“ಕೂಡಿ ಬಾಳಿದರೆ ಸ್ವರ್ಗ ಸುಖ”
ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳಾಗಿದ್ದು, ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ
ತ್ರಿವಿಕ್ರಮನಾಗಿವೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತು ಗಾದೆಯ ಮಹತ್ವವನ್ನು ಸಾರುತ್ತದೆ. ಕೂಡಿಬಾಳಿದರೆ ಸ್ವರ್ಗ ಸುಖ ಎಂಬುದು ಪ್ರಸಿದ್ದ ಗಾದೆ ಮಾತಾಗಿದೆ. ‘ವಸುದೈವ ಕುಟುಂಬಕA’ ಎಂಬ ಮಾತನ್ನು ಈ ಗಾದೆಯು ತಿಳಿಸುತ್ತದೆ. ಮನುಷ್ಯ ಸಂಘಜೀವಿ ಹಾಗೂ ಸಮಾಜ ಜೀವಿ. ಸಮಾಜದ ಎಲ್ಲಾ ಜನರು ಒಟ್ಟಾಗಿ ಕೂಡಿ ಬಾಳಿದರೆ ಸ್ವರ್ಗ ಸುಖವನ್ನು ಅನುಭವಿಸಬಹುದು. ಸ್ವರ್ಗಸುಖ ಬೇರೆಲ್ಲೂ ಇಲ ್ಲ ಬದುಕುವ
ರೀತಿಯಲ್ಲಿದೆ. ಅವಿಭಕ್ತ ಕುಟುಂಬಗಳು ಈ ಗಾದೆಗೆ ಉತ್ತಮ ಉದಾಹರಣೆ. ಕುಟುಂಬದಿAದ ಪ್ರಾರಂಭವಾಗಿ ಸಮಾಜ, ರಾಜ್ಯ, ದೇಶದಲ್ಲಿ ನಾವೆಲ್ಲ ರೂ ಭೇದಭಾವಗಳಿಲ್ಲದೆ ಪ್ರೀತಿ, ಸ್ನೇಹ ಸಾಮರಸ್ಯದಿಂದ ಒಟ್ಟಾಗಿ ಬಾಳುವುದಾಗಿದೆ. ಪರಸ್ಪರ ದ್ವೇಷ, ಅಸೂಯೆ, ಹೊಡೆದಾಟ ಬಡಿದಾಟಗಳೇ ಆದರೆ ಅಶಾಂತಿ, ಅಸಮಾಧಾನಗಳು ತಲೆದೋರಿ ಬದುಕು ನರಕವಾಗುತ್ತದೆ. ಕೂಡಿ ಬಾಳಿದರೆ ಸ್ವರ್ಗ ಸುಖ ಲಭಿಸುತ್ತದೆ. ಅವರ ನಡೆನುಡಿಗಳೇ ಅವರ ಸುಖದುಃಖಗಳಿಗೆ ಕಾರಣ. ಸುಖಸಂತೋಷ ಹೊಂದಬೇಕಾದರೆ ಕೂಡಿ ಬಾಳಬೇಕು.