ಅವ್ಯಯಗಳು- ಬಹು ಆಯ್ಕೆ ಪ್ರಶ್ನೆಗಳು
೧ ಈ ಪದಗಳಲ್ಲಿ ಅನುಕರಣಾವ್ಯಯಕ್ಕೆ ಉದಾಹರಣೆ:
(ಎ) ಬೇಗಬೇಗ (ಬಿ) ಓಡುಓಡು
(ಸಿ) ಗಿಡಗಂಟೆ (ಡಿ) ಧಗಧಗ
೨ ‘ತಟ್ಟನೆ’ ಪದವು ಈ ಅವ್ಯಯಕ್ಕೆ ಉದಾಹರಣೆ;
(ಎ) ಭಾವಸೂಚಕಾವ್ಯಯ (ಬಿ) ಸಂಬಂಧಾರ್ಥಕಾವ್ಯಯ
(ಸಿ) ಸಾಮಾನ್ಯಾವ್ಯಯ (ಡಿ) ಅನುಕರಣಾವ್ಯಯ
೩. ಮತ್ತು, ಅಥವಾ, ಆದ್ದರಿಂದ, ಊ, ಉಂ, ಅಲ್ಲದೆ ಇತ್ಯಾದಿ ಪದಗಳು ಅವ್ಯಯದ ಈ ಗುಂಪಿಗೆ ಸೇರಿವೆ;
(ಎ) ಭಾವಸೂಚಕಾವ್ಯಯ (ಬಿ) ಕ್ರಿಯಾರ್ಥಕಾವ್ಯಯ
(ಸಿ) ಅನುಕರಣಾವ್ಯಯ (ಡಿ) ಸಂಬಂಧಾರ್ಥಕಾವ್ಯಯ
೪. `ತರುವಾಯ’ ಪದವು ಈ ಅವ್ಯಯಕ್ಕೆ ಉದಾಹರಣೆಯಾಗಿದೆ;
(ಎ) ಸಾಮಾನ್ಯ ಅವ್ಯಯ (ಬಿ) ಸಂಬಂಧಾರ್ಥಕ ಅವ್ಯಯ
(ಸಿ) ಭಾವಸೂಚಕ ಅವ್ಯಯ (ಡಿ) ಕ್ರಿಯಾರ್ಥಕ ಅವ್ಯಯ
೫. ‘ಅದುವೇ’ ಎಂಬುದು ಈ ಅವ್ಯಯ ಪದವಾಗಿದೆ.
(ಎ) ಸಂಬಂಧಾರ್ಥಕಾವ್ಯಯ (ಬಿ) ಕ್ರಿಯಾರ್ಥಕಾವ್ಯಯ
(ಸಿ) ಅವಧಾರಣಾರ್ಥಕಾವ್ಯಯ (ಡಿ) ಸಾಮಾನ್ಯಾವ್ಯಯ
೬.ಮನಸ್ಸಿನಲ್ಲಿ ಉಂಟಾಗುವ ಕೋಪ, ಹರ್ಷ, ದುಃಖ, ಮೆಚ್ಚುಗೆ, ಆಕ್ಷೇಪ, ತಿರಸ್ಕಾರ ಇತ್ಯಾದಿ ಭಾವಗಳನ್ನು ವ್ಯಕ್ತಪಡಿಸುವಾಗ ಅರ್ಥವಿಲ್ಲದ ಕೆಲವು ಪದಗಳನ್ನು ಬಳಸುತ್ತೇವೆ. ಅಂತಹ ಪದಗಳನ್ನು ಹೀಗೆಂದು ಕರೆಯುತ್ತಾರೆ.
(ಎ) ಅವಧಾರಣಾರ್ಥಕಾವ್ಯಯ (ಬಿ) ಕ್ರಿಯಾರ್ಥಕಾವ್ಯಯ
(ಸಿ) ಭಾವಸೂಚಕಾವ್ಯಯ (ಡಿ) ಸಾಮಾನ್ಯಾವ್ಯಯ
೭ ‘ಓಹೋ’ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆ;
(ಎ) ಸಾಮಾನ್ಯಾವ್ಯಯ (ಬಿ) ಭಾವಸೂಚಕಾವ್ಯಯ
(ಸಿ) ಸಂಬಂಧಾರ್ಥಕಾವ್ಯಯ (ಡಿ) ಅನುಕರಣಾವ್ಯಯ
೮. `ಕಿಲಕಿಲ’ ಎಂಬುದು ಅವ್ಯಯಗಳ ಈ ಗುಂಪಿಗೆ ಸೇರುತ್ತದೆ:
(ಎ) ಭಾವಸೂಚಕ (ಬಿ) ಸಾಮಾನ್ಯ
(ಸಿ) ಸಂಬಂಧಾರ್ಥಕ (ಡಿ) ಅನುಕರಣ
೯. ಈ ಕೆಳಗಿನ ಪದಗಳಲ್ಲಿ ಭಾವಸೂಚಕಾವ್ಯಯ ಪದ
(ಎ) ನೆಟ್ಟಗೆ (ಬಿ) ಅವನಂತೆ
(ಸಿ) ಅಯ್ಯೋ (ಡಿ) ಚುರುಚುರು
೧೦. ಕ್ರಿಯಾಪದದ ಸ್ಥಾನದಲ್ಲಿದ್ದು ವಾಕ್ಯದ ಅರ್ಥವನ್ನು ಪೂರ್ಣಗೊಳಿಸುವ ಅವ್ಯಯಗಳನ್ನು ಹೀಗೆಂದು ಕರೆಯಲಾಗಿದೆ.
(ಎ) ಅವಧಾರಣಾರ್ಥಕಾವ್ಯಯ (ಬಿ) ಕ್ರಿಯಾರ್ಥಕಾವ್ಯಯ
(ಸಿ) ಅನುಕರಣಾವ್ಯಯ (ಡಿ) ಸಾಮಾನ್ಯಾವ್ಯಯ
೧೧. ಅಹುದು, ಸಾಕು, ಅಲ್ಲ, ಹೌದು, ಬೇಡ, ಉಂಟು ಇತ್ಯಾದಿ ಪದಗಳು ಅವ್ಯಯದ ಈ ಗುಂಪಿಗೆ ಸೇರಿವೆ;
(ಎ) ಭಾವಸೂಚಕಾವ್ಯಯ (ಬಿ) ಅವಧಾರಣಾರ್ಥಕಾವ್ಯಯ
(ಸಿ) ಅನುಕರಣಾವ್ಯಯ (ಡಿ) ಕ್ರಿಯಾರ್ಥಕಾವ್ಯಯ
೧೨ ಅವನೇ, ಅದುವೇ, ನೀನೇ, ಅವಳೇ, ಅವರೇ ಇತ್ಯಾದಿ ಪದಗಳು ಅವ್ಯಯದ ಈ ಗುಂಪಿಗೆ ಸೇರಿವೆ;
(ಎ) ಕ್ರಿಯಾರ್ಥಕಾವ್ಯಯ (ಬಿ) ಅನುಕರಣಾವ್ಯಯ
(ಸಿ) ಅವಧಾರಣಾರ್ಥಕಾವ್ಯಯ (ಡಿ) ಭಾವಸೂಚಕಾವ್ಯಯ
೧೩. ‘ಸೊಗಸಾಗಿ’ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ;
(ಎ) ಸಾಮಾನ್ಯಾವ್ಯಯ (ಬಿ) ಭಾವಸೂಚಕಾವ್ಯಯ
(ಸಿ) ಅನುಕರಣಾವ್ಯಯ (ಡಿ) ಸಂಬಂಧಾರ್ಥಕಾವ್ಯಯ
೧೪. ಈ ಕೆಳಗಿನವುಗಳಲ್ಲಿ ಸಾಮಾನ್ಯಾವ್ಯಯಕ್ಕೆ ಉದಾಹರಣೆ
(ಎ) ಉಂಟು (ಬಿ) ತಟ್ಟನೆ
(ಸಿ) ಬೇಡ (ಡಿ) ಅವನೇ
೧೫. `ಹೌದು’ ಎಂಬುದು ಅವ್ಯಯಗಳಲ್ಲಿ ಈ ವಿಧವಾಗಿದೆ;
(ಎ) ಭಾವಸೂಚಕ (ಬಿ) ಸಾಮಾನ್ಯ
(ಸಿ) ಸಂಬಂಧಾರ್ಥಕ (ಡಿ) ಕ್ರಿಯಾರ್ಥಕ
೧೬.‘ಆದ್ದರಿಂದ’ ಪದವು ಅವ್ಯಯಕ್ಕೆ ಉದಾಹರಣೆಯಾಗಿದೆ;
(ಎ) ಸಾಮಾನ್ಯಾವ್ಯಯ (ಬಿ) ಭಾವಸೂಚಕಾವ್ಯಯ
(ಸಿ) ಸಂಬಂಧಾರ್ಥಕಾವ್ಯಯ (ಡಿ) ಅವಧಾರಣಾರ್ಥಕಾವ್ಯಯ
೧೭ ‘ಅಥವಾ’ ಎಂಬುದು ಈ ಅವ್ಯಯವಾಗಿದೆ;
(ಎ) ಅನುಕರಣಾವ್ಯಯ (ಬಿ) ಸಂಬಂಧಾರ್ಥಕ ಅವ್ಯಯ
(ಸಿ) ಸಾಮಾನ್ಯ ಅವ್ಯಯ (ಡಿ) ಭಾವಸೂಚಕ ಅವ್ಯಯ
೧೮ ‘ಅಬ್ಬಾ!’ ಎಂಬುದು ಈ ಅವ್ಯಯಕ್ಕೆ ಉದಾಹರಣೆ;
(ಎ) ಸಾಮಾನ್ಯ ಅವ್ಯಯ (ಬಿ) ಸಂಭಾವನಾರ್ಥಕ ಅವ್ಯಯ
(ಸಿ) ಅನುಕರಣಾವ್ಯಯ (ಡಿ) ಭಾವಸೂಚಕವ್ಯಯ
೧೯. ‘ದುರದುರನೆ’ ಈ ಪದದ ವ್ಯಾಕರಣ ವಿಶೇಷ;
(ಎ) ಜೋಡಿನುಡಿ (ಬಿ) ಅನುಕರಣಾವ್ಯಯ
(ಸಿ) ದ್ವಿರುಕ್ತಿ (ಡಿ) ನುಡಿಗಟ್ಟು
೨೦ ‘ಚಿಲಿಪಿಲಿ’ ಪದವು ಈ ಅವ್ಯಯಕ್ಕೆ ಉದಾಹರಣೆಯಾಗಿದೆ;
(ಎ) ಸಾಮಾನ್ಯಾವ್ಯಯ (ಬಿ) ಭಾವಸೂಚಕಾವ್ಯಯ
(ಸಿ) ಅನುಕರಣಾವ್ಯಯ (ಡಿ) ಸಂಬಂಧಾರ್ಥಕಾವ್ಯಯ
೨೧. ‘ಇದುವೇ’ ಪದವು ಅವ್ಯಯಕ್ಕೆ ಉದಾಹರಣೆಯಾಗಿದೆ;
(ಎ) ಸಾಮಾನ್ಯಾವ್ಯಯ (ಬಿ) ಭಾವಸೂಚಕಾವ್ಯಯ
(ಸಿ) ಸಂಬಂಧಾರ್ಥಕಾವ್ಯಯ (ಡಿ) ಅವಧಾರಣಾರ್ಥಕಾವ್ಯಯ
೨೨. ಹಲವು ವಸ್ತುಗಳಲ್ಲಿ ಒಂದನ್ನು ನಿಶ್ಚಯವಾಗಿ ಹೇಳುವ ಸಂದರ್ಭದಲ್ಲಿ ಬಳಸುವ ಅವ್ಯಯ ಇದಾಗಿದೆ.
(ಎ) ಕ್ರಿಯಾರ್ಥಕಾವ್ಯಯ (ಬಿ) ಸಾಮಾನ್ಯಾವ್ಯಯ
(ಸಿ) ಅವಧಾರಣಾರ್ಥಕಾವ್ಯಯ (ಡಿ) ಅನುಕರಣಾವ್ಯಯ
೨೩. ‘ಅವನೇ ಹಾಡಿದನು.’ ಇಲ್ಲಿ ಗೆರೆ ಎಳೆದಿರುವ ಪದವು ಅವ್ಯಯದ ಈ ವಿಧಕ್ಕೆ ಸೇರಿದೆ.
(ಎ) ಸಾಮಾನ್ಯಾವ್ಯಯ (ಬಿ) ಕ್ರಿಯಾರ್ಥಕಾವ್ಯಯ
(ಸಿ) ಅವಧಾರಣಾರ್ಥಕಾವ್ಯಯ (ಡಿ) ಅನುಕರಣಾವ್ಯಯ
೨೪. ನಾಮಪದ, ಕ್ರಿಯಾಪದಗಳಂತೆ ಲಿಂಗ, ವಚನ, ವಿಭಕ್ತಿಗಳಿಂದ ರೂಪಭೇದವನ್ನು ಹೊಂದದೆ ಏಕರೂಪವಾಗಿರುವ ಪದಗಳನ್ನು ಹೀಗೆಂದು ಕರೆಯಲಾಗಿದೆ.
(ಎ) ಪ್ರತ್ಯಯ (ಬಿ) ಕ್ರಿಯಾಪದ
(ಸಿ) ಅವ್ಯಯ (ಡಿ) ಸರ್ವನಾಮ
೨೫. ನಿರ್ದಿಷ್ಟ ಅರ್ಥವಿಲ್ಲದ ಧ್ವನಿ ವಿಶೇಷಣಗಳನ್ನು ತಾನು ಕಿವಿಯಿಂದ ಕೇಳಿದಂತೆ ಅನುಕರಣೆ ಮಾಡಿ ಹೇಳುವ ಪದಗಳನ್ನು ಹೀಗೆಂದು ಕರೆಯುತ್ತಾರೆ.
(ಎ) ಅವಧಾರಣಾರ್ಥಕಾವ್ಯಯ (ಬಿ) ಕ್ರಿಯಾರ್ಥಕಾವ್ಯಯ
(ಸಿ) ಅನುಕರಣಾವ್ಯಯ (ಡಿ) ಸಾಮಾನ್ಯಾವ್ಯಯ
೨೬ ಯಾವುದಾದರೊಂದು ಕ್ರಿಯೆ ನಡೆದ ರೀತಿಯನ್ನು ಹೇಳುವಂತಹ ಅವ್ಯಯಗಳನ್ನು ಹೀಗೆನ್ನುವರು.
(ಎ) ಅವಧಾರಣಾರ್ಥಕಾವ್ಯಯ (ಬಿ) ಅನುಕರಣಾವ್ಯಯ
(ಸಿ) ಸಾಮಾನ್ಯಾವ್ಯಯ (ಡಿ) ಕ್ರಿಯಾರ್ಥಕಾವ್ಯಯ
೨೭. ಬೇಗನೆ, ಮೆಲ್ಲಗೆ, ಸುಮ್ಮನೆ, ನೆಟ್ಟನೆ, ಹಾಗೆ, ಅಂತು, ಬೇರೆ, ಬಳಿಕ, ಕೂಡಲೆ, ಚೆನ್ನಾಗಿ ಇತ್ಯಾದಿ ಅವ್ಯಯಗಳನ್ನುಹೀಗೆನ್ನುವರು.
(ಎ) ಅವಧಾರಣಾರ್ಥಕಾವ್ಯಯ (ಬಿ) ಅನುಕರಣಾವ್ಯಯ
(ಸಿ) ಸಾಮಾನ್ಯಾವ್ಯಯ (ಡಿ) ಕ್ರಿಯಾರ್ಥಕಾವ್ಯಯ
೨೮ ಚಟಚಟ, ಕರಕರ, ಚುರುಚುರು, ಧಗಧಗ, ರೊಯ್ಯನೆ, ಸುಯ್ಯನೆ, ಘುಳುಘುಳು, ದಡದಡ, ಇತ್ಯಾದಿ ಪದಗಳು ಈ ಅವ್ಯಯದ ಗುಂಪಿಗೆ ಸೇರುತ್ತವೆ;
(ಎ) ಅವಧಾರಣಾರ್ಥಕಾವ್ಯಯ (ಬಿ) ಕ್ರಿಯಾರ್ಥಕಾವ್ಯಯ
(ಸಿ) ಸಾಮಾನ್ಯಾವ್ಯಯ (ಡಿ) ಅನುಕರಣಾವ್ಯಯ
೨೯ ಆಹಾ! ಭಳಿರೆ! ಅಯ್ಯೋ! ಹೋ! ಅಃ! ಆಃ ಓ ಇತ್ಯಾದಿ ಪದಗಳು ಅವ್ಯಯದ ಈ ಗುಂಪಿಗೆ ಸೇರಿವೆ;
(ಎ) ಭಾವಸೂಚಕಾವ್ಯಯ (ಬಿ) ಅವಧಾರಣಾರ್ಥಕಾವ್ಯಯ
(ಸಿ) ಅನುಕರಣಾವ್ಯಯ ಲ ಕ್ರಿಯಾರ್ಥಕಾವ್ಯಯ
೩೦. ‘ಸಾಕು’ ಪದವು ಅವ್ಯಯಕ್ಕೆ ಉದಾಹರಣೆಯಾಗಿದೆ;
(ಎ) ಸಾಮಾನ್ಯಾವ್ಯಯ (ಬಿ) ಭಾವಸೂಚಕಾವ್ಯಯ
(ಸಿ) ಸಂಬಂಧಾರ್ಥಕಾವ್ಯಯ (ಡಿ) ಅವಧಾರಣಾರ್ಥಕಾವ್ಯಯ