ಮಹಿಳಾ ಸಬಲೀಕರಣ
ಪೀಠಿಕೆ : ಮಹಿಳೆಯರಲ್ಲಿ ಮಾನಸಿಕವಾಗಿ , ಬೌದ್ಧಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಸಬಲತೆವನ್ನು ಹೆಚ್ಚಿಸಿ ಅವರು ಆತ್ಮ ವಿಶ್ವಾಸವನ್ನು ಹೊಂದುವAತೆ ಮಾಡುವುದೇ ಮಹಿಳಾ ಸಬಲೀಕರಣ ಎಂದು ಹೇಳಬಹುದು. ಇಂದು ಪುರುಷರಷ್ಟೆ ಮಹಿಳೆಯರು ಸಮಾನರಾಗಿದ್ದು ಪ್ರತಿಯೊಂದು ಕ್ಷೇತ್ರಗಳಲ್ಲಿ ಪುರುಷರಷ್ಟೆ ಸಾಧನೆಯನ್ನು ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಸಮಾನತೆ ಎನ್ನುವುದು ಮಹಿಳೆಯರಿಗೂ ಅನ್ವಯಿಸುತ್ತದೆ.
ವಿಷಯ ನಿರೂಪಣೆ :
ಯಾವುದೇ ರೀತಿಯ ಶೋಷಣೆ, ಅಸಮಾನತೆಗೆ ಒಳಗಾಗದೆ ಶಿಕ್ಷಣ, ಉದ್ಯೋಗ, ವಿವಾಹ ಜೀವನ, ಸಾಮಾಜಿಕ, ರಾಜಕೀಯ ಮತ್ತು ಆಡಳಿತದಲ್ಲಿ ಪಾಲ್ಗೊಂಡು ಆತ್ಮವಿಶ್ವಾಸದಿಂದ ಬಾಳುವ ಶಕ್ತಿಯೇ ಮಹಿಳಾ ಸಬಲತೆ. ನಾಲ್ಕು ಗೋಡೆಗಳ ಮಧ್ಯೆ ಬಿಟ್ಟು ಎಲ್ಲರ ಜೊತೆಯಾಗಿ ಬೆರೆತು ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಇಂದಿನ ಮಹಿಳೆಯರು ಹೊಂದಿರುವುದು ಮಹಿಳಾ ಸಬಲೀಕರಣವನ್ನು ಎತ್ತಿ ತೋರಿಸುತ್ತದೆ. ಮೊದಲು ಮಹಿಳೆಯರು ಶೈಕ್ಷಣಿಕವಾಗಿ ಸಬಲರಾಗಬೇಕು. ಈ ಉದ್ದೇಶದಿಂದ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ. ಮಹಿಳೆಯರ ಶಿಕ್ಷಣಕ್ಕಾಗಿ ಆದ್ಯತೆ ನೀಡಲಾಗಿದೆ. ಮಹಿಳೆಯರ ವಿಕಾಸವಾದಲ್ಲಿ ಮನೆಯಲ್ಲಿನ ಮಕ್ಕಳು ಸಂಸ್ಕಾರವAತರಾಗಲು ಸಾಧ್ಯವಿದೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿರುವುದನ್ನು ನೋಡಬಹುದು. ಸ್ತಿçÃಶಕ್ತಿ ಯೋಜನೆ, ಮಹಿಳಾ ಸ್ವಸಹಾಯ ಸಂಘಗಳು ಇವೆ. ಮಹಿಳೆಯರಿಗಾಗಿ ಸೂಕ್ತವಾದ ಮತ್ತು ಮಾನವೀಯತೆಯಿಂದ ಕೂಡಿದ ಕೆಲಸದ ವಾತಾವರಣವನ್ನು ಮತ್ತು ಮಾತೃತ್ವದ ಸವಲತ್ತುಗಳನ್ನು ನೀಡುವಂತಹ ಅವಕಾಶಗಳನ್ನು ಕಲ್ಪಿಸಲಾಗಿದೆ. ಸಾಮಾಜಿಕವಾಗಿ ಮುಂದುವರಿಯಲು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಸಮಾಜದ ಅರಿವು ಅವರಿಗಾಗಿ ಎಲ್ಲ ಕಾರ್ಯಗಳಲ್ಲಿ ತೊಡಗುವಂತಾಗಬೇಕು. ಲಿಂಗ ತಾರತಮ್ಯವನ್ನು ಹೋಗಲಾಡಿಸಿ ಪ್ರತಿಯೊಂದು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಕೆಲವೊಂದು ಸಾಂಪ್ರದಾಯಿಕ ಕಾರಣಗಳಿಂದ ಮಹಿಳೆಯರು ಹಿಂದುಳಿದಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆದ್ದರಿಂದ ಅನವಶ್ಯಕವೆನಿಸಿದ ಸಾಂಪ್ರದಾಯಕ ಚೌಕಟ್ಟನ್ನು ಮೀರಿ ಇಂದಿನ ಮಹಿಳೆಯರು ಸಬಲರಾಗಬೇಕಾಗುತ್ತದೆ. ಮಹಿಳೆಯರ ಪರವಾಗಿ ಕಾಯಿದೆ-ಕಾನೂನುಗಳು ರೂಪುಗೊಂಡಿವೆ. ಮಹಿಳೆಯರ ಸ್ವಾವಲಂಬನೆ ಮತ್ತು
ಕಲ್ಯಾಣಕ್ಕಾಗಿ ಇಲಾಖೆಯೇ ಇದೆ. ಮಹಿಳೆಯರ ರಕ್ಷಣೆಗಾಗಿ ‘ಬೇಟಿ ಬಚಾವೋ, ಬೇಟಿಪಡಾವೋ’ದಂತಹ ಯೋಜನೆಗಳನ್ನು ಜಾರಿ ತಂದಿರುವುದುನ್ನು ನೋಡಬಹುದು. ಮಹಿಳೆಯರು ಕೂಡ ಸ್ವಉದ್ಯೋಗ ಮಾಡಲು ಅವಕಾಶ ನೀಡಿ ಸ್ವಾವಲಂಬಿಯಾಗಿ ಬದುಕಲು ಅವಕಾಶ ನೀಡಬೇಕು. ಮಹಿಳೆಯ ಸಬಲೀಕರಣಕ್ಕಾಗಿ ರಾಜಕೀಯವಾಗಿ, ಔದ್ಯೋಗಿಕವಾಗಿ, ಶೈಕ್ಷ ಣಿವಾಗಿ ಮಹಿಳಾ ಮೀಸಲಾತಿಯನ್ನು ಕೂಡ ನೀಡಲಾಗಿದೆ. ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೆ ಆಳಬಲ್ಲದು. ಆದ್ದರಿಂದ ಮಹಿಳೆಯರ ಸಬಲೀಕರಣವಾದರೆ ಜಗತ್ತು ಉದ್ದಾರವಾದೀತು.
ಉಪಸಂಹಾರ : ಮಹಿಳೆಯರ ಸಶಕ್ತರಾದರೆ ದೇಶವೂ ಸಶಕ್ತವಾಗುತ್ತದೆ. ಆದ್ದರಿಂದ ಮಹಿಳೆಯರಿಗೆ ಸಬಲರಾಗಲು ಅವಕಾಶ ನೀಡಬೇಕು. ಒಬ್ಬ ಮಹಿಳೆಯು ಶಕ್ತಿವಂತಳಾಗಿ, ಸ್ವತಂತ್ರವಾಗಿ ತನ್ನ ಇಚ್ಚೆಯಂತೆ ಸ್ವಾವಲಂಬಿಯಾಗಿ ಬಾಳುವ ಸ್ಥಿತಿಯನ್ನ್ರು ಅವರಿಗೆ ನೀಡಿದಾಗ ಮಹಿಳಾ ಸಬಲೀಕರಣ ಸಾಧ್ಯವೆಂದು ಹೇಳಬಹುದು.