ದೂರದ ಬೆಟ್ಟ ನುಣ್ಣಗೆ.
ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು ಇವುಗಳಿಂದ ಜೀವನದ ಮೌಲ್ಯ ಹೆಚ್ಚುತ್ತದೆ. ಆದ್ದರಿಂದಲೇ ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ‘ಗಾದೆಗಳನ್ನು ವೇದಗಳಿಗೆ ಸಮಾನ’ ಎಂದು ಹೇಳುವರು. ಅಂತಹ ಹಲವು ಪ್ರಸಿದ್ಧ ಗಾದೆಗಳಲ್ಲಿ ‘ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಒಂದಾಗಿದೆ.
ಬೆಟ್ಟವನ್ನು ದೂರದಿಂದ ನೋಡಿದಾಗ ಎತ್ತರವಾದ ಮರಗಳು, ಹಸಿರು ತಪ್ಪಲುಗಳು ಕಣ್ಣಿಗೆ ತಂಪನ್ನು ಎರೆಯುತ್ತದೆ. ಅದೇ ಹತ್ತಿರದಿಂದ ನೋಡಿದಾಗ ಬೆಟ್ಟದ ತುಂಬೆಲ್ಲಾ ಕಲ್ಲು-ಮುಳ್ಳುಗಳಿಂದ ಕೂಡಿದ್ದು ನಡೆಯಲು ಅಸಾಧ್ಯವಾಗುತ್ತದೆ. ಅದೇ ರೀತಿ ಸಂಬAಧ ದೂರದಿಂದ ಚೆನ್ನಾಗಿದ್ದು, ನೋಡುವವರಿಗೆ ಚೆನ್ನಾಗಿದ್ದಾರೆಂದೆನಿಸುತ್ತದೆ. ನಾವು ಹತ್ತಿರವಾದಂತೆಯೇ ದುರ್ಗುಣಗಳು, ಅನೇಕ ದೋಷಗಳು ಕಾಣಿಸುತ್ತವೆ. ಆದ್ದರಿಂದ ಹತ್ತಿರದಿಂದಲೇ ಸೂಕ್ಷö್ಮವಾಗಿ ಗಮನಿಸಿ ಸಂಬAಧವನ್ನು ಬೆಳೆಸಿಕೊಳ್ಳಬೇಕೆಂದು ಈ ಗಾದೆ ಸೂಚಿಸುತ್ತದೆ.