ಕಟ್ಟುವುದು ಕಠಿಣ; ಕೆಡಹುವುದು ಸುಲಭ.
ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳಾಗಿವೆ. ಗಾದೆಗಳು ವೇದಕ್ಕೆ ಸಮಾನ. ಅವು
ಜನಪದರ ಜೀವನದ ಅನುಭವದ ನುಡಿಮುತ್ತುಗಳಾಗಿವೆ. ಅಂತಹ ಗಾದೆಗಳಲ್ಲಿ ಒಂದಾದ್ದು, ‘ಕಟ್ಟುವುದು
ಕಠಿಣ; ಕೆಡಹುವುದು ಸುಲಭ’.
ಜನಪದರ ಜೀವನದ ಅನುಭವದ ನುಡಿಮುತ್ತುಗಳಾಗಿವೆ. ಅಂತಹ ಗಾದೆಗಳಲ್ಲಿ ಒಂದಾದ್ದು, ‘ಕಟ್ಟುವುದು
ಕಠಿಣ; ಕೆಡಹುವುದು ಸುಲಭ’.
ಯಾವುದೇ ಕೆಲಸವನ್ನಾದರೂ ವ್ಯವಸ್ಥಿತವಾಗಿ ಮಾಡಲು ಕಷ್ಟಪಡಬೇಕು. ಆದರೆ ಮಾಡಿದ
ಕೆಲಸವನ್ನು ಹಾಳು ಮಾಡುವುದು ಬಹಳ ಸುಲಭ. ಅದಕ್ಕೆ ಕಷ್ಟಪಡಬೇಕಾಗಿಲ್ಲ- ಎಂದು ಈ ಗಾದೆ
ತಿಳಿಸುತ್ತದೆ.
‘ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ’ ಎನ್ನುವ ಇನ್ನೊಂದು ಗಾದೆಯು ಇದಕ್ಕಿರುವ
ಪೂರಕ ಗಾದೆಯಾಗಿದೆ.
ಪೂರಕ ಗಾದೆಯಾಗಿದೆ.
ಒಂದು ಕಟ್ಟಡವನ್ನೋ, ಶಿಲ್ಪಕಲೆಯನ್ನು, ವಾಸ್ತುಶಿಲ್ಪವನ್ನೋ ನಿರ್ಮಿಸುವುದು ತುಂಬಾ ಕಷ್ಟವಾದ
ಕೆಲಸ. ಸೇತುವೆಗಳು ನಿಮಾರ್ಣವಾಗಲು ತುಂಬಾ ಶ್ರಮ ಮತ್ತು ಸಮಯ ಬೇಕಾಗುತ್ತದೆ. ಆದರೆ
ಅವುಗಳನ್ನು ನೆಲಸಮ ಮಾಡಲು ಒಂದು ಯಂತ್ರೋಪಕರಣದಿಂದ ಕ್ಷಣಮಾತ್ರ ದಲ್ಲಿ
ನೆಲಕ್ಕುರುಳಿಸಬಹುದು. ಕುಂಬಾರ ಮಡಿಕೆಗಳನ್ನು ಮಾಡುವುದು ಕಷ್ಟ ಆದರೆ, ಅದನ್ನು ಹೊಡೆದು ಹಾಳುಮಾಡುವುದು ಸುಲಭ. ಅರಣ್ಯಗಳನ್ನು ಬೆಳೆಸುವುದು ಕಷ್ಟ ಆದರೆ, ಅದನ್ನು ನಾಶ ಪಡಿಸುವುದು ಸುಲಭ.ನಿರ್ಮಾಣ ಕಷ್ಟ ಆದರೆ ನಿರ್ನಾಮ ಸುಲಭವೆಂಬುದನ್ನು ಈ ಗಾದೆ ಸ್ಪಷ್ಟಪಡಿಸುತ್ತದೆ.