ರಾಷ್ಟ್ರೀಯ ಹಬ್ಬಗಳ ಮಹತ್ವ :
ಪೀಠಿಕೆ:- ದೇಶ ಪ್ರೇಮ ಹಾಗೂ ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುವಲ್ಲಿ ರಾಷ್ಟಿçÃಯ ಹಬ್ಬಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ರಾಷ್ಟ್ರೀಯ ಹಬ್ಬಗಳು ರಾಷ್ಟçದ ಜನರಲ್ಲಿರುವ ಜಾತಿ, ಮತ, ವರ್ಣ, ಧರ್ಮ, ಭಾಷೆ, ಪ್ರಾಂತ್ಯಗಳ ಭೇದಭಾವಗಳನ್ನು ಹೋಗಲಾಡಿಸಿ ನಾವೆಲ್ಲರೂ ಒಂದೇ ಎಂಬ ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುತ್ತವೆ. ಆದ್ದರಿಂದ ರಾಷ್ಟಿçÃಯ ಹಬ್ಬಗಳನ್ನು ಬಹು ವಿಜೃಂಭಣೆಯಿಂದ ಆಚರಿಸಬೇಕು.
ವಿಷಯ ನಿರೂಪಣೆ :
ನಮ್ಮ ಭಾರತ ದೇಶದಲ್ಲಿ ಆಗಸ್ಟ್ ೧೫ರ ಸ್ವಾತಂತ್ರೋತ್ಸವ, ಜನವರಿ ೨೬ರ ಗಣರಾಜ್ಯೋತ್ಸವ, ಅಕ್ಟೋಬರ್ ೨ರ ಮಹಾತ್ಮಗಾಂಧೀ ಜಯಂತಿ, ಮೊದಲಾದ ದಿನಗಳನ್ನು ರಾಷ್ಟಿçÃಯ ಹಬ್ಬಗಳು ಎಂದು ಆಚರಿಸಲಾಗುತ್ತದೆ. ರಾಷ್ಟçದಲ್ಲಿ ವಾಸಿಸುವ ಜನರೆಲ್ಲ ರೂ ಒಗ್ಗೂಡಿ ಆಚರಿಸಬೇಕಾದ ಹಬ್ಬದ ದಿನಗಳಿವು. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ, ರಕ್ಷ ಣೆಗಾಗಿ, ಏಳಿಗೆಗಾಗಿ ದುಡಿದ ಮಹನೀಯರುಗಳನ್ನು ಸ್ಮರಿಸುವ ದಿನಗಳಿವು. ರಾಷ್ಟ್ರೀಯ ಹಬ್ಬಗಳು ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಮಾತ್ರ ಆಚರಿಸುವ ಹಬ್ಬಗಳಾಗಬಾರದು. ಪ್ರತಿ ಮನೆ, ಗ್ರಾಮ, ಪಟ್ಟಣ, ನಗರಗಳಲ್ಲಿ ಜಾತಿ, ಮತ, ವರ್ಣ, ಧರ್ಮ, ಭಾಷೆ, ಪ್ರಾಂತ್ಯಗಳ ಭೇದಭಾವಗಳಿಲ್ಲದೆ ಆಚರಿಸುವ ಪ್ರಮುಖ ಹಬ್ಬವಾಗಬೇಕು. ಆಗ ಮಾತ್ರ ನಾವೆಲ್ಲರೂ ಒಂದೇ ಎಂಬ ರಾಷ್ಟ್ರೀಯ ಭಾವೈಕ್ಯತೆಯು ಮೂಡಲು ಸಾಧ್ಯವಾಗುತ್ತದೆ. ನಮ್ಮ ಹಿರಿಯರ ತ್ಯಾಗ, ಬಲಿದಾನಗಳ ಮಹತ್ತ್ವವನ್ನು ಅರಿಯುವ ದಿನಗಳಿವು. ಮುಂದಿನ ಜನಾಂಗಕ್ಕೆ ನಮ್ಮ ದೇಶದ ಸಮಗ್ರತೆ ಮತ್ತು ಏಕತೆಯನ್ನು ಕಾಪಾಡುವಂತೆ ದೀಕ್ಷೆ ತೊಡುವ ದಿನಗಳಿವು. ನಮ್ಮ ದೇಶವನ್ನು ಸಂರಕ್ಷಣೆ ಮಾಡುವ ವೀರ ಸೈನಿಕರಿಗೆ ಗೌರವ ಸೂಚಿಸುವ ದಿನಗಳಿವು. ಪ್ರತಿಯೊಬ್ಬ ಭಾರತೀಯನು ಸಂಭ್ರಮದಿಂದ ಭಾಗವಹಿಸಿ, ತನ್ನ ದೇಶಪ್ರೇಮವನ್ನು ಜಗತ್ತಿಗೆ ಸಾರುವ ಸುದಿನಗಳಿವು.
ಉಪಸಂಹಾರ :
ಎಲ್ಲರೂ ಒಂದೆಡೆ ಸೇರಿ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಬೇಕು. ಪ್ರತಿಯೊಬ್ಬರ ಮನೆ ಮನೆಗಳಲ್ಲೂ ಹಬ್ಬದ ಸಂಭ್ರಮವಿರಬೇಕು. ನಾವು ಆಚರಿಸುತ್ತಿರುವ ದಿನಗಳ ಮಹತ್ತ÷್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಬೇಕು. ನಮ್ಮ ದೇಶದ ಸ್ವತಂತ್ರ ಸೇನಾನಿಗಳ ಬಗ್ಗೆ ಅಭಿಮಾನ ಮೂಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಬೇಕು. ಪ್ರತಿ ಮನೆ, ಗ್ರಾಮ, ಪಟ್ಟಣ, ನಗರಗಳಲ್ಲಿ ಇದು ನಮ್ಮ ಹಬ್ಬವೆಂಬ ಸಂಭ್ರಮವಿರಬೇಕು. ಹಾಗಾದಾಗ ಮಾತ್ರ ಈ ಹಬ್ಬಗಳ ಆಚರಣೆ ಅರ್ಥಪೂರ್ಣವಾಗುತ್ತದೆ ಹಾಗೂ ಸಾರ್ಥಕವಾಗುತ್ತವೆ.