ,
ಸಂದರ್ಭ : ಈ ಮಾತನ್ನು . ನಾವು ಜಡನಿದ್ರೆಯಿಂದ ಎಚ್ಚರಗೊಂಡು ವೀರ ಅಟ್ಟಹಾಸದಲ್ಲಿ ಭಾನು ಭುವಿ ಬೆಳಗಬೇಕು ಎಂದು ವಿವರಿಸುವ ಸಂದರ್ಭದಲ್ಲಿ ಕವಿ ಹೇಳಿದ್ದಾರೆ.
ಸ್ವಾರಸ್ಯ : ಸಮಾಜದಲ್ಲಿ ಬದಲಾವಣೆಯ ಗಾಳಿ ಬೀಸಬೇಕಾದರೆ ಮೊದಲು ಹಳೆಯ ಮೌಡ್ಯಗಳು ದೂರವಾಗಬೇಕು ಎಂಬುದು ಸ್ವಾರಸ್ಯಕರವಾಗಿದೆ .
4. “ ನಡೆನುಡಿಗಳೆಡೆಯಲ್ಲಿ ಪದತಾಳ ಗತಿಯಲ್ಲಿ ಕಾಂತಿಕಿಡಿ ಕೆರಳಬೇಕು
” ಆಯ್ಕೆ : ಈ ವಾಕ್ಯವನ್ನು ಕಯ್ಯಾರ ಕಿಟ್ಟಣ್ಣ ರೈ ಅವರು ಸಂಪಾದಿಸಿರುವ ‘ ಶತಮಾನದ ಗಾನ ‘ ಕವನಸಂಕಲನ ದಿಂದ ಆಯು ‘ ಹೊಸಹಾಡು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಈ ಮಾತನ್ನು . ಹೊಸ ಹಾಡಿನ ಗತಿ , ಪ್ರಗತಿ ಹೇಗಿರಬೇಕು , ಆ ಹಾಡು ಯುಗಯುಗ ಕಳೆದರೂ , ಲೋಕ ಲೋಕಗಳ ಆಚೆಯೂ ಗುಡುಗಿನ ರೀತಿಯಲ್ಲಿ ಪ್ರತಿಧ್ವನಿಸಬೇಕು ಕ್ರಾಂತಿಯ ಕಿಡಿಯನ್ನು ಹೊತ್ತಿಸಬೇಕು ಎಂದು ಹೇಳುವ ಸಂದರ್ಭ್ರದಲ್ಲಿ ಕವಿ ಹೇಳಿದ್ದಾರೆ
ಸ್ವಾರಸ್ಯ : ಹಾಡು ಕ್ರಾಂತಿಕಾರಿಯಾಗಿದ್ದರೆ ಮಾತ್ರ ಜಡವಾದ ಜನರ ಮನಸ್ಸಿನಲ್ಲಿ ಜಾಗೃತಿಯನ್ನು ಮೂಡಿಸಲು ಸಾಧ್ಯ ಎಂಬುದು ಸ್ವಾರಸ್ಯಕರವಾಗಿದೆ.
5. ಇದೋ : ಮೊದಲು ಮುನ್ನಿಲ್ಲ – ಮುಗಿದುದಂದಿನ ಪಾಡು ಹೊಸತಿಂದು ಹೊಸತು ಹಾಡು
ಆಯ್ಕೆ : ಈ ವಾಕ್ಯವನ್ನು ಕಯ್ಯಾರ ಕಿ ರೈ ಅವರು ಸಂಪಾದಿಸಿರುವ ‘ ಶತಮಾನದ ಗಾನ ‘ ಕವನಸಂಕಲನ ‘ ದಿಂದ ಆಯ್ದು ‘ ಹೊಸಹಾಡು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ ,
ಸಂದರ್ಭ : ವೀರ ಭರವಸೆಯನ್ನು ಮೂಡಿಸುವ ಹಾಡನ್ನು ಒಮ್ಮೆ ಕೇಳಿ ನೋಡಬೇಕೆಂದು ಜಗಜ್ಜನನಿಯಲ್ಲಿ ಪ್ರಾರ್ಥಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ :ಹಿಂದಿನ ಕಷ್ಟಗಳೆಲ್ಲ ಮುಗಿದು ಹೊಸ ಬದುಕು ಪ್ರಾರಂಭವಾಗಿದೆ ಎಂಬುದು ಸ್ವಾರಸ್ಯಕರವಾಗಿದೆ