ಅಕ್ಷರಗಣ-ಖ್ಯಾತಕರ್ಣಾಟಕಗಳು
ಅಕ್ಷರಗಣಗಳು
ಅಕ್ಷರಗಳ ಲೆಕ್ಕಾಚಾರದಿಂದ ಗುಂಪು ಮಾಡಿದರೆ ಅದನ್ನು ಅಕ್ಷರಗಣ ಎನ್ನುವರು
ಪದ್ಯದ ಸಾಲಿನಲ್ಲಿ ಬರುವ ಅಕ್ಷರಗಳನ್ನು ಮೂರು ಅಕ್ಷರಗಳಿಗೆ ಒಂದರಂತೆ ಗಣವನ್ನು ವಿಭಾಗಿಸಿದ ಬಳಿಕ ಆ ಸಾಲಿನಲ್ಲಿ ಒಂದು ಅಥವಾ ಎರಡು ಅಕ್ಷರಗಳು ಉಳಿಯಬಹುದು. ಅಂತಹ ಅಕ್ಷರಗಳನ್ನು ‘ಲ’, ‘ಗು’ ಎಂದು ಗುರುತಿಸಲಾಗುತ್ತದೆ.
ಅಕ್ಷರಗಣಗಳು ಒಟ್ಟು ೮ ವಿಧ. ಅವುಗಳ ವಿನ್ಯಾಸವು ಈ ಕೆಳಗಿನಂತೆ ಇದೆ-
ಅಕ್ಷರ ಗಣಗಳನ್ನು ನೆನಪಿಡುವ ಸೂತ್ರವಾಕ್ಯ. ಯಮಾತಾರಾಜಭಾನಸಲಗಂ ಈ ಸೂತ್ರವಾಕ್ಯದ ಎಂಟು ಅಕ್ಷರಗಳು ಗಣಗಳ ಹೆಸರನ್ನು ಸೂಚಿಸುತ್ತವೆ. ಅವು ಇಂತಿವೆ
ಈ ಎಂಟು ಗಣಗಳನ್ನು ಈ ಪದ್ಯದ ಆಧಾರದಿಂದಲೂ ಗುರುತಿಸಿಕೊಳ್ಳಲು ಸಾಧ್ಯವಿದೆ.
ಗುರು ಲಘು ಮೂರಿರೆ ಮ - ನ - ಗಣ |
ಗುರು ಲಘು ಮೊದಲಲ್ಲಿ ಬರಲು ಭ - ಯ - ಗಣಮೆಂಬರ್ ||
ಗುರು ಲಘು ನಡುವಿರೆ ಜ - ರ - ಗಣ |
ಗುರು ಲಘು ಕೊನೆಯಲ್ಲಿ ಬರಲು ಸ - ತ - ಗಣ ಮಕ್ಕುಂ ||
ಹೀಗೆ ಅಕ್ಷರಗಣಗಳಲ್ಲಿ ಎಂಟು ವಿಧದ ಗಣಗಳನ್ನು ಕಾಣಬಹುದು.
ವೃತ್ತಗಳು
ಅಕ್ಷರಗಣಗಳ ಶಾಸ್ತçಕ್ಕನುಗುಣವಾಗಿ ರಚಿಸಲ್ಪಟ್ಟ ಪದ್ಯಗಳನ್ನು ವೃತ್ತಗಳು ಎಂದು ಕರೆಯುತ್ತಾರೆ. ಸಂಸ್ಕೃತ ಕಾವ್ಯಗಳಲ್ಲಿ ಹಲವಾರು ವೃತ್ತಗಳು ಬಳಕೆಯಾಗಿದ್ದರೂ ಕನ್ನಡದ ಪ್ರಾಚೀನ ಕವಿಗಳು ಬಹಳವಾಗಿ ಬಳಸಿರುವುದು ಆರು ವೃತ್ತಗಳನ್ನು ಮಾತ್ರ ಅವುಗಳನ್ನು ಖ್ಯಾತಕರ್ಣಾಟಕಂ ಎಂದು ಕರೆಯಲಾಗಿದೆ. ಅವು ಇಂತಿವೆ_
1. ಉತ್ಪಲಮಾಲವೃತ್ತ,
2. ಶಾರ್ದೂಲವಿಕ್ರೀಡಿತವೃತ್ತ,
3. ಸ್ರಗ್ಧರಾವೃತ್ತ,
4. ಮತ್ತೇಭವಿಕ್ರೀಡಿತವೃತ್ತ,
5.ಮಹಾಸ್ರಗ್ಧರಾವೃತ್ತ
6.ಚಂಪಕಮಾಲಾವೃತ್ತ,
ವೃತ್ತಗಳ ಸಾಮಾನ್ಯ ಲಕ್ಷಣ : ನಾಲ್ಕು ಪಾದಗಳಿರುತ್ತವೆ. ಅಕ್ಷರಗಳ ಸಂಖ್ಯೆ ಮತ್ತು ಗಣಗಳ ವಿಧಗಳಲ್ಲಿ ಪ್ರತಿಪಾದವೂ ಸಮಾನವಾಗಿರುತ್ತದೆ. ಆದಿಪ್ರಾಸದಿಂದ ಕೂಡಿರುತ್ತದೆ. ಪ್ರತಿಯೊಂದು ವೃತ್ತಕ್ಕೂ ಗಣಾಧಾರಿತ ನಿಯಮ ಬೇರೆಬೇರೆ ಇರುತ್ತದೆ. ಅವುಗಳನ್ನು ಆಯಾವೃತ್ತಗಳ ಲಕ್ಷಣವನ್ನು ತಿಳಿಯುವಾಗ ಗಮನಿಸೋಣ.
ವೃತ್ತಗಳನ್ನು ಗುರುತಿಸುವ ಪದ್ಯ
ಗುರುವೊಂದಾದಿಯೊಳುತ್ಪಲಂ ಗುರುಮೊದಲ್ ಮೂರಾಗೆ ಶಾರ್ದೂಲಮಾ |
ಗುರುನಾಲ್ಕಾಗಿರಲಂತು ಸ್ರಗ್ಧರೆ ಲಘು ದ್ವಂದ್ವಂ ಗುರುದ್ವಂದ್ವಮಾ |
ಗಿರೆ ಮತ್ತೇಭ ಲಘುದ್ವಯ ತ್ರಿಗುರುವಿಂದಕ್ಕುಂ ಮಹಾಸ್ರಗ್ಧರಾ |
ಹರಿಣಾಕ್ಷೀ, ಲಘು ನಾಲ್ಕು ಚಂಪಕಮಿವಾಱುಂ ಖ್ಯಾತಕರ್ಣಾಟಕಂ ||
1 ಉತ್ಪಲಮಾಲಾವೃತ್ತ
ಸೂತ್ರ :- “ಉತ್ಪಲಮಾಲೆಯಪ್ಪುದು ಭರಂ ನಭಭಂ ರಲಗಂ ನೆಗಳ್ದಿರಲ್”
ಲಕ್ಷಣ : ನಾಲ್ಕು ಸಮಾನ ಸಾಲುಗಳುಳ್ಳ ಪದ್ಯ. ಪ್ರತಿಸಾಲಿನಲ್ಲೂ ೨೦ ಅಕ್ಷರಗಳಿವೆ.ಪ್ರತಿ ಸಾಲಿನಲ್ಲೂ ಭ, ರ, ನ,ಭ, ಭ, ರ ಎಂಬ ೬ ಗಣಗಳೂ, ಮೇಲೆ ಒಂದು ಲಘು ಮತ್ತು ಒಂದು ಗುರು ಹೀಗೆ ಬರುವ ವೃತ್ತವೇ ಉತ್ಪಲಮಾಲಾವೃತ್ತವೆನಿಸುವುದು
2 ಶಾರ್ದೂಲವಿಕ್ರೀಡಿತವೃತ್ತ
ಸೂತ್ರ :- ಕಣ್ಗೊಪ್ಪಲ್ ಮಸಜಂಸತತಂಗಮುಮಾ ಶಾರ್ದೂಲವಿಕ್ರೀಡಿತಂ
ಲಕ್ಷಣ ನಾಲ್ಕು ಸಮಾನಪಾದಗಳುಳ್ಳ ಪದ್ಯ. ಪ್ರತಿ ಪಾದವೂ ೧೯ ಅಕ್ಷರಗಳಿಂದ ಕೂಡಿದೆ. ಪ್ರತಿ ಪಾದದಲ್ಲೂ ಮ, ಸ, ಜ, ಸ, ತ, ತ ಎಂಬ ಆರು ಗಣಗಳೂ ಮೇಲೆ ಒಂದು ಗುರುವೂ ಇರುತ್ತವೆ. ಇಂಥ ವೃತ್ತಗಳಿಗೆಲ್ಲ ಶಾರ್ದೂಲ ವಿಕ್ರೀಡಿತ ವೃತ್ತಗಳೆನ್ನುವರು. ಉದಾ :
3 ಸ್ರಗ್ಧರಾವೃತ್ತ
ಸೂತ್ರ :-ತೋರಲ್ ಮಂರಂಭನಂಮೂಯಗಣಮುಮದೆ ತಾಂ ಸ್ರಗ್ಧರಾವೃತ್ತಮಕ್ಕುಂ.
ಲಕ್ಷಣ : ನಾಲ್ಕು ಸಮಾನ ಪಾದಗಳುಳ್ಳ ಪದ್ಯ. ಪ್ರತಿಪಾದದಲ್ಲಿಯೂ ಇಪ್ಪತ್ತೊಂದು ಅಕ್ಷರಗಳಿರುತ್ತವೆ. ಪ್ರತಿಯೊಂದು ಪಾದದಲ್ಲೂ ಮ, ರ, ಭ, ನ, ಯ, ಯ, ಯ ಎಂಬ ಏಳು ಗಣಗಳಿರುತ್ತವೆ. ಈ ರೀತಿಯ ವೃತ್ತ ಜಾತಿಗೆ ‘ಸ್ರಗ್ಧರಾವೃತ್ತ’ ವೆನ್ನುವರು. ಉದಾ :
4 ಮತ್ತೇಭವಿಕ್ರೀಡಿತವೃತ್ತ
ಸೂತ್ರ :- ಸಭರಂನಂದುಯಲಂಗಮುಂ ಬಗೆಗೊಳಲ್ ಮತ್ತೇಭವಿಕ್ರೀಡಿತಂ
ಲಕ್ಷಣ : ನಾಲ್ಕು ಸಮಾನ ಪಾದಗಳುಳ್ಳ ಪದ್ಯ. ಪ್ರತಿ ಪಾದದಲ್ಲೂ ಇಪ್ಪತ್ತು ಅಕ್ಷರಗಳಿವೆ. ಪ್ರತಿಪಾದವೂ ಸ, ಭ, ರ, ನ, ಮ, ಯ ಎಂಬ ಆರು ಗಣಗಳಿಂದಲೂ ಮೇಲೊಂದು ಲಘು ಮತ್ತು ಒಂದುಗುರುವಿನಿAದಲೂ ಕೂಡಿದ ಪದ್ಯಜಾತಿಯುಮತ್ತೇಭ ವಿಕ್ರೀಡಿತವೃತ್ತ ವೆನಿಸುವುದು.
(5) ಮಹಾಸ್ರಗ್ಧರಾವೃತ್ತ
ಸೂತ್ರ :- ಸತತಂ ನಂ ಸಂ ರರಂಗಂ ನೆರೆದೆಸೆಯೆ ಮಹಾಸ್ರಗ್ಧರಾವೃತ್ತಮಕ್ಕುಂ
ಲಕ್ಷಣ : ನಾಲ್ಕು ಸಮಾನ ಪಾದಗಳುಳ್ಳ ಪದ್ಯ. ಪ್ರತಿ ಸಾಲಿನಲ್ಲೂ ೨೨ ಅಕ್ಷರಗಳಿವೆ.ಪ್ರತಿ ಸಾಲೂ ಸ, ತ, ತ, ನ, ಸ, ರ, ರ ಎಂಬ ಏಳು ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತದೆ.
(6) ಚಂಪಕಮಾಲಾವೃತ್ತದ
ಸೂತ್ರ :- ನಜಭಜಜಂಜರಂ ಬಗೆಗೊಳುತ್ತಿರೆ ಚಂಪಕಮಾಲೆಯೆಂದಪರ್
ಲಕ್ಷಣ : ನಾಲ್ಕು ಸಮಾನಪಾದಗಳುಳ್ಳ ಪದ್ಯ. ಪ್ರತಿಯೊಂದು ಪಾದದಲ್ಲೂ ೨೧ ಅಕ್ಷರಗಳಿವೆ. ಪ್ರತಿ ಪಾದದಲ್ಲಿಯೂ ನ, ಜ, ಭ, ಜ, ಜ, ಜ, ರ { ಎಂಬ ಏಳು ಗಣಗಳಿರುತ್ತವೆ. ಇಂಥ ವೃತ್ತಗಳೆಲ್ಲ ಚಂಪಕಮಾಲಾವೃತ್ತಗಳೆನಿಸುವುವು