‘ತಾಳಿದವನು ಬಾಳಿಯಾನು’
ಗಾದೆಗಳು ವೇದಗಳಿಗೆ ಸಮ. ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ ಎಂಬ ಮಾತುಗಳು ಗಾದೆಗಳ
ಮಹತ್ತ್ವವನ್ನು ತೋರಿಸುತ್ತವೆ.. ಗಾದೆಗಳು ಕಿರಿದಾದ ವಾಕ್ಯಗಳಲ್ಲಿ ಹಿರಿದಾದ ಅರ್ಥವನ್ನು ನೀಡುವ
ನುಡಿಮುತ್ತುಗಳಾಗಿವೆ. ಇವು ಸತ್ಯವನ್ನು ಬಿಂಬಿಸುತ್ತವೆ. ಇವು ಹಿರಿಯರ ಅನು ಭವಾಮೃತಗಳು.
ನಮ್ಮಬದುಕನ್ನು ಅರ್ಥೈಸಲು ನಮಗೆ ಮಾರ್ಗದರ್ಶಕವಾಗಿದೆ. ಇಲ್ಲಿ ನೀಡಿರುವ ಗಾದೆಯಾದ ‘ತಾಳಿದವನು ಬಾಳಿಯಾನು’ ಅಂತಹ ಗಾದೆಗಳಲ್ಲಿ ಒಂದಾಗಿದೆ.

ಮನುಷ್ಯನ ಮನಸ್ಸು ಯಾವಾಗಲೂ ಅರಿಷಡ್ವರ್ಗಗಳ ಪ್ರಭಾವದಿಂದ ನಲುಗುತ್ತಿರುತ್ತದೆ. ಕಾಮ,
ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೇ ಅರಿಷಡ್ವರ್ಗಗಳು. ಇವುಗಳನ್ನು ಮನಸ್ಸಿನ ಆರು ಶತ್ರುಗಳು
ಎಂದು ಕರೆಯುವರು. ಕೋಪದ ವಿರುದ್ಧ ಭಾವವೇ ತಾಳ್ಮೆ. ಕೋಪ ಬರುವಂತಹ ಸನ್ನಿವೇಶಗಳು
ಜೀವನದಲ್ಲಿ ಪ್ರತಿನಿತ್ಯ ಹಲವಾರು ಬಾರಿ ಬರುತ್ತಿರುತ್ತವೆ.. ಆದರೆ ಕೋಪಾವೇಶದಿಂದ ಆಡುವ ಮಾತು,
ಮಾಡುವ ಕ್ರಿಯೆಗಳಿಂದ ಅನಾಹುತ-ಹಾನಿಯಾಗುವ ಸಂಭವವುಂಟು. ಆದ್ದರಿಂದ ತಾಳ್ಮೆಯಿಂದಿರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಈ ಗಾದೆಯು ತಾಳ್ಮೆಯನ್ನು ಬೆಳೆಸಿಕೊಂಡವನು ಬದುಕುತ್ತಾನೆಂದು ಹೇಳಿರುವುದು ಯುಕ್ತವಾಗಿದೆ.
.ಹರಿದಾಸರೊಬ್ಬರು “ತಾಳುವಿಕೆಗಿಂತ ತಪವಿಲ್ಲ” ಎಂದಿದ್ದಾರೆ. ತಾಳ್ಮೆಯೇ ತಪಸ್ಸು ಎಂದಿದ್ದಾರೆ.
ಏಕೆಂದರೆ ತಾಳ್ಮೆಯಿಂದ ಬಾಳುವುದು ಬಹುಕಷ್ಟ ‘ಕೋಪ ಪಾಪದ-ತಾಪದ ನೆಲೆಗಟ್ಟು ಎಂದಿದ್ದಾರೆ.
‘ಕೋಪವೆಂಬುದು ಅನರ್ಥ ಸಾಧನ’ ಎಂದೇ ವಾಕ್ಯವುಂಟು. ಕೋಪದಲ್ಲಿ ಮೂಗು ಕೊಯ್ದುಕೊಂಡವು
ಎನ್ನುವುದು ತಮ್ಮನ್ನು ತಾವೇ ಹಿಂಸಿಸಿಕೊಳ್ಳುವುದಾಗಿದೆ. ಗೌತಮ ಮಹರ್ಷಿ ಅಹಲ್ಯೆ ತಪ್ಪು
ಮಾಡಿದಳೋ? ಇಲ್ಲವೋ ಎಂಬುದನ್ನು ತಿಳಿಯುವ ಮುನ್ನ ‘ಕಲ್ಲಾಗು’ ಎಂದು ಶಾಪಕೊಟ್ಟು ತನ್ನ
ಹೆಂಡತಿಯನ್ನು ತಾನೇ ಕಳೆದುಕೊಂಡನು- ಒಂಟಿಯಾಗಿ ನೂರಾರು ವರ್ಷ ಬಳಲುವಂತಾಯಿತು.
ಆದ್ದರಿಂದ ‘ತಾಳಿದವನು ಬಾಳಿಯಾನು’ ಎಂಬ ಗಾದೆ ಬದುಕಿಗೆ ದಾರಿದೀಪವಾಗಿದೆ.