ರಾಷ್ಟ್ರೀಯ ಭಾವೈಕ್ಯ
ಪೀಠಿಕೆ:- ಭಾರತವು ಅನೇಕ ಜನಾಂಗಗಳು, ಪಂಗಡಗಳು ಇರುವಂತಹ ಒಂದು ವಿಶಾಲ ರಾಷ್ಟç. ಇಲ್ಲಿ “ವಿವಿಧ ಭಾಷೆ, ಸಂಸ್ಕೃತಿ, ಧರ್ಮ, ಜಾತಿಗಳ ಜನರು ತಮ್ಮ ವಿವಿಧತೆಯನ್ನು ಮರೆತು ನಾವೆಲ್ಲರೂ ಭಾರತೀಯರು ಎಂಬ ರಾಷ್ಟ್ರೀಯ ಮನೋಭಾವನೆಯನ್ನು ಹೊಂದಿರುವುದೇ ರಾಷ್ಟ್ರೀಯ ಭಾವೈಕ್ಯತೆ”. ಭಾರತವು ಪ್ರಜಾಪ್ರಭುತ್ವ ತಳಹದಿಯ ಮೇಲೆ ರೂಪಿತವಾಗಿರುವ ಒಂದು ಜಾತ್ಯತೀತ ರಾಷ್ಟçವಾಗಿದ್ದು ಪ್ರತಿಯೊಂದು ಧರ್ಮದವರು ತಮ್ಮ ಸಂಪ್ರದಾಯ, ಪದ್ಧತಿಗಳನ್ನು ಆಚರಿಸಲು ಅವಕಾಶವಿದೆ.
ವಿಷಯ ನಿರೂಪಣೆ:- ಭಾರತವು ವಿವಿಧ ಧರ್ಮ, ಭಾಷೆ, ಬುಡಕಟ್ಟು, ಜನಾಂಗಗಳನ್ನು ಹೊಂದಿದ್ದು, ದೇಶದ ಯಾವುದೇ ಮೂಲೆಗೆ ಹೋದರೂ ಅಲ್ಲಿ ವೈವಿಧ್ಯತೆಯನ್ನು ಕಾಣುತ್ತೇವೆ. ಏಕೆಂದರೆ ಭಾರತೀಯ ನಾಗರಿಕತೆಯು ಯಾವಾಗಲೂ ಧಾರ್ಮಿಕ ಹಾಗೂ ನೈತಿಕ ತಳಹದಿಯ ಮೇಲೆ ನಿಂತಿದೆ. ದೇಶದ ಎಲ್ಲ ಭಾಗಗಳಲ್ಲಿಯೂ, ಸಾಂಸ್ಕೃತಿಕ ಮತ್ತು ಜೀವನ ಮಾರ್ಗದ ಒಗ್ಗಟ್ಟು ಹಾಗೂ ದೃಷ್ಟಿಕೋನವು ಧರ್ಮ, ನಂಬಿಕೆ ಮತ್ತು ಆಚರಣೆಗಳಲ್ಲಿ ವಿಶಾಲ ವೈವಿಧ್ಯತೆಯನ್ನು ಹೊಂದಿದೆ. ಆದರೂ ನಮ್ಮಲ್ಲಿ ನಾವು ಭಾರತೀಯರು ಎಂಬ ಬಲವಾದ ಒಗ್ಗಟ್ಟಿನ ಮಂತ್ರವಿದೆ. ನಮ್ಮ ದೇಶದ ರಾಷ್ಟçಗೀತೆ, ರಾಷ್ಟ್ರಧ್ವಜ, ರಾಷ್ಟçಮುದ್ರೆ ಇವು ನಮ್ಮ ಏಕತೆಯ ಸಂಕೇತಗಳಾಗಿವೆ. ಅಲ್ಲದೇ ‘ವಂದೇಮಾತರಂ, ಸಾರೇ ಜಹಾಂಸೇ ಅಚ್ಚಾ, ಜನಗಣಮನದಂತಹ ದೇಶ ಭಕ್ತಿಗೀತೆಗಳು ನಮ್ಮಲ್ಲಿ ದೇಶಪ್ರೇಮ, ದೇಶಾಭಿಮಾನವನ್ನು ಹುಟ್ಟಿಸುತ್ತವೆ. ಇಡೀ ದೇಶವೇ ವೈವಿಧ್ಯಮಯವಾದ ಸಾಂಸ್ಕೃತಿಕ ಆಚರಣೆಯಲ್ಲಿರುವಾಗ ನಾವು ಒಂದೇ ಮನೆಯವರಂತೆ ಕೂಡಿ ಬಾಳುತ್ತಿರುವುದು ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ಹೇಳಬಹುದು.
ಉಪಸಂಹಾರ:- ಇತ್ತೀಚೆಗೆ ಭಾರತೀಯ ಸಂಸ್ಕೃತಿಯು ಪ್ರಗತಿ ಹಾಗೂ ಬದಲಾವಣೆಯ ಹಂತದಲ್ಲಿದೆ. ಭಾರತೀಯರಾದ ನಾವು ನಮ್ಮ ನೆರೆಹೊರೆಯ ರಾಷ್ಟçಗಳೊಂದಿಗೆ ಪ್ರೀತಿ ಹಾಗೂ ಸೌಹಾರ್ದತೆಯಿಂದ ನಡೆದುಕೊಳ್ಳುತ್ತಾ, ನಮ್ಮ ದೇಶದ ಏಕತೆಯನ್ನು ಎತ್ತಿ ಹಿಡಿದಿದ್ದೇವೆ.