ಪಾರಿವಾಳ - 9 ನೆಯ ತರಗತಿ ಕನ್ನಡ ನೋಟ್ಸ್.
( PARIVALA - 9th STANADARAD KANNADA NOTES )
ಆ ) ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
1. ಮುದ್ದು ಪಾರಿವಾಳಗಳ ಜೋಡಿ ಎಲ್ಲಿ ಸಂಸಾರ ಹೂಡಿದ್ದವು ?
ದಟ್ಟಕಾಡಿನಲ್ಲಿದ್ದ ಹೆಮ್ಮರದ ಹೊದರಿನಲ್ಲಿ ಮುದ್ದು ಪಾರಿವಾಳಗಳ ಜೋಡಿ ಸಂಸಾರ ಹೂಡಿದ್ದವು
2. ಜೋಡಿ ಪಾರಿವಾಳಗಳು ಹೇಗೆ ಬಾಳುತ್ತಿದ್ದವು ?
ಜೋಡಿ ಪಾರಿವಾಳಗಳು ಹಗಲಿರುಳು ಒಂದನ್ನೊಂದು ಬಿಟ್ಟಿರದೆ ಜೊತೆಗೂಡಿ ಬಾಳುತ್ತಿದ್ದವು
3 , ಬಲೆಯಲ್ಲಿದ್ದ ಮರಿಗಳು ಹೊರಗೆ ಬರಲು ಏನು ಮಾಡಿದವು ?
ಬಲೆಯಲ್ಲಿದ್ದ ಮರಿಗಳು ಹೊರಗೆ ಬರಲು ಚೀತ್ಕರಿಸತೊಡಗಿದವು .
4. ಏನನ್ನು ತೊರೆದು ಬಾಳಬೇಕು ?
ವ್ಯಾಮೋಹವನ್ನು ತೊರೆದು ಬಾಳಬೇಕು .
ಆ ) ಈ ಪ್ರಶ್ನೆಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .
1. ಪಾರಿವಾಳಗಳ ಆನಂದಕ್ಕೆ ಕಾಣವೇನು ?
ಒಂದು ದಟ್ಟಕಾಡಿನಲ್ಲಿದ್ದ ಹೆಮ್ಮರದ ಹೊದರಿನಲ್ಲಿ ಮುದ್ದು ಪಾರಿವಾಳಗಳ ಜೋಡಿ ವಾಸವಾಗಿದ್ದವು ಜೋಡಿ ಪಾರಿವಾಳಗಳು ಎಂದಿಗೂ ಒಂದನ್ನೊಂದು ಹಗಲಿರುಳು ಬಿಟ್ಟಿರದೆ ಜೊತೆಗೂಡಿ ಬಾಳಿದವು .ಕಾಲಾಂತರದಲ್ಲಿ ಇಟ್ಟ ಮೊಟ್ಟೆಯೊಡೆದು ಹೊದರಿನಲ್ಲಿ ಪುಟ್ಟ ಮರಿಗಳ ಮಧುರ ಸದ್ದು ಕೇಳಿತು . ಆ ಪುಟ್ಟ ಪಾರಿವಾಳಗಳ ಮಧುರವಾದ ಮಾತುಗಳನ್ನು ಕೇಳಿದ ಜೋಡಿ ಪಾರಿವಾಳಗಳಿಗೆ ಆನಂದವಾಯಿತು..
2 ಬೇಡ ಏನು ಮಾಡಿದನು ?
ಕಾಡಿನ ಹೆಮ್ಮರ ಹೊದರಿನಲ್ಲಿ ಜೋಡಿ ಪಾರಿವಾಳಗಳ ಜೋಡಿ ತನ್ನ ಪುಟ್ಟ ಮರಿಗಳ ಜೊತೆಗೆ ಆನಂದದಿಂದ , ಬಾಳುತ್ತಿದ್ದವು . ಇದನ್ನು ನೋಡಿ ಬೇಡನೊಬ್ಬನು ಬಲೆಯನ್ನು ಹರಡಿದನು .ಈ ಬಲೆಯಲ್ಲಿ ಮೊದಲು ಪುಟ್ಟ ಮರಿಗಳು ಹಾರಿ ಸಿಲುಕಿ ಹೊರಗೆ ಬರಲು ಚೀತ್ಕರಿಸತೊಡಗಿದವು . ಮರಿ ಪಾರಿವಾಳಗಳ ಸ್ಥಿತಿಯನ್ನು ಕಂಡು ತಾಯಿ ಪಾರಿವಾಳ ಬಲೆಗೆ ಧುಮುಕಿತು .ಹೆಂಡತಿಯನ್ನು ಬಿಟ್ಟಿರಲಾರದ ಗಂಡು ಪಾರಿವಾಳವು ಸಹ ಬಲೆಯಲ್ಲಿ ಬಿದ್ದಿತು . ಹಸಿದ ಬೇಡನು ಎಲ್ಲಾ ಪಾರಿವಾಳಗಳನ್ನು ಹೊತ್ತುಕೊಂಡು ಹೋದನು .
ಇ ) ಈ ಪ್ರಶ್ನೆಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ
1. ಜೋಡಿ ಪಾರಿವಾಳಗಳ ದುಡುಕಿನ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ?
ಕಾಡಿನಲ್ಲಿ ಒಂದು ಪಾರಿವಾಳಗಳ ಕುಟುಂಬ ಆನಂದದಿಂದ ತನ್ನ ಮರಿ ಪಾರಿವಾಳಗಳೊಂದಿಗೆ ಬಾಳುತ್ತಿರುವ ಸಂದರ್ಭದಲ್ಲಿ ಬೇಡನೊಬ್ಬನು ಬಂದು ಬಲೆಯನ್ನು ಹಾಕುತ್ತಾನೆ .ಈ ಬಲೆಯಲ್ಲಿ ಮೊದಲು ಮರಿ ಪಾರಿವಾಳಗಳು ಬೀಳುತ್ತವೆ . ತನ್ನ ಮಕ್ಕಳು ಬಲೆಯಲ್ಲಿ ಬಿದ್ದಿರುವುದನ್ನು ನೋಡಿ ತಾಯಿ ಪಾರಿವಾಳವು ಸಹ ಬಲೆಯಲ್ಲಿ ಬೀಳುತ್ತದೆ .ಹೆಂಡತಿ , ಮಕ್ಕಳು ಬಲೆಯಲ್ಲಿ ಬಿದ್ದಿರುವುದನ್ನು ನೋಡಿ ಗಂಡು ಪಾರಿವಾಳವು ಸಹ ಬಲೆಯಲ್ಲಿ ಬೀಳುತ್ತದೆ . ಈ ರೀತಿ ಎಲ್ಲಾ ಪಾರಿವಾಳಗಳು ದುಡುಕಿನ ನಿರ್ಧಾರವನ್ನು ತೆಗೆದುಕೊಂಡು ಬಲೆಯಲ್ಲಿ ಬೀಳಬಾರದಿತ್ತು .ಬದಲಿಗೆ ತಾಯಿ ಪಾರಿವಾಳವು ವಿವೇಕದಿಂದ ಯೋಚಿಸಿ ‘ ನಾನು ಬಲೆಯಲ್ಲಿ ಬಿದ್ದರೆ ಮರಿ ಪಾರಿವಾಳಗಳನ್ನು ಕಾಪಾಡಲು ಸಾಧ್ಯವೇ ? ‘ ಎಂದು ಯೋಚಿಸಿದ್ದರೆ ತಾನು ಬದುಕುಳಿಯಬಹುದಿತ್ತು.ಅದರಂತೆ ಮರಿ ಹಾಗೂ , ಹೆಂಡತಿ ಬೇಡನ ಬಲೆಯಲ್ಲಿ ಬಿದ್ದಾಗ ಹೆಂಡತಿಯನ್ನು ಬಿಟ್ಟಿರಲಾರದೆ ಗಂಡು ಪಾರಿವಾಳ ಬಿಕ್ಕಿ ಬಿಕ್ಕಿ ಅಳುತ್ತಾ ಒಳಗೆ ಹಾರಿತು . ಅದಕ್ಕಾಗಿ ಕಾಯುತ್ತಿದ್ದ ಬೇಡ ಪಾರಿವಾಳಗಳನ್ನು ಹೊತ್ತು ನಡೆದನು .ವ್ಯಾಮೋಹವನ್ನು ತೊರೆದು ಬಾಳಬೇಕು ಏನೇ ಬಂದರು ತಾಳ್ಮೆಯಿಂದ ಯೋಚಿಸಿ ಕಾರ್ಯಸಾಧನೆ ಮಾಡಬೇಕು . ಎಂಬುದೇ ನಮ್ಮ ಅಭಿಪ್ರಾಯವಾಗಿದೆ .
2. ‘ ಪಾರಿವಾಳ ‘ ಪದ್ಯದ ಕಥೆಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .
‘ ಪಾರಿವಾಳ ‘ ಎಂಬ ಕವನವು ಒಂದು ಕಥನ ಕವನವಾಗಿದೆ . ಒಂದು ದಟ್ಟವಾದ ಕಾಡಿನ ಹೆಮ್ಮರದ ಹೊದರಿನಲ್ಲಿ ಮುದ್ದು ಪಾರಿವಾಳ ಜೋಡಿ ಸಂಸಾರ ಹೂಡಿ ಸುಃಖದಿಂದ ಬಾಳುತ್ತಿದ್ದವು .ಈ ಪಾರಿವಾಳಗಳ ಜೋಡಿ ಹಗಲಿರುಳು ಒಂದನೊಂದು ಬಿಟ್ಟಿರದೆ ಜೊತೆಯಾಗಿ ಬಾಳುತ್ತಿದ್ದವು . ಈ ಪುಟ್ಟ ಸಂಸಾರದಲ್ಲಿ ಸುಃಖ , ಸಂತೋಷ , ಆನಂದ ಮನೆ ಮಾಡಿತ್ತು . ಗೂಡಿನಲ್ಲಿ ಇಟ್ಟ ಮೊಟ್ಟೆಯೊಡೆದು ಮರಿಗಳಾಗಿ ಆ ಮರಿಗಳ ಮಧುರ ಸದ್ದು ಕೇಳಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದವು .ಹೀಗಿರುವಾಗ ಒಂದು ಈ ಪುಟ್ಟ ಪಾರಿವಾಳ ಕುಟುಂಬದ ಮೇಲೆ ಬೇಡನೊಬ್ಬನ ಕಣ್ಣು ಬೀಳುತ್ತದೆ . ಈ ಬೇಡನು ಬಂದು ಬಲೆಯನ್ನು ಹಾಕಿದಾಗ ಈ ಬಲೆಯಲ್ಲಿ ಮೊದಲು ಮರಿ ಪಾರಿವಾಳಗಳು ಬಿದ್ದು ಸಿಲುಕಿದವು . ಬಲೆಯಿಂದ ಹೊರ ಬರಲು ಚೀತ್ಕರಿಸ ತೊಡಗಿದವು .ಬಲೆಯಲ್ಲಿ ಬಿದ್ದು ಕಷ್ಟ ಪಡುವುದನ್ನು ನೋಡಿದ ತಾಯಿ ಪಾರಿವಾಳ ಸ್ವಲ್ಪವೂ ಯೋಚಿಸದೆ ಬಲೆಯಲ್ಲಿ ಬಿದ್ದಿತು . ತನ್ನ ಮರಿ ,ಹೆಂಡತಿ ಪಾರಿವಾಳ ಬಲೆಯಲ್ಲಿ ಬಿದ್ದಿರುವುದನ್ನು ನೋಡಿ ಗಂಡು ಪಾರಿವಾಳವು ಸಹ ಹಿಂದೆ ಮುಂದೆ ನೋಡದೆ ಹೆಂಡತಿ , ಮಕ್ಕಳನ್ನು ಕಾಪಾಡಲು ತಾನು ಬಲೆಗೆ ಬಿದ್ದಿತು .ಮರಿ ಪಾರಿವಾಳಗಳ ಮೇಲಿನ ವ್ಯಾಮೋಹ ತಾಯಿ ಪಾರಿವಾಳ ಬಲೆಯಲ್ಲಿ ಬೀಳುವಂತೆ ಮಾಡಿತು . ಹೆಂಡತಿ , ಮಕ್ಕಳ ಮೇಲಿನ ವ್ಯಾಮೋಹದಿಂದ ವಿವೇಕ ಕಳೆದುಕೊಂಡು ಗಂಡು ಪಾರಿವಾಳ ಸಹ ಬಲೆಯಲ್ಲಿ ಬಿದ್ದಿತು , ಬೇಡನಿಗೆ ಲಾಭವೆ ಆಯಿತು .ಈ ಸಂಸಾರವನ್ನು ಬೇಡನು ಹೊತ್ತುಕೊಂಡು ನಡೆದನು . “ ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ ವ್ಯಾಮೋಹವನು ತೊರೆದು ಬಾಳಬೇಕು ಏನು ಬಂದರು ಕೂಡ ತಾಳಬೇಕು ” ಎಂಬ ಕವಿಯ ಈ ಸಾಲುಗಳು ಪಾಠವಾಗಿ ನಿಲ್ಲುತ್ತವೆ .ಮಕ್ಕಳು ಬಲೆಯಲ್ಲಿ ಬಿದ್ದಾಗ ತಾಯಿ ಪಾರಿವಾಳ ವ್ಯಾಮೋಹ ಬಿಟ್ಟು ಸ್ವಲ್ಪ ವಿವೇಕದಿಂದ ಯೋಚನೆ ಮಾಡಬೇಕಿತ್ತು . ಇದರಿಂದ ತನ್ನ ಪ್ರಾಣ ಉಳಿಯುತ್ತಿತ್ತು .ಬೇಡನ ಬಲೆಯಲ್ಲಿ ಬಿದ್ದು ಮರಿ ಪಾರಿವಾಳಗಳ ಜೀವ ಹೋಗಬೇಕು ಎಂದು ಆ ವಿಧಿ ಬರೆದಿದ್ದರೆ ಯಾರು ತಾನೇ ತಪ್ಪಿಸಲು ಸಾಧ್ಯ ? ಎಂದು ತಾಯಿ ಪಾರಿವಾಳ ವಿವೇಕದಿಂದ ಯೋಚನೆ ಮಾಡಬೇಕಿತ್ತು .ಇದೇ ರೀತಿ ಮರಿ ಪಾರಿವಾಳ , ಹೆಂಡತಿ ಪಾರಿವಾಳ ಬಲೆಯಲ್ಲಿ ಬಿದ್ದಾಗ ಗಂಡು ಪಾರಿವಾಳ ಯೋಚನೆ ಮಾಡಿದ್ದರೆ ಪಾರಿವಾಳಗಳ ಕುಟುಂಬ ಸರ್ವನಾಶವಾಗುತ್ತಿರಲಿಲ್ಲ . ಜೀವನ ಎಂದ ಮೇಲೆ ಕಷ್ಟ ನಷ್ಟ ಸಮಸ್ಯೆಗಳು ಬರುತ್ತವೆ .ಸವಾಲುಗಳಿಗೆ ಹೆದರದೆ , ಬಾವುಕರಾಗಿ ಅನಾಹುತಗಳನ್ನು ಮಾಡಿಕೊಳ್ಳದೇ ವಿವೇಕದಿಂದ ಆಲೋಚಿಸಿ ಪರಿಹಾರ ಕಂಡುಕೊಳ್ಳಬೇಕು . ಎನೇ ಬಂದರು ಕಲ್ಲುಬಂಡೆಯಂತೆ ತಾಳಬೇಕು ಎಂದು ಕವಿ ಹೇಳಿದ್ದಾರೆ .
ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ
1. “ ಒಳಗೆ ಬಂದಿತು ಬಳಿಗೆ ಬಿಕ್ಕಿ ಬಿಕ್ಕಿ
ಆಯ್ಕೆ : ಈ ವಾಕ್ಯವನ್ನು. ಸು . ರಂ . ಎಕ್ಕುಂಡಿ ಅವರ ‘ ಸಮಗ್ರ ಕಥನ ಕವನಗಳು ‘ ಎಂಬ ಕೃತಿಯಿಂದ ಆಯ್ದ ‘ ಪಾರಿವಾಳ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ
ಸಂದರ್ಭ : ಬೇಡನು ಹಾಕಿದ ಬಲೆಗೆ ಮೊದಲು ಮರಿ ಪಾರಿವಾಳಗಳು ಬೀಳುತ್ತವೆ . ಇದನ್ನು ನೋಡಿದ ತಾಯಿ ಪಾರಿವಾಳವು ಮರಿಗಳ ಮೇಲಿನ ಮಮತೆ , ವಾತ್ಸಲ್ಯದಿಂದ ಬಲೆಗೆ ಬೀಳುತ್ತದೆ .ಹೆಂಡತಿ , ಮಕ್ಕಳು ಬಲೆಯಲ್ಲಿ ಬಿದ್ದ ದುಃಖವನ್ನು ನೋಡಿ ಸಹಿಸದ ಗಂಡು ಪಾರಿವಾಳವು ಬಲೆಯಲ್ಲಿ ಬೀಳುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ಹೆಂಡತಿ ಹಾಗೂ ಮಕ್ಕಳ ಮೇಲಿನ ವ್ಯಾಮೋಹದಿಂದ ವಿವೇಕ ಕಳೆದು ಕೊಂಡ ಗಂಡು ಪಾರಿವಾಳ. ನಾಶವಾಗಿರುವುದನ್ನು ಕವಿ ಸ್ವಾರಸ್ಯ ಪೂರ್ಣವಾಗಿ ಹೇಳಿದ್ದಾರೆ .
2. “ ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ
ಆಯ್ಕೆ : ಈ ವಾಕ್ಯವನ್ನು. ಸು . ರಂ . ಎಕ್ಕುಂಡಿ ಅವರ ‘ ಸಮಗ್ರ ಕಥನ ಕವನಗಳು ‘ ಎಂಬ ಕೃತಿಯಿಂದ ಆಯ್ದ ‘ ಪಾರಿವಾಳ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಬೇಡನು ಹಾಕಿದ ಬಲೆಗೆ ಸಿಲುಕಿದ ಪುಟ್ಟ ಮರಿಗಳನ್ನು ಕಂಡ ತಂದೆ – ತಾಯಿ ಪಾರಿವಾಳಗಳು ಕುರುಡು ವಾತ್ಸಲ್ಯದ ಅವಿವೇಕದಿಂದ ತಾವೂ ಬಲೆಗೆ ಸಿಲುಕಿ ಬೇಡನ ಪಾಲಾದವು .ಮೋಹ ಎಂಬುದು ಸರ್ವನಾಶಕ್ಕೆ ಕಾರಣ ವ್ಯಾಮೋಹ ತೊರೆದು ತಾಳ್ಮೆಯಿಂದ ಯೋಚಿಸಿ ಕಾರ್ಯ ಸಾಧನೆ ಮಾಡಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ .
ಸ್ವಾರಸ್ಯ : ಮಕ್ಕಳು ಮರಿ , ಹೆಂಡತಿ , ನನ್ನ ಕುಟುಂಬ ಎಂಬ ವ್ಯಾಮೋಹದಿಂದ ಬದುಕಿದರೆ ಇಡೀ ಕುಟುಂಬವೇ ಸರ್ವನಾಶವಾಗುತ್ತದೆ . ಎಂಬುದನ್ನು ಕವಿ ಸ್ವಾರಸ್ಯ ಪೂರ್ಣವಾಗಿ ವಿವರಿಸಿದ್ದಾರೆ .