ವ್ಯಾಘ್ರಗೀತೆ - ವಸ್ತುನಿಷ್ಠ ಪ್ರಶ್ನೆಗಳು.
( ಸ್ವಯಂಚಾಲಿತ ( AUTO SLIDING ) ಪ್ರಶ್ನೆಪತ್ರಿಕೆಗಾಗಿ ಇಲ್ಲಿ ಕ್ಲಿಕ್ಕಿಸಿ )
OMR ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
1. ಎ ಎನ್ ಮೂರ್ತಿರಾವ್ ಅವರ ಜನ್ಮಸ್ಥಳ ಯಾವುದು?
A ಮೈಸೂರು ಜಿಲ್ಲೆಯ ಹೆಬ್ಬಾಳು
B ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು
C ಕೊಡಗು ಜಿಲ್ಲೆ ಸೋಮವಾರಪೇಟೆ
D ಉಡುಪಿ ಜಿಲ್ಲೆಯ ಕೋಟಾ
2. ಎ ಎನ್ ಮೂರ್ತಿರಾವ್ ಅವರ ಜನನ ವರ್ಷ ___
A 1900
B 1905
C 1907
D 1926
3. ಎ ಎನ್ ಮೂರ್ತಿರಾವ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೃತಿ ಯಾವುದು?
A ಹಗಲುಗನಸುಗಳು
B ಮಿನುಗುಮಿಂಚು
C ಚಿತ್ರಗಳು ಪತ್ರಗಳು
D ಅಲೆಯುವ ಮನ
4. ಎ ಎನ್ ಮೂರ್ತಿರಾವ್ ಅವರ ದೇವರು ಎಂಬ ಕೃತಿಗೆ ಲಭಿಸಿದ ಪ್ರಶಸ್ತಿ ಯಾವುದು?
A ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
B ಜ್ಞಾನಪೀಠ ಪ್ರಶಸ್ತಿ
C ನೃಪತುಂಗ ಪ್ರಶಸ್ತಿ
D ಪಂಪ ಪ್ರಶಸ್ತಿ
5. ಭಗವದ್ಗೀತೆಯನ್ನು ರಚಿಸಿದವರು ಯಾರು?
A ಕುಮಾರವ್ಯಾಸರು
B ವೇದವ್ಯಾಸರು
C ನೃಪತುಂಗ
D ಪಂಪ
6. ವ್ಯಾಘ್ರಗೀತೆ ಎಂಬ ಪದ್ಯವು ಯಾವ ಸಾಹಿತ್ಯ ಪ್ರಕಾರಕ್ಕೆ ಸೇರಿದೆ?
A ಕಾದಂಬರಿ
B ಪ್ರವಾಸ ಕಥನ
C ಲಲಿತ ಪ್ರಬಂಧ
D ಆತ್ಮಕಥನ
7. ವ್ಯಾಘ್ರಗೀತೆ ಗದ್ಯಭಾಗದ ಆಕರ ಕೃತಿ ಯಾವುದು?
A ಹಗಲುಗನಸುಗಳು
B ಮಿನುಗುಮಿಂಚು
C ಚಿತ್ರಗಳು ಪತ್ರಗಳು
D ಸಮಗ್ರ ಲಲಿತ ಪ್ರಬಂಧಗಳು.
8. ಖಿರ್ದಿ ಪುಸ್ತಕ ಎಂದರೆ____
A ಕಿರಿದಾದ ಪುಸ್ತಕ
B ದೈನಂದಿನ ಕೆಲಸಗಳ ವಿವರ ಹೊಂದಿರುವ ಪುಸ್ತಕ
C ದಿನದ ಕೆಲಸಗಳನ್ನು ನೆನಪಿಸುವ ಪುಸ್ತಕ
D ಕಂದಾಯದ ವಿವರಗಳನ್ನು ಹೊಂದಿರುವ ಪುಸ್ತಕ
9. ಮಸಿ ಕಾಣಿಕೆ ಎಂದರೇನು?
A ಕಪ್ಪು ಹಣ
B ರೈತರಿಂದ ಕಂದಾಯವಲ್ಲದೆ ವಸೂಲಿ ಮಾಡುವ ಹೆಚ್ಚಿನ ಹಣ
C ಬಣ್ಣವನ್ನು ಖರೀದಿಸಲು ಬೇಕಾದ ಹಣ
D ದೇವರ ಹುಂಡಿಗೆ ಹಾಕುವ ಹಣ
10. ಘ್ರಾಣೇಂದ್ರಿಯ ಎಂದರೆ____________
A ಮೂಗು
B ಕಿವಿ
C ನಾಲಿಗೆ
D ಚರ್ಮ
11. ಕುಲಾಲಚಕ್ರ ಎಂದರೇನು?
A ಆಹಾರ ಸರಪಳಿ
B ಗಾಡಿಗಳಲ್ಲಿ ಬಳಸುವ ಚಕ್ರ
C ಕುಂಬಾರನು ಮಡಿಕೆ ಮಾಡುವಾಗ ಬಳಸುವ ಚಕ್ರ
D ವಿಷ್ಣುವಿನ ಕೈಲ್ಲಿರುವ ಚಕ್ರ
12. ಇರಸಾಲು ಎಂದರೇನು?
A ಇರುವೆಗಳ ಸಾಲು
B ಇಕ್ಕಟ್ಟಾದ ಸಾಲು
C ಶೈಕ್ಷಣಿಕ ವರ್ಷ
D ರೈತರಿಂದ ವಸೂಲಿ ಮಾಡಿದ ಕಂದಾಯವನ್ನು ಖಜಾನೆಗೆ ಕಟ್ಟುವುದು.
13. ಲೇಖಕರು ಯಾವ ಪ್ರಾಣಿಗೆ ಹುಲಿಯ ಜಾತಿಗೆ ಸೇರ್ದೆನೆಂದು ಗರ್ವಿಸಬೇಡ ಎನ್ನುತ್ತಾರೆ?
A ಬೆಕ್ಕು
B ನಾಯಿ
C ಚಿರತೆ
D ಜಿಂಕೆ
14. ಹುಲಿಯು ಹಿಂದಿನಿಂದ ಹಾರಿ ಕೊಲ್ಲದಿರಲು ಕಾರಣಗಳನ್ನು ಕ್ರಮವಾಗಿ ಜೋಡಿಸಿ.? ( ಪಠ್ಯದಲ್ಲಿರುವಂತೆ )
1 ಶತ್ರುವನ್ನಾದರೂಸರಿಯೆ, ಆತ ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲ
2 ಭರತಖಂಡ ಹುಲಿಗಳ ಧರ್ಮಶ್ರದ್ದೆಯನ್ನು ಅನುಸರಿಸಿ ಬೇಟೆಯಾಡುತ್ತವೆ.
3 ಯಾರನ್ನೇ ಆಗಲಿ, ಭರತಖಂಡದ ಹುಲಿಗಲು ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ.
4 ಯಾವ ನಾಡಿನಲ್ಲಿ ಶ್ರೀರಾಮನಂಥ ದೊರೆಗಳು ಆಳಿದರೋ,ಮಹರ್ಷಿ ವೇದವ್ಯಾಸರಿಂದ ರಚಿತವಾದ ಭಗದ್ಗೀತೆಯಂಥ
ಗ್ರಂಥ ಉದ್ಭವಿಸಿತೋ, ಇಂತಹ ಈ ಭರತ ಭೂಮಿಯಲ್ಲಿ ಜನಿಸಿದ ಹುಲಿಗಳು ಅಧರ್ಮದಿಂದ ನಡೆದುಕೊಳ್ಳುವುದಿಲ್ಲ
A 1 2 3 4
B 2 4 3 1
C 4 3 2 1
D 1 3 4 2
( ಸ್ವಯಂಚಾಲಿತ ( AUTO SLIDING ) ಪ್ರಶ್ನೆಪತ್ರಿಕೆಗಾಗಿ ಇಲ್ಲಿ ಕ್ಲಿಕ್ಕಿಸಿ )
OMR ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
15. ಶಾನುಭೋಗರ ರಾಜಭಕ್ತಿಯ ಲಾಂಛನ ಯಾವುದು?
A ಹೆಗಲ ಮೇಲಿದ್ದ ಶಾಲು
B ಖಿರ್ದಿ ಪುಸ್ತಕ
C ದಿನಚರಿ
D ಬಾವುಟ
16. ಶಾನುಭೋಗರು ಚಿಕ್ಕನಾಯಕನಹಳ್ಳಿಗೆ ಏಕೆ ಹೋಗಿದ್ದರು?
A ಗೆಳೆಯರನ್ನು ನೋಡಲು
B ಇರಸಾಲಿಗಾಗಿ
C ಹುಲಿಯನ್ನು ನೋಡಲು
D ಹುಲಿಯನ್ನು ಬೇಟೆಯಾಡಲು
17. ಶಾನುಭೋಗರು ತಮ್ಮ ಹಳ್ಳಿಯನ್ನು ತಲುಪಬೇಕಾದರೆ ಯಾವ ಕಣಿವೆಯನ್ನು ದಾಟಿ ಹೋಗಬೇಕು?
A ಮದಲಿಂಗನ ಕಣಿವೆ
B ಮಾರಿಕಣಿವೆ
C ಕೃಷ್ಣಾ ಕಣಿವೆ
D ಕಾವೇರಿ ಕಣಿವೆ
18. ಮದಲಿಂಗನ ಕಣಿವೆಯನ್ನು ದಾಟುವಾಗ ಶಾನುಭೋಗರ ಮನಸ್ಸಿಗೆ ಬಂದ ಯೋಚನೆಗಳನ್ನು ಕ್ರಮವಾಗಿ ಜೋಡಿಸಿ
1 ಅವರು ತಮ್ಮ ಹಳ್ಳಿಯನ್ನು ತಲಪಬೇಕಾದರೆ ಮದಲಿಂಗನ ಕಣಿವೆಯನ್ನು ದಾಟಿ ಹೋಗಬೇಕಿತ್ತು
2 ಅದು ಕಾಡುದಾರಿ, ಆದರೂ ಬೆಳುದಿಂಗಳ ದಿನ ;
3 ಶಾನುಭೋಗರು ಇರಸಾಲು ಮುಗಿಸಿ ಸ್ನೇಹಿತರನ್ನು ನೋಡಿಕೊಂಡು ಹೊರಡುವಷ್ಟರಲ್ಲಿ ಸಂಜೆ ಆರು ಗಂಟೆಯಾಗಿತ್ತು
4 ಆ ಮದಲಿಂಗನ ಕಣಿವೆಯಲ್ಲಿ ಬರುವಾಗ ಸ್ವಲ್ಪ ದೊಡ್ಡ ಹೆಜ್ಜೆ ಹಾಕಿದರೆ ಊಟದ ಹೊತ್ತಿಗೆ ಊರು ಸೇರಿಕೊಳ್ಳಬಹುದು
ಎಂದು ಯೋಚಿಸಿದರು
A 1 3 2 4
B 2 3 1 4
C 3 2 1 4
D 3 1 2 4
19. ಶಾನುಭೋಗರ ಕಾಲು ಮತ್ತಷ್ಟು ಚುರುಕಾಗಲು ಕಾರಣ____________
A ಹಸಿವಿನೊಂದಿಗೆ ಭಯವೂ ಸೇರಿ
B ಹುಲಿಯಿಂದ ತಪ್ಪಿಸಿಕೊಳ್ಳಲು
C ಮರ ಹತ್ತಲು
D ಚಿಕ್ಕನಾಯಕನಹಳ್ಳಿಗೆ ಹೋಗಲು
20. ಹುಲಿ ಎಲ್ಲಿ ಮಲಗಿತ್ತು?
A ರಸ್ತೆಯ ಪಕ್ಕದಲ್ಲಿದ ಗುಹೆಯಲ್ಲಿ
B ಮರದ ಮೇಲೆ
C ಮದಲಿಂಗನ ಕಣಿವೆಯಲ್ಲಿ
D ರಸ್ತೆಯಲ್ಲಿ
21. ಹಸಿದು ಮಲಗಿದ್ದ ಹುಲಿಯೂ ಏನೆಂದು ಯೋಚಿಸಿತು?
A ವಿದಿ ಆಹಾರಕ್ಕಾಗಿ ಕೆಂಪಾದ ದುಂಡಾದ ಮನುಷ್ಯನನನು ಕೊಡಲಿ ಎಂದು ಯೋಚಿಸಿತು
B ವಿದಿ ಆಹಾರಕ್ಕಾಗಿ ಏನನ್ನು ಕೊಡುವುದು ಎಂದು ಯೋಚಿಸಿತು
C ವಿದಿ ಆಹಾರಕ್ಕಾಗಿ ಶಾನುಭೋಗರನ್ನೇ ಕಳುಹಿಸಲಿ ಎಂದು ಯೋಚಿಸಿತು
D ವಿದಿ ಆಹಾರಕ್ಕಾಗಿ ಹೆಚ್ಚು ಪ್ರಾಣಿಗಳನ್ನು ಕರುಣಿಸಲಿ ಎಂದು ಯೋಚಿಸಿತು
22. ಹುಲಿಯ ಘ್ರಾಣೇಂದ್ರಿಯವನ್ನು ಆಕ್ರಮಿಸಿದ ಗಂಧ ಯಾವುದು?
A ಶ್ರೀಗಂಧದ ವಾಸನೆ
B ಕಾಡಿನಲ್ಲಿ ಸತ್ತ ಪ್ರಾಣಿಯ ದುರ್ಗಂಧ
C ಶಾನುಭೊಗರ ದೇಹದ ಮದುರವಾದ ಗಂಧ
D ಶಾನುಭೋಗರ ಚೀಲದಲ್ಲಿದ್ದ ತಿಂಡಿಗಳ ಗಂಧ
23. ಹುಲಿಗೆ ಪರಮಾನಂದವಾಗಲು ಕಾರಣವೇನು? 2016 ಜೂನ್ 2021 ಮಾರ್ಚಿ
A ಖಿರ್ದಿ ಪುಸ್ತಕ ನೋಡಿ
B ಶಾನುಭೋಗರ ದುಂಡು ದುಂಡಾದ ಶರೀರವನ್ನು ನೋಡಿ
C ಶಾನುಭೋಗರು ಬೆನ್ನು ತಿರುಗಿಸಿ ನಡೆಯುತ್ತಿರುವುದನ್ನು ನೋಡಿ
D ಎತ್ತುಗಳ ಘಂಟೆ ಶಬ್ಧ ಕೇಳಿ
24. ಹುಲಿ ನಿರಾಶೆಯಾಗಲು ಕಾರಣವೇನು ?
A ಹುಲಿ ಬಯಸಿದ ಪ್ರಾಣಿ ಸಿಗದಿರುವುದು
B ಆಹಾರಕ್ಕಾಗಿ ಏನೂ ಸಿಗದಿರುವುದು
C ಶಾನುಭೋಗರ ದುಂಡು ದುಂಡಾದ ಶರೀರವನ್ನು ನೋಡಿ
D ಶಾನುಭೋಗರು ಬೆನ್ನು ತಿರುಗಿಸಿ ನಡೆಯುತ್ತಿರುವುದನ್ನು ನೋಡಿ
25. ಹುಲಿಯ ಬಡ ಬಂದು ಯಾರು?
A ಬೆಕ್ಕು
B ನಾಯಿ
C ಚಿರತೆ
D ಜಿಂಕೆ
26. ಶಾನುಭೋಗರಿಗೆ ಹುಲಿ ಬಂದಿದ್ದು ಹೇಗೆ ತಿಳಿಯಿತು?
A ಹುಲಿಯ ಘರ್ಜನೆಯಿಂದ
B ಆರನೆಯ ಇಂದ್ರಿಯದಿಂದ
C ಹುಲಿಯ ವಾಸನೆಯಿಂದ
D ಗಾಡಿಯವರು ಹೇಳಿದ್ದರಿಂದ
27. ಶಾನುಭೋಗರು ಮೂರ್ಛೆಯಲ್ಲಿದ್ದಾಗ ನಡೆದ ಘಟನೆಗಳನ್ನು ವಿವರಿಸಿ.
1 .. ಗಾಡಿಯವರು ಸ್ವಲ್ಪ ಹೊತ್ತು ಗಾಡಿಯ ಬಳಿಯಲ್ಲೇ ನಿಂತು ನೋಡಿದಗ .ಮತ್ತೆ ಗರ್ಜನೆ ಕೇಳಲಿಲ್ಲ.
2 ಶಾನುಭೋಗರು ಬಿದ್ದ ಸ್ಥಳಕ್ಕೆ ಕಾಲು ಹರಿದಾರಿಯಿದೆ ಎನ್ನುವಾಗ ಹುಲಿಯ ಗರ್ಜನೆ ಕೇಳಿಸಿತು. ಎತ್ತುಗಳು ಕಣಿ ಹಾಕಿಕೊಂಡು ನಿಂತವು. ಅತ್ತ ಎತ್ತುಗಳ ಘಂಟೆಯ ಶಬ್ದ ಮತ್ತು ರೈತರ ಮಾತು ಕೇಳಿ ನಿರಾಶೆಯಿಂದಲೂ ಕೋಪದಿಂದಲೂ ಗರ್ಜಿಸಿ ಪಲಾಯನ ಮಾಡಿತು
3 ಚಿಕ್ಕನಾಯಕನಹಳ್ಳಿಗೆ ತೆಂಗಿನಕಾಯಿ ತುಂಬಿಕೊಂಡು ಹೋಗಿದ್ದ ಕೆಲವು ರೈತರು ತಿಂಗಳ ಬೆಳಕಿನಲ್ಲಿ ಗಾಡಿ ಹೊಡೆದುಕೊಂಡು ತಮ್ಮ ಹಳ್ಳಿಗೆ ಹಿಂದಿರುಗಿ ಬರುತ್ತಿದ್ದರು
4 ಅನಂತರ ಅವರು ತಮ್ಮಲ್ಲಿದ್ದ ಕೋವಿಯಿಂದ ಒಂದೆರಡು ತೋಟಾ ಹಾರಿಸಿ, ಕೈಲಾದಷ್ಟು ಗಲಭೆ ಮಾಡುತ್ತಾತೆಂಗಿನಗರಿಯ ಪಂಜು ಹೊತ್ತಿಸಿಕೊಂಡು ಮೂರ್ಛೆಯಲ್ಲಿ ಬಿದ್ದಿದ್ದ ಶಾನುಭೋಗರನ್ನು ಕಂಡು ಮುಖದ ಮೇಲೆ ನೀರೆರಚಿ ಎಚ್ಚರಿಸಿದರು.
A 1 3 2 4
B 2 3 1 4
C 3 2 1 4
D 3 1 2 4
28. ಪ್ರಸ್ತುತ ಗದ್ಯಭಾಗದಲ್ಲಿ ಹೆಸರಿಸಿರುವ ಹುಲಿಯ ಪೂರ್ವಜರು ಯಾರು?
A ಪುಣ್ಯಕೋಟಿ ಕಥೆಯಲ್ಲಿ ಬರುವ ಹುಲಿ
B ಬಂಡೀಪುರ ಸಂರಕ್ಷಿತ ಅರಣ್ಯದಲ್ಲಿರುವ ಹುಲಿ
C ಮೈಸೂರಿನ ಮೃಗಾಲಯದಲ್ಲಿರುವ ಹುಲಿ
D ಯಾರೂ ಅಲ್ಲ
29. ಖಂಡವಿದೆ ಕೋ ಮಾಂಸವಿದೆಕೋ ಗುಂಡಿಗೆಯ ಬಿಸಿ ರಕ್ತವಿದೆ ಕೋ ಎಂದು ಹುಲಿಯ ಅಜ್ಜನಿಗೆ ಆಹ್ವಾನ ಕೊಟ್ಟವರು ಯಾರು?
A ಗಂಗೆ
B ಗೌರಿ
C ಪುಣ್ಯಕೋಟಿ
D ಕಾಮಧೇನು
30. ಶಾನುಭೋಗರ ತಲೆ ಸುತ್ತಲು ಕಾರಣವೇನು?
A ಶಾನುಭೋಗರಿಗೆ ತುಂಬಾ ಹೊಟ್ಟೆ ಹಸಿದಿದ್ದರಿಂದ
B ಶಾನುಭೋಗರು ನಿಂತಲ್ಲಿಯೇ ಕುಲಾಲ ಚಕ್ರದಂತೆ ತಿರುಗುತ್ತದ್ದರಿಂದ
C ಶಾನುಭೋಗರನ್ನು ಹುಲಿಯು ಎಳೆದಾಡಿದ್ದರಿಂದ
D ಶಾನುಭೋಗರು ಮರದಿಂದ ಬಿದ್ದರು ಆದ್ದರಿಂದ
31 ಪಂಜಾ ಎಂದರೆ ______________________
A ತೆಂಗಿನ ಗರಿಯ ಪಂಜು
B ಪೊರಕೆ
C ಹುಲಿಯ ಉಗುರು
D ಜಮಖಾನೆ
32 ಮಡಿಯಬೇಕಾದರೆ ಮಾಡಿಯೇ ಮಡಿಯುತ್ತೇನೆ ಎಂದುಕೊಂಡವರು ಯಾರು ?
A ಎ ಎನ್ ಮೂರ್ತಿರಾವ್
B ಕೃಷ್ಣಮೂರ್ತಿ
C ಶಾನುಭೋಗರು
D ಪುಣ್ಯಕೋಟಿ
33 ಶಾನುಭೋಗರ ಬ್ರಹ್ಮಾಸ್ತ್ರ ಯಾವುದು ?
A ಹೆಗಲ ಮೇಲಿದ್ದ ಶಾಲು
B ಬಾವುಟ
C ದಿನಚರಿ
D ಖಿರ್ದಿ ಪುಸ್ತಕ
34 ವ್ಯಾಘ್ರಗೀತೆ ಕಥೆಯ ಕಥಾನಾಯಕರು ಯಾರು?
A ಹುಲಿ
B ಶಾನುಭೋಗರು
C ಕೃಷ್ಣಮೂರ್ತಿ
D ಎ ಎನ್ ಮೂರ್ತಿರಾಯರು
35 ಖಿರ್ದಿ ಪುಸ್ತಕವನ್ನು ಹುಲಿಯ ಮೇಲೆಸೆದು ದೇವರೆ ಮರ ಹತ್ತುವಷ್ಡು ಅವಕಾಶ ಕರುಣಿಸು ಎಂದು ಶಾನುಭೊಗರು ಓಡುವಾಗ ಮುಂದೆ ಏನಾಯಿತು ?
A ಶಾನುಭೋಗರು ಮರ ಹತ್ತಿದರು
B ಶಾನುಭೋಗರು ಮೇಲೆ ಎದ್ದಿದ್ದ ಕಲ್ಲನ್ನು ಎಡವಿ ಬಿದ್ದರು
C ಶಾನುಭೋಗರ ಮೇಲೆ ಹುಲಿ ನೆಗೆಯಿತು
D ಗಾಡಿಯವರು ಅಡ್ಡ ಬಂದರು
( ಸ್ವಯಂಚಾಲಿತ ( AUTO SLIDING ) ಪ್ರಶ್ನೆಪತ್ರಿಕೆಗಾಗಿ ಇಲ್ಲಿ ಕ್ಲಿಕ್ಕಿಸಿ )
OMR ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
36 ಮೂರ್ಛೆಯಿಂದ ಎಚ್ಚೆತ್ತಾಗ ಶಾನುಭೋಗರು ಯಾವ ಸ್ಥಿತಿಯಲ್ಲಿದ್ದರು ?
A ಯಾವೊಂದು ಇಂದ್ರಿಯವೂ ಚುರುಕಾಗಿ ಕೆಲಸ ಮಾಡುತ್ತಿರಲಿಲ್ಲ
B ಮನಸ್ಸು ಅಸ್ಪಷ್ಟ ಸ್ಥಿತಿಯಲ್ಲಿತ್ತು
C ಕಣ್ಣೂ ಮಂಜು ಮಂಜು
D ಮೇಲಿನ ಎಲ್ಲವೂ
37 ಶಾನುಭೋಗರನ್ನು ಮೂರ್ಛೆಯಿಂದ ಎಚ್ಚರಗೊಳಿಸಿದವರು ಯಾರು ?
A ಕೃಷಮೂರ್ತಿಯವರು
B ಎ ಎನ್ ಮೂರ್ತಿರಾಯರು
C ಗಾಡಿಯವರು
D ಹುಲಿ
38 ರೈತರ ಎತ್ತುಗಳು ಕಣಿ ಹಾಕಿಕೊಳ್ಳಲು ಕಾರಣವೇನು ?
A ಕತ್ತಲೆಯಲ್ಲಿ ದಾರಿ ಕಾಣದೆ
B ಹುಲಿಯ ಘರ್ಜನೆ ಕೇಳಿ
C ಶಾನುಭೋಗರು ಬಿದ್ದಿರುವುದನ್ನು ನೋಡಿ
D ಹಳ್ಳ ಅಡ್ಡ ಬಂದು
39 ಹುಲಿ ಕೋಪ ಮತ್ತು ನಿರಾಶೆಯಿಂದ ಮತ್ತೊಮ್ಮೆ ಘರ್ಜಿಸಿದ್ದೇಕೆ ?
A ಎತ್ತುಗಳ ಘಂಟೆ ಶಬ್ಧ ಕೇಳಿ
B ರೈತರ ಮಾತಿನ ಶಬ್ಧ ಕೇಳಿ
C ಎತ್ತುಗಳ ಘಂಟೆ ಶಬ್ಧ ಮತ್ತು ರೈತರ ಮಾತಿನ ಶಬ್ಧ ಕೇಳಿ
D ಶಾನುಭೋಗರಿಗೆ ಹೆದರಿ
40 ರೈತರು ಶಾನುಭೋಗರ ಬಳಿಗೆ ಬರುವಾಗ ಕೈಗೊಂಡ ಮುಂಜಾಗ್ರತಾ ಕ್ರಮಗಳನ್ನು ಕ್ರಮವಾಗಿ ಜೋಡಿಸಿ
A ಸ್ವಲ್ಪ ಹೊತ್ತು ಗಾಡಿಯ ಬಳಿಯಲ್ಲೇ ನಿಂತು ನೋಡಿದರು.
B ನಂತರ ಅವರು ತಮ್ಮಲ್ಲಿದ್ದ ಕೋವಿಯಿಂದ ಒಂದೆರಡು ತೋಟಾ ಹಾರಿಸಿ, ಕೈಲಾದಷ್ಟು ಗಲಭೆ ಮಾಡಿದರು
C ತೆಂಗಿನಗರಿಯ ಪಂಜು ಹೊತ್ತಿಸಿಕೊಂಡು ಜಾಗರೂಕತೆಯಿಂದ ಮುಂದುವರಿದರು.
D ಮೇಲಿನ ಎಲ್ಲವೂ
41.ನಾನು ಮುಖ ಮೇಲಾಗಿ ಬಿದ್ದಿದ್ದೆನೆ ಎಂದು ಶಾನುಭೋಗರು ಯಾರನ್ನು ಕೇಳಿದರು?
A ರೈತರನ್ನು
B ಮನೆಯವರನ್ನು
C ಕೃಷ್ಣಮೂರ್ತಿಯವರನ್ನು
D ಹುಲಿಯನ್ನು
42.ಭಲೇ! ಎಂದು ಶಾನುಭೋಗರು ಯಾರನ್ನು ಪ್ರಶಂಶಿಸಿದರು?
A ಖರ್ದಿ ಪುಸ್ತಕವನ್ನು
B ರೈತರನ್ನು
C ಎತ್ತಗಳನ್ನು
D ಹುಲಿಯನ್ನು
43.ಕುಡಿದ ನೀರು ಅಲುಗದ ಹಾಗೆ ನುಡಿಗಟ್ಟಿನ ಅರ್ಥವೇನು?
A ಸ್ವಲ್ಲವೂ ಶ್ರಮ ಪಡದೆ
B ನೀರನ್ನೆ ಕುಡಿಯದೆ
C ಕುಡಿದ ನೀರನ್ನು ನುಂಗದೆ
D ದೇಹವನ್ನು ಅಲ್ಲಾಡಿಸದೆ
44.ಹುಲಿ ಈಗ ಎಷ್ಟು ಹಸಿದಿರಬೇಕು ಎಂಬ ಯೋಚನೆ ಶಾನುಭೋಗರಿಗೆ ಬಂದಾಗ ಅವರ ವದನಾರವಿಂದದಲಿ ಆದ ಬದಲಾವಣೆ ಏನು?
A ಕೋಪ
B ಆಶ್ಚರ್ಯ
C ಮುಗುಳುನಗೆ
D ದುಃಖ
45.ಶಾನುಭೋಗರ ಪ್ರಕಾರ ಅವರನ್ನು ರಕ್ಷಿಸಿದ್ದು ಯಾವುದು?
A ಖರ್ದಿ ಪುಸ್ತಕ
B ಹುಲಿಯ ಧರ್ಮಶ್ರದ್ಧೆ
C ರೈತರು
D ಎತ್ತುಗಳು
46.ಖಿರ್ದಿ ಪುಸ್ತಕ ಎಲ್ಲಿ ವಿಶ್ರಾಂತಿ ಪಡೆಯುತ್ತಿತ್ತು?
A ಪೆಟ್ಟಿಗೆಯಲ್ಲಿ
B ಚೀಲದಲ್ಲಿ
C ತೊಲೆಯಲ್ಲಿ
D ಶಾನುಭೋಗರ ಜೇಬಿನಲ್ಲಿ
47.ಶಾನುಭೋಗರು ನಿಜವಾಗಿ ಉಳಿದುದ್ದು ಯಾವುದರಿಂದ?
A ಖರ್ದಿ ಪುಸ್ತಕ
B ಹುಲಿಯ ಧರ್ಮಶ್ರದ್ಧೆ
C ರೈತರು
D ಎತ್ತುಗಳು
48. ಗಾಡಿಯವರು ಶಾನುಭೋಗರಿಗೆ ಹುಚ್ಚು ಹಿಡಿಯಿತೋ ಎನ್ನುವಂತೆ ನೋಡುತ್ತಿದ್ದರು ಏಕೆ?
A ಶಾನುಭೋಗರು ಭಲೆ ಎಂದ ಮಾತನ್ನು ಕೇಳಿ
B ಶಾನುಭೋಗರು ಮೂರ್ಛೇ ಹೋಗಿದ್ದು ನೋಡಿ
C ಶಾನುಭೋಗರು ಕುಲಾಲ ಚಕ್ರದಂತೆ ತಿರುಗುತ್ತಿರುವುದನ್ನು ನೋಡಿ
D ಶಾನುಭೋಗರು ಹುಲಿಗೆ ಬೆನ್ನು ತಿರುಗಿಸಿ ನಡೆಯುತ್ತಿರುವುದನ್ನು ನೋಡಿ.
49. ಶಾನುಭೋಗರವರ ವಂಶದವರಿಗೆ ಮಂತ್ರಿತ್ವ ಹೋಗಿ ಈಗ ಕೇವಲ ____ಮಾತ್ರ ಉಳಿದಿತ್ತು
A ರಾಜ ಪದವಿ
B ಶಾನುಭೋಗಿಕೆ
C ದಿವಾನ ಪದವಿ
D ಸೇವಕತ್ವ
50. ನೆಲದಿಂದ ಮೇಲೆದ್ದು ಕೊಂಡಿದ್ದ ___ಎಡವಿ ಶಾನುಭೋಗರು ಬಿದ್ದರು
A ಗುಡ್ಡ
B ಮರದತುಂಡು
C ಕಲ್ಲು
D ಮರದ ಬೇರು
ಮಾದರಿ ಉತ್ತರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ.
( ಸ್ವಯಂಚಾಲಿತ ( AUTO SLIDING ) ಪ್ರಶ್ನೆಪತ್ರಿಕೆಗಾಗಿ ಇಲ್ಲಿ ಕ್ಲಿಕ್ಕಿಸಿ )
OMR ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ.