ಗದ್ಯ-7 ಲಂಡನ್ ನಗರ
ಕವಿ ಪರಿಚಯ : ವಿ. ಕೃ. ಗೋಕಾಕ್
ಶ್ರೀಯುತ
ವಿನಾಯಕ ಕಾವ್ಯನಾಮದಿಂದ ಪ್ರಸಿದ್ಧರಾದ ಡಾ. ವಿನಾಯಕ ಕೃಷ್ಣ ಗೋಕಾಕ್ ಇವರು ಸಾ. ಶ. ೧೯೦೯ ರಲ್ಲಿ ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಜನಿಸಿದರು.
ಇವರು `ಸಮುದ್ರಗೀತೆಗಳು’, ‘ಪಯಣ’, ‘ಇಜ್ಜೋಡು’, `ಉಗಮ’, `ಸಮರಸವೇ ಜೀವನ’, ‘ಭಾರತ ಸಿಂಧುರಶ್ಮಿ' ಮತ್ತು `ದ್ಯಾವಾಪೃಥಿವೀ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ
.ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ಜ್ಞಾನಪೀಠ ಪ್ರಶಸ್ತಿ ಹಾಗೂ ಪದ್ಮಶ್ರೀ ಪುರಸ್ಕಾರಗಳು ದೊರೆತಿವೆ.
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
೧. ಲಂಡನ್ನಿನ ಪೇಟೆಯಲ್ಲಿರುವ ಸ್ಟೇಷನರಿ ಅಂಗಡಿಯ ಹೆಸರೇನು?
ಲಂಡನ್ನಿನ ಪೇಟೆಯಲ್ಲಿರುವ ಸ್ಟೇಷನರಿ ಅಂಗಡಿಯ ಹೆಸರು `ವೂಲವರ್ಥ'
೨. ನೆಲ್ಸನ್ ರವರ ಮೂರ್ತಿಯಿರುವ ಸ್ಥಳದ ಹೆಸರೇನು?
ನೆಲ್ಸನ್ ರವರ ಮೂರ್ತಿ ಇರುವ ಸ್ಥಳದ ಹೆಸರು ಟ್ರಾಫಲ್ಗಾರ್ ಸ್ಕೆ÷್ವÃರ್.
೩. `ವೆಸ್ಟ್ ಮಿನಿಸ್ಟರ್ ಅಬೆ `ಯಾರ ಸ್ಮಾರಕವಾಗಿದೆ?
ವೆಸ್ಟ ಮಿನಿಸ್ಟರ್ ಅಬೆ `ಸಾರ್ವಭೌಮರ, ಕವಿಪುಂಗವರ ಸತ್ತವರ ಸ್ಮಾರಕವಾಗಿದೆ’.
೪. ಆಂಗ್ಲ ಸಾಮ್ರಾಜ್ಯದ ವೈಭವ ಕಂಡುಬರುವ ಓಣಿ ಯಾವುದು?
`ಚೇರಿಂಗ್ ಕ್ರಾಸ್’ ಎಂಬುದು ಅಂಗ್ಲ ಸಾಮ್ರಾಜ್ಯ ಕಂಡುಬರುವ ಓಣಿ.
ಆ) ಕೊಟ್ಟಿರುವ ಎರಡು
-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
೧. ವೂಲವರ್ಥ ಅಂಗಡಿಯಲ್ಲಿ ಸಿಗುವ ವಸ್ತುಗಳಾವುವು?
`ವೂಲವರ್ಥ’ ಎಂಬುದು `ಸ್ಟೇಷನರಿ’ ಅಂಗಡಿ. ಪ್ರಾಚೀನ ಮಹಾಕಾವ್ಯದಂತೆ ಇದೊಂದು ಮಹಾಕೋಶವಾಗಿದೆ. ಬೂಟು, ಕಾಲುಚೀಲ, ಚಣ್ಣ, ಸಾಬೂನು, ಔಷಧ, ಪುಸ್ತಕ, ಅಡುಗೆಯ ಪಾತ್ರೆ, ಇಲೆಕ್ಟಿçಕ್ ದೀಪದ ಸಾಮಾನು, ಫೋಟೋ, ಅಡವಿಯ ಹೂವು, ಯುದ್ಧ ಸಾಮಗ್ರಿ ಎಲ್ಲವೂ ದೊರೆಯುತ್ತವೆ.
೨. ಲಂಡನ್ನಿನ ಹೆಣ್ಣು ಮಕ್ಕಳು ಯಾವ ಯಾವ ಕೆಲಸದಲ್ಲಿ ನಿಯುಕ್ತರಾಗಿರುತ್ತಾರೆ?
ಲಂಡನ್ನಿನಲ್ಲಿ ಗಂಡಿಗಿAತ ಹೆಣ್ಣು ಹೆಚ್ಚಿದ್ದ ಹಾಗೆ ಕಾಣುತ್ತದೆ. ಎಲ್ಲ ಅಂಗಡಿಗಳಲ್ಲಿ ಸಾಮಾನ್ಯವಾಗಿ ಸ್ತಿçÃಯರೇ ಕೆಲಸ ಮಾಡುತ್ತಾರೆ. ಉಪಾಹಾರ ಗೃಹಗಳಲ್ಲಿ, ದೊಡ್ಡ ಅಂಗಡಿಗಳಲ್ಲಿ ಹೆಣ್ಣು ಮಕ್ಕಳಿರುತ್ತಾರೆ. ಟೈಪಿಸ್ಟ್ ಕಾರಕೂನ ಹೆಣ್ಣು ಮಗಳು, ಸಿನಿಮಾ ಗೃಹದಲ್ಲಿ ಜಾಗ ಹುಡುಕಿಕೊಡುವಳು ಹೆಣ್ಣು, ಕಾಲೇಜಿನ ಸಿಪಾಯಿಣಿ ಹೆಣ್ಣು. ಹೆಣ್ಣು ಮಕ್ಕಳನ್ನು ಅತ್ಯಾದರದಿಂದ ನಡೆಸಿಕೊಳ್ಳುವ ಸಂಸ್ಕöÈತಿಯ ಶಿಖರವನ್ನು ಇಂಗ್ಲೆAಡಿನಲ್ಲಿಯೇ ಕಾಣಬೇಕು.
೩. ಟೊಪ್ಪಿಗೆಯ ವಿಶೇಷತೆಯನ್ನು ಲೇಖಕರು ಹೇಗೆ ದಾಖಲಿಸಿದ್ದಾರೆ?
ಲಂಡನ್ನ ಹೆಣ್ಣು ಮಕ್ಕಳ ಟೊಪ್ಪಿಗೆಯು ವಿಶೇಷವಾಗಿರುತ್ತದೆ. ಒಂದು ಟೊಪ್ಪಿಗೆಯಂತೆ ಇನ್ನೊಂದಿರುವುದಿಲ್ಲ. ಸಿಕ್ಕಿಸಿದ ಪುಚ್ಚವಾದರೂ ಕನಿಷ್ಠ ಪಕ್ಷಕ್ಕೆ ಬೇರೆಯಾಗಿರುತ್ತದೆ. ಕೋಟ್ಯವಧಿ ಟೊಪ್ಪಿಗೆಗಳನ್ನು ಬೇಕಾದರೆ ಪರೀಕ್ಷಿಸಿ ಇದನ್ನು ಮನಗಾಣಬಹುದು. ಮನುಷ್ಯನಂತೆ ಟೊಪ್ಪಿಗೆಯಲ್ಲವೆ? ಒಬ್ಬ ಮನುಷ್ಯಳಂತೆ ಇನ್ನೊಬ್ಬಳಿಲ್ಲ.
೪ ಪೊಯೆಟ್ಸ್ ಕಾರ್ನರ್ನಲ್ಲಿ ಯಾವ ಯಾವ ಕವಿಗಳ ಸಮಾಧಿಗಳಿವೆ?
ಪೊಯಟ್ಸ್ ಕಾರ್ನರ್ನಲ್ಲಿ ಕಿಪ್ಲಿಂಗ್, ಮ್ಯಾಕಾಲೆ, ಜಾನ್ಸನ್, ಗೋಲ್ಡ್ಸ್ಮಿತ್, ಡ್ರಾಯ್ಡನ್, ಬೆನ್ಜಾನ್ಸನ್, ವರ್ಡ್ಸ್ವರ್ತ್ ಮುಂತಾದ ಕವಿಗಳ ಸಮಾಧಿಗಳಿವೆ.
೫ ಸಾಮ್ರಾಟರ ರಾಜ್ಯಾಭಿಷೇಕವಾಗುವ ಸಿಂಹಾಸನದ ಮೇಲಿರುವ ಕಲ್ಲುಪಾಟಿಯ ವಿಶೇಷತೆಯೇನು?
ಸಾಮ್ರಾಟರ ರಾಜ್ಯಾಭಿಷೇಕವಾಗುವಾಗ ಅವರ ಸಿಂಹಾಸನದ ಮೇಲೆ ಒಂದು ಕಲ್ಲುಪಾಟಿಯನ್ನು ಹಾಕುತ್ತಾರೆ. ಪಟ್ಟಾಭಿಷೇಕವಾಗುವಾಗ ಮಾತ್ರ ಸಾಮ್ರಾಟರು ಇದರ ಮೇಲೆ ಕೂಡಬೇಕು. ಈ ಶಿಲೆಯನ್ನು ಒಳಗೊಂಡ ಸಿಂಹಾಸನವು ವೆಸ್ಟ್ಮಿನಿಸ್ಟರ್ ಮಂದಿರದಲ್ಲಿಯ ಒಂದು ಭಾಗದಲ್ಲಿದೆ. `ಸ್ಟೋನ್ ಆಫ್ ಸ್ಕೋನ್’ ಎಂದು ಇದರ
ಹೆಸರು. ೩ನೇ ಎಡ್ವರ್ಡನು ಸ್ಕಾಟ್ಲೆಂಡಿನ ಅರಸರಿಂದ ಇದನ್ನು ಕಿತ್ತುಕೊಂಡು ಬಂದAತೆ ಕಾಣುತ್ತದೆ.
ಇ) ಸಂದರ್ಭ ಸಹಿತ ಸ್ವಾರಸ್ಯ ವನ್ನು ವಿವರಿಸಿ.
೧. “ನಿಮ್ಮ ದೇಶದ ಗೌರವವನ್ನು ಕಾಯಿರಿ! ಇದು ದೊಡ್ಡದಾದ ರಾಷ್ಟç”
ಆಯ್ಕೆ:
ಈ ವಾಕ್ಯವನ್ನು ವಿ. ಕೃ. ಗೋಕಾಕ್ ಅವರ `ಸಮುದ್ರದಾಚೆಯಿಂದ’ ಎಂಬ ಪ್ರವಾಸ ಕಥನದಿಂದ ಆರಿಸಲಾಗಿರುವ `ಲಂಡನ್ ನಗರ' ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ.
ಸಂದರ್ಭ:
ಲೇಖಕರು ಲಂಡನ್ ನಗರದ ಬೀದಿಬೀದಿಯಲ್ಲೂ ಇತಿಹಾಸ ಪ್ರಸಿದ್ಧ ಪುರುಷರ ಪ್ರತಿಮೆಗಳನ್ನು ನೋಡಿ ತಮ್ಮ ದೇಶಕ್ಕಾಗಿ ಜೀವನವನ್ನು ಲೆಕ್ಕಿಸದೆ ದುಡಿದವರು ಕೈಯೆತ್ತಿ ನಿಂತು ``ನಿಮ್ಮ ದೇಶದ ಗೌರವವನ್ನು ಕಾಯಿರಿ! ಇದು ದೊಡ್ಡದಾದ ರಾಷ್ಟç” ಎಂದು ಹೇಳುತ್ತಿರುವಂತೆ ತೋರುತ್ತದೆ. ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಸ್ವಾರಸ್ಯ: ರಾಷ್ಟçಕ್ಕಾಗಿ ದುಡಿದ ಮಹನೀಯರಿಗೆ ಲಂಡನ್ ನಗರದಲ್ಲಿ ಅಲ್ಲಿನ ಜನ ತೋರಿಸಿರುವ ಗೌರವ ಭಾವನೆಯು ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.
೨. “ಹೊತ್ತು ! ಹೊತ್ತು ! ಹೊತ್ತೇ ಹಣ”
ಆಯ್ಕೆ:
ಈ ವಾಕ್ಯವನ್ನು ವಿ.ಕೃ.ಗೋಕಾಕ್ ಅವರ `ಸಮುದ್ರದಾಚೆಯಿಂದ’ ಎಂಬ ಪ್ರವಾಸ ಕಥನದಿಂದ ಆರಿಸಲಾಗಿರುವ `ಲಂಡನ್ ನಗರ' ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ.
ಸಂದರ್ಭ:
ಲಂಡನ್ ನಗರದ ಬೀದಿಯಲ್ಲಿ ಲಕ್ಷಾನುಲಕ್ಷ ಜನರು ಅವಸರದಿಂದ ಓಡಾಡುತ್ತಿರುವುದನ್ನು ನೋಡಿ Time! Time! Time! is money (ಹೊತ್ತು! ಹೊತ್ತು! ಹೊತ್ತೇ ಹಣ) ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಸ್ವಾರಸ್ಯ:
ಸಮಯಕ್ಕೆ ಬಹಳ ಪ್ರಾಮುಖ್ಯತೆ ಇದೆ. ಅದರಲ್ಲೂ ವಿದೇಶಗಳಲ್ಲಿ ಸಮಯವೇ ಹಣ ಎಂಬ ಮಾತು ಅಕ್ಷರಶಃ ನಿಜವಾಗಿದೆ ಎಂಬ ಮಾತು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.
೩. “ಯಾರನ್ನು ತುಳಿದರೇನು! ಎಲ್ಲಿ ಹೆಜ್ಜೆ ಹಾಕಿದರೇನು? ಎಲ್ಲವೂ ಅಷ್ಟೆ! ಮಣ್ಣು ಮಣ್ಣು!”
ಆಯ್ಕೆ:
ಈ ವಾಕ್ಯವನ್ನು ವಿ. ಕೃ. ಗೋಕಾಕ್ ಅವರ `ಸಮುದ್ರದಾಚೆಯಿಂದ’ ಎಂಬ ಪ್ರವಾಸ ಕಥನದಿಂದ ಆರಿಸಲಾಗಿರುವ `ಲಂಡನ್ ನಗರ' ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ.
ಸಂದರ್ಭ:
`ವೆಸ್ಟ್ ಮಿನಿಸ್ಟರ್ ಅಬೆ' ಎಂಬ ಪ್ರಾರ್ಥನಾ ಮಂದಿರದ ಆವರಣದಲ್ಲಿ ಸ್ಥಾಪಿಸಲಾಗಿದ್ದ ಕವಿಗಳ, ಸಾರ್ವಭೌಮರ ನೆನಪಿಗಾಗಿ ಕಲ್ಲು ಹಾಸುಗಳನ್ನು ಇಟ್ಟಿದ್ದು ಅವುಗಳ ಮೇಲೆ ನಡೆದು ಹೋಗಬೇಕಾಗಿತ್ತು. ಅವುಗಳ ಬಳಿ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ಲೇಖಕರು “ಯಾರನ್ನು ತುಳಿದರೇನು? ಎಲ್ಲಿ ಹೆಜ್ಜೆ ಹಾಕಿದರೇನು? ಎಲ್ಲವೂ ಅಷ್ಟೆ! ಮಣ್ಣು ಮಣ್ಣು!” ಎಂದು ಮನಸ್ಸಿಗೆ ಬಂದAತೆ ಮನುಷ್ಯನು ನಡೆಯ ಹತ್ತುತ್ತಾನೆ. ಎಂದು ಹೇಳಿದ್ದಾರೆ.
ಸ್ವಾರಸ್ಯ:
ಸಾಧಕರ ಮಾರ್ಗದಲ್ಲಿ ನಡೆಯುವಾಗ ಮಾನವನು ದಿಕ್ಕು ತಪ್ಪಿದಂತೆ ಆದಾಗ ``ಎಲ್ಲವೂ ಅಷ್ಟೆ! ಬರಿಯ ಮಣ್ಣು'' ಎಂದು ಮನಸ್ಸಿನಲ್ಲಿ ಮೂಡುತ್ತದೆ. ಎಲ್ಲವೂ ನಶÀ್ವರವಾಗಿ ಕಾಣುತ್ತದೆ ಎಂಬುದು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.
೪. “ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ”
ಆಯ್ಕೆ:
ಈ ವಾಕ್ಯವನ್ನು ವಿ. ಕೃ. ಗೋಕಾಕ್ ಅವರ `ಸಮುದ್ರದಾಚೆಯಿಂದ’ ಎಂಬ ಪ್ರವಾಸ ಕಥನದಿಂದ ಆರಿಸಲಾಗಿರುವ `ಲಂಡನ್ ನಗರ' ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ.
ಸಂದರ್ಭ:
ಲಂಡನ್ ನಗರ ಪ್ರವಾಸ ಕಥನದ ಕೊನೆಯಲ್ಲಿ ಪ್ರವಾಸದ ಶೈಕ್ಷಣಿಕ ಮಹತ್ವವನ್ನು ತಿಳಿಸುವ ಸಂದರ್ಭದಲ್ಲಿ ಪ್ರವಾಸದಿಂದ ತಮ್ಮ ಮನಸ್ಸು ವಿಕಾಸ ಹೊಂದಿ, ದೃಷ್ಟಿಕೋನ ವಿಶಾಲವಾದ ಬಗ್ಗೆ ‘ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ’ ಎಂದು ಬೇಕನ್ ಹೇಳಿದ ಮಾತನ್ನು ಇಲ್ಲಿ ಲೇಖಕರು ಉದಾಹರಿಸಿದ್ದಾರೆ.
ಸ್ವಾರಸ್ಯ:
‘ದೇಶ ಸುತ್ತು ಕೋಶ ಓದು’ ಎಂಬ ಮಾತಿನಂತೆ ಪರಿಪೂರ್ಣ ಶಿಕ್ಷಣಕ್ಕೆ ಪ್ರವಾಸ ಅತಿ ಮುಖ್ಯ. ಆದ್ದರಿಂದ ಈ ಮಾತು ಪ್ರವಾಸದ ಮಹತ್ವವನ್ನು ತಿಳಿಸುತ್ತದೆ.
ಈ) ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
೧. ಲಂಡನ್ ನಗರ ವೀಕ್ಷಣೆಯಲ್ಲಿ ಲೇಖಕರು ಗುರುತಿಸಿರುವ ವಿಶೇಷತೆಗಳೇನು?
ವಿ.ಕೃ.ಗೋಕಾಕ್ ಅವರು ಲಂಡನ್ ನಗರದಲ್ಲಿ ಹಲವಾರು ವಿಶೇಷತೆಗಳನ್ನು ಕಂಡರು. ಲಂಡನ್ ಪಟ್ಟಣವೆಂದರೆ ಒಂದು ಸ್ವತಂತ್ರ ಜಗತ್ತು. ಅಲ್ಲಿಯ ರಸ್ತೆಗಳಲ್ಲಿ ವ್ಯಾಪಾರವು ತುಂಬಿ ಟ್ರಾಮ್ ಬಸ್ಸುಗಳಿಗೆ ಸುಗಮವಾಗಿ ಸಂಚರಿಸಲು ಸಾಧ್ಯವಾಗುವುದಿಲ್ಲ; ಬಹಳ ಹೊತ್ತು ನಡುನಡುವೆ ನಿಲ್ಲಬೇಕಾಗುತ್ತದೆ. ಅದನ್ನು ತಪ್ಪಿಸುವುದಕ್ಕಾಗಿ ಭೂಗರ್ಭದಲ್ಲಿ ಗಾಡಿಯನ್ನು ಓಡಿಸುತ್ತಾರೆ. `ವೂಲವರ್ಥ’ ಎಂಬ ‘ಸ್ಟೇಷನರಿ’ ಅಂಗಡಿಯು ವಿಶೇಷವಾಗಿದ್ದು ಅಲ್ಲಿ ಬೂಟು, ಕಾಲುಚೀಲ, ಚಣ್ಣ, ಸಾಬೂನು, ಔಷಧ, ಪುಸ್ತಕ, ಅಡಿಗೆಯ ಪಾತ್ರೆ, ಇಲೆಕ್ಟಿçಕ್ ದೀಪದ ಸಾಮಾನು, ಫೋಟೋ, ಅಡವಿಯ ಹೂವು, ಯುದ್ಧಸಾಮಗ್ರಿ ಎಲ್ಲವೂ ದೊರೆಯುತ್ತವೆ.
ಎಲ್ಲ ಅಂಗಡಿಗಳಲ್ಲಿ ಸಾಮಾನ್ಯವಾಗಿ ಸ್ತಿçÃಯರೇ ಕೆಲಸ ಮಾಡುತ್ತಾರೆ. ‘ಚೇರಿಂಗ್ ಕ್ರಾಸ್’ ಎಂಬ ಓಣಿಯಲ್ಲಿ ಆಂಗ್ಲರ ಸಾಮ್ರಾಜ್ಯ ವೈಭವವು ಕಂಡುಬರುತ್ತದೆ. ಇಂಡಿಯಾ ಆಫೀಸಿನ ಹತ್ತಿರ ಆಫ್ರಿಕನ್ ಕಚೇರಿ, ಇನ್ನೊಂದು ವಸಾಹತಿನ ಕಚೇರಿ, ನೂರೆಂಟು ಬ್ಯಾಂಕ್ಗಳು ದೊಡ್ಡ ಕಂಪೆನಿಗಳ ಕಚೇರಿಗಳು, ಎಲ್ಲವೂ ದಂಗುಬಡಿಸುವAತೆ ನೆರೆದಿವೆ! ನಗರದ ಪ್ರತಿಯೊಂದು ಕೂಟಕ್ಕೆ ಒಂದು ಹೆಸರೇನಾದರೂ ಇದ್ದೇ ಇರುತ್ತದೆ. ಅಲ್ಲಿನ ಹೆಣ್ಣುಮಕ್ಕಳು ಧರಿಸುವ ಟೊಪ್ಟಿಗೆಗಳು ವಿಶೇಷವಾಗಿದ್ದು ಒಂದು ಟೊಪ್ಪಿಗೆಯಂತೆ ಇನ್ನೊಂದಿರುವುದಿಲ್ಲ. ‘ವೆಸ್ಟ್ ಮಿನ್ಸ್ಟರ್ ಅಬೆ’ ಎಂಬ ಪ್ರಾರ್ಥನಾ ಮಂದಿರ ಕನಿಷ್ಠ ಒಂದು ಸಾವಿರ ವರ್ಷದಷ್ಟು ಪುರಾತನವಾದ ಮಂದಿರ. ಅಲ್ಲಿ ಪ್ರಸಿದ್ಧ ಕವಿಗಳ, ಸಾರ್ವಭೌಮರ, ವಿಜ್ಞಾನಿಗಳ ಸ್ಮಾರಕಗಳಿವೆ.
ಅಲ್ಲಿನ ಅರಸರ ಅರಮನೆ ವಿಶೇಷವಾಗಿದ್ದು ಅದಕ್ಕೆ ಖoಥಿಚಿಟ ಅhಚಿಠಿeಟ (ರಾಜವಿಭಾಗ) ಎಂದು ಹೆಸರು. ಸಾಮ್ರಾಟರ ರಾಜ್ಯಾಭಿಷೇಕವಾಗುವಾಗ ಅವರ ಸಿಂಹಾಸನದ ಮೇಲೆ ಒಂದು ಕಲ್ಲುಪಾಟಿಯನ್ನು ಹಾಕುತ್ತಾರೆ. ಪಟ್ಟಾಭಿಷೇಕವಾಗುವಾಗ ಮಾತ್ರ ಸಾಮ್ರಾಟರು ಇದರ ಮೇಲೆ ಕೂಡಬೇಕು. ‘ಸ್ಟೋನ್ ಆಫ್ ಸ್ಕೋನ್’ ಎಂದು ಇದರ
ಹೆಸರು.
೨. `ವೆಸ್ಟ್ ಮಿನಿಸ್ಟರ್ ಅಬೆ’ ಪ್ರಾರ್ಥನಾ ಮಂದಿರ ಒಂದು ವಿಶೇಷ ಸ್ಮಾರಕ ವಿವರಿಸಿ.
`ವೆಸ್ಟ್ ಮಿನಿಸ್ಟರ್ ಅಬೆ' ಎಂಬ ಪ್ರಾರ್ಥನಾ ಮಂದಿರ ಕನಿಷ್ಠ ಒಂದು ಸಾವಿರ ವರ್ಷದಷ್ಟು ಪುರಾತನವಾದ ಮಂದಿರ. ಕೆಲವೊಂದು ಭಾಗಗಳ ದುರಸ್ತಿಯನ್ನು ಬಿಟ್ಟರೆ ಇಂದಿಗೂ ಅಚ್ಚಳಿಯದೆ ಉಳಿದಿದೆ. ಇಲ್ಲಿ ಸಂತ, ಸಾರ್ವಭೌಮರು ಮಲಗಿರುವರು; ಕವಿಪುಂಗವರು ಒರಗಿರುವರು; ಸತ್ತವರ ಸ್ಮಾರಕವೆಂದು ಇದಕ್ಕಿಂತ ಘನತರವಾದ ಮಂದಿರವು ಜಗತ್ತಿನಲ್ಲಿ ಇನ್ನೆಲ್ಲಿಯೂ ಇರಲಾರದು.
``ಮರ್ತ್ಯತ್ವವೇ ಎಷ್ಟು ಗೋರಿಗುಂಪುಗಳು ಇಲ್ಲಿವೆ ನೋಡಿ ಅಂಜು” ಎಂದು ೩೦೦
ವರ್ಷಗಳ ಹಿಂದೆ ಬ್ಯೂಮಾಂಟ್ ಕವಿಯು ಹಾಡಿದ್ದನು. ಗೋಲ್ಡ್ಸ್ಮಿತ್ ಹಾಗೂ ಎಡಿಸನ್ ಎಂಬ ಪ್ರಖ್ಯಾತ ಸಾಹಿತಿಗಳು ‘ವೆಸ್ಟ್ಮಿನಿಸ್ಟರ್ ಅಬೆಯ ಸಂದರ್ಶನ’ ಎಂಬ ವಿಷಯದ ಮೇಲೆ ಉತ್ತಮವಾದ ನಿಬಂಧಗಳನ್ನು ಬರೆದಿದ್ದಾರೆ. ಇದು ಇಂದಿಗೂ ಕಬ್ಬಿಗರ ಸ್ಫೂರ್ತಿಯ ತವರುಮನೆಯಾಗಿದೆ.
`ವೆಸ್ಟ್ ಮಿನಿಸ್ಟರ್ ಅಬೆ'ಯ ಒಳಗೆ ಸಾಗುವ ಹಾದಿಯ ಎಡಬಲಕ್ಕೆ ರಾಜಕಾರಣ ಚತುರರು, ಕವಿಗಳು, ವಿಜ್ಞಾನಿಗಳು, ಅರಸರುಗಳು ಸತ್ತಮೇಲೆ ಅವರಿಗೊಂದು ವಿಶಿಷ್ಟ ಸ್ಥಾನವನ್ನು ಕಲ್ಪಿಸಿದ್ದಾರೆ. ಸಾಮ್ರಾಟರ ರಾಜ್ಯಾಭಿಷೇಕವಾಗುವಾಗ ಅವರ ಸಿಂಹಾಸನದ ಮೇಲೆ ಒಂದು ಕಲ್ಲುಪಾಟಿಯನ್ನು ಹಾಕುತ್ತಾರೆ. ಪಟ್ಟಾಭಿಷೇಕವಾಗುವಾಗ ಮಾತ್ರ ಸಾಮ್ರಾಟರು ಇದರ ಮೇಲೆ ಕೂಡಬೇಕು. ಈ ಶಿಲೆಯನ್ನು ಒಳಗೊಂಡ ಸಿಂಹಾಸನವು ವೆಸ್ಟ್ಮಿನಿಸ್ಟರ್ ಮಂದಿರದಲ್ಲಿಯ ಒಂದು ಭಾಗದಲ್ಲಿದೆ. `ಸ್ಟೋನ್ ಆಫ್ ಸ್ಕೋನ್’ ಎಂದು ಇದರ
ಹೆಸರು. ೩ನೇ ಎಡ್ವರ್ಡನು ಸ್ಕಾಟ್ಲೆಂಡಿನ ಅರಸರಿಂದ ಇದನ್ನು ಕಿತ್ತುಕೊಂಡು ಬಂದAತೆ ಕಾಣುತ್ತದೆ.
ಹೆಚ್ಚುವರಿ ಪ್ರಶ್ನೆಗಳು
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
೫. ಲಂಡನ್ನಲ್ಲಿ ವಾಹನಗಳು ಬಹಳ ಹೊತ್ತು ನಿಲ್ಲುವುದನ್ನು ತಡೆಯಲು ಯಾವ ವ್ಯವಸ್ಥೆ ಮಾಡಲಾಗಿದೆ?
ಲಂಡನ್ನಲ್ಲಿ ವಾಹನಗಳು ಬಹಳ ಹೊತ್ತು ನಿಲ್ಲುವುದನ್ನು ತಡೆಯಲು ಭೂಗರ್ಭದಲ್ಲಿ ಗಾಡಿಯನ್ನು ಒಯ್ದಿದ್ದಾರೆ.
೬. ಲಂಡನ್ನಲ್ಲಿ ಸೂಟು ಹೊಲಿಯಲು ಪ್ರಸಿದ್ಧಿಯಾಗಿರುವ ಸಿಂಪಿಗಳು ಯಾರು?
ಐವತ್ತು ಶೀಲಿಂಗಿನ ಸ್ಯಾವ್ಯೋಯ್ ಸಿಂಪಿಗಳು ಲಂಡನ್ನಲ್ಲಿ ಸೂಟು ಹೊಲಿಯಲು ಪ್ರಸಿದ್ಧಿಯಾಗಿರುವ ಸಿಂಪಿಗಳು.
೭. `ವೆಸ್ಟ್ ಮಿನಿಸ್ಟರ್ ಅಬೆ’ಯ ಪಾದ್ರಿಯ ಕೆಲಸವೇನು?
ಜನರ ಆತ್ಮಗಳ ಆರೋಗ್ಯವನ್ನು ಕಾಯುವುದು `ವೆಸ್ಟ್ ಮಿನಿಸ್ಟರ್ ಅಬೆ’ಯ
ಪಾದ್ರಿಯ ಕೆಲಸ.
೮. `ಸ್ಟೋನ್ ಆಫ್ ಸ್ಕೋನ್’ ಅನ್ನು ಎಲ್ಲಿಂದ ತರಲಾಗಿತ್ತು?
೩ನೇ ಎಡ್ವರ್ಡನು ಸ್ಕಾಟ್ಲೆಂಡಿನ ಅರಸರಿಂದ ಕಿತ್ತುಕೊಂಡು ತರಲಾಗಿದೆ.
೯. ಪ್ರವಾಸದ ಬಗ್ಗೆ ಷೇಕ್ಸ್ಪಿಯರನ ಅಭಿಪ್ರಾಯವೇನು?
`ಮನೆ
ಹಿಡಿದು ಇರುವ ತರುಣನ ಬುದ್ಧಿ ಮನೆಯ ಮಟ್ಟದ್ದೆ’ ಎಂಬುದು ಷೇಕ್ಸ್ಪಿಯರನ ಅಭಿಪ್ರಾಯವಾಗಿದೆ.
೧೦. ‘ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ’ ಎಂದು ಹೇಳಿದವರು ಯಾರು?
‘ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ’ ಎಂದು ಹೇಳಿದವರು ಬೇಕನ್.
ಕೊಟ್ಟಿರುವ ಎರಡು
-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
೬. ಲಂಡನ್ನಿನಲ್ಲಿ ಭೂಗರ್ಭದಲ್ಲಿ ಗಾಡಿಗಳನ್ನು ಒಯ್ಯಲು ಯಾವ ರೀತಿ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ?
ಲಂಡನ್ನಿನಲ್ಲಿ ರಸ್ತೆಗಳಲ್ಲಿ ವ್ಯಾಪಾರವು ತುಂಬಿ ಟ್ರಾಮ್ ಬಸ್ಸುಗಳಿಗೆ ಸಕಾಲಕ್ಕೆ ಹೋಗಲಾಗುವುದಿಲ್ಲ. ಆದ್ದರಿಂದ ಭೂಗರ್ಭದಲ್ಲಿ ಗಾಡಿಯನ್ನು ಒಯ್ದಿದ್ದಾರೆ. ಹಳಿ, ಇಲೆಕ್ಟಿçಕ್ಗಾಡಿ, ನಿಲ್ಮನೆ ಎಲ್ಲಾ ಒಳಗೇ ಇವೆ. ಅಲ್ಲಿ ಜೋರಾಗಿ ಗಾಳಿ ಬೀಸುವಷ್ಟು ಹವೆಯಾಡುವಂತೆ ವ್ಯವಸ್ಥೆ ಮಾಡಲಾಗಿದೆ. ಕೆಳಗೆ ಹಗಲೆಲ್ಲ ಹತ್ತಿ ಇಳಿಯುವುದಕ್ಕೆ ಎಸ್ಕಲೇಟರ್ಸ್ ಎಂಬ ಮೆಟ್ಟಿಲುಗಳನ್ನು ಮಾಡಿರುತ್ತಾರೆ.
೭. ಚೇರಿಂಗ್ಕ್ರಾಸ್ ದೊಡ್ಡ ಸಾಮ್ರಾಜ್ಯದ ಬೀದಿ ಎಂದು ಲೇಖಕರು ಹೇಳಲು ಕಾರಣವೇನು?
ಚೇರಿಂಗ್ಕ್ರಾಸ್ ಎಂಬ
ಓಣಿಯಲ್ಲಿ ಆಂಗ್ಲರ ಸಾಮ್ರಾಜ್ಯ ವೈಭವವು ಕಂಡುಬರುವುದು. ಇಂಡಿಯಾ ಆಫೀಸಿನ ಹತ್ತಿರ ಆಫ್ರಿಕನ್ ಕಚೇರಿ, ಇನ್ನೊಂದು ವಸಾಹತಿನ ಕಚೇರಿ, ನೂರೆಂಟು ಬ್ಯಾಂಕುಗಳು ದೊಡ್ಡ ಕಂಪೆನಿಗಳ ಕಚೇರಿಗಳು, ಎಲ್ಲವೂ ದಂಗುಬಡಿಸುವAತೆ ನೆರೆದಿವೆ. ಒಂದೊAದು ದೇಶದ ಮೇಲಿನ ಪ್ರಭುತ್ವ ಇಲ್ಲಿಯ ಒಂದೊAದು ಕಚೇರಿಯಿಂದ ನಡೆಯುತ್ತಿದೆ. ಆದ್ದರಿಂದ ಈ ದೊಡ್ಡ ಬೀದಿಯು ಸಾಮ್ರಾಜ್ಯದ ಬೀದಿಯಾಗಿದೆ.
೮. ಲಂಡನ್ ನಗರದಲ್ಲಿ ಹೆಜ್ಜೆ ಹೆಜ್ಜೆಗೆ ಇತಿಹಾಸದ ಅಡಿಗಲ್ಲುಗಳು ದೊರೆಯುತ್ತವೆ ಹೇಗೆ?
ಲಂಡನ್ ನಗರದ ಪ್ರತಿಯೊಂದು ಕೂಟಕ್ಕೆ ಒಂದು ಹೆಸರೇನಾದರೂ ಇದ್ದೇ ಇರುತ್ತದೆ. ಟ್ರಾಫಲ್ಗಾರ್ ಸ್ಕೆ÷್ವÃರ್
ಎಂಬಲ್ಲಿ ನೆಲ್ಸನ್ನನ ಮೂರ್ತಿಯಿದೆ. ಈ ಮೂರ್ತಿಯ ಕೆಳಗೆ ಅವನ ಜೀವನದಲ್ಲಿನ ಮಹತ್ತ÷್ವದ
ಸನ್ನಿವೇಶಗಳನ್ನು ಕಲ್ಲಿನಲ್ಲಿ ಅರಳಿಸಿದ್ದಾರೆ. ಬೀದಿ ಬೀದಿಗೆ ಇತಿಹಾಸ ಪ್ರಸಿದ್ಧ ಪುರುಷರು, ತಮ್ಮ ದೇಶಕ್ಕಾಗಿ ಜೀವನವನ್ನು ಲೆಕ್ಕಿಸದೆ ದುಡಿದವರು ನಿಂತು ಕೈಯೆತ್ತಿ ``ನಿಮ್ಮ ದೇಶದ ಗೌರವವನ್ನು ಕಾಯಿರಿ! ಇದು ದೊಡ್ಡದಾದ ರಾಷ್ಟç'' ಎಂದು ಹೇಳುತ್ತಿರುವಂತೆ ತೋರುತ್ತದೆ. ಹೀಗೆ ಹೆಜ್ಜೆ ಹೆಜ್ಜೆಗೆ ಇತಿಹಾಸದ ಅಡಿಗಲ್ಲುಗಳು ದೊರೆಯುತ್ತವೆ.
೯. ಲಂಡನ್ ನಗರದಲ್ಲಿ ಇಂಡಿಯಾ ಆಫೀಸ್ ಹೇಗಿದೆ?
ಲಂಡನ್ ನಗರದಲ್ಲಿ ಇರುವ ಆಫೀಸ್ ನೋಡುವ ಹಾಗಿದೆ. ವಾಚನಾಲಯದಲ್ಲಿ ಅನೇಕ ಮಹತ್ತ÷್ವದ
ಪುಸ್ತಕಗಳಿವೆ. ಕರ್ನಾಟಕದ ವಿಷಯವಾಗಿ ಎಷ್ಟೋ ಹೊಸ ಮಾತುಗಳು ಇಲ್ಲಿ ಗೊತ್ತಾಗಬಹುದೆಂದು ಕಾಣುತ್ತದೆ. ಇಲ್ಲಿಯ ವಸ್ತುಸಂಗ್ರಹಾಲಯದಲ್ಲಿ ಹಿಂದೂಸ್ಥಾನದ ಲಲಿತಕಲೆಯ ಹಾಗೂ ಇನ್ನುಳಿದ ಮಾರ್ಗಗಳ ಮಾದರಿಗಳು ನೋಡಲು ದೊರೆಯುತ್ತವೆ. ಎಲ್ಲಾ ಮುಖ್ಯವಾದ ಇಂಗ್ಲಿಷ್ ವರ್ತಮಾನ ಪತ್ರಿಕೆಗಳು ಬರುತ್ತವೆ.
೧೦ `ವೆಸ್ಟ್ಮಿನಿಸ್ಟರ್ ಅಬೆ’ಯ ವಿಶೇಷತೆ ಏನು?
`ವೆಸ್ಟ್ಮಿನಿಸ್ಟರ್ ಅಬೆ' ಎಂಬ ಪ್ರಾರ್ಥನಾ ಮಂದಿರ ಕನಿಷ್ಠ ಒಂದು ಸಾವಿರ ವರ್ಷದಷ್ಟು ಪುರಾತನವಾದ ಮಂದಿರ. ಕೆಲವೊಂದು ಭಾಗಗಳ ದುರಸ್ತಿಯನ್ನು ಬಿಟ್ಟರೆ ಇಂದಿಗೂ ಅಚ್ಚಳಿಯದೆ ಉಳಿದಿದೆ. ಇಲ್ಲಿ ಸಂತ, ಸಾರ್ವಭೌಮರು ಮಲಗಿರುವರು; ಕವಿಪುಂಗವರು ಒರಗಿರುವರು; ಸತ್ತವರ ಸ್ಮಾರಕವೆಂದು ಇದಕ್ಕಿಂತ ಘನತರವಾದ ಮಂದಿರವು ಜಗತ್ತಿನಲ್ಲಿ ಇನ್ನೆಲ್ಲಿಯೂ ಇರಲಾರದು.
ಸಂದರ್ಭ ಸಹಿತ ಸ್ವಾರಸ್ಯ ವನ್ನು ವಿವರಿಸಿ.
೫. “ಗಾಡಿಗಳು ದಢದಢ ಹೋಗುತ್ತಿರುತ್ತವೆ! ವಿಚಿತ್ರ ಸೃಷ್ಟಿ!”
ಆಯ್ಕೆ:
ಈ ವಾಕ್ಯವನ್ನು ವಿ. ಕೃ. ಗೋಕಾಕ್ ಅವರ `ಸಮುದ್ರದಾಚೆಯಿಂದ’ ಎಂಬ ಪ್ರವಾಸ ಕಥನದಿಂದ ಆರಿಸಲಾಗಿರುವ `ಲಂಡನ್ ನಗರ' ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ
ಸಂದರ್ಭ:
ಲೇಖಕರು ಲಂಡನ್ ನಗರದ ಸಾರಿಗೆ ವ್ಯವಸ್ಥೆಯ ಬಗ್ಗೆ ಹೇಳುವಾಗ ಲಂಡನ್ ರಸ್ತ್ತೆಗಳಲ್ಲಿ ವ್ಯಾಪಾರವು ತುಂಬಿ ಟ್ರಾಮ್ ಬಸ್ಸುಗಳಿಗೆ ಸಕಾಲಕ್ಕೆ ಹೋಗಲಾಗುವುದಿಲ್ಲ. ಇದನ್ನು ತಪ್ಪಿಸಲು ಭೂಗರ್ಭದಲ್ಲಿ ಗಾಡಿಗಳನ್ನು ಒಯ್ದಿರುತ್ತಾರೆ ಎಂದು ಹೇಳುವ ಸಂದರ್ಭದಲ್ಲಿ ಈ ವಾಕ್ಯವನ್ನು ಹೇಳಲಾಗಿದೆ.
ಸ್ವಾರಸ್ಯ:
ಬಹಳ ಹೊತ್ತು ನಡುನಡುವೆ ವಾಹನಗಳು ರಸ್ತೆಯಲ್ಲಿ ನಿಲ್ಲುವುದರಿಂದ ಸಮಯ ವ್ಯರ್ಥವಾಗುವುದನ್ನು ತಪ್ಪಿಸಲು ಲಂಡನ್ ನಗರದಲ್ಲಿ ಆಧುನಿಕ ವ್ಯವಸ್ಥೆ ಇರುವುದನ್ನು ಸ್ವಾರಸ್ಯಕರವಾಗಿ ತಿಳಿಸುತ್ತದೆ.
೬. “ಈ ದೊಡ್ಡ ಬೀದಿಯು ಸಾಮ್ರಾಜ್ಯದ ಬೀದಿ”
ಆಯ್ಕೆ:
ಈ ವಾಕ್ಯವನ್ನು ವಿ. ಕೃ. ಗೋಕಾಕ್ ಅವರ `ಸಮುದ್ರದಾಚೆಯಿಂದ’ ಎಂಬ ಪ್ರವಾಸ ಕಥನದಿಂದ ಆರಿಸಲಾಗಿರುವ `ಲಂಡನ್ ನಗರ' ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ.
ಸಂದರ್ಭ:
ಲಂಡನ್ ನಗರದ ಚೇರಿಂಗ್ ಕ್ರಾಸ್ ಓಣಿಯು ಆಂಗ್ಲರ ಸಾಮ್ರಾಜ್ಯದ ವೈಭವವು ಕಂಡು ಬರುವುದು. ಒಂದೊAದು ವಸಾಹತಿನ ದೇಶದ ಮೇಲಿನ ಪ್ರಭುತ್ವವು ಇಲ್ಲಿಯ ಒಂದೊAದು ಕಚೇರಿಯಿಂದ ನಡೆಯುತ್ತದೆ. ಹೀಗಾಗಿ ಲೇಖಕರು ಚೇರಿಂಗ್ ಕ್ರಾಸ್ ಓಣಿಯನ್ನು ‘ದೊಡ್ಡ ಸಾಮ್ರಾಜ್ಯದ ಬೀದಿ’ ಎಂದಿದ್ದಾರೆ.
ಸ್ವಾರಸ್ಯ:
ಈ ವಾಕ್ಯವು ಆಂಗ್ಲರು ತಮ್ಮ ವಸಾಹತು ರಾಷ್ಟçಗಳ ಮೇಲೆ ಹೊಂದಿದ್ದ ಪ್ರಭುತ್ವದ ಬಗ್ಗೆ ತಿಳಿಸುತ್ತದೆ.
೭. “ಹೆಜ್ಜೆ ಹೆಜ್ಜೆಗೆ ಇತಿಹಾಸದ ಅಡಿಗಲ್ಲುಗಳು ದೊರೆಯುತ್ತವೆ”
ಆಯ್ಕೆ:
ಈ ವಾಕ್ಯವನ್ನು ವಿ. ಕೃ. ಗೋಕಾಕ್ ಅವರ `ಸಮುದ್ರದಾಚೆಯಿಂದ’ ಎಂಬ ಪ್ರವಾಸ ಕಥನದಿಂದ ಆರಿಸಲಾಗಿರುವ `ಲಂಡನ್ ನಗರ' ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ.
ಸಂದರ್ಭ:
ಲೇಖಕರು ಲಂಡನ್ ನಗರದ ಬೀದಿಬೀದಿಯಲ್ಲೂ ಇತಿಹಾಸ ಪ್ರಸಿದ್ಧ ಪುರುಷರ ಪ್ರತಿಮೆಗಳನ್ನು ನೋಡಿ `ತಮ್ಮ ದೇಶಕ್ಕಾಗಿ ಜೀವನವನ್ನು ಲೆಕ್ಕಿಸದೆ ದುಡಿದವರು ನಿಂತು ಕೈಯೆತ್ತಿ ``ನಿಮ್ಮ ದೇಶದ ಗೌರವವನ್ನು ಕಾಯಿರಿ! ಇದು ದೊಡ್ಡದಾದ ರಾಷ್ಟç' ಎಂದು ಹೇಳುತ್ತಿರುವಂತೆ ಹೆಜ್ಜೆ ಹೆಜ್ಜೆಗು ಇತಿಹಾಸದ ಅಡಿಗಲ್ಲುಗಳು ದೊರೆಯುತ್ತವೆ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಸ್ವಾರಸ್ಯ:
ರಾಷ್ಟçಕ್ಕಾಗಿ ದುಡಿದ ಮಹನೀಯರಿಗೆ ಲಂಡನ್ ನಗರದಲ್ಲಿ ಅಲ್ಲಿನ ಜನ ತೋರಿಸಿರುವ ಗೌರವ ಭಾವನೆಯು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.
೮. “ಮನುಷ್ಯನಂತೆ ಟೊಪ್ಪಿಗೆಯಲ್ಲವೆ? ಒಬ್ಬ ಮನುಷ್ಯಳಂತೆ ಇನ್ನೊಬ್ಬಳಿಲ್ಲ”
ಆಯ್ಕೆ:
ಈ ವಾಕ್ಯವನ್ನು ವಿ. ಕೃ. ಗೋಕಾಕ್ ಅವರ `ಸಮುದ್ರದಾಚೆಯಿಂದ’ ಎಂಬ ಪ್ರವಾಸ ಕಥನದಿಂದ ಆರಿಸಲಾಗಿರುವ `ಲಂಡನ್ ನಗರ' ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ.
ಸಂದರ್ಭ:
ಲಂಡನ್ ನಗರದ ಹೆಣ್ಣು ಮಕ್ಕಳ ಟೊಪ್ಪಿಗೆಯು ವಿಶೇಷವಾಗಿರುತ್ತದೆ. ಒಂದು ಟೊಪ್ಪಿಗೆಯಂತೆ ಇನ್ನೊಂದಿರುವುದಿಲ್ಲ. ಸಿಕ್ಕಿಸಿದ ಪುಚ್ಚವಾದರೂ ಕನಿಷ್ಠ ಪಕ್ಷಕ್ಕೆ ಬೇರೆಯಾಗಿರುತ್ತದೆ. ಕೋಟ್ಯವಧಿ ಟೊಪ್ಪಿಗೆಗಳನ್ನು ಬೇಕಾದರೆ ಪರೀಕ್ಷಿಸಿ ಇದನ್ನು ಮನಗಾಣಬಹುದು. ಎಂದು ಹೇಳುವಾಗ ಮನುಷ್ಯನಂತೆ ಟೊಪ್ಪಿಗೆಯಲ್ಲವೆ? ಒಬ್ಬ ಮನುಷ್ಯಳಂತೆ ಇನ್ನೊಬ್ಬಳಿಲ್ಲ ಎಂದು ಲೇಖಕರು ಹೇಳಿದ್ದಾರೆ.
ಸ್ವಾರಸ್ಯ:
ಮನುಷ್ಯನಂತೆ ಟೊಪ್ಪಿಗೆಯಲ್ಲೂ ಅಡಗಿರುವ ವೈವಿಧ್ಯತೆಯನ್ನು ಈ ವಾಕ್ಯದಲ್ಲಿ ಸ್ವಾರಸ್ಯಪೂರ್ಣವಾಗಿ ಹೇಳಲಾಗಿದೆ.
೯. “ಅಡಿಗಡಿಗೆ ಇತಿಹಾಸವನ್ನು ದಾಟುತ್ತೇವೆ! ಎಂಥ ವಿಚಿತ್ರÀ!”
ಆಯ್ಕೆ:
ಈ ವಾಕ್ಯವನ್ನು ವಿ. ಕೃ. ಗೋಕಾಕ್ ಅವರ `ಸಮುದ್ರದಾಚೆಯಿಂದ’ ಎಂಬ ಪ್ರವಾಸ ಕಥನದಿಂದ ಆರಿಸಲಾಗಿರುವ `ಲಂಡನ್ ನಗರ' ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ.
ಸಂದರ್ಭ:
`ವೆಸ್ಟ್ ಮಿನಿಸ್ಟರ್ ಅಬೆ' ಎಂಬ ಪ್ರಾರ್ಥನಾ ಮಂದಿರದ ಆವರಣದಲ್ಲಿ ಸ್ಥಾಪಿಸಲಾಗಿದ್ದ ಕವಿಗಳ, ಸಾರ್ವಭೌಮರ ನೆನಪಿಗಾಗಿ ಎಲ್ಲರಿಗೂ ಒಂದೊAದು ಹಿಡಿ ಮಣ್ಣನ್ನು ಕೊಡುವಂತೆ ಕಲ್ಲು ಹಾಸುಗಳನ್ನು ಇಟ್ಟಿದ್ದು ಅವುಗಳ ಮೇಲೆ ನಡೆದು ಹೋಗಬೇಕಾಗಿತ್ತು. ಅವುಗಳ ಬಳಿ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ಲೇಖಕರು ಲಂಡನ್ ಜನರು ಕವಿಗಳು ಮತ್ತು ಸಾರ್ವಭೌಮರ ಮೇಲೆ ಇಟ್ಟಿರುವ ಗೌರವವನ್ನು ಕಾಣಬಹುದು ಎನ್ನುವ ಸಂದರ್ಭದಲ್ಲಿ ಹೀಗೆ ಹೇಳಿದ್ದಾರೆ.
ಸ್ವಾರಸ್ಯ:
ದೇಶಕ್ಕಾಗಿ ಜೀವನವನ್ನು ಲೆಕ್ಕಿಸದೆ ದುಡಿದ ಇತಿಹಾಸ ಪುರುಷರನ್ನು ಲಂಡನ್ ನಗರದ ಜನರು ನೆನೆಯುವ ಬಗೆಯನ್ನು ಇಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಪಡಿಸಲಾಗಿದೆ.
೧೦. “ಮನೆ ಹಿಡಿದು ಇರುವ ತರುಣನ ಬುದ್ಧಿ ಮನೆಯ ಮಟ್ಟದ್ದೇ”
ಆಯ್ಕೆ:
ಈ ವಾಕ್ಯವನ್ನು ವಿ. ಕೃ. ಗೋಕಾಕ್ ಅವರ `ಸಮುದ್ರದಾಚೆಯಿಂದ’ ಎಂಬ ಪ್ರವಾಸ ಕಥನದಿಂದ ಆರಿಸಲಾಗಿರುವ `ಲಂಡನ್ ನಗರ' ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ
ಸಂದರ್ಭ:
ಲಂಡನ್ ನಗರ ಪ್ರವಾಸ ಕಥನದ ಕೊನೆಯಲ್ಲಿ ಪ್ರವಾಸದ ಶೈಕ್ಷಣಿಕ ಮಹತ್ವವನ್ನು ತಿಳಿಸುವ ಸಂದರ್ಭದಲ್ಲಿ ಪ್ರವಾಸದಿಂದ ತಮ್ಮ ಮನಸ್ಸು ವಿಕಾಸ ಹೊಂದಿ, ದೃಷ್ಟಿಕೋನ ವಿಶಾಲವಾದ ಬಗ್ಗೆ ‘ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ’ ಎಂದು ಷೇಕ್ಸ್ಪಿಯರ್ ಹೇಳಿದ ಮಾತನ್ನು ಇಲ್ಲಿ ಲೇಖಕರು ಉದಾಹರಿಸಿದ್ದಾರೆ.
ಸ್ವಾರಸ್ಯ: ಬಾವಿಯೊಳಗಿನ ಕಪ್ಪೆಯಂತಿರದೆ ‘ದೇಶ ಸುತ್ತು ಕೋಶ ಓದು’ ಎಂಬ ಮಾತಿನಂತೆ ಪ್ರವಾಸ ಮಾಡಿ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳ್ಳುವ ಬಗೆಯನ್ನು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ತಿಳಿಸಲಾಗಿದೆ.