ಆರೋಗ್ಯವೇ ಭಾಗ್ಯ.
ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು. ಇವುಗಳಿಂದ ಜೀವನದ ಮೌಲ್ಯ ಹೆಚ್ಚುತ್ತದೆ. ಆದ್ದರಿಂದಲೇ ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ‘ಗಾದೆಗಳನ್ನು ವೇದಗಳಿಗೆ ಸಮಾನ’ ಎಂದು ಹೇಳುವರು. ಅಂತಹ ಹಲವು ಪ್ರಸಿದ್ಧ ಗಾದೆಗಳಲ್ಲಿ ‘ಆರೋಗ್ಯವೇ ಭಾಗ್ಯ’ ಎಂಬ ಗಾದೆಯೂ ಒಂದಾಗಿದೆ.
ಮನುಷ್ಯ ನೆಮ್ಮದಿಯಿಂದ ಬಾಳಬೇಕು. ಆನಂದದಿAದ ಬದುಕಬೇಕು. ಅವನಿಗೆ ಅಂತಹ ನೆಮ್ಮದಿ-ಆನಂದಗಳನ್ನು ಉತ್ತಮ ಆರೋಗ್ಯವು ಮಾತ್ರ ನೀಡುತ್ತದೆ. ಆರೋಗ್ಯವೆಂದರೆ ರೋಗರುಜಿನಗಳಿಂದ ಮುಕ್ತವಾಗಿರುವ ದೇಹ. ನಮ್ಮ ದೇಹವನ್ನೂ ಸಹ ಪ್ರತಿದಿನವೂ ಶುದ್ಧಗೊಳಿಸಬೇಕು. ಶುದ್ಧವಾದ ನೀರನ್ನು ಕುಡಿಯಬೇಕು. ಬೀದಿಯಲ್ಲಿ ಮಾರುವ ಆಹಾರ ಪದಾರ್ಥವನ್ನು ತಿನ್ನಬಾರದು. ಸಮತೋಲನ ಆಹಾರವನ್ನು ಸೇವಿಸಬೇಕು. ನಾವು ವಾಸಿಸುವ ಸ್ಥಳವು ಗಾಳಿಯ ಸಂಚಾರಕ್ಕೆ ಯೋಗ್ಯವಾಗಿರಬೇಕು. ಕಟ್ಟಡಗಳೊಳಗೆ ಸರ್ಯನ ಬೆಳಕು ಬೀಳುವಂತಿರಬೇಕು. ಆಗ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆದ್ದರಿಂದ ನಮ್ಮ ಆರೋಗ್ಯವೇ ನಿಜವಾದ ಭಾಗ್ಯವೆಂದು ಹೇಳಲಾಗಿದೆ.