ಮಾತೇ ಮುತ್ತು; ಮಾತೇ ಮೃತ್ಯು:
ಗಾದೆಯ ವೈಶಿಷ್ಠ್ಯ ವನ್ನು ವಿವರಿಸುತ್ತದೆ. ಅಂತಹ ಗಾದೆಗಳಲ್ಲಿ ಒಂದಾದದ್ದು, ‘ಮಾತೇ ಮುತ್ತು: ಮಾತೇ
ಮೃತ್ಯು’.
ಈ ಗಾದೆಯು ಮಾತಿನ ಮಹತ್ತ್ವವನ್ನು ತಿಳಿಸುತ್ತದೆ. ಮಾತಿನ ಪರಿಣಾಮವನ್ನು ವಿವರಿಸುತ್ತದೆ
.
ಮಾತೆನ್ನುವುದು ಮಾನವನಿಗೆ ಲಭಿಸಿದ ಒಂದು ನಿಸರ್ಗದತ್ತವಾದ ಶಕ್ತಿ. ‘ಮಾತೆಂಬುದು ಜ್ಯೋತಿರ್ಲಿಂಗ’, ‘ಮಾತೇ ಮಾಣಿಕ್ಯ’ ಎನ್ನುವ ಹೇಳಿಕೆಗಳೂ ಇವೆ. ಮಾತುಗಳ ಮೂಲಕ ಮನುಷ್ಯ ತನ್ನ ಆಂತರಿಕ ಭಾವನೆಗಳನ್ನು ಹೊರಹಾಕುತ್ತಾನೆ, ವಿಚಾರ ವಿನಿಮಯ ಮಾಡಿಕೊಳ್ಳುತ್ತಾನೆ. ಹೀಗಾಗಿ ಮಾತು ಮನುಷ್ಯನ ಒಂದು ಮುಖ್ಯ ಸಾಧನವೆನಿಸಿದೆ. ಅದನ್ನು ಬಳಸುವಾಗ ಅತಿ ಎಚ್ಚರದಿಂದ ಇರಬೇಕು.

ಮಾತು ನಗೆಗೆ, ಹೊಗಳಿಕೆಗೆ ಕಾರಣವಾಗಬಹುದು. ಹಾಗೆಯೇ ವೈರತ್ವಕ್ಕೂ, ಕೊಲೆಗೂ ದಾರಿಯಾಗಬಹುದು. ಮಾತಿನಿಂದಲೇ ಸರ್ವಸಂಪತ್ತೂ ಲಭಿಸುವುದು ಎಂದು ಸರ್ವಜ್ಞ ಸೂಚಿಸಿದ್ದಾನೆ. ನಯವಿನಯ, ಹಾಸ್ಯಭರಿತ, ಮೃದುವಾದ ಮಾತುಗಳು ಜನ ಮೆಚ್ಚುಗೆಗೆ ಕಾರಣವಾಗುತ್ತದೆ. ಹಾಗೆಯೇ ಕೆಟ್ಟ ಕಠಿಣ, ನಿಂದನಾತ್ಮಕ ಮಾತುಗಳು ಜಗಳ, ಹಗೆತನಕ್ಕೆ ಕಾರಣವಾಗುತ್ತವೆ. ಮಾತಿನಲ್ಲಿ ಮಧುರತೆ, ನಮೃತೆ ಇರಬೇಕಲ್ಲದೆ, ಒರಟು, ಕಾಠಿಣ್ಯ ಇರಬಾರದು. ‘ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ
ಹೋಯಿತು’ ಎನ್ನುವ ನಾಣ್ಣುಡಿಯೂ ಇದೆ. ಆಡಿದ ಮೇಲೆ ಮಾತನ್ನು ಹಿಂದಕ್ಕೆ ಪಡೆಯಲಾಗುವುದಿಲ್ಲ. ಮಾತು ಮುತ್ತಿನಂತೆ ಆಕರ್ಷಕ, ಆನಂದಕರವಾಗಿಯೂ ಇರಬಹುದು, ಸಾವನ್ನು ತರುವಂತೆಯೂ ಇರಬಹುದು. ಆಡುವವರು ಆ ಬಗ್ಗೆ ಎಚ್ಚರವಹಿಸಬೇಕು.