ಪದ್ಯಪಾಠ – ೩ ಹಲಗಲಿ ಬೇಡರು
ಕವಿ-ಕೃತಿ ಪರಿಚಯ: ಇದು ಜನಪದ ಸಾಹಿತ್ಯದ ವಿಶಿಷ್ಟ ಪ್ರಕಾರಗಳಲ್ಲಿ ಒಂದಾದ ಲಾವಣಿಯಾಗಿದೆ. ಲಾವಣಿಗಳು ವೀರತನ ಸಾಹಸವನ್ನು ವರ್ಣಿಸುವುದರಿಂದ ವೀರಗೀತೆಗಳೆಂದೂ ಸಹ ಕರೆಯುತ್ತಾರೆ. ಲಾವಣಿಗಳು ಗದ್ಯದ ಹೊಳಪನ್ನು ಹಾಗೂ ಭಾವಗೀತೆಯ ಸತ್ವವನ್ನು ಒಳಗೊಂಡಿವೆ. ಪ್ರಸ್ತುತ ಲಾವಣಿಯನ್ನು ಡಾ|| ಬಿ. ಎಸ್. ಗದ್ದಗಿಮಠ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ ಕೃತಿಯಿಂದ ಆಯ್ಕೆಮಾಡಿಕೊಳ್ಳಲಾಗಿದೆ.
ಅ] ಒಂದು ವಾಕ್ಯದಲ್ಲಿ ಉತ್ತರಿಸಿ.
೧. ಕುಂಪಣಿ ಸರ್ಕಾರ ಹೊರಡಿಸಿದ ಆದೇಶ ಏನು?
ಕುಂಪಣಿ ಸರ್ಕಾರದ ಅನುಮತಿ ಇಲ್ಲದೆ ಭಾರತೀಯರು ಶಸ್ತಾçಸ್ತçಗಳನ್ನು ಹೊಂದುವಂತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂಬ ಆದೇಶ ಹೊರಡಿಸಿತು.
೨. ಹಲಗಲಿಯ ನಾಲ್ವರು ಪ್ರಮುಖರು ಯಾರು?
ಪೂಜೇರಿ ಹನುಮ, ಬ್ಯಾಡರ ಬಾಲ, ಜಡಗ, ರಾಮ ಈ ನಾಲ್ವರು ಹಲಗಲಿಯ ಪ್ರಮುಖರು.
೩ ಹಲಗಲಿಯ ಗುರುತು ಉಳಿಯದಂತಾದದು ಏಕೆ?
ಹಲಗಲಿಯ ಮೇಲೆ ಬ್ರಿಟಿಷ್ ಸರ್ಕಾರದ ದಂಡು ದಾಳಿ ಮಾಡಿ, ಬೆಂಕಿ ಹಚ್ಚಿದ್ದರಿಂದ ಹಲಗಲಿಯ ಗುರುತು ಉಳಿಯದಂತಾಯಿತು.
೪. ಯಾವ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ?
‘ಹಲಗಲಿಯ ಬಂಟರ ಹತಾರ ಕದನ’ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ.
೫. ಹಲಗಲಿ ಗ್ರಾಮ ಎಲ್ಲಿದೆ?
ಹಲಗಲಿ ಮುಧೋಳ ಸಂಸ್ಥಾನದಲ್ಲಿದ್ದು ಇಂದಿನ ಬಾಗಲಕೋಟೆ ಜಿಲ್ಲೆಗೆ ಸೇರಿದೆ.
ಆ] ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.
೧. ಹಲಗಲಿಯ ಬೇಡರು ದಂಗೆ ಏಳಲು ಕಾರಣವೇನು?
ಸಾ. ಶ. ೧೮೫೭ರ ಪ್ರಥಮ ಸ್ವಾತಂತ್ರö್ಯ ಸಂಗ್ರಾಮದ ನಂತರ ಬ್ರಿಟಿಷ್ ಸರ್ಕಾರದ ಅನುಮತಿ ಇಲ್ಲದೆ ಭಾರತೀಯರು ಶಸ್ತಾçಸ್ತçಗಳನ್ನು ಹೊಂದುವAತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂಬ ಆದೇಶವನ್ನು ನೀಡಿತು. ಈ ಆದೇಶವನ್ನು ವಿರೋಧಿಸಿ ಹಲಗಲಿಯ ಬೇಡರು ಪೂಜೇರಿ ಹನುಮ, ಬ್ಯಾಡರ ಬಾಲ, ಜಡಗ, ರಾಮ, ಭೀಮ ಮೊದಲಾದ ವೀರರ ನಾಯಕತ್ವದಲ್ಲಿ ಸಭೆ ಸೇರಿ ತಮ್ಮ ಬದುಕಿನ ಆಧಾರವಾದ ಆಯುಧಗಳನ್ನು ಸರ್ಕಾರಕ್ಕೆ ಹಿಂದಿರುಗಿಸಲು ಒಪ್ಪಲಿಲ್ಲ. ಆದರೆ ಬ್ರಿಟಿಷ್ ಸಿಪಾಯಿಗಳು ಬಂದು ಬಲವಂತವಾಗಿ ಆಯುಧಗಳನ್ನು ಕಸಿದುಕೊಳ್ಳಲು ಪ್ರಾರಂಭಿಸಿದರು. ಇದು ಹಲಗಲಿಯ ಬೇಡರು ದಂಗೆ ಏಳಲು ಕಾರಣವಾಯಿತು.
೨. ಹಲಗಲಿಗೆ ದಂಡು ಬರಲು ಕಾರಣವೇನು?
ಹಲಗಲಿಯ ಬೇಡರಾದ ಪೂಜೇರಿ ಹನುಮ, ಬ್ಯಾಡರ ಬಾಲ, ರಾಮ, ಜಡಗ ಇವರುಗಳು ಬ್ರಿಟಿಷ್ ಸರ್ಕಾರ ಹೊರಡಿಸಿದ್ದ ನಿಶ್ಶಸ್ತಿçÃಕರಣದ ಆದೇಶವನ್ನು ವಿರೋಧಿಸಿ ತಮ್ಮಲ್ಲಿರುವ ಆಯುಧಗಳನ್ನು ಕೊಡಲು ಒಪ್ಪದೆ ದಂಗೆ ಎದ್ದರು. ಈ ದಂಗೆಯನ್ನು ಹತ್ತಿಕ್ಕಲು ಬಂದ ಕಾರಕೂನನ ಕಪಾಳಕ್ಕೆ ಹೊಡೆದು ಸಿಪಾಯಿಗಳನ್ನು ಹೊಡೆದುರುಳಿಸಿದರು. ಇದರಿಂದ ಕೋಪಗೊಂಡ ಕುಂಪಣಿ ಸರ್ಕಾರದ ಅಧಿಕಾರಿಗಳು ಹಲಗಲಿಯ ಬೇಡರ ದಂಗೆಯನ್ನು ಬಗ್ಗುಬಡಿಯಲು ದಂಡನ್ನು ಕರೆಯಿಸಿದರು.
೩. ದಂಡು ಹಲಗಲಿಯ ಮೇಲೆ ಹೇಗೆ ದಾಳಿ ನಡೆಸಿತು?
ನಿಶ್ಶಸ್ತಿçÃಕರಣದ ಆದೇಶವನ್ನು ವಿರೋಧಿಸಿ ಬ್ರಿಟಿಷ್ ಸರ್ಕಾರದ ವಿರುದ್ಧ ದಂಗೆ ಎದ್ದ ಹಲಗಲಿಯ ಬೇಡರನ್ನು ಬಗ್ಗುಬಡಿಯಲು ಬ್ರಿಟಿಷರ ದಂಡು ಹಲಗಲಿಗೆ ಬಂದಿತು. ಬ್ರಿಟಿಷರು ದಂಡಿನ ಸಿಪಾಯಿಗಳು ಹಲಗಲಿಯ ಬೇಡರ ಬೆನ್ನು ಹತ್ತಿ ಕೊಂದರು. ಎದುರಿಗೆ ಸಿಕ್ಕಸಿಕ್ಕವರಿಗೆಲ್ಲ ಕರುಣೆ ಇಲ್ಲದೆ ಗುಂಡು ಹೊಡೆದು ಸಾಯಿಸಿದರು. ಬ್ರಿಟಿಷ್ ಸಿಪಾಯಿಗಳ ಗುಂಡಿಗೆ ಹೆದರಿ ಹಲಗಲಿಯ ಬೇಡರು ಗುಡ್ಡದ ಕಡೆಗೆ ಓಡಿ ತಲೆಮರೆಸಿಕೊಂಡರು.
೪. ಲಾವಣಿಗಳನ್ನು ಏಕೆ ವೀರಗೀತೆಗಳು ಎನ್ನಲಾಗಿದೆ?
ಲಾವಣಿಗಳು ಜನಪದ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ. ಒಂದು ಘಟನೆಯನ್ನು ಆದsರಿಸಿ, ಕಥನಾತ್ಮಕವಾಗಿ ಕಟ್ಟಿದ ಹಾಡುಗಳನ್ನು ಲಾವಣಿಗಳೆನ್ನುವರು. ಲಾವಣಿಗಳು ಸಾಮಾನ್ಯವಾಗಿ ವೀರತನ ಹಾಗೂ ಸಾಹಸವನ್ನು ವರ್ಣಿಸುವುದರಿಂದ ಅವುಗಳನ್ನು ವೀರಗೀತೆಗಳು ಎನ್ನುವರು.
೫. ಹಲಗಲಿ ಬೇಡರು ಜನಪದ ಲಾವಣಿಯ ಮುಖ್ಯ ಆಶಯ ಭಾವವನ್ನು ತಿಳಿಸಿ.
ವಾಣಿಜ್ಯ ಮೂಲವನ್ನಿರಿಸಿಕೊಂಡು ಭಾರತಕ್ಕೆ ಆಗಮಿಸಿದ ಬ್ರಿಟಿಷರು ಸಿಪಾಯಿದಂಗೆಯ ನಂತರ ನಿಶ್ಶಸ್ತಿçÃಕರಣ ಕಾಯಿದೆಯನ್ನು ಜಾರಿಗೆ ತಂದರು. ಸ್ವಾತಂತ್ರ÷್ಯಪ್ರಿಯರಾಗಿದ್ದ ಹಲಗಲಿಯ ಬೇಡರು ಕಾಯಿದೆಯನ್ನು ವಿರೋಧಿಸಿ ಹುತಾತ್ಮರಾದರು. ಈ ಸಂದರ್ಭದಲ್ಲಿ ಅನಕ್ಷರಸ್ಥ ಸಮುದಾಯದಲ್ಲಿದ್ದ ಸ್ವಾತಂತ್ರ÷್ಯಪ್ರೇಮವನ್ನು ಪರಿಚಯಿಸಿ, ದೇಶಪ್ರೇಮವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ‘ಹಲಗಲಿ ಬೇಡರು’ ಜನಪದ ಲಾವಣಿಯ ಆಶಯವಾಗಿದೆ.
ಇ] ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
೧. ಹಲಗಲಿ ದಂಗೆಗೆ ಕಾರಣವೇನು? ಸರಕಾರ ಅದನ್ನು ಹೇಗೆ ನಿಯಂತ್ರಿಸಿತು?
೧೮೫೭ ರ ಸಿಪಾಯಿದಂಗೆ ಅಥವಾ ಭಾರತದ ಪ್ರಥಮ ಸ್ವಾತಂತ್ರ÷್ಯ ಸಂಗ್ರಾಮದ ನಂತರ ಬ್ರಿಟಿಷರು ನಿಶ್ಶಸ್ತಿçÃಕರಣ ಕಾಯಿದೆಯನ್ನು ಜಾರಿಗೆ ತಂದರು. ಅದರ ಪ್ರಕಾರ ಭಾರತೀಯರು ಬ್ರಿಟಿಷರ ಅನುಮತಿಯಿಲ್ಲದೆ ಆಯುಧಗಳನ್ನು ಹೊಂದುವ ಹಾಗಿರಲಿಲ್ಲ ಮತ್ತು ಈಗಾಗಲೇ ಹೊಂದಿರುವ ಆಯುಧಗಳನ್ನು ಮರಳಿಸಬೇಕಿತ್ತು. ಹಲಗಲಿ ಬೇಡರಿಗೆ ಆಯುಧಗಳೇ ಜೀವವಾಗಿತ್ತು. ಆಯುಧಗಳನ್ನು ಮರಳಿಸಲು ಒಪ್ಪದ ಹಲಗಲಿ ಬೇಡರು ಹನುಮ, ಬಾಲ, ಜಡಗ, ರಾಮ, ಭೀಮ ಮುಂತಾದವರ ನೇತೃತ್ವದಲ್ಲಿ ಕಂಪನಿ ಸರಕಾರದ ವಿರುದ್ಧ ದಂಗೆಯೆದ್ದರು. ಸಿಪಾಯಿಗಳ ಕೆನ್ನೆಗೆ ಬಾರಿಸಿದರು. ಮನವೊಲಿಸಲು ಬಂದ ಹೆಬಲಕ್ ಎಂಬ ಅಧಿಕಾರಿಯನ್ನು ಕೊಂದರು. ಕೋಪಗೊಂಡ ಕಂಪನಿಯ ಸೈನ್ಯ ಬೇಡರನ್ನು ಕಂಡಕAಡಲ್ಲಿ ಗುಂಡು ಹೊಡೆದು ಸಾಯಿಸಿತು. ಬೇಡರ ಮುಖಂಡರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆಗೈಯಲಾಯಿತು. ಹಲಗಲಿ ಊರನ್ನು ಲೂಟಿಮಾಡಿ ಬೆಂಕಿ ಹಚ್ಚಲಾಯಿತು. ಹೀಗೆ ಹಲಗಲಿ ದಂಗೆಯನ್ನು ಸರಕಾರ ನಿಯಂತ್ರಿಸಿತು.
೨. ಹಲಗಲಿ ದಂಗೆಯ ಪರಿಣಾಮವೇನು?
೧೮೫೭ ರ ಸಿಪಾಯಿದಂಗೆ ಅಥವಾ ಭಾರತದ ಪ್ರಥಮ ಸ್ವಾತಂತ್ರö್ಯ ಸಂಗ್ರಾಮದ ನಂತರ ಬ್ರಿಟಿಷರು ನಿಶ್ಶಸ್ತಿçÃಕರಣ ಕಾಯಿದೆಯನ್ನು ಜಾರಿಗೆ ತಂದರು. ಅದರ ಪ್ರಕಾರ ಭಾರತೀಯರು ಬ್ರಿಟಿಷರ ಅನುಮತಿಯಿಲ್ಲದೆ ಆಯುಧಗಳನ್ನು ಹೊಂದುವ ಹಾಗಿರಲಿಲ್ಲ ಮತ್ತು ಈಗಾಗಲೇ ಹೊಂದಿರುವ ಆಯುಧಗಳನ್ನು ಮರಳಿಸಬೇಕಿತ್ತು. ಹಲಗಲಿ ಬೇಡರಿಗೆ ಆಯುಧಗಳೆ ಜೀವವಾಗಿತ್ತು. ಆಯುಧಗಳನ್ನು ಮರಳಿಸಲು ಒಪ್ಪದ ಹಲಗಲಿ ಬೇಡರು ಹನುಮ, ಬಾಲ, ಜಡಗ, ರಾಮರ ನೇತೃತ್ವದಲ್ಲಿ ಕಂಪನಿ ಸರಕಾರದ ವಿರುದ್ಧ ದಂಗೆ ಎದ್ದರು. ಸಿಪಾಯಿಗಳ ಕೆನ್ನೆಗೆ ಬಾರಿಸಿದರು. ಬೇಡರ ಮನವೊಲಿಸಲು ಬಂದ ಅಧಿಕಾರಿಯನ್ನೇ ಕೊಂದು ಹಾಕಿದರು. ಕ್ರೋಧಗೊಂಡ ಕಾರಾಸಾಹೇಬನ ಆದೇಶದಂತೆ ಕಂಪನಿಯ ದಂಡು ಬೇಡರನ್ನು ಕಂಡ ಕಂಡಲ್ಲಿ ಬೇಟೆಯಾಡಿತು. ಹನುಮ, ಭೀಮ, ಜಡಗ ರಾಮ, ಬಾಲರು ಮಾಡಿದ ಪ್ರಯತ್ನ ವಿಫಲವಾಯಿತು. ನಿರ್ದಯವಾಗಿ ಅವರನ್ನು ಸಾಯಿಸಲಾಯಿತು. ಬೇಡರ ಊರನ್ನು ಏನೂ ಉಳಿಸದಂತೆ ಲೂಟಿ ಮಾಡಲಾಯಿತು. ಊರಿಗೆ ಬೆಂಕಿ ಇಟ್ಟು ಗುರುತು ಸಿಗದಂತೆ ಬೂದಿ ಮಾಡಲಾಯಿತು.
ಈ] ಸಂದರ್ಭ ಸಹಿತ ಸ್ವಾರಸ್ಯ ವಿವರಿಸಿ.
೧. “ಎಲ್ಲ ಜನರಿಗೆ ಜೋರ ಮಾಡಿ ಕಸಿದುಕೊಳ್ಳಿರಿ ಹತಾರ”
ಆಯ್ಕೆ: ಈ ವಾಕ್ಯವನ್ನು ಡಾ|| ಬಿ. ಎಸ್. ಗದ್ದಗಿಮಠ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ ಕೃತಿಯಿಂದ ಆಯ್ದ ‘ಹಲಗಲಿಯ ಬೇಡರು’ ಎಂಬ ಲಾವಣಿಯಿಂದ ಆರಿಸಲಾಗಿದೆ.
ಸಂದರ್ಭ: “ಸಾ. ಶ. ೧೮೫೭ರ ಪ್ರಥಮ ಸ್ವಾತಂತ್ರö್ಯ ಸಂಗ್ರಾಮದ ನಂತರ ಬ್ರಿಟಿಷ್ ಸರ್ಕಾರ ಅನುಮತಿ ಇಲ್ಲದೆ ಭಾರತೀಯರು ಶಸ್ತಾçಸ್ತçಗಳನ್ನು ಹೊಂದುವAತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು” ಎಂಬ ಆದೇಶವನ್ನು ನೀಡಿದ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ: ಭಾರತೀಯರ ಮೇಲಿನ ಬ್ರಿಟಿಷರ ದರ್ಪ ಈ ಮಾತಿನಲ್ಲಿ ವ್ಯಕ್ತಗೊಂಡಿರುವುದು ಇಲ್ಲಿನ ಸ್ವಾರಸ್ಯವಾಗಿದೆ.
೨. “ಜೀವ ಸತ್ತು ಹೋಗುವುದು ಗೊತ್ತ”
ಆಯ್ಕೆ: ಈ ವಾಕ್ಯವನ್ನು ಡಾ|| ಬಿ. ಎಸ್. ಗದ್ದಗಿಮಠ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ ಕೃತಿಯಿಂದ ಆಯ್ದ ‘ಹಲಗಲಿಯ ಬೇಡರು’ ಎಂಬ ಲಾವಣಿಯಿಂದ ಆರಿಸಲಾಗಿದೆ.
ಸಂದರ್ಭ: ಬ್ರಿಟಿಷರ ಆಜ್ಞೆಯನ್ನು ಹೊರಡಿಸಿ, ಜನರಿಂದ ಆಯುಧಗಳನ್ನು ಬಲವಂತವಾಗಿ ಕಿತ್ತುಕೊಳ್ಳಲು ಪ್ರಯತ್ನಿಸಿದಾಗ ಹಲಗಲಿಯ ಪೂಜೇರಿ ಹನುಮ, ಬ್ಯಾಡರ ಬಾಲ, ಜಡಗ, ರಾಮ ಮೊದಲಾದ ವೀರರು ತಮ್ಮಲ್ಲಿರುವ ಆಯುಧಗಳನ್ನು ಕೊಡಲು ಒಪ್ಪದೆ, ಅವುಗಳನ್ನು ನೀಡಿದರೆ ತಾವು ಸತ್ತಂತೆ ಎಂದು ಹೇಳಿಕೊಂಡ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ: ಹಲಗಲಿಯ ಬೇಡರು “ಆಯುಧಗಳು ತಮ್ಮ ಪ್ರಾಣಕ್ಕಿಂತ ಮಿಗಿಲಾದುದು ಎಂಬ ಭಾವನೆಯನ್ನು ಹೊಂದಿದ್ದರು” ಎಂಬುದು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡಿದೆ.
೩. “ಹೊಡೆದರೊ ಗುಂಡ ಕರುಣ ಇಲ್ಲದ್ಹಂಗ”
ಆಯ್ಕೆ: ಈ ವಾಕ್ಯವನ್ನು ಡಾ|| ಬಿ. ಎಸ್. ಗದ್ದಗಿಮಠ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ ಕೃತಿಯಿಂದ ಆಯ್ದ ‘ಹಲಗಲಿಯ ಬೇಡರು’ ಎಂಬ ಲಾವಣಿಯಿಂದ ಆರಿಸಲಾಗಿದೆ.
ಸಂದರ್ಭ: ನಿಶ್ಶಸ್ತಿçÃಕರಣದ ಆದೇಶವನ್ನು ವಿರೋಧಿಸಿ ಬ್ರಿಟಿಷ್ ಸರ್ಕಾರದ ವಿರುದ್ಧ ದಂಗೆಯೆದ್ದ ಹಲಗಲಿಯ ಬೇಡರನ್ನು ಬಗ್ಗುಬಡಿಯಲು ಬ್ರಿಟಿಷರ ದಂಡು ಬಂದಿತು. ಹಲಗಲಿಯ ಬೇಡರ ಬೆನ್ನುಹತ್ತಿ ಕೊಂದು, ಎದುರಿಗೆ ಸಿಕ್ಕಸಿಕ್ಕವರಿಗೆಲ್ಲ ಕರುಣೆ ಇಲ್ಲದೆ ಗುಂಡು ಹೊಡೆದು ಸಾಯಿಸಿದರು ಎಂದು ಲಾವಣಿಕಾರನು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ: ಹಲಗಲಿಯ ಬೇಡರ ಮೇಲೆ ನಿಷ್ಕರುಣೆಯಿಂದ ಗುಂಡು ಹಾರಿಸಿ ಕೊಲ್ಲುವ ಬ್ರಿಟಿಷರ ಕ್ರೌರ್ಯದ ಪರಮಾವಧಿಯನ್ನು ಈ ಮಾತಿನಲ್ಲಿ ವರ್ಣಿಸಲಾಗಿದೆ.
೪. “ಕೆಟ್ಟು ವರ್ಣಿಸಿ ಹೇಳಿದೆ ಕಂಡಷ್ಟು”
ಆಯ್ಕೆ: ಈ ವಾಕ್ಯವನ್ನು ಡಾ|| ಬಿ. ಎಸ್. ಗದ್ದಗಿಮಠ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ ಕೃತಿಯಿಂದ ಆಯ್ದ ‘ಹಲಗಲಿಯ ಬೇಡರು’ ಎಂಬ ಲಾವಣಿಯಿಂದ ಆರಿಸಲಾಗಿದೆ.
ಸಂದರ್ಭ: ಹಲಗಲಿ ಬೇಡರನ್ನೆಲ್ಲ ಕೊಂದು; ಬ್ರಿಟಿಷ್ ಸೈನಿಕರು ಹಲಗಲಿಯನ್ನು ಲೂಟಿಮಾಡಿ, ಬೆಂಕಿ ಹಚ್ಚಿ ನಾಶಗೊಳಿಸಿದರು, ಎಂದು ಲಾವಣಿಕಾರನು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ: “ಹಲಗಲಿಯ ಬೇಡರ ಮೇಲಿನ ಬ್ರಿಟಿಷರ ದೌರ್ಜನ್ಯವು ವರ್ಣಿಸಲು ಅಸಾಧ್ಯವಾದುದು” ಎಂದು ಲಾವಣಿಕಾರನು ಈ ಸಂದರ್ಭದಲ್ಲಿ ಸ್ವಾರಸ್ಯಪೂರ್ಣವಾಗಿ ವರ್ಣಿಸಿದ್ದಾನೆ.
ಹೆಚ್ಚುವರಿ ಪ್ರಶ್ನೆಗಳು
೬. ಶಿಷ್ಟ ಸಾಹಿತ್ಯಕ್ಕೆ ಮೂಲ ಪ್ರೇರಣೆ ಯಾವುದು?
ಶಿಷ್ಟ ಸಾಹಿತ್ಯಕ್ಕೆ ಜನಪದ ಸಾಹಿತ್ಯವೇ ಮೂಲ ಪ್ರೇರಣೆ.
೭. ಜನಪದ ಸಾಹಿತ್ಯದ ಪ್ರಮುಖ ಪ್ರಕಾರಗಳು ಯಾವುವು?
ಜನಪದ ಗೀತೆಗಳು, ಕತೆ, ಗಾದೆ, ಒಗಟು ಮತ್ತು ಲಾವಣಿಗಳು ಜನಪದ ಸಾಹಿತ್ಯದ ಪ್ರಮುಖ ಪ್ರಕಾರಗಳು.
೮. ಲಾವಣಿಗಳಲ್ಲಿ ಅಭಿವ್ಯಕ್ತಗೊಳ್ಳುವ ಅಂಶಗಳು ಯಾವುವು?
ನಾಡು ನುಡಿಗಾಗಿ ಶ್ರಮಿಸಿದ ಸಾಧಕರನ್ನು ಕುರಿತ ವ್ಯಕ್ತಿಚಿತ್ರಗಳು ಮತ್ತು ಐತಿಹಾಸಿಕ ವಿವರಗಳು ಲಾವಣಿಗಳಲ್ಲಿ ಅಭಿವ್ಯಕ್ತಗೊಳ್ಳುವ ಅಂಶಗಳಾಗಿವೆ.
೯. ಬ್ರಿಟಿಷ್ ಸರ್ಕಾರ ಜಾರಿಗೆ ತಂದಿದ್ದ ನಿಶ್ಶಸ್ತಿçÃಕರಣ ಕಾಯಿದೆಯನ್ನು ವಿರೋಧಿಸಿದವರು ಯಾರು?
ಬ್ರಿಟಿಷ್ ಸರ್ಕಾರ ಜಾರಿಗೆ ತಂದಿದ್ದ ನಿಶ್ಶಸ್ತಿçÃಕರಣ ಕಾಯಿದೆಯನ್ನು ವಿರೋಧಿಸಿದವರು ‘ಹಲಗಲಿಯ ಬೇಡರು’.
೧೦. ಹಲಗಲಿ ಬೇಡರಿಗೆ ಬುದ್ಧಿಮಾತು ಹೇಳಿದವರು ಯಾರು?
ಹೆಬಲಕ್ ಸಾಹೇಬನು ಹಲಗಲಿ ಬೇಡರಿಗೆ ಬುದ್ಧಿಮಾತು ಹೇಳಿದನು.
೧೧. ಯಾರ ದಯದಿಂದ ‘ಹಲಗಲಿ ಬೇಡರು’ ಲಾವಣಿಯನ್ನು ಹಾಡಿದೆನೆಂದು ಲಾವಣಿಕಾರನು ಹೇಳಿದ್ದಾನೆ?
ಕುರ್ತಕೋಟಿಯ ಕಲ್ಮೇಶನ ದಯದಿಂದ `ಹಲಗಲಿ ಬೇಡರು' ಲಾವಣಿಯನ್ನು ಹಾಡಿದೆನೆಂದು ಲಾವಣಿಕಾರನು ಹೇಳಿದ್ದಾನೆ.
೧೨. ‘ಚಟೆಕಾರರು' ಎಂದು ಯಾರನ್ನು ಕರೆಯಲಾಗಿದೆ?
ಆಂಗ್ಲೋ ಇಂಡಿಯನ್ನರನ್ನು ‘ಚಟೆಕಾರರು’ ಎಂದು ಕರೆಯಲಾಗಿದೆ.
೧೩. ಹೆಬಲಕ ಸಾಹೇಬನು ಯಾರು?
‘ಹೆಬಲಕ ಸಾಹೇಬ’ ಯಾರೆಂದರೆ ‘ಹೆನ್ರಿ ಹೆವೆಲಕ್’ ಎಂಬ ಬ್ರಿಟಿಷ್ ಅಧಿಕಾರಿ.
೧೪. ‘ಕಾರ ಸಾಹೇಬ' ಎಂದರೆ ಯಾರು?
‘ಕಾರಸಾಹೇಬ' ಎಂದರೆ ಅಲೆಗ್ಜಾಂಡರ್ ವಿಲಿಯಂ ಕರ್ರೆ ಎಂಬ ಬ್ರಿಟಿಷ್ ಅಧಿಕಾರಿ.