ಕನ್ನಡ ಸೌರಭ ಸಾಪ್ತಾಹಿಕ ಪರೀಕ್ಷೆಗಳು
ಹತ್ತನೆಯ ತರಗತಿ ಫಲಿತಾಂಶ ಉತ್ತಮೀಕರಣ ಚಟುವಟಿಕೆ – ಪರೀಕ್ಷಾ ಸಪ್ತಾಹ 2026-27
ವಾರದ ಪರೀಕ್ಷೆ – 1 ( ಮಾರ್ಚಿ / ಏಪ್ರಿಲ್ 2015 ) ಅಂಕಗಳು : 30
ಕೆಳಕಂಡ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ಕೊಡಲಾಗಿದೆ. ಅವುಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ, ಕ್ರಮಾಕ್ಷರದೊಂದಿಗೆ ಬರೆಯಿರಿ. 1 x 6 =6
1. ‘ಜನೈಕ್ಯ’ ಪದದಲ್ಲಿ ಏರ್ಪಟ್ಟಿರುವ ಸಂಧಿ.
ಎ) ಗುಣ ಸಂಧಿ
ಬಿ) ಶ್ಚುತ್ವ ಸಂಧಿ
ಸಿ) ವೃದ್ಧಿ ಸಂಧಿ
ಡಿ) ಯಣ್ ಸಂಧಿ
2.‘ಬೆಂಬತ್ತು’ ಪದವು ಈ ಸಂಧಿಗೆ ಉದಾಹರಣೆಯಾಗಿದೆ.
ಎ) ಆಗಮ ಸಂಧಿ
ಬಿ) ಆದೇಶ ಸಂಧಿ
ಸಿ) ಲೋಪ ಸಂಧಿ
ಡಿ) ಜಶ್ತ್ವ ಸಂಧಿ
3 ‘ಕ್ರಿಯಾಸಮಾಸ’ಕ್ಕೆ ಉದಾಹರಣೆಯಿದು
ಎ) ಈ ಬೆಕ್ಕು
ಬಿ) ಕಂಗೆಡು
ಸಿ) ಹಿಂದಲೆ
ಡಿ) ಇಮ್ಮಾವು
4.ಒಬ್ಬರು ಹೇಳಿದ ಹೇಳಿಕೆಯನ್ನು ಯಥಾವತ್ತಾಗಿ ಬರೆಯುವಾಗ ಬಳಸುವ ಲೇಖನ ಚಿಹ್ನೆ
ಎ) ವಾಕ್ಯವೇಷ್ಟನ ಚಿಹ್ನೆ
ಬಿ) ಆವರಣ ಚಿಹ್ನೆ
ಸಿ) ಅಲ್ಪವಿರಾಮ ಚಿಹ್ನೆ
ಡಿ) ಉದ್ಧರಣ ಚಿಹ್ನೆ
5.ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಳೊಡನೆ ಒಂದು ಪೂರ್ಣಭಿಪ್ರಾಯದ ವಾಕ್ಯವಾಗಿದ್ದರೆ ಅದು _
ಎ) ಸಂಯೋಜಿತ ವಾಕ್ಯ
ಬಿ) ಸಾಮಾನ್ಯ ವಾಕ್ಯ
ಸಿ) ಮಿಶ್ರವಾಕ್ಯ
ಡಿ) ಪ್ರಶ್ನಾರ್ಥಕ ವಾಕ್ಯ
6.‘ಅನ್ವರ್ಥ’ನಾಮಪದಗಳ ಗುಂಪಿಗೆ ಸೇರುವ ಪದವಿದು
ಎ) ಕೆಂಪು
ಬಿ) ವಿದ್ವಾಂಸ
ಸಿ) ಈಶಾನ್ಯ
ಡಿ) ಪರ್ವತ
ಕೆಳಕಂಡ ಪ್ರಶ್ನೆಗಳಿಗೆ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಹೊಂದುವ ಸಂಬಂಧೀ ಪದವನ್ನು ಬರೆಯಿರಿ. 4 x 1=4
7 . ಹೋಗಲಿಕ್ಕೆ : ಕೃದಂತಾವ್ಯಯ : : ಚಂದ್ರನಂತೆ : ___________
8 .ಕೆನೆಮೊಸರು : ಜೋಡಿನುಡಿ : : ಬಟ್ಟಬಯಲು : ______
9 .ಕಾರ್ಯ : ಕಜ್ಜ : : ಅಮೃತ : ______
10 .ಯಜ್ಞ : ಜನ್ನ : : ಕಾರ್ಯ : _____
30 ಕೆಳಕಂಡ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ, ಗಣ ವಿಭಾಗಿಸಿ, ಛಂದಸ್ಸಿನ ಹೆಸರನ್ನು ಬರೆಯಿರಿ 1 x 3=3
ಕುರುಕುಳನಂದನಂ ಪವನನಂದನೆಂಬ ಮದಾಂಧಗಂಧಸಿಂ
ಅಥವಾ
ಎನಗಂ ಪಾಂಡುಗಮಿಲ್ಲ ಭೇದಮಿಳೆಯಂ ಪಚ್ಚಾಳ್ವಮಾ ಪಾಂಡುನಂ
31 .ಕೆಳಕಂಡ ವಾಕ್ಯದಲ್ಲಿರುವ ಅಲಂಕಾರವನ್ನು ಹೆಸರಿಸಿ, ಲಕ್ಷಣ ಬರೆದು ಸಮನ್ವಯಗೊಳಿಸಿ.
1 x 3=3
ಸತಿಪತಿಗಳೊಂದಾಗದ ಭಕ್ತಿಅಮೃತದೊಳು ವಿಷ ಬೆರೆಸಿದಂತೆ .
ಅಥವಾ
ನುಡಿದರೆ ಮುತ್ತಿನ ಹಾರದಂತಿರಬೇಕು.
32 ಗಾದೆ ಮಾತು ವಿಸ್ತರಿಸಿ 1 x 3=3
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ.
39 ಪದ್ಯ ಪೂರ್ಣಗೊಳಿಸಿ 1 x 4=4
ಸಂಕಲ್ಪಗೀತೆ
44 ಕೆಳಕಂಡ ಯಾವುದಾದರೂ ಒಂದಕ್ಕೆ ಕೊಟ್ಟಿರುವ ಮಾಹಿತಿಯನ್ನು ಆಧರಿಸಿ ಪತ್ರ ಬರೆಯಿರಿ.

