ನಾಮವಾಚಕಗಳು-ಅಭ್ಯಾಸದ ಹಾಳೆಗಳು
ಅ. ಗೆರೆ ಎಳೆದ ಪದವನ್ನು ಮಾತ್ರ ಗಮನಿಸಿ.
೧. ಅಮ್ಮ ಅಂಗಡಿಗೆ ಹೊರಟರು. ಅವರು ಒಂದು ಚೀಲವನ್ನು ಹಿಡಿದಿದ್ದರು.
೨. ಮುನ್ನಿ ಸುಮಾಳ ಪ್ರೀತಿಯ ಬೆಕ್ಕು. ಅದು ಅವಳಿಗೆ ಬಹಳ ಇಷ್ಟ.
೩. ಸುಮಂತ ಮತ್ತು ಜೋಸೆಫ್ ಗೆಳೆಯರು. ಇವರು ಇಬ್ಬರೂ ಜೊತೆಯಾಗಿ ತಿರುಗಾಡಲು ಹೊರಟರು.
೪. ರೈಲುಗಳಿಗೆ ಚಕ್ರಗಳಿರುತ್ತವೆ. ಅವು ರೈಲು ಕಂಬಿಗಳ ಮೇಲೆ ಓಡುತ್ತವೆ.
೫. ಶ್ಯಾಮನಿಗೆ ಸಿನಿಮಾ ನೋಡುವ ಮನಸ್ಸಾಯಿತು. ಆಗ ಅವನು ಸಿನಿಮಾ ಮಂದಿರಕ್ಕೆ ಹೋದನು.
೬. ಚಿಕ್ಕಪ್ಪ ಮಂಗಳೂರಿನಿಂದ ಬೆಂಗಳೂರಿಗೆ ಬಂದರು. ನಮ್ಮೊಡನೆ ನೀವು ಯಾವಾಗ ಮಂಗಳೂರಿಗೆ ಬರುವಿರಿ? ಎಂದು ಕೇಳಿದರು.
ಆ ಕೆಳಗೆ ನೀಡಲಾದ ಪದಗಳಲ್ಲಿ ಸೂಕ್ತವಾದವುಗಳನ್ನು ಆರಿಸಿ ಖಾಲಿ ಬಿಟ್ಟ ಸ್ಥಳಗಳನ್ನು ತುಂಬಿರಿ.
ಅವರು, ತಾವು, ಅದು, ತಮ್ಮ, ನಾನು, ಅವು, ಅವರ, ನೀನು, ನೀವು, ಅವಳು, ಅವನು, ತನ್ನ, ಅವರಿಗೆ, ನಾವು, ನಿನ್ನ, ನಮ್ಮ
೧. ________________ ನಿನ್ನೆ ಬಂದೆಯಾ?
೨. ________________ ಹಾಡುತ್ತಿದ್ದಳು.
೩. _________________ ಯಾಕೆ ಇಲ್ಲಿಗೆ ಬಂದಿತ್ತು ?
೪. ________________ ಅವನಿಗಾಗಿ ________________ ಮಾತನ್ನು ಆಲಿಸಬೇಕು.
೫. ________________ ________________ ಪಾಡಿಗೆ ಇರುತ್ತೇವೆ.
೬. ________ ಬೆಂಗಳೂರಿಗೆ ಹೋಗಿದ್ದೀರೆಂದು ____________ ಹೇಳಿದ.
೭. ________ ಹುಲಿಗಳೋ, ಚಿರತೆಗಳೋ ಎಂಬುದು _______ ತಿಳಿಯಲಿಲ್ಲ.
೮. ________________ ನಿನ್ನೆ ಇಲ್ಲಿಗೆ ಬಂದೆ. ಈಗ ಹೊರಡುತ್ತೇನೆ.
೯. ________________ಮನಸ್ಸಿನಲ್ಲಿದ್ದುದ್ದನ್ನು ಹೇಳಿ ಹೊರಟು ಬಿಟ್ಟ.
೧೦. ________________ ಮಾತನ್ನು ನಾನಂತೂ ಕೇಳುವುದಿಲ್ಲ.
೧೧. ನೆನ್ನೆ ನಾನು ________________ ಪೇಟೆಯಲ್ಲಿ ಮಾತನಾಡಿಸಿದೆ.
೧೨. ರಸ್ತೆಯಲ್ಲಿ ________________ ವೇಗವಾಗಿ ಸ್ಕೂಟರನ್ನು ಓಡಿಸುತ್ತಿದ್ದಳು.
೧೩. ಬೆಂಗಳೂರಿನಲ್ಲಿ ________________ ಈಗಲೂ ವಾಸವಾಗಿದ್ದೀರಾ?
೧೪. ಮಾವಿನ ಹಣ್ಣೆಂದರೆ ________________ ತುಂಬಾ ಇಷ್ಟ !
೧೫. ಅವನಿಗೆ ________________ ಕಷ್ಟ ಸಾಧ್ಯವಾದ ಕೆಲಸ.
ಈ ಕೆಳಗಿನ ಪದಗಳಲ್ಲಿನ ಗುಣವಾಚಕ, ಸಂಖ್ಯಾವಾಚಕ, ಸಂಖ್ಯೇಯವಾಚಕ, ವಸ್ತುವಾಚಕ, ಪರಿಮಾಣ ವಾಚಕ, ಪ್ರಕಾರವಾಚಕ, ದಿಗ್ವಾಚಕಗಳನ್ನು ವಿಂಗಡಿಸಿ ಬರೆಯಿರಿ. ಉಳಿದ ಸ್ಥಳಗಳಲ್ಲಿ ನಿಮಗೆ ಗೊತ್ತಿರುವ ಪದಗಳನ್ನು ಆಯಾಯ ಪಟ್ಟಿಯಲ್ಲಿ ಬರೆಯಿರಿ.
ಅದು, ಇದು, ತೆಂಕಣ, ಬಡಗಣ, ಆನೆಯಷ್ಟು, ಐವರು, ಮೂರು, ಹೊಸದು, ದೊಡ್ಡದು, ಹತ್ತು, ಇಂಥ, ಒಂಬತ್ತನೆಯ, ಹತ್ತು, ಪಶ್ಚಿಮ, ಯಾವುದು, ಎಷ್ಟು, ಎರಡು, ಬಿಳಿಯ, ಏನು, ಸುಂದರ, ಕುಂಭ, ಮುಷ್ಟಿಯಷ್ಟು, ಅಂತಹ, ತೆಂಕಣ.
ಉ. ಕೆಳಗಿನ ವಾಕ್ಯವೃಂದದಲ್ಲಿ ಕಾಣುವ ಸರ್ವನಾಮಗಳನ್ನು ಗುರ್ತಿಸಿ ಬರೆಯಿರಿ.
ಷರೀಫನು ನಡೆದುಕೊಂಡು ಹೋಗುತ್ತಿದ್ದ. ದಾರಿಯಲ್ಲಿ ಅವನು ಒಂದು ನಾಯಿಯನ್ನು ಕಂಡ. ಅದು ‘ಬೌ ಬೌ’ ಎಂದು ಬೊಗಳಿತು. ಅದನ್ನು ಕಂಡ ಅವನಿಗೆ ಭಯವಾಯಿತು. ಇದನ್ನು ನೋಡಿ ಲಲಿತಳು ಅಲ್ಲಿಗೆ ಬಂದಳು. ಅದರ ಬೊಗಳುವಿಕೆ ಕೇಳಿ ಅವಳಿಗೂ ಹೆದರಿಕೆ ಆಯಿತು. ಇವರ ಹೆದರಿಕೆಗೆ ಮನೆಯ ಮಾಲೀಕರು ಹೊರಗೆ ಬಂದರು. ನಾಯಿಯನ್ನು ಗದರಿಸಿದರು. ಅದು ಬಾಲ ಮುದುರಿಕೊಂಡು ಸುಮ್ಮನೆ ಕುಳಿತುಕೊಂಡಿತು.
ಊ ಹೊಂದಿಸಿ ಬರೆಯಿರಿ.
‘ಅ' ಪಟ್ಟಿ ‘ಬ' ಪಟ್ಟಿ ಉತ್ತರ
೧. ನದಿ ಎ. ಸರ್ವನಾಮ
೨. ಬೆಂಗಳೂರು ಬಿ. ದಿಗ್ವಾಚಕ
೩. ಶಿಕ್ಷಕ ಸಿ. ಅಂಕಿತನಾಮ
೪. ಅವನು ಡಿ. ರೂಢನಾಮ
೫. ಬಡಗಣ ಇ. ಅನ್ವರ್ಥನಾಮ
ಋ ವಾಕ್ಯಗಳಲ್ಲಿರುವ ನಾಮಪದಗಳನ್ನು ಆಯ್ದು ಬರೆಯಿರಿ
೧. ಸದಾನಂದ ಶಾಲೆಗೆ ಬಂದನು.
೨. ಕಾವೇರಿ ನದಿಯು ಜನರ ಜೀವನದಿ.
೩. ರೈತನು ಹೊಲಗದ್ದೆಗಳಲ್ಲಿ ದುಡಿಯುವನು.
೪. ಸರಸ್ವತಿ ಮನೆಯ ಮುಂದೆ ರಂಗೋಲಿ ಬಿಟ್ಟಳು.
೫. ಹಳ್ಳಿಯ ಜನರೆಲ್ಲಾ ಚುಂಚನಗಿರಿ ಜಾತ್ರೆಯಲ್ಲಿ ಸೇರಿದ್ದಾರೆ
ಎ ಹೊಂದಿಸಿ ಬರೆಯಿರಿ.
೧. ದಾರಿ ಎ. ಸರ್ವನಾಮ ೧) ___________________________
೨. ಕಾವೇರಿ ಬಿ. ದಿಗ್ವಾಚಕ ೨) ___________________________
೩. ಆರ್ಚಕ ಸಿ. ಅಂಕಿತನಾಮ ೩) ___________________________
೪. ನಾನು ಡಿ. ರೂಢನಾಮ ೪) ___________________________
೫. ಮೂಡಣ ಇ. ಅನ್ವರ್ಥನಾಮ ೫) ___________________________
ಏ ಕೆಳಗಿನ ವ್ಯಾಕರಣಾಂಶಕ್ಕೆ ಎರಡೆರಡು ಉದಾಹರಣೆ ಬರೆಯಿರಿ.
೧) ದಿಗ್ವಾಚಕ ಪದ ಉದಾ: ___________________________
೨) ಪರಿಮಾಣವಾಚಕ ಪದ ಉದಾ: ___________________________
೩) ರೂಢನಾಮ ಪದ ಉದಾ: ___________________________
೪) ಅಂಕಿತನಾಮ ಪದ ಉದಾ: ___________________________
೫) ಆತ್ಮಾರ್ಥಕ ಸರ್ವನಾಮಕ್ಕೆ ಉದಾ: ___________________________
ಒ ಕೊಟ್ಟಿರುವ ಪ್ರಶ್ನೆಗಳಿಗೆ / ಅಪೂರ್ಣ ಹೇಳಿಕೆಗಳಿಗೆ ಪ್ರತಿಯೊಂದಕ್ಕೂ ನಾಲ್ಕು ಆಯ್ಕೆಗಳನ್ನು ಕೊಡಲಾಗಿದೆ. ಅವುಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ, ಕ್ರಮಾಕ್ಷರದೊಂದಿಗೆ ಬರೆಯಿರಿ.
೧. ವಸ್ತುಗಳ ಗುಣ, ರೀತಿ, ಸ್ವಭಾವಗಳನ್ನು ತಿಳಿಸುವ ವಿಶೇಷಣಗಳನ್ನು ಹೀಗೆನ್ನುವರು.
ಅ) ಗುಣವಾಚಕಗಳು ಆ) ಸಂಖ್ಯಾವಾಚಕಗಳು ಇ) ವಸ್ತುವಾಚಕಗಳು ಈ) ಭಾವನಾಮಗಳು
ಉ. _____________________________________________________________________
೨. ಕೆಳಗಿನವುಗಳಲ್ಲಿ ಭಾವನಾಮಕ್ಕೆ ಉದಾಹರಣೆಯಾದ ಪದ ಇದಾಗಿದೆ.
ಅ) ಕಿವುಡ ಆ) ಅಷ್ಟು ಇ) ಬಿಳುಪು ಈ) ಎಂತಹ
ಉ. _____________________________________________________________________
೩. ನಾಮಪದಗಳ ಸ್ಥಾನದಲ್ಲಿ ಅವುಗಳ ಬದಲಾಗಿ ಈ ಶಬ್ದಗಳನ್ನು ಬಳಸಲಾಗುತ್ತದೆ.
ಅ) ಹೆಂಗಸು, ಹುಡುಗ ಆ) ಪೂರ್ವ, ಪಶ್ಚಿಮ ಇ) ಅಷ್ಟು, ಅನಿತು ಈ) ಅವನು, ನೀನು
ಉ. _________________________________________________________________
೪. “ಯಕ್ಷಗಾನದಲ್ಲಿ ತೆಂಕುತಿಟ್ಟು, ಬಡಗುತಿಟ್ಟು, ಬಡಬಡಗುತಿಟ್ಟು ಎಂಬ ಮೂರು ಪ್ರಕಾರಗಳಿವೆ.” ವಾಕ್ಯದಲ್ಲಿರುವ ಸಂಖ್ಯಾವಾಚಕ ಪದ ಇದಾಗಿದೆ.
ಅ) ತೆಂಕುತಿಟ್ಟು ಆ) ಮೂರು ಇ) ಎಂಬ ಈ) ಪ್ರಕಾರ
ಉ. _____________________________________________________________________
೫. “ಬೀರಣ್ಣ ತನ್ನ ಮೂಡಣ ದಿಕ್ಕಿಗಿರುವ ಹೊಲವನ್ನು ಈರಣ್ಣನಿಗೆ ಮಾರಿದ್ದನು.” ವಾಕ್ಯದಲ್ಲಿ ಮೂಡಣ ಎಂಬ ಪದ ನಾಮಪದದ ಈ ಪ್ರಕಾರಕ್ಕೆ ಸೇರಿದೆ.
ಅ) ಸಂಖ್ಯಾವಾಚಕ ಆ) ಪ್ರಕಾರ ವಾಚಕ ಇ) ದಿಗ್ವಾಚಕ ಈ) ವಸ್ತುವಾಚಕ
ಓ ಕೊಟ್ಟಿರುವ ನಾಮಪದಗಳಿಗೆ ಸೂಕ್ತ ಗುಣವಾಚಕಗಳನ್ನು ಸೇರಿಸಿ ಬರೆಯಿರಿ
ಔ. ಕೊಟ್ಟಿರುವ ವೃತ್ತದಲ್ಲಿನ ಸರ್ವನಾಮ ಪದಗಳನ್ನು ವಿಂಗಡಿಸಿ ಬರೆಯಿರಿ.
ಅಂ. ಸೂಕ್ತ ಪುರುಷಾರ್ಥಕ ಸರ್ವನಾಮಗಳನ್ನು ಬಳಸಿ ಬಿಟ್ಟ ಸ್ಥಳಗಳನ್ನು ಭರ್ತಿ ಮಾಡಿರಿ.
ಮಾದರಿ: ನಾವು ಎಲ್ಲರೂ ಉತ್ತಮ ವಿದ್ಯಾರ್ಥಿಗಳು.
1. _________ ಹುಲ್ಲನ್ನು ಮೇಯುತ್ತಿದೆ.
2 __________ ಭವ್ಯ ಭಾರತದ ಪ್ರಜೆಗಳು
3. _________ ಊರು ಮೈಸೂರು
4. __________ ಅತ್ಯಂತ ಗಂಭೀರೆಯಾಗಿದ್ದಳು
5. _________ ಚೆನ್ನಾಗಿ ಹಾಡುತ್ತೇನೆ
6. __________ ಕರ್ನಾಟಕದ ರಾಜ್ಯಪಾಲರು
7. _________ ಅದ್ಭುತ ಗಾಯಕಿ
8. __________ ಸುಂದರ ಹೂವುಗಳು
9. _________ ಬಹಳ ಬುದ್ಧಿವಂತನAತೆ ವರ್ತಿಸಬೇಡ
1೦. _________ ದುಂಡಾಗಿ ಬರೆಯಬಲ್ಲೆ
ಅಃ. ಗೆರೆ ಎಳೆದ ಪದಗಳನ್ನು ಗಮನಿಸಿ ಸೂಕ್ತ ಪ್ರಶ್ನಾರ್ಥಕ ಸರ್ವನಾಮಗಳನ್ನು ಬಳಸಿ, ಪ್ರಶ್ನೆಗಳನ್ನು ರಚಿಸಿ.
ಕರ್ನಾಟಕದ ರಾಜಧಾನಿ ಯಾವುದು?
೧. ಮಾನವನ ದೇಹದಲ್ಲಿ ೨೦೬ ಮೂಳೆಗಳಿವೆ.
ಉ. __________________________________________________________________ .
೨. ಚಕ್ರಪಾಣ ಎಂದರೆ ಕೃಷ್ಣ.
ಉ. __________________________________________________________________ .
೩. ಪಂಪನು ಅರಿಕೇಸರಿಯ ಆಸ್ಥಾನದಲ್ಲಿ ಕವಿಯಾಗಿದ್ದನು.
ಉ. __________________________________________________________________ .
೪. ‘ಶ್ರೀರಾಮಾಶ್ವಮೇಧಂ’ ಮುದ್ದಣನು ಬರೆದ ಕೃತಿ.
ಉ. __________________________________________________________________ .
೫. ಮಾಸ್ತಿಯವರ ಚಿಕವೀರ ರಾಜೇಂದ್ರ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ.
ಉ. __________________________________________________________________ .
೬. ಚಂದ್ರಶೇಖರ ಕಂಬಾರರು ಕನ್ನಡದ ೮ನೆಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಉ. __________________________________________________________________ .
೭. ಮೈಸೂರು ರಾಜ್ಯವು ೧೯೭೩ರಲ್ಲಿ ಕರ್ನಾಟಕ ಎಂಬ ಹೆಸರು ಪಡೆಯಿತು.
ಉ. __________________________________________________________________ .
ಕ. ಹೊಂದಿಸಿ ಬರೆಯಿರಿ.
ಅ ಪಟ್ಟಿ ಬ ಪಟ್ಟಿ ಉತ್ತರಗಳು
೧. ಮೂವರು ರೂಢನಾಮ --------------------
೨. ಕೆಲವು ದಿಗ್ವಾಚಕ --------------------
೩. ಹುಬ್ಬಳ್ಳಿ ಸಂಖ್ಯಾವಾಚಕ --------------------
೪. ಯೋಗಿ ಪರಿಮಾಣವಾಚಕ --------------------
೫. ಆಚೆ ಅಂಕಿತನಾಮ --------------------
ಅನ್ವರ್ಥನಾಮ
ಖ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕಿರುವ ಸಂಬಂಧವನ್ನು ಗುರುತಿಸಿ ಬರೆಯಿರಿ.
೧. ಎಲ್ಲಿಂದ : ಪ್ರಶ್ನಾರ್ಥಕ ಸರ್ವನಾಮ : : ನೀನು : _______________
೨. ನೂರು : ಸಂಖ್ಯಾವಾಚಕ :: ಇಷ್ಟು : _______________
೩. ಹಿರಿಮೆ : ಭಾವನಾಮ :: ತೆಂಕಣ : _______________
೪. ಶಾರದೆ : ಅಂಕಿತನಾಮ :: ಕವಿ : _______________
೫. ನೀನು : ಮಧ್ಯಮ ಪುರುಷ :: ನಾನು : _______________
೬. ರೂಢನಾಮ : ವಸ್ತುವಾಚಕ :: ಆತ್ಮಾರ್ಥಕ ಸರ್ವನಾಮ : _______________
ಗ. ಕೊಟ್ಟಿರುವ ಚೌಕದಲ್ಲಿ ಕೆಲವು ನಾಮವಾಚಕಗಳಿವೆ. ಅವುಗಳಲ್ಲಿ ಹತ್ತು ಬಗೆಯ ನಾಮವಾಚಕ ಪದಗಳನ್ನು ಪತ್ತೆಹಚ್ಚಿ ಬರೆಯಿರಿ.