ಸತ್ಯಕ್ಕೆ ಸಾವಿಲ್ಲ; ಸುಳ್ಳಿಗೆ ಸುಖವಿಲ್ಲ.
ಗಾದೆಗಳು ವೇದಗಳಿಗೆ ಸಮಾನ ಎನ್ನುತ್ತಾರೆ. ಗಾದೆ ವೇದಕ್ಕಿಂತ ಒಂದುಪಟ್ಟು ಮಿಗಿಲಾಗಿರುವುದರಿಂದ
‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಎಂಬುವ ನುಡಿ ಹುಟ್ಟಿತು. ಹಿರಿಯರ ಅನುಭವದ ನುಡಿಮುತ್ತುಗಳೇ ಈ ಗಾದೆಗಳು. ಬಿಂದುವಿನAತಹ ಗಾದೆಯಲ್ಲಿ ಸಿಂಧುವಿನAತಹ ವಿಶಾಲಾರ್ಥವು ಅಡಗಿರುತ್ತದೆ. ಅಂತಹ ಮಹತ್ತ÷್ವದ ಗಾದೆಗಳಲ್ಲಿ ಸತ್ಯಕ್ಕೆ ಸಾವಿಲ್ಲ; ಸುಳ್ಳಿಗೆ ಸುಖವಿಲ್ಲ. ಎಂಬ ಗಾದೆಯೂ ಸಹ ಒಂದಾಗಿದೆ.
ದೈನಂದಿನ ವ್ಯವಹಾರದಲ್ಲಿ ಮನುಷ್ಯನು ಹಲವಾರು ಸಂಗತಿಗಳನ್ನು ಹೇಳುತ್ತಲೇ ಇರುತ್ತಾನೆ. ಇದ್ದಂತೆ ಹೇಳಿದರೆ ಸತ್ಯ; ಅದನ್ನೇ ತಿರುಚಿ ಹೇಳಿದರೆ ಸುಳ್ಳು ಎನಿಸುತ್ತ ದೆ. ಸುಳ್ಳು ಕ್ಷಣಿಕ ಸುಖವನ್ನು ನೀಡಿದರೂ ಮುಂದೆ ಅದು ಶಾಶ್ವತವಾದ ಅಪಾಯವನ್ನುಂಟು ಮಾಡುತ್ತದೆ. ಒಂದು ಸುಳ್ಳು ಹೇಳಿದರೆ ಆ ಸುಳ್ಳನ್ನು ಸತ್ಯ ಎಂದು ನಂಬಿಸಲು ಸುಳ್ಳಿನ ಸರಮಾಲೆಯನ್ನೇ ಹೆಣೆಯಬೇಕಾಗುತ್ತದೆ. ಮುಂದೊAದಿನ ಸತ್ಯವು ತಿಳಿದಾಗ ಸುಳ್ಳು ಹೇಳಿದವನು ಅಪಖ್ಯಾತಿಗೆ ಒಳಗಾಗಬೇಕಾಗುತ್ತದೆ. ಆದರೆ ಸತ್ಯ ಆ ರೀತಿಯಲ್ಲ. ಒಮ್ಮೆ ಹೇಳಿದ ಸತ್ಯದ ಮಾತು ಎಂದೆAದಿಗೂ ಸತ್ಯವಾಗಿಯೇ ಇರುತ್ತದೆ. ಇದನ್ನು ನಂಬಿಸಲು ಬೇರೆ ಮಾತುಗಳನ್ನು ಹೇಳುವ ಆವಶ್ಯಕತೆ ಇರುವುದಿಲ್ಲ.
ಸತ್ಯವಂತನಿಗೆ ಸಮಾಜದಲ್ಲಿ ಮನ್ನಣೆ ಸಿಗುತ್ತದೆ. ಅಸತ್ಯವಂತನನ್ನುö ಸಮಾಜ ತಿರಸ್ಕರಿಸುತ್ತದೆ. ಇದಕ್ಕೆ ‘ವೃಕ್ಷಸಾಕ್ಷಿ’ ಎಂಬ ಪಂಚತAತ್ರದ ಕಥೆಯ ಪಾತ್ರಗಳೇ ಉದಾಹರಣೆ.