ಕೊಟ್ಟಿದ್ದು ತನಗೆ; ಬಚ್ಚಿಟ್ಟಿದ್ದು ಪರರಿಗೆ.
ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು. ಇವುಗಳಿಂದ ಜೀವನದ ಮೌಲ್ಯ ಹೆಚ್ಚುತ್ತದೆ. ಆದ್ದರಿಂದಲೇ ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ‘ಗಾದೆಗಳನ್ನು ವೇದಗಳಿಗೆ ಸಮಾನ’ ಎಂದು ಹೇಳುವರು. ಅಂತಹ ಹಲವು ಪ್ರಸಿದ್ಧ ಗಾದೆಗಳಲ್ಲಿ ‘ಕೊಟ್ಟಿದ್ದು ತನಗೆ; ಬಚ್ಚಿಟ್ಟಿದ್ದು ಪರರಿಗೆ’ ಎಂಬ ಗಾದೆಯೂ ಒಂದಾಗಿದೆ.
ತಾನು ಮಾಡಿದ ದಾನ ಯಾವತ್ತಿದ್ದರೂ ತನ್ನನ್ನು ಕಾಯುತ್ತದೆ. ತನಗೆ ಕಷ್ಟ ಬಂದಾಗ ಬೇರೆಯವರು ನನಗೂ ಸಹಾಯ ಮಾಡುತ್ತಾರೆ, ಎಂಬ ನಂಬಿಕೆ ಇರಬೇಕು. ದಾನ ಮಾಡದೆ ಎಲ್ಲ ಸಂಪತ್ತನ್ನು ಬಚ್ಚಿಟ್ಟರೆ ಅದು ಬೇರೆಯವರ ಪಾಲಾಗುವುದು ಖಂಡಿತ. ಆದ್ದರಿಂದ “ಪರೋಪಕಾರಾರ್ಥಂ ಇದಂ ಶರೀರಂ” ಎಂಬAತೆ ತನ್ನ ಸಂಪತ್ತಿನಲ್ಲಿ ಸ್ವಲ್ಪ ಭಾಗವನ್ನಾದರೂ ದಾನ ಮಾಡಬೇಕು ಎಂಬುದು ಈ ಗಾದೆಯ ಅರ್ಥವಾಗಿದ್ದು, ದಾನದ ಶ್ರೇಷ್ಠತೆಯನ್ನು ತಿಳಿಸುತ್ತದೆ.