ಇರುಳು ಕಂಡ ಬಾವಿಗೆ ಹಗಲು ಬಿದ್ದಂತೆ.
ಗಾದೆಗಳು ವೇದಗಳಿಗೆ ಸಮ. ವೇದಗಳು ಸುಳ್ಳಾದರೂ ಗಾದೆಗಳು ಸುಳ್ಳಾಗದು. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳಾಗಿವೆ. ಕನ್ನಡದ ಹಲವಾರು ಗಾದೆಗಳಲ್ಲಿ ಇರುಳು ಕಂಡ ಬಾವಿಗೆ ಹಗಲು ಬಿದ್ದಂತೆ ಎಂಬುದು ಒಂದಾಗಿದೆ.
ಹಗಲು ಕಂಡ ಬಾವಿಗೆ ರಾತ್ರಿ ಹೋಗಿ ಬೀಳುವುದು ಎಂದರೆ ತಿಳಿದೂ ತಿಳಿದೂ ತಪ್ಪು ಮಾಡಬಾರದು. ಜ್ಞಾನಿಗಳಾದರೂ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು, ಯಾವುದು ಸರಿ, ಯಾವುದು ತಪ್ಪು ಈ ಕೆಲಸವನ್ನು ಮಾಡಿದರೆ ಅದರಿಂದ ಆಗುವ ಫಲಾಫಲಗಳೇನು? ದುಷ್ಪರಿಣಾಮಗಳೇನು? ಎಂದು ತಿಳಿದಿದ್ದರೂ ಕೆಲವೊಮ್ಮೆ ನಾವೇ ಆ ಕೆಟ್ಟ ಕೆಲಸ ಮಾಡಲು ಹೋಗಿ ಅಪಾಯಕ್ಕೆ ಒಳಗಾಗುತ್ತೇವೆ ಎಂಬುದನ್ನು ತಿಳಿಸುವುದೇ ಈ ಗಾದೆ ಮಾತಿನ ಅರ್ಥವಾಗಿದೆ.