ತ್ಯಾಜ್ಯ ವಸ್ತುಗಳ ನಿರ್ವಹಣೆ
ಪೀಠಿಕೆ : ಮಾನವನು ತನ್ನ ದೈನಂದಿನ ಚಟುವಟಿಕೆಗಳಲ್ಲಿ ಬಳಸಿ ಬಿಸಾಡುವ ನಿರುಪಯುಕ್ತ ವಸ್ತುಗಳೇ ತ್ಯಾಜ್ಯವಸ್ತು ಗಳು. ಇವುಗಳಲ್ಲಿ ಮೂರು ವಿಧ. ಘನ ತ್ಯಾಜ್ಯವಸುU್ತÀಳು, z್ರÀವ ತ್ಯಾಜ್ಯ ವಸ್ತುಗಳು ಮತ್ತು ಅನಿಲತ್ಯಾಜ್ಯ ವಸುU್ತÀಳು. ಇವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿದ್ದರೆ ಪರಿಸರ ನಾಶವಾಗುತ್ತದೆ.
ವಿಷಯ ನಿರೂಪಣೆ : ಇತ್ತೀಚಿನ ದಿನಗಳಲ್ಲಿ ತ್ಯಾಜ್ಯವಸ್ತುಗಳ ನಿರ್ವಹಣೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿದ್ದು, ಪರಿಸರವೂ ಕಲುಷಿತಗೊಳುತ್ತಿದೆ. ಇವುಗಳನ್ನು ವೈಜ್ಞಾನಿಕವಾಗಿ ಸಮರ್ಪಕವಾಗಿ ಈ ಕೆಳಗಿನಂತೆ ನಿರ್ವಹಣೆ ಮಾಡಬೇಕಾಗಿದೆ.
❖ ಮೊದಲ ಹಂತದಲ್ಲಿ ಮನೆ, ಕಚೇರಿ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ತ್ಯಾಜ್ಯವಸ್ತುಗಳನ್ನು ಸಂU್ರÀಹಿಸಲು, ವೈಜಾನ್ಞಿಕರೀತಿಯಲ್ಲಿ ವಿಂಗಡಿಸಲು ಸೂಕ್ತವಾದ ವ್ಯವಸ್ಥೆ ಮಾಡಿಕೊಳ್ಳಬೇಕು.
❖ ಮರುಬಳಕೆಗೆ ಯೋಗ್ಯವಾದ ತ್ಯಾಜ್ಯವಸ್ತುಗಳನ್ನು ಸೂಕ್ತ ರೀತಿಯಲ್ಲಿ ಬಳಸಬೇಕು.
❖ ತ್ಯಾಜ್ಯವಸ್ತುಗಳಿಂದ ಸುಂದರ ಕಲಾಕೃತಿಗಳನ್ನು ತಯಾರಿಸುವುದು, ವಿದ್ಯುತ್ ಉತ್ಪಾದನೆ, ಸಾವಯವ ಗೊಬ್ಬರ ಮೊದಲಾದ ಉದೇಶಗಳಿಗೆ ಬಳಸುವುದು.
❖ ನದಿಗಳನ್ನು ದತ್ತು ತೆಗೆದುಕೊಂಡು ತ್ಯಾಜ್ಯವಸ್ತುಗಳು ನದಿಗೆ ಸೇರದಂತೆ ನಿಗವಹಿಸುವದು.
❖ ಜನರಿಗೆ ಅರಿವನ್ನು ಉಂಟುಮಾಡುವ ಕಾರ್ಯಕ್ರಮವನ್ನು ಏರ್ಪಡಿಸಬೇಕು ಇತ್ಯಾದಿ.
ಉಪಸಂಹಾರ : ಕೈಗಾರಿಕೀಕರಣ, ನಗರೀಕರಣ, ಸಂಸ್ಕೃತೀಕರಣ, ಜಾಗತೀಕರಣದ ಅಬ್ಬರದಲ್ಲಿ ದಿನದಿಂದ ದಿನಕ್ಕೆ, ಕ್ಷಣದಿಂದ ಕ್ಷಣಕ್ಕೆ ತ್ಯಾಜ್ಯವಸ್ತುಗಳ ನಿರ್ವಹಣೆ ಒಂದು ಸಮಸ್ಯೆಯಾಗುತ್ತಿದ್ದು, ಅರಿವು, ಜಾಗೃತಿ ಮೂಡಿಸುವುದು ಇಂದಿನ ದಿನಗಳಲ್ಲಿ ಸರ್ಕಾರ, ಸಂಘ ಸಂಸ್ಥೆ, ಪ್ರತಿಯೊಬ್ಬರ ಮೊದಲ ಆದ್ಯತೆಯಾಗಬೇಕು.