ಹತ್ತನೆಯ ತರಗತಿ ಪ್ರಥಮಭಾಷೆ ಕನ್ನಡ
ಹಕ್ಕಿ ಹಾರುತ್ತಿದೆ ನೋಡಿದಿರಾ ಘಟಕ ಪರೀಕ್ಷೆ 2024-25
( 2015 ರಿಂದ 2024 ರವರೆಗಿನ ಹಳೆಯ ಪ್ರಶ್ನೆಪತ್ರಿಕೆಗಳನ್ನು ಆಧರಿಸಿದೆ.)
ಹತ್ತನೆಯ ತರಗತಿ ಪ್ರಥಮಭಾಷೆ ಕನ್ನಡ ಅಂಕಗಳು : 40
I ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. 1X 7 = 7
1. ಹಕ್ಕಿ ಯಾವ ವೇಗದಲ್ಲಿ ಹಾರುತ್ತಿದೆ?
2. ಹಕ್ಕಿಯ ಗರಿಯಲ್ಲಿ ಯಾವ ಬಣ್ಣಗಳಿವೆ? 2018 RF 2020 RF
3. ಹಕ್ಕಿಯ ಕಣ್ಣುಗಳು ಯಾವುವು? 2015RF 2023RF
4. ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ? 2015 RF 2017 RR
ಅಥವಾ
ಹಕ್ಕಿ ಹಾರುತ್ತಿದೆ ನೋಡಿದಿರಾ ಪದ್ಯದಲ್ಲಿ ಹಕ್ಕಿ ಕುಕ್ಕಿರುವುದು ______________ 2021 RF
ಎ ಮನ್ವಂತರ ಭಾಗ್ಯವನ್ನು ಬಿ ಬೆಳ್ಳಿಯ ಹಳ್ಳಿಯ ಮೇರೆಯನ್ನು
ಸಿ ಹೊಸಗಾಲದ ಹಸುಮಕ್ಕಳನ್ನು ಡಿ ಸಾರ್ವಭೌಮರ ನೆತ್ತಿಯನ್ನು
5. ಹಕ್ಕಿ ಯಾರನ್ನು ಹರಸಿದೆ?
ಅಥವಾ
ಹಕ್ಕಿ ಹಾರುತ್ತಿದೆ ನೋಡಿದಿರಾ ಪದ್ಯದಲ್ಲಿ ಹಕ್ಕಿ ಹರಸಿದ್ದು___________ 2021 RR
ಎ ಸಾರ್ವಭೌಮರನ್ನು ಬಿ ಹೊಸಗಾಲದ ಹಸುಮಕ್ಕಳನ್ನು
ಸಿ ಮಂಗಳ ಲೋಕದ ಅಂಗಳಕೇರಿದವರನ್ನು ಡಿ ಸೂರ್ಯಚಂದ್ರರನ್ನು
6. ಹಕ್ಕಿಯು ಯಾವುದರ ಸಂಕೇತವಾಗಿದೆ? 2018 RR
ಅಥವಾ
ಕವಿ ಬೇಂದ್ರೆಯವರ ಪ್ರಕಾರ ಹಕ್ಕಿಯು ಯಾವುದರ ಸಂಕೇತವಾಗಿದೆ ? 2019 RR
7. ಹಕ್ಕಿಯ ಚುಂಚಗಳು ಎಲ್ಲಿಯವರೆಗೂ ಚಾಚಿವೆ?
II ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ. 2X3 =6
1.ಹಕ್ಕಿಯ ಹಾರಾಟವನ್ನು ಆಕಾಶಕ್ಕೆ ಹೇಗೆ ಹೋಲಿಸಿದ್ದಾರೆ? 2023 RR
2.ಹೊಸಗಾಲದ ಹಸುಮಕ್ಕಳನ್ನು ಹಕ್ಕಿ ಹೇಗೆ ಹರಸಿದೆ?
3 ಹಕ್ಕಿಯು ಯಾವ ಮೇರೆ ಮೀರಿ, ನೀರನು ಹೀರಿದೆ?
III ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ. 3X4=12
1. “ಸಾರ್ವಭೌಮರಾ ನೆತ್ತಿಯ ಕುಕ್ಕಿ” 2015 RF 2018 RF
2. “ಹೊಸಗಾಲದ ಹಸುಮಕ್ಕಳ ಹರಸಿ” 2017 RR 2019 RR
3.“ಮಂಗಳ ಲೋಕದ ಅಂಗಳಕೇರಿ” 2018 RR 2023 RR
4 ತೇಲಿಸಿ ಮುಳಿಗಿಸಿ ಖಂಡಖಂಡಗಳ 2020 RF 2023 RR
IV ಕೃತಿಕಾರರ ಪರಿಚಯ 3X1=3
ದ ರಾ ಬೇಂದ್ರೆ 2015 RR
V ಪದ್ಯಪೂರ್ಣಗೊಳಿಸಿ 4X1=4
1. ನೀಲ ಮೇಘ ಮಂಡಲ............................... 20160 RF 2016 RR 2019 RF 2020 RR 2022 RF
......................................................................
......................................................................
................................................................
ಹಕ್ಕಿ ಹಾರುತಿದೆ ನೋಡಿದಿರಾ?
ಅಥವಾ
2. ಯುಗ ಯುಗಗಳ .........................................................
......................................................................................
.......................................................................................
.......................................................................................
ಹಕ್ಕಿ ಹಾರುತಿದೆ ನೋಡಿದಿರಾ?
VI ಸಾರಾಂಶ ಬರೆಯಿರಿ 4X1=4
ಯುಗ-ಯುಗಗಳ ಹಣೆ ಬರೆಹವ ಒರಸಿ 2017 RF
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ?
ಅಥವಾ
ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ 2022 RR
ಮಂಡಲ-ಗಿAಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖAಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ?
VII ಕೊಟ್ಟಿರುವ ಪ್ರಶ್ನೆಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1 ಹಕ್ಕಿಯನ್ನು ಕಾಲಗತಿಗೆ ಹೋಲಿಸುತ್ತಾ ಕವಿ ಹೇಳಿರುವ ಮಾತುಗಳಾವುವು? 4X1=4