ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು?
ಗಾದೆಗಳು ವೇದಗಳಿಗೆ ಸಮ. ವೇದಗಳು ಸುಳ್ಳಾದರೂ ಗಾದೆಗಳು ಸುಳ್ಳಾಗದು. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳಾಗಿವೆ. ಕನ್ನಡದ ಹಲವಾರು ಗಾದೆಗಳಲ್ಲಿ ‘ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು?’ ಎಂಬುದು ಒಂದಾಗಿದೆ.
ಸಮಯದ ಮಹತ್ವವನ್ನು ಈ ಮಾತಿನಲ್ಲಿ ವಿವರಿಸಲಾಗಿದೆ. ಗತಿಸಿ ಹೋದ ಕಾಲಕ್ಕೆ ಚಿಂತಿಸಿದರೆ ಅದು ಪ್ರಯೋಜನವಿಲ್ಲ. ಹೋದ ಸಮಯ ಮರಳಿ ದೊರೆಯಲಾರದು. ಆದ್ದರಿಂದ ಸಮಯವು ಜಾರುವ ಮುನ್ನ ಚಿಂತಿಸಬೇಕು. ಅದರ ಸದುಪಯೋಗವನ್ನು ಪಡೆಯಬೇಕೆನ್ನುವ ಸೂಚನೆಯನ್ನು ಇಲ್ಲಿ ಕಾಣಬಹುದಾಗಿದೆ. ಕಾಲವು ಅತ್ಯಂತ ಅಮೂಲ್ಯವಾದುದು. ಚಿನ್ನ, ಬೆಳ್ಳಿ, ವಜ್ರ, ಪ್ಲಾಟಿನಂಗಿAತ ಸಮಯ ಬೆಲೆ ಬಾಳುವುದು. ಗಾಳಿ ಬಂದಾಗ ತೂರಿಕೋ ಎನ್ನುವ ಹಾಗೆ ಸಮಯ ಸಿಕ್ಕಾಗ ಕಾರ್ಯವನ್ನು ಸಾಧಿಸಿಕೊಳ್ಳಬೇಕು. ರೈಲು ಹೋದ ಮೇಲೆ ಟಿಕೆಟ್ ತೆಗೆದುಕೊಳ್ಳುವ ಹಾಗೆ ಆಗಬಾರದು. ಸಮಯವನ್ನು ವ್ಯರ್ಥ ಮಾಡಬಾರದು ಎಂಬುದು ಈ ಗಾದೆಯಿಂದ ತಿಳಿದು ಬರುತ್ತದೆ.