ತುಂಬಿದ ಕೊಡ ತುಳುಕುವುದಿಲ್ಲ
ಗಾದೆಗಳು ವೇದಗಳಿಗೆ ಸಮ. ವೇದಗಳು ಸುಳ್ಳಾದರೂ ಗಾದೆಗಳು ಸುಳ್ಳಾಗದು. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳಾಗಿವೆ. ಕನ್ನಡದ ಹಲವಾರು ಗಾದೆಗಳಲ್ಲಿ ‘ತುಂಬಿದ ಕೊಡ ತುಳುಕುವುದಿಲ್ಲ’ ಎಂಬುದು ಒಂದಾಗಿದೆ.
ತುAಬಿದ ಮಡಕೆಯಲ್ಲಿ ನೀರು ತುಳುಕುವುದಿಲ್ಲ. ಹಾಗೆಯೇ ಎಲ್ಲವನ್ನೂ ತಿಳಿದ ಜ್ಞಾನಿ ಅಹಂಕಾರ, ಅತಿಯಾದ ಮಾತು, ಅನಗತ್ಯವಾಗಿ ಮಾತನಾಡುವುದಿಲ್ಲ. ಅರ್ಧ ತುಂಬಿದ ಕೊಡವು ತುಳುಕುತ್ತದೆ. ಆದರೆ ತುಂಬಿದ ಕೊಡ ತುಳುಕುವುದಿಲ್ಲ. ಇದರ ಹಾಗೆಯೇ ‘ಅಲ್ಪಜ್ಞಾನಿ ಮಹಾಗರ್ವಿ’ ಅವನು ತನಗೆ ಎಲ್ಲವೂ ತಿಳಿದಿದೆಯೆಂದು ಗರ್ವ ಪಡುತ್ತಾನೆ. ಅತಿಯಾಗಿ ಮಾತನಾಡುತ್ತಾನೆ. ಅನಗತ್ಯ ಸಂವಾದ ಮಾಡಿ ತಾನೇ ಜ್ಞಾನಿ ಎಂದು ತೋರಿಸಲು ಪ್ರಯತ್ನಿಸುತ್ತಾನೆ. ಇದನ್ನೇ ಮಡಕೆಗೆ ಹೋಲಿಸಿ ತುಂಬಿದ ಕೊಡವು ಎಂದಿಗೂ ತುಳುಕುವುದಿಲ್ಲ. ಅರ್ಧಂಬರ್ಧ ತುಂಬಿದ ಕೊಡವು ತುಳುಕುತ್ತದೆ. ನೀರನ್ನು ಹೊರಚೆಲ್ಲುತ್ತದೆ. ಆದ್ದರಿಂದ ಅಲ್ಪಜ್ಞಾನಿ ಮಹಾಗರ್ವಿಯಾಗಿರುತ್ತಾನೆ ಎಂದು ತಿಳಿಸುವುದೇ ಈ ಗಾದೆಯ ಮಹತ್ವವಾಗಿದೆ.