ಹಿತ್ತಲ ಗಿಡ ಮದ್ದಲ್ಲ.
ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು ಇವುಗಳಿಂದ ಜೀವನದ ಮೌಲ್ಯ ಹೆಚ್ಚುತ್ತದೆ. ಆದ್ದರಿಂದಲೇ ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ‘ಗಾದೆಗಳನ್ನು ವೇದಗಳಿಗೆ ಸಮಾನ’ ಎಂದು ಹೇಳುವರು. ಅಂತಹ ಹಲವು ಪ್ರಸಿದ್ಧ ಗಾದೆಗಳಲ್ಲಿ ‘ಹಿತ್ತಲ ಗಿಡ ಮದ್ದಲ್ಲ’ ಎಂಬ ಗಾದೆಯೂ ಒಂದಾಗಿದೆ.
ಯಾವುದು ನಮ್ಮ ಸನಿಹದಲ್ಲಿ ಇರುತ್ತದಯೋ ಅದರ ಮೌಲ್ಯ ನಮಗೆ ತಿಳಿಯುವುದಿಲ್ಲ ಎಂಬುದನ್ನು ಈ ಗಾದೆ ತಿಳಿಸುತ್ತದೆ. ನಮ್ಮ ರೋಗವನ್ನು ವಾಸಿ ಮಾಡಿಕೊಳ್ಳುವ ಮದ್ದಿನ ಗಿಡ ನಮ್ಮ ಮನೆಯ ಹಿತ್ತಲಿನಲ್ಲೇ ಇದ್ದರೂ, ನಾವು ಅದನ್ನು ಬಳಸದೇ ಬೇರೆ ಕಡೆ ಹೋಗಿ ಮದ್ದನ್ನು ತರುತ್ತವೆ. ಅದೇ ರೀತಿಯಲ್ಲಿ ನಮ್ಮ ಸಮಸ್ಯೆಗಳಿಗೆ, ಕಷ್ಟಗಳಿಗೆ ನಮ್ಮ ಮನೆಯಲ್ಲಿ ಇರುವವರೇ ಅಥವಾ ಹತ್ತಿರದವರೇ ಪರಿಹಾರÀಗಳನ್ನು ನೀಡಲು ಸಮರ್ಥರಿದ್ದರೂ ಅವರನ್ನು ಕಡೆಗಣಿಸಿ, ನಾವು ನಂಬದೇ ಬೇರೆಯವರ ಬಳಿಯಲ್ಲಿ ಪರಿಹಾರಕ್ಕಾಗಿ ಹಾತೊರೆಯುತ್ತೇವೆ. ಅಂದರೆ ನಮ್ಮ ಹತ್ತಿರದವರ ಮೇಲೆಯೇ ನಮಗೆ ನಂಬಿಕೆ ಇಲ್ಲ ಅಥವಾ ನಮ್ಮವರನ್ನೇ ನಾವು ನಂಬುವುದಿಲ್ಲ ಎಂಬುದು ಈ ಗಾದೆಯ ಒಳಾರ್ಥವಾಗಿದೆ.