‘ಮಾಡಿದ್ದುಣ್ಣೋ ಮಹಾರಾಯ’
ಮಹತ್ತ್ವವನ್ನು ತೋರಿಸುತ್ತವೆ. ಗಾದೆಗಳು ಕಿರಿದಾದ ವಾಕ್ಯಗಳಲ್ಲಿ ಹಿರಿದಾದ ಅರ್ಥವನ್ನು ನೀಡುವ
ನುಡಿಮುತ್ತುಗಳಾಗಿವೆ. ಇವು ಸತ್ಯವನ್ನು ಬಿಂಬಿಸುತ್ತವೆ. ಇವು ಹಿರಿಯರ ಅನುಭವಾಮೃತಗಳು. ಇವುಗಳು ಬದುಕನ್ನು ಅರ್ಥೈಸಲು ನಮಗೆ ಮಾರ್ಗದರ್ಶಕವಾಗಿದೆ. ಪ್ರಸ್ತುತ ಗಾದೆಯು ‘ಮಾಡಿದ್ದುಣ್ಣೋಮಹಾರಾಯ’ ಎಂಬುದು ಕನ್ನಡದ ಜನಪ್ರಿಯ ಗಾದೆಗಳಲ್ಲಿ ಒಂದೆನಿಸಿದೆ.
ಗಾದೆ ಮಾತುಗಳು ಗ್ರಾಮೀಣ ಬದುಕಿನ ಪ್ರತಿಬಿಂಬಗಳು ಮತ್ತು ಅನುಭವದ ಸಾರಗಳು ಆಗಿವೆ.
ನಾವು ಮಾಡಿದ ಕಾರ್ಯಗಳಿಗೆ ತಕ್ಕಂತೆ ಪ್ರತಿಫಲವನ್ನು ಪಡೆಯುತ್ತೇ ವೆಂಬುದೇ ಈ ಗಾದೆ ಮಾತಿನ
ಅರ್ಥವಾಗಿದೆ.
ದುರ್ಯೋಧನನು ತನ್ನ ಜೀವನದುದ್ದಕ್ಕೂ ನೀತಿ ಬಾಹಿರವಾದ, ಕ್ರೂರವಾದ ಮತ್ತು
ಸಮಾಜಘಾತುಕವಾದ ಕಾರ್ಯಗಳನ್ನೇ ಎಸಗುತ್ತಾ ಬರುತ್ತಾನೆ. ಅವುಗಳೆಲ್ಲ ಅಂದಂದಿಗೆ ಹಿತವಾಗಿ
ಗೋಚರಿಸುತ್ತವೆಯಾದರೂ ಆತನ ಅಂತ್ಯ ಬರ್ಬರವಾಗುತ್ತದೆ. ಕುರುಕ್ಷೇ ತ್ರದಲ್ಲಿ ನಡೆದ ಹದಿನೆಂಟು
ದಿನಗಳ ಘೋರ ಯುದ್ಧದ ಅಂತ್ಯದಲ್ಲಿ ಈತನು ನಿರ್ಗತಿಕನಂತೆ ಧರೆಗುರುಳುತ್ತಾನೆ. ಚಕ್ರವರ್ತಿಯಂತೆ
ಮೆರೆದ ಸೂಯೋಧನನು ತಾನು ಮಾಡಿದ ಅಕೃತ್ಯಗಳ ಫಲವಾಗಿ ದುರ್ಭರವಾದ
ಅಂತ್ಯವನ್ನನುಭವಿಸುತ್ತಾನೆ. ಸದಾ ವೈಭವದ ಜೀವನ ನಡೆಸುತ್ತಿದ್ದ ಈತನು ತನ್ನ ಅವಸಾನ ಕಾಲದಲ್ಲಿ
ಅನಾಥನಂತಾಗುತ್ತಾನೆ. ಹೀಗೆ ತಾನು ಮಾಡಿದುದನ್ನು ತಾನೇ ಅನುಭವಿಸುತ್ತಾನೆ.