ಹತ್ತನೆಯ ತರಗತಿ ಪ್ರಥಮಭಾಷೆ ಕನ್ನಡ
ಪದ್ಯಪಾಠ-೬. ಛಲಮನೆ ಮೆಱೆವೆಂ
ಕೃತಿಕಾರರ ಪರಿಚಯ :
ರನ್ನ ಕ್ರಿ. ಶ. ಸುಮಾರು ೯೪೯ ರಲ್ಲಿ (ಹತ್ತನೆಯ ಶತಮಾನದಲ್ಲಿ) ಬಾಗಲಕೋಟೆ ಜಿಲ್ಲೆಯ ಮುದುವೊಳಲು (ಈಗಿನ ಮುಧೋಳ) ಎಂಬ ಗ್ರಾಮದಲ್ಲಿ ಜನಿಸಿದನು.
ಈತನು ಚಾಲುಕ್ಯ ದೊರೆಯಾದ ತೈಲಪನ ಆಸ್ಥಾನದಲ್ಲಿದ್ದನು. ಇವನು ‘ಸಾಹಸ ಭೀಮ ವಿಜಯಂ’ (ಗದಾಯುದ್ಧ), ‘ಅಜಿತತೀರ್ಥಂಕರ ಪುರಾಣತಿಲಕಂ’, ‘ಪರಶುರಾಮಚರಿತಂ’, ‘ಚಕ್ರೇಶ್ವರಚರಿತಂ’ ಎಂಬ ಕಾವ್ಯಗಳನ್ನು ಬರೆದಿದ್ದಾನೆ. ‘ರನ್ನಕಂದ’ ಎಂಬ ನಿಘಂಟನ್ನು ಬರೆದಿರುವುದಾಗಿ ತಿಳಿದುಬರುತ್ತದೆ.
ಇವನಿಗೆ ತೈಲಪನು ‘ಕವಿಚಕ್ರವರ್ತಿ’ ಎಂಬ ಬಿರುದನ್ನು ನೀಡಿ
ಗೌರವಿಸಲಾಗಿದೆ.. ಈತನು ಕನ್ನಡದ ರತ್ನತ್ರಯರಲ್ಲಿ ಒಬ್ಬನು.
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊAದು ವಾಕ್ಯದಲ್ಲಿ ಉತ್ತರಿಸಿರಿ.
1. ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೆ ಎಂದು ದುರ್ಯೋಧನ ಯಾರಿಗೆ ಹೇಳುವನು?
ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೆ ಎಂದು ದುರ್ಯೋಧನನು ಭೀಷ್ಮಾಚಾರ್ಯರಿಗೆ ಹೇಳಿದನು.
2. ದಿನಪಸುತ ಎಂದರೆ ಯಾರು?
ದಿನಪಸುತ ಎಂದರೆ ಕರ್ಣ
3 ಯಾರಿಬ್ಬರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನ ಹೇಳುತ್ತಾನೆ?
ಭೀಮ ಮತ್ತು ಅರ್ಜುನನÀನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನ ಹೇಳುತ್ತಾನೆ.
4 . ಛಲವನ್ನೇ ಮೆರೆಯುವುದಾಗಿ ನಿರ್ಧರಿಸಿದವರು ಯಾರು?
ಛಲವನ್ನೇ ಮೆರೆಯುವುದಾಗಿ ನಿರ್ಧರಿಸಿದವರು ದುರ್ಯೋಧನ.
5. ಅಂತಕಾತ್ಮಜ ಎಂದರೆ ಯಾರು?
ಅಂತಕಾತ್ಮಜ ಎಂದರೆ ಧರ್ಮರಾಯ.
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಮೂರು - ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.
1. ತಾನು ಹೋರಾಡುತ್ತಿರುವುದು ನೆಲಕ್ಕಲ್ಲ ಛಲಕ್ಕೆ ಎಂಬುದನ್ನು ದುರ್ಯೋಧನ ಹೇಗೆ ವಿವರಿಸುತ್ತಾನೆ?
ದುರ್ಯೋಧÀನನು ಭೀಷ್ಮಾಚಾರ್ಯರಿಗೆ “ನಾನು ಭೂಮಿಗಾಗಿ ಹೋರಾಡುತ್ತಿಲ್ಲ ಆದರೆ ನನ್ನ ಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು. ಈ ಭೂಮಿ ನನಗೆ ಪಾಳು ಭೂಮಿಗೆ ಸಮ. ನನ್ನ ಒಡ ಹುಟ್ಟಿದ ನೂರುಮಂದಿ ಸಹೋದರರು ಯುದ್ಧದಲ್ಲಿ ಹೋರಾಡಿ ಸತ್ತರು. ಸತ್ತವರೇನು ಮತ್ತೆ ಹುಟ್ಟುವುದಿಲ್ಲವೇ? ಆದ್ದರಿಂದ ಪಾಂಡವರೊಡನೆ ಹೋರಾಡಿ ನನ್ನ ಛಲವನ್ನೇ ಮೆರೆಯುತ್ತೇನೆ” ಎಂದು ಹೇಳುತ್ತಾನೆ.
2. ಈ ನೆಲದೊಡನೆ ತಾನು ಸಹಬಾಳ್ವೆ ಮಾಡುವುದಿಲ್ಲವೆಂದು ದುರ್ಯೋಧನ ಹೇಳುವುದೇಕೆ?
ಭೀಷ್ಮಾಚಾರ್ಯರು ಪಾಂಡವರೊಡನೆ ಸಂಧಿ ಮಾಡಿಕೊ ಎಂದು ಸಲಹೆ ಮಾಡಿದಾಗ ದುರ್ಯೋಧನನನು ಅದಕ್ಕೆ ಒಪ್ಪುವುದಿಲ್ಲ. ಅವನು “ನಾನು ಭೂಮಿಗಾಗಿ ಹೋರಾಡುತ್ತಿಲ್ಲ. ಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು. ಈ ಭೂಮಿ ನನಗೆ ಪಾಳು ಭೂಮಿಗೆ ಸಮ. ಪ್ರಿಯ ಗೆಳೆಯನಾದ ಕರ್ಣನನ್ನು ಕೊಲ್ಲಿಸಿದ ಈ ಭೂಮಿಯೊಡನೆ ನಾನು ಮತ್ತೆ ಸಹಬಾಳ್ವೆ ಮಾಡುವುದಿಲ್ಲ” ಎನ್ನುತ್ತಾನೆ.
3. ಪಾರ್ಥ-ಭೀಮರ ಬಗೆಗೆ ದುರ್ಯೋಧನನ ಅಭಿಪ್ರಾಯವೇನು?
“ನನ್ನ ಪ್ರೀತಿಯ ಗೆಳೆಯ ಕರ್ಣನನ್ನು, ನನ್ನ ಪ್ರೀತಿಯ ತಮ್ಮನಾದ ದುಶ್ಯಾಸನನನ್ನು ಕೊಂದ ಅರ್ಜುನ ಮತ್ತು ಭೀಮ ಬದುಕಿರುವವರೆಗೆ; ನನ್ನ ದೇಹದಲ್ಲಿ ಪ್ರಾಣ ಇರುವವರೆಗೆ; ನಾನು ಸಂಧಿಮಾಡಿಕೊಳ್ಳಲು ಒಪ್ಪವುದಿಲ್ಲ. ಮೊದಲು ಆ ಇಬ್ಬರನ್ನೂ ಕೊಲ್ಲುವೆನು. ಅವರನ್ನು ಕೊಂದ ಬಳಿಕ ಧರ್ಮರಾಜನೊಡನೆ ಸಂಧಿಮಾಡಿಕೊಳ್ಳುತ್ತೇನೆ” ಎಂಬುದು ಪಾರ್ಥ-ಭೀಮರ ಬಗೆಗೆ ದುರ್ಯೋಧನನ ಅಭಿಪ್ರಾಯವಾಗಿದೆ.
ಇ. ಕೊಟ್ಟಿರುವ ಪ್ರಶ್ನೆಗಳ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1. ಭೀಷ್ಮ ಮತ್ತು ದುರ್ಯೋಧನರ ನಡುವಿನ ಸಂಭಾಷಣೆಯ ಸ್ವಾರಸ್ಯವನ್ನು ವಿವರಿಸಿ.
ದುರ್ಯೋಧನನು ಭೀಷ್ಮರ ಸಲಹೆ ಪಡೆಯಲು ರಣರಂಗಕ್ಕೆ ಬರುತ್ತಾನೆ. ಭೀಷ್ಮರು ಪಾಂಡವರನ್ನು ಒಪ್ಪಿಸುತ್ತೇನೆ, ಸಂಧಿ ಮಾಡಿಕೋ ಎಂದು ಹೇಳುತ್ತಾರೆ. ಆಗ ದುರ್ಯೋಧನನು ಅಜ್ಜಾ, ನಿಮಗೆ ನಮಸ್ಕರಿಸಿ ಹೋಗಲೆಂದು ಬಂದೆನೇ ಹೊರತು ಶತ್ರುಗಳೊಡನೆ ಒಪ್ಪಂದವನ್ನು ಏರ್ಪಡಿಸುವುದಕ್ಕೆಂದು ಬಂದಿಲ್ಲ. ಮುಂದೆ ನಡೆಯುವ ಯುದ್ಧದಲ್ಲಿ ನಾನೇನು ಮಾಡಬಹುದೆಂಬುದನ್ನು ಹೇಳಿರಿ. ಈ ಭೂಮಿಗಾಗಿ ಯುದ್ಧ ಮಾಡುವುದಿಲ್ಲ ಛಲಕ್ಕಾಗಿ ಪಾಂಡವರೆÆಡನೆÀ ಹೋರಾಡುವೆನು. ಈ ¨ÀsÆಮಿ ನನಗೆ ಪಾಳುಬಿದ್ದ ನೆಲ. ಕರ್ಣನನ್ನು ಕೊಲ್ಲಿಸಿದ ನೆಲನೊಡನೆ ಮತ್ತೆ ಬಾಳುವುದುಂಟೆ? ಗೆಳೆಯ ಕರ್ಣ, ನನ್ನ ತಮ್ಮ ದುಶ್ಯಾಸನರನ್ನು ಕೊಂದ ಆ ಪಾರ್ಥ-ಭೀಮರನ್ನು ಕೊಲ್ಲುವವರೆಗೆ ಸಂಧಿಗೆ ಒಪ್ಪುವುದಿಲ್ಲ. ನನ್ನ ಮಕ್ಕಳು, ಒಡ ಹುಟ್ಟಿದ ಸಹೋದರರು ಹೋರಾಡಿ ಸತ್ತರು. ಹಾಗಾಗಿ ನನ್ನಲ್ಲಿ ಕೋಪ ಹುಟ್ಟಿರುವುದರಿಂದ ಪಾಂಡವರೊಡನೆ ಹೋರಾಡಿ ನನ್ನ ಛಲವನ್ನೇ ಮೆರೆಯುತ್ತೇನೆ. ನಾನು ಹೋರಾಡದೆ ಬಿಡುವುದಿಲ.್ಲ ಇಂದಿನ ಯುದ್ಧದಲ್ಲಿ ಪಾಂಡವರು ಉಳಿಯಬೇಕು ಇಲ್ಲವೆ ನಾನು ಉಳಿಯಬೇಕು ಎಂದನು.
2. ದುರ್ಯೋಧನನ ಛಲದ ಗುಣ ಅವನ ಮಾತುಗಳಲ್ಲಿ ವ್ಯಕ್ತವಾಗಿರುವ ಬಗೆಯನ್ನು ವಿವರಿಸಿ.
ದುರ್ಯೋಧನನು ಭೀಷ್ಮರ ಸಲಹೆ ಪಡೆಯಲು ರಣರಂಗಕ್ಕೆ ಬರುತ್ತಾನೆ. ಭೀಷ್ಮರು ಪಾಂಡವರನ್ನು ಒಪ್ಪಿಸುತ್ತೇನೆ, ಸಂಧಿ ಮಾಡಿಕೋ ಎಂದು ಹೇಳುತ್ತಾರೆ. ಆಗ ದುರ್ಯೋಧನನು ಒಪ್ಪದೆ ಛಲದ ಮಾತುಗಳನ್ನು ಹೀಗೆ ಹೇಳುತ್ತಾನೆ.
ಈ ಭೂಮಿಗಾಗಿ ಯುದ್ಧ ಮಾಡುವುದಿಲ್ಲ ಛಲಕ್ಕಾಗಿ ಪಾಂಡವರÉÆಡನೆÀ ಹೋರಾಡುವೆನು. ಈ ¨ÀsÆಮಿ ನನಗೆ ಪಾಳುಬಿದ್ದ ನೆಲ. ಕರ್ಣನನ್ನು ಕೊಲ್ಲಿಸಿದ ನೆಲನೊಡನೆ ಮತ್ತೆ ಬಾಳುವುದುಂಟೆ? ಗೆಳೆಯ ಕರ್ಣ, ನನ್ನ ತಮ್ಮ ದುಶ್ಯಾಸನರನ್ನು ಕೊಂದ ಆ ಪಾರ್ಥ-ಭೀಮರನ್ನು ಕೊಲ್ಲುವವರೆಗೆ ಸಂಧಿಗೆ ಒಪ್ಪುವುದಿಲ್ಲ. ನನ್ನ ಮಕ್ಕಳು, ಒಡ ಹುಟ್ಟಿದ ಸಹೋದರರು ಹೋರಾಡಿ ಸತ್ತರು. ಆದ್ದರಿಂದ ನನ್ನಲ್ಲಿ ಕೋಪವು ಅಧಿಕವಾಯಿತು. ಆದ್ದರಿಂದ ಪಾಂಡವರೊಡನೆ ಹೋರಾಡಿ ನನ್ನ ಛಲವನ್ನೇ ಮೆರೆಯುತ್ತೇನೆ. ನಾನು ಹೋರಾಡದೆ ಬಿಡುವುದಿಲ.್ಲ ಇಂದಿನ ಯುದ್ಧದಲ್ಲಿ ಪಾಂಡವರು ಉಳಿಯಬೇಕು ಇಲ್ಲವೆ ನಾನು ಉಳಿಯಬೇಕು. ಎಂದು ಹೇಳುವ ಅವನ ಮಾತುಗಳಲ್ಲಿ ಛಲದ ಗುಣ ವ್ಯಕ್ತವಾಗಿದೆ.
ಈ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
1. “ನೆಲಕಿಱಿವೆÀನೆಂದು ಬಗೆದಿರೆ ಚಲಕಿಱಿವೆಂ”
ಆಯ್ಕೆ: ಈ ವಾಕ್ಯವನ್ನು ಮಹಾಕವಿ ರನ್ನ ರಚಿಸಿರುವ ‘ಸಾಹಸ ಭೀಮ ವಿಜಯ’ ಎಂಬ ಕೃತಿಯಿಂದ ಆರಿಸಲಾಗಿರುವ ‘ಛಲಮನೆ ಮೆಱೆವೆಂ’ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಭೀಷ್ಮಾಚಾರ್ಯರು ಪಾಂಡವರೊಡನೆ ಸಂಧಿಮಾಡಿಕೋ ಎಂದು ಹೇಳಿದಾಗ ದುರ್ಯೋಧನನು “ನಾನು ಈ ಭೂಮಿಗಾಗಿ ಹೋರಾಡುತ್ತಿಲ್ಲ ಆದರೆ ನನ್ನ ಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು. ಈ ಭೂಮಿ ನನಗೆ ಪಾಳು ಭೂಮಿಗೆ ಸಮ” ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ: ದುರ್ಯೋಧನನ ಈ ಮಾತಿನಲ್ಲಿ ಛಲದಿಂದ ಬಾಳುವುದೇ ನಿಜವಾದ ಕ್ಷತ್ರಿಯನ ಗುಣ ಎಂಬುದು ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ.
2. “ಸಮರದೊಳೆನಗಜ್ಜ ಪೇೞಿಮಾವುದು ಕಜ್ಜಂ.”
ಆಯ್ಕೆ: ಈ ವಾಕ್ಯವನ್ನು ಮಹಾಕವಿ ರನ್ನ ರಚಿಸಿರುವ ‘ಸಾಹಸ ಭೀಮ ವಿಜಯ’ ಎಂಬ ಕೃತಿಯಿಂದ ಆರಿಸಲಾಗಿರುವ ‘ಛಲಮನೆ ಮೆಱೆವೆಂ’ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಭೀಷ್ಮಾಚಾರ್ಯರು ಪಾಂಡವರೊಡನೆ ಸಂಧಿಮಾಡಿಕೋ ಎಂದು ಹೇಳಿದಾಗ ದುರ್ಯೋಧನನು ಅಜ್ಜಾ, ನಿಮಗೆ ನಮಸ್ಕರಿಸಿ ಹೋಗಲೆಂದು ಬಂದೆನೇ ಹೊರತು ಶತ್ರುಗಳೊಡನೆ ಒಪ್ಪಂದವನ್ನು ಏರ್ಪಡಿಸುವುದಕ್ಕೆಂದು ಬಂದಿಲ್ಲ. ಮುಂದೆ ನಡೆಯುವ ಯುದ್ಧದಲ್ಲಿ ನಾನೇನು ಮಾಡಬಹುದೆಂಬುದನ್ನು ಹೇಳಿರಿ ಎನ್ನುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ: ಈ ಮಾತಿನಲ್ಲಿ ‘ಸಂಧಿ ಮಾಡಿಕೊಳ್ಳುವ ಮಾತೊಂದನ್ನು ಬಿಟ್ಟು, ಯುದ್ಧದಲ್ಲಿ ನನ್ನ ಕೆಲಸ ಏನೆಂಬುದನ್ನು ಹೇಳಿ’ ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ.
3. “ಪಾಂಡವರೊಳಿಱಿದು ಛಲಮನೆ ಮೆರೆವೆಂ.”
ಆಯ್ಕೆ: ಈ ವಾಕ್ಯವನ್ನು ಮಹಾಕವಿ ರನ್ನ ರಚಿಸಿರುವ ‘ಸಾಹಸ ಭೀಮ ವಿಜಯ’ ಎಂಬ ಕೃತಿಯಿಂದ ಆರಿಸಲಾಗಿರುವ ‘ಛಲಮನೆ ಮೆಱೆವೆಂ’ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಭೀಷ್ಮಾಚಾರ್ಯರು ಪಾಂಡವರೊಡನೆ ಸಂಧಿಮಾಡಿಕೋ ಎಂದು ಹೇಳಿದಾಗ ದುರ್ಯೋಧನನು ನನ್ನ ಮಕ್ಕಳು, ಒಡ ಹುಟ್ಟಿದ ಸಹೋದರರು ಹೋರಾಡಿ ಸತ್ತರು. ಹಾಗಾಗಿ ನನ್ನಲ್ಲಿ ಕೋಪ ಹುಟ್ಟಿರುವುದರಿಂದ ಪಾಂಡವರೊಡನೆ ಹೋರಾಡಿ ನನ್ನ ಛಲವನ್ನೇ ಮೆರೆಯುತ್ತೇನೆ. ನಾನು ಹೋರಾಡದೆ ಬಿಡುವುದಿಲ್ಲ ಎನ್ನುವ ಸಂದರ್ಭದಲ್ಲಿ ದುರ್ಯೋಧನ ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ: ಛಲಕ್ಕಾಗಿ ಹೋರಾಡುವ ದುರ್ಯೋಧನನ ಕ್ಷಾತ್ರ ಗುಣ ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.
4. “ಮೇಣಾಯ್ತು ಕೌರವಂಗವನಿತಳA.”
ಆಯ್ಕೆ: ಈ ವಾಕ್ಯವನ್ನು ಮಹಾಕವಿ ರನ್ನ ರಚಿಸಿರುವ ‘ಸಾಹಸ ಭೀಮ ವಿಜಯ’ ಎಂಬ ಕೃತಿಯಿಂದ ಆರಿಸಲಾಗಿರುವ ‘ಛಲಮನೆ ಮೆಱೆವೆಂ’ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಭೀಷ್ಮಾಚಾರ್ಯರು ಪಾಂಡವರೊಡನೆ ಸಂಧಿಮಾಡಿಕೋ ಎಂದು ಹೇಳಿದಾಗ ದುರ್ಯೋಧನನು ಇಂದಿನ ಯುದ್ಧದಲ್ಲಿ ಪಾಂಡವರು ಉಳಿಯಬೇಕು ಇಲ್ಲವೆ ನಾನು ಉಳಿಯಬೇಕು ಎನ್ನುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ: ತನ್ನ ಕೊನೆಯುಸಿರು ಇರುವವರೆಗೂ ಹೋರಾಡುತ್ತೇನೆಂಬ ದುರ್ಯೋಧನನ ದಿಟ್ಟ ನಿರ್ಧಾರ ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.
ಹೆಚ್ಚುವರಿ ಪ್ರಶ್ನೋತ್ತರಗಳು :
1. ಭೀಷ್ಮಾಚರ್ಯರ ಮಾತನ್ನು ಮೀರದವರು ಯಾರು?
ಪಾಂಡವರು ಭೀಷ್ಮಾಚರ್ಯರ ಮಾತನ್ನು ಮೀರುವುದಿಲ್ಲ.
2. ದುರ್ಯೋಧನನಿಗೆ ಭೀಷ್ಮಾಚರ್ಯರು ಯಾವ ಭರವಸೆಯನ್ನು ನೀಡಿದರು?
ಭೀಷ್ಮಾಚರ್ಯರು ದುರ್ಯೋಧನನು ಒಪುö್ಪವುದಾದರೆ ಪೂರ್ವಕ್ರಮದಲ್ಲಿ ನಡೆಯುವಂತೆ ಮಾಡುವುದಾಗಿ ಭರವಸೆಯನ್ನು ನೀಡಿದರು.
3. ದುರ್ಯೋಧನನು ಭೀಷ್ಮರ ಬಳಿಗೆ ಏಕೆ ಬಂದೆನೆAದು ಹೇಳಿದನು?
ದುಯೋಧನನು ಭೀಷ್ಮರಿಗೆ ನಮಸ್ಕರಿಸಿ ಹೋಗಬೇಕೆಂದು ಬಂದೆನೆAದು ಹೇಳಿದನು.
4. ಕರ್ಣ ಮತ್ತು ದುಶ್ಯಾಸನರನ್ನು ಕೊಂದವರು ಯಾರು?
ಕರ್ಣನನ್ನು ಅರ್ಜುನ ಮತ್ತು ದುಶ್ಯಾಸನನನ್ನು ಭೀಮನು ಕೊಂದನು.
5. ದುರ್ಯೋಧನನು ಯಾವುದಕ್ಕೋಸ್ಕರ ಯುದ್ಧ ಮಾಡುವುದಾಗಿ ಹೇಳಿದನು?
ದುರ್ಯೋಧನನು ಛಲಕ್ಕಾಗಿ ಯುದ್ಧ ಮಾಡುವುದಾಗಿ ಹೇಳಿದನು.
6. ದುರ್ಯೋಧನನು ಯುದ್ಧರಂಗಕ್ಕೆ ಯಾರನ್ನು ನೋಡಲು ಬಂದನು?
ದುರ್ಯೋಧನನು ಯುದ್ಧರಂಗಕ್ಕೆ ಭೀಷ್ಮಾಚಾರ್ಯರನ್ನು ನೋಡಲು ಬಂದನು.
7. ಪಾಂಡವರೊಡನೆ ಸಂಧಿ ಮಾಡಿಕೊಳ್ಳುವಂತೆ ದುರ್ಯೋಧನನಿಗೆ ಯಾರು ಹೇಳಿದರು?
ಪಾಂಡವರೊಡನೆ ಸಂಧಿ ಮಾಡಿಕೊಳ್ಳುವಂತೆ ದುರ್ಯೋಧನನಿಗೆ ಭೀಷ್ಮಾಚಾರ್ಯರು ಹೇಳಿದರು.
8. ದುರ್ಯೋಧನನು ಈ ನೆಲದೊಡನೆ ಬಾಳುವುದಿಲ್ಲ ಎನ್ನಲು ಕಾರಣವೇನು?
ದಿನಪಸುತನಾದ ಕರ್ಣನನ್ನು ಕೊಲ್ಲಿಸಿದ ಕಾರಣ ಈ ನೆಲದೊಡನೆ ಬಾಳುವುದಿಲ್ಲ ಎನ್ನುತ್ತಾನೆ.
9. ಯಾರೊಡನೆ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನನು ಭೀಷ್ಮರಿಗೆ ಹೇಳುತ್ತಾನೆ?
ಅಂತಕಾತ್ಮಜ (ಧರ್ಮರಾಯ) ನೊಡನೆ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನನು ಭೀಷ್ಮರಿಗೆ ಹೇಳುತ್ತಾನೆ.
9. ದುರ್ಯೋಧನನಿಗೆ ಅಹಿತರು ಯಾರು?
ದುರ್ಯೋಧನನಿಗೆ ಅಹಿತರು ಪಾಂಡವರು.
10. ದುರ್ಯೋಧನನ ಪ್ರೀತಿಯ ಗೆಳೆಯ ಯಾರು?
ದುರ್ಯೋಧನನ ಪ್ರೀತಿಯ ಗೆಳೆಯ ಕರ್ಣ.
11. ದುರ್ಯೋಧನನ ಪ್ರೀತಿಯ ತಮ್ಮನ ಹೆಸರೇನು?
ದುರ್ಯೋಧನನ ಪ್ರೀತಿಯ ತಮ್ಮನ ಹೆಸರು ದುಶ್ಯಾಸನ.
12. ದುರ್ಯೋಧನನು ತಾನು ಯಾರೊಡನೆ ಯುದ್ಧ ಮಾಡಿಯೇ ತೀರುವೆನೆಂದು ಹೇಳುತ್ತಾನೆ?
ದುರ್ಯೋಧನನು ತಾನು ಭೀಮ ಮತ್ತು ಅರ್ಜುನನೊಡನೆ ಯುದ್ಧ ಮಾಡಿಯೇ ತೀರುವೆನೆಂದು ಹೇಳುತ್ತಾನೆ.